WWC 2022: ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಭಾರತಕ್ಕಿದೆ ಸೆಮಿಫೈನಲ್ಗೇರುವ ಅವಕಾಶ! ಆದರೆ..?
ICC Women's Cricket World Cup 2022: ಭಾರತದ ನೆಟ್ರನ್ ರೈಟ್ ಉತ್ತಮವಾಗಿರುವುದರಿಂದ ಮಾರ್ಚ್ 26 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಸಹ ಸೆಮಿಸ್‌ಗೆ ತಲುಪಬಹುದು. ಆದರೆ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಉಳಿದಿರುವ ಪಂದ್ಯದಲ್ಲಿ ಸೋಲಬೇಕು.

ICC ಮಹಿಳಾ ಕ್ರಿಕೆಟ್ ವಿಶ್ವಕಪ್ 2022 ರಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಮತ್ತು ಭಾರತ-ಬಾಂಗ್ಲಾದೇಶ (India vs Bangladesh) ಎರಡು ಪಂದ್ಯಗಳು ಮಾರ್ಚ್ 22 ರಂದು ನಡೆದವು. ಇವುಗಳಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ( Indian Women’s Cricket Team) ಸುಲಭ ಜಯ ದಾಖಲಿಸಿದವು. ಈ ಫಲಿತಾಂಶಗಳ ನಂತರ, ಮಹಿಳಾ ವಿಶ್ವಕಪ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಪುನರ್ರಚನೆಯಾಗಿದೆ. ಆಸ್ಟ್ರೇಲಿಯಾ ಮೊದಲಿನಂತೆಯೇ ಮೊದಲ ಸ್ಥಾನದಲ್ಲಿದೆ ಮತ್ತು ಸೆಮಿಫೈನಲ್‌ನಲ್ಲಿ ಅವರ ಸ್ಥಾನವನ್ನು ಈಗಾಗಲೇ ನಿರ್ಧರಿಸಲಾಗಿದೆ. ಇದೇ ವೇಳೆ ಬಾಂಗ್ಲಾ ವಿರುದ್ಧದ ಗೆಲುವಿನ ನಂತರ ಭಾರತ ಒಂದು ಸ್ಥಾನ ಜಿಗಿದು ಮೂರನೇ ಸ್ಥಾನ ಪಡೆದಿದೆ. ಇದೀಗ ಮಿಥಾಲಿ ರಾಜ್ ನಾಯಕತ್ವದ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಹೋಗುವುದು ತುಂಬಾ ಸುಲಭವಾಗಿದೆ.
ಆರು ಪಂದ್ಯಗಳಲ್ಲಿ ಭಾರತಕ್ಕೆ ಇದು ಮೂರನೇ ಜಯವಾಗಿದ್ದು, ಆರು ಅಂಕ ಗಳಿಸಿದೆ. ಈ ಮೂಲಕ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಂತರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ.+0.768ರೊಂದಿಗೆ ಭಾರತದ ನೆಟ್ ರನ್ ರೇಟ್ ಕೂಡ ಸುಧಾರಿಸಿದೆ. ಭಾರತ ತನ್ನ ಕೊನೆಯ ಲೀಗ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್ 27 ರಂದು ಆಡಲಿದೆ. ಸೆಮಿಫೈನಲ್‌ನ ಮೂರನೇ ಮತ್ತು ನಾಲ್ಕನೇ ತಂಡ ಯಾವುದು ಎಂಬುದನ್ನು ಈ ಪಂದ್ಯವು ಒಂದು ರೀತಿಯಲ್ಲಿ ನಿರ್ಧರಿಸುತ್ತದೆ.
ಭಾರತ ಸೆಮಿಫೈನಲ್‌ಗೆ ಹೇಗೆ ಪ್ರವೇಶಿಸಬಹುದು? ಬಾಂಗ್ಲಾದೇಶದ ವಿರುದ್ಧದ ದೊಡ್ಡ ಗೆಲುವಿನ ನಂತರ, ಭಾರತವು ಅಗ್ರ-ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೆಚ್ಚಿಸಿದೆ. ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯಾ ವಿರುದ್ಧ ಸೋತರು, ವೆಸ್ಟ್ ಇಂಡೀಸ್- ಪಾಕಿಸ್ತಾನದ ಎದುರು ಸೋತಿರುವುದರಿಂದ ಆಫ್ರಿಕಾಗೆ ಇದು ಸಹಾಯಕವಾಗಿದೆ. ಹೀಗಾಗಿ ಸೆಮೀಸ್ಗೇರಲು ಆಫ್ರಿಕಾ ಕೂಡ ತಮ್ಮ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಗೆಲುವನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ತದ್ವಿರದ್ಧವಾಗಿ, ಭಾರತದ ನೆಟ್ರನ್ ರೈಟ್ ಉತ್ತಮವಾಗಿರುವುದರಿಂದ ಮಾರ್ಚ್ 26 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಸಹ ಸೆಮಿಸ್‌ಗೆ ತಲುಪಬಹುದು. ಆದರೆ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಉಳಿದಿರುವ ಪಂದ್ಯದಲ್ಲಿ ಸೋಲಬೇಕು.
