IPL 2022: ಈ ಬಾರಿಯ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡುತ್ತಿರುವ ಐವರು 5 ವಿದೇಶಿ ಆಟಗಾರರು ಇವರೇ..
IPL 2022: ಎಲ್ಲಾ ತಂಡಗಳು ಸಾಕಷ್ಟು ಹಣವನ್ನು ಪಾವತಿಸಿ ಅನೇಕ ವಿದೇಶಿ ಆಟಗಾರರನ್ನು ಖರೀದಿಸಿದವು. ಈ ಯುವ ಆಟಗಾರರು ಐಪಿಎಲ್ 2022 ರಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಲಿದ್ದಾರೆ.
ಐಪಿಎಲ್ (IPL 2022) ನ 15 ನೇ ಸೀಸನ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ಮೊದಲ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಟಿ20 ಕ್ರಿಕೆಟ್ ಅನ್ನು ಯುವ ಆಟಗಾರರ ಸ್ವರೂಪ ಎಂದು ಕರೆಯಲಾಗುತ್ತದೆ. ಅಂತಹ ಯುವ ಆಟಗಾರರಿಗೆ IPL 2022 ರ ಮೆಗಾ ಹರಾಜಿನಲ್ಲಿ ಸಾಕಷ್ಟು ಹಣ ವ್ಯಯ ಮಾಡಲಾಯಿತು. ಇವರಲ್ಲಿ ದೇಶೀ ಆಟಗಾರರ ಜೊತೆಗೆ ವಿದೇಶಿ ಆಟಗಾರರು ಸೇರಿದ್ದಾರೆ. ಎಲ್ಲಾ ತಂಡಗಳು ಸಾಕಷ್ಟು ಹಣವನ್ನು ಪಾವತಿಸಿ ಅನೇಕ ವಿದೇಶಿ ಆಟಗಾರರನ್ನು ಖರೀದಿಸಿದವು. ಈ ಯುವ ಆಟಗಾರರು ಐಪಿಎಲ್ 2022 ರಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಲಿದ್ದಾರೆ. ಅಂತಹ ಆಟಗಾರರು ಯಾರು ಎಂಬುದನ್ನು ಇಂದು ನಾವು ನಿಮಗೆ ಹೇಳುತ್ತೇವೆ. ಈ ಬಾರಿ ವಿಶ್ವದ ಅತ್ಯಂತ ಜನಪ್ರಿಯ ಪಂದ್ಯಾವಳಿಯಾದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾದಾರ್ಪಣೆ ಮಾಡಲು 5 ವಿದೇಶಿ ಆಟಗಾರರು ಸಿದ್ಧರಾಗಿದ್ದಾರೆ. ಇದರೊಂದಿಗೆ ಮೆಗಾ ಹರಾಜಿನಲ್ಲಿ ಅವರು ಐಪಿಎಲ್ ಫ್ರಾಂಚೈಸಿಯಿಂದ ಎಷ್ಟು ಹಣ ಪಡೆದರು ಎಂಬುದನ್ನು ಸಹ ನಾವು ನಿಮಗೆ ಹೇಳುತ್ತೇವೆ.
- ಬೆನ್ನಿ ಹಾವೆಲ್ ಇಂಗ್ಲೆಂಡ್ ಆಲ್ ರೌಂಡರ್ ಆಗಿದ್ದು, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಐಪಿಎಲ್‌ನ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಈ ಇಂಗ್ಲಿಷ್ ಆಟಗಾರನನ್ನು ಪಣಕ್ಕಿಟ್ಟಿತ್ತು. ಹಾವೆಲ್ ಅವರನ್ನು ಪಂಜಾಬ್ ತಂಡ 40 ಲಕ್ಷ ರೂ.ಗೆ ಖರೀದಿಸಿತ್ತು. ಹೀಗಾಗಿ ಬೆನ್ನಿ ಈ ಬಾರಿ ತನ್ನ ಚೊಚ್ಚಲ ಐಪಿಎಲ್ ಪಂದ್ಯವನ್ನು ಪಂಜಾಬ್ ಪರ ಆಡಲಿದ್ದಾರೆ.
- ವೆಸ್ಟ್ ಇಂಡೀಸ್ ವೇಗದ ಬೌಲರ್ ರೊಮಾರಿಯೊ ಶೆಫರ್ಡ್ 2022 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಅವರು ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡರು. ಇವರನ್ನು ಹೈದರಾಬಾದ್ 7.75 ಕೋಟಿಗೆ ಖರೀದಿಸಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಬಿಕರಿಯಾದ ಅತ್ಯಂತ ದುಬಾರಿ ಆಟಗಾರರ ಪಟ್ಟಿಯಲ್ಲಿ ಇವರ ಹೆಸರೂ ಸೇರಿಕೊಂಡಿದೆ.
- ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಶ್ರೀಲಂಕಾದ ವೇಗದ ಬೌಲರ್ ದುಷ್ಮಂತ ಚಮೀರಾ ಮೇಲೆ ದೊಡ್ಡ ಬಿಡ್‌ಗಳನ್ನು ಮಾಡಿದರು. ಚಮೀರಾ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 2 ಕೋಟಿ ರೂ.ಗೆ ಖರೀದಿಸಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿರುವ ಚಮೀರಾ ಅವರ ಐಪಿಎಲ್ ಪದಾರ್ಪಣೆ ಬಹುತೇಕ ಖಚಿತವಾಗಿದೆ.
- ರಾಜಸ್ಥಾನ್ ರಾಯಲ್ಸ್ ತಂಡವು ವೆಸ್ಟ್ ಇಂಡೀಸ್ ವೇಗದ ಬೌಲರ್ ಒಬೈದ್ ಮೆಕಾಯ್ ಅವರನ್ನು ಹರಾಜಿನಲ್ಲಿ ಪಣಕ್ಕಿಟ್ಟಿತ್ತು. ಮೆಕಾಯ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ 75 ಲಕ್ಷ ರೂ. ಖರ್ಚು ಮಾಡಿದೆ. ಮೆಕಾಯ್ ಶ್ರೇಷ್ಠ ಬೌಲರ್ ಆಗಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಲಿದ್ದಾರೆ.
- ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಡೊಮಿನಿಕ್ ಡ್ರಾಕ್ಸ್ ಅವರನ್ನು ಗುಜರಾತ್ ಟೈಟಾನ್ಸ್ ಪಣಕ್ಕಿಟ್ಟಿದೆ. ಅವರು ಈ ಬಾರಿ ಐಪಿಎಲ್‌ಗೆ ಪಾದಾರ್ಪಣೆ ಮಾಡಬಹುದು. ಡೊಮಿನಿಕ್ ಡ್ರಾಕ್ಸ್ ಅವರನ್ನು ಗುಜರಾತ್ ರೂ. 1.10 ಕೋಟಿಗೆ ಖರೀದಿಸಲಾಗಿದೆ.
ಇದನ್ನೂ ಓದಿ:IPL 2022: ನಾಲ್ವರು ಭಾರತೀಯರು! ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು ಇವರೇ..