Photo Gallery: ಸಚಿನ್ ತೆಂಡೂಲ್ಕರ್ ಜನ್ಮದಿನಕ್ಕೆ ಸ್ಟಾರ್​ ಕ್ರೀಡಾಪಟುಗಳು, ಐಪಿಎಲ್ ಫ್ರ್ಯಾಂಚೈಸ್ ಶುಭಾಷಯ ಕೋರಿದ್ದು ಹೀಗೆ

Happy Birthday Sachin: ಮಾಸ್ಟರ್ ಬ್ಲಾಸ್ಟರ್ ಇತಿಹಾಸದಲ್ಲಿ ಆಡಿದ ಸ್ಫೋಟಕ ಇನ್ನಿಂಗ್ಸ್‌ನ ಪರಿಣಾಮವೇ ನಾವು ಇಂದು ಕ್ರಿಕೆಟ್ ಅನ್ನು ಆಚರಣೆಯಾಗಿ ಆಚರಿಸುತ್ತೇವೆ ಎಂದು ಬರೆದುಕೊಂಡಿದೆ.

  • TV9 Web Team
  • Published On - 15:09 PM, 24 Apr 2021
1/8
ಐಪಿಎಲ್ ಭಾರತದಲ್ಲಿ ಹವಾ ಸೃಷ್ಟಿಸಿದೆ. ಕೊರೊನಾದ ಆತಂಕದ ಮಧ್ಯೆ ಲೀಗ್ ಅನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಏತನ್ಮಧ್ಯೆ, ಐಪಿಎಲ್ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 48 ನೇ ಜನ್ಮದಿನದ ಮಹಾಪೂರವೇ ಹರಿದುಬಂದಿದೆ. ತಂಡಗಳು ಮತ್ತು ಲೀಗ್‌ಗಳಿಗೆ ಸಂಬಂಧಿಸಿದ ಎಲ್ಲಾ ಆಟಗಾರರು ತಮ್ಮದೇ ಶೈಲಿಯಲ್ಲಿ ಸಚಿನ್ ಜನ್ಮದಿನದ ಶುಭಾಶಯಗಳನ್ನು ಕೋರಿದರು.
2/8
ಧೋನಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸಚಿನ್ ತೆಂಡೂಲ್ಕರ್ ಅವರನ್ನು ಹಾರೈಸುವಲ್ಲಿ ಹಿಂದುಳಿದಿಲ್ಲ. ಮಾಸ್ಟರ್ ಬ್ಲಾಸ್ಟರ್ ಇತಿಹಾಸದಲ್ಲಿ ಆಡಿದ ಸ್ಫೋಟಕ ಇನ್ನಿಂಗ್ಸ್‌ನ ಪರಿಣಾಮವೇ ನಾವು ಇಂದು ಕ್ರಿಕೆಟ್ ಅನ್ನು ಆಚರಣೆಯಾಗಿ ಆಚರಿಸುತ್ತೇವೆ ಎಂದು ಬರೆದುಕೊಂಡಿದೆ.
3/8
ರಾಜಸ್ಥಾನ್ ರಾಯಲ್ಸ್ ತಂಡವು ಏಪ್ರಿಲ್ 24 ನೇ ದಿನಾಂಕಕ್ಕೆ ಧನ್ಯವಾದ ಅರ್ಪಿಸಿದೆ. ಈ ದಿನಾಂಕದಂದು ಸಚಿನ್ ತೆಂಡೂಲ್ಕರ್ ಅವರನ್ನು ಜಗತ್ತಿಗೆ ನೀಡಿದಕ್ಕೆ ಧನ್ಯವಾದ ಎಂದಿದೆ.
4/8
ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ ಪಂಜಾಬ್ ಕಿಂಗ್ಸ್, ಮಾಸ್ಟರ್ ಬ್ಲಾಸ್ಟರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಟ್ವಿಟರ್​ನಲ್ಲಿ ಒಂದು ಪೋಸ್ಟ್ ಹಾಕಿದೆ.
5/8
ಐಪಿಎಲ್ 2021 ರಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಅಜಿಂಕ್ಯ ರಹಾನೆ, ಕೋಟ್ಯಂತರ ಜನರ ಭಾವನೆಯಲ್ಲಿ ಭಾಗಿಯಾಗಿರುವವರು ಬಹಳ ಕಡಿಮೆ ಜನರಿದ್ದಾರೆ ಅಂತಹವರ ಗುಂಪಿಗೆ ಸಚಿನ್ ಸೇರುತ್ತಾರೆ ಎಂದು ಬರೆದುಕೊಂಡಿದ್ದಾರೆ.
6/8
ಸಿಎಸ್ಕೆ ಬ್ಯಾಟ್ಸ್‌ಮನ್ ಸುರೇಶ್ ರೈನಾ ಕೂಡ ಸಚಿನ್ ತೆಂಡೂಲ್ಕರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು. ಕ್ರಿಕೆಟ್ ಬಗ್ಗೆ ಇರುವ ನಿಮ್ಮ ಉತ್ಸಾಹವೇ ನಾವು ಈ ಆಟವನ್ನು ಪ್ರೀತಿಸಲು ಕಾರಣವಾಗಿದೆ ಎಂದು ಬರೆದುಕೊಂಡಿದ್ದಾರೆ.
7/8
ಸಚಿನ್ ತೆಂಡೂಲ್ಕರ್ ಅವರ 48 ನೇ ಹುಟ್ಟುಹಬ್ಬದಂದು ಇತರ ಕ್ರೀಡೆಗಳ ಆಟಗಾರರು ಸಹ ಹಿಂದುಳಿದಿಲ್ಲ. ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಸಚಿನ್ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ದೇಶದ ಕ್ರೀಡಾಪಟುವಿನ ಗುರಿಯನ್ನು ಕೇಂದ್ರೀಕರಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ ಎಂದಿದ್ದಾರೆ.
8/8
ರನ್ನರ್ ಹಿಮಾ ದಾಸ್ ಕೂಡ ಸಚಿನ್ ತೆಂಡೂಲ್ಕರ್ ಅವರಿಗೆ ಶುಭ ಹಾರೈಸಿದ್ದಾರೆ. ನೀವು ಇಂದಿಗೂ ಯುವಕರ ಮೇಲೆ ಪ್ರಭಾವ ಬೀರುತ್ತಿದ್ದೀರಿ ಮತ್ತು ಅದನ್ನು ಮುಂದುವರಿಸುತ್ತೀರಿ ಎಂದು ಹಿಮಾ ಟ್ವೀಟ್ ಮಾಡಿದ್ದಾರೆ.