ಪ್ರಸ್ತುತ ವೆಸ್ಟ್ ಇಂಡೀಸ್ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಗಳು ಕ್ರಮವಾಗಿ 6 ಮತ್ತು 4 ಅಂಕಗಳೊಂದಿಗೆ ಪೈಪೋಟಿಯಲ್ಲಿವೆ. ಹೀಗಾಗಿ ಉಭಯ ತಂಡಗಳ ಉಳಿದ ಪಂದ್ಯಗಳ ಮೇಲೂ ಭಾರತ ಕಣ್ಣಿಟ್ಟಿದೆ.
ಮಾರ್ಚ್ 24 ರಂದು ಭಾರತದ ಭವಿಷ್ಯ ನಿರ್ಧಾರವಾಗಲಿದೆ ದಕ್ಷಿಣ ಆಫ್ರಿಕಾ ಕೂಡ ಭಾರತಕ್ಕಿಂತ ಮೊದಲು ಮಾರ್ಚ್ 24 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಬೇಕಾಗಿದೆ. ಇದರಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಕೊನೆಯ-4ರ ಘಟ್ಟಕ್ಕೆ ಹೋಗುತ್ತದೆ. ಇದರೊಂದಿಗೆ ಭಾರತ ಆಗಮನವೂ ಬಹುತೇಕ ನಿರ್ಧಾರವಾಗಲಿದೆ. ವೆಸ್ಟ್ ಇಂಡೀಸ್ ಪ್ರಸ್ತುತ ಆರು ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಅವರ ನಿವ್ವಳ ರನ್ ರೇಟ್ ಮೈನಸ್‌ನಲ್ಲಿರುವುದರಿಂದ ಇದು ಅವರಿಗೆ ಕೊಂಚ ಹಿನ್ನಡೆಯುಂಟ್ಟು ಮಾಡಬಹುದು.
ಇಂಗ್ಲೆಂಡ್ಗೂ ತಂಡ ಕೂಡ ಕೊನೆಯ-4ರ ಘಟ್ಟಕ್ಕೆ ಹೋಗುವ ಅವಕಾಶವಿದೆ. ಅವರಿಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಐದು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಅವರ ನೆಟ್ ರನ್ ರೇಟ್ ಕೂಡ ಉತ್ತಮವಾಗಿದೆ.
ಬಾಂಗ್ಲಾದೇಶ-ಪಾಕಿಸ್ತಾನ ಔಟ್ ಐದು ಪಂದ್ಯಗಳಲ್ಲಿ ಬಾಂಗ್ಲಾದೇಶಕ್ಕೆ ಇದು ನಾಲ್ಕನೇ ಸೋಲು, ಈ ಕಾರಣದಿಂದಾಗಿ ಅವರು ಸೆಮಿಫೈನಲ್‌ನ ರೇಸ್‌ನಿಂದ ಹೊರಗುಳಿದಿದ್ದಾರೆ. ಐದು ಪಂದ್ಯಗಳಲ್ಲಿ ನಾಲ್ಕನೇ ಸೋಲು ಕಂಡಿದ್ದು ಅವರು ಏಳನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ತಂಡ ಎಂಟನೇ ಸ್ಥಾನ, ಅಂದರೆ ಕೊನೆಯ ಸ್ಥಾನದಲ್ಲಿದೆ. ಅಲ್ಲದೆ ಸೆಮಿಫೈನಲ್ ರೇಸ್‌ನಿಂದ ಬಿದ್ದಿದೆ.
ಇದನ್ನೂ ಓದಿ:IPL 2022: Shaun Marsh to Ruturaj Gaikwad; ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಆಟಗಾರರು ಇವರೇ ನೋಡಿ!
Published On - 10:49 am, Wed, 23 March 22
