ವಿರಾಟ್ ಕೊಹ್ಲಿಯನ್ನು 2 ಬಾರಿ ಔಟ್ ಮಾಡಿದ ಬೌಲರ್​, 28ನೇ ವಯಸ್ಸಿನಲ್ಲೇ ನಿವೃತ್ತಿ..!

| Updated By: ಝಾಹಿರ್ ಯೂಸುಫ್

Updated on: Jun 12, 2022 | 5:32 PM

Peter Chase: ಚೇಸ್ ತನ್ನ ವೃತ್ತಿಜೀವನದಲ್ಲಿ 69 ಲಿಸ್ಟ್-ಎ ಪಂದ್ಯಗಳನ್ನು ಸಹ ಆಡಿದ್ದಾರೆ. ಲಿಸ್ಟ್-ಎಯಲ್ಲಿ ಅವರು 91 ವಿಕೆಟ್‌ಗಳನ್ನು ಕಬಳಿಸಿರುವುದು ವಿಶೇಷ.

ವಿರಾಟ್ ಕೊಹ್ಲಿಯನ್ನು 2 ಬಾರಿ ಔಟ್ ಮಾಡಿದ ಬೌಲರ್​, 28ನೇ ವಯಸ್ಸಿನಲ್ಲೇ ನಿವೃತ್ತಿ..!
peter chase
Follow us on

ಐರ್ಲೆಂಡ್‌ ತಂಡದ ವೇಗದ ಬೌಲರ್ ಪೀಟರ್ ಚೇಸ್ ತಮ್ಮ 28ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನಿರಂತರ ಗಾಯದಿಂದಾಗಿ ಕ್ರಿಕೆಟ್ ಆಡುವುದನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಉಂಟಾದ ಗಾಯದ ಬಳಿಕ ನಾನು ಕಂಬ್ಯಾಕ್ ಮಾಡಿದ್ದೆ. ಆದಾಗ್ಯೂ, ಇತ್ತೀಚಿನ ನಮೀಬಿಯಾ ಪ್ರವಾಸದಲ್ಲಿ ನಾನು ಮತ್ತೆ ಗಾಯಗೊಂಡಿದ್ದೆ. ಆದರೆ ಸತತ ಗಾಯಗಳಿಂದ ಚೇತರಿಸಿಕೊಳ್ಳುವುದು ಕಷ್ಟಕರವಾಗಿದೆ. ಇನ್ನು ಒಂದು ವರ್ಷ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿವೃತ್ತಿಯಾಗುತ್ತಿರುವುದಾಗಿ ಪೀಟರ್​ ಹೇಳಿದ್ದಾರೆ.

ಐರ್ಲೆಂಡ್‌ ಪರ 20ನೇ ವಯಸ್ಸಿಗೆ ಪದಾರ್ಪಣೆ ಮಾಡಿದ್ದ ಪೀಟರ್​ ಚೇಸ್​ ಒಟ್ಟು 36 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 24 ಏಕದಿನ ಪಂದ್ಯಗಳಿದ್ದು, ಈ ವೇಳೆ 34 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 12 ಟಿ20 ಪಂದ್ಯಗಳಿಂದ 15 ವಿಕೆಟ್ ಉರುಳಿಸಿದ್ದಾರೆ. ವಿಶೇಷ ಎಂದರೆ 2018ರಲ್ಲಿ ಭಾರತ ಹಾಗೂ ಐರ್ಲೆಂಡ್ ನಡುವಣ ಟಿ20 ಸರಣಿಯಲ್ಲಿ ಪೀಟರ್​ ಚೇಸ್ ಎರಡು ಬಾರಿ ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದರು. ಅಲ್ಲದೆ ಈ ಸರಣಿಯಲ್ಲಿ ಚೇಸ್ 15.4 ಸರಾಸರಿಯಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.

ಪೀಟರ್​ ಚೇಸ್ 2014 ರಲ್ಲಿ ಡರ್ಹಾಮ್‌ ತಂಡದ ಪರ ಕೌಂಟಿ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ್ದರು. ಅವರು ಇದುವರೆಗೆ ಆಡಿದ 19 ಪ್ರಥಮ ದರ್ಜೆ ಪಂದ್ಯಗಳಲ್ಲಿ 49 ವಿಕೆಟ್ ಪಡೆದಿದ್ದಾರೆ. ಚೇಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡು ಬಾರಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದಾರೆ. ಚೇಸ್ ತನ್ನ ವೃತ್ತಿಜೀವನದಲ್ಲಿ 69 ಲಿಸ್ಟ್-ಎ ಪಂದ್ಯಗಳನ್ನು ಸಹ ಆಡಿದ್ದಾರೆ. ಲಿಸ್ಟ್-ಎಯಲ್ಲಿ ಅವರು 91 ವಿಕೆಟ್‌ಗಳನ್ನು ಕಬಳಿಸಿರುವುದು ವಿಶೇಷ. ಇದರಲ್ಲಿ 42 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಇದನ್ನೂ ಓದಿ
KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಇದೀಗ ಗಾಯದಿಂದ ಬಳಲುತ್ತಿರುವ ಪೀಟರ್​ ಚೇಸ್​ ಮತ್ತೆ ತಂಡಕ್ಕೆ ಕಂಬ್ಯಾಕ್ ಮಾಡುವುದು ಕಷ್ಟಕರ ಎಂದು ಭಾವಿಸಿದ್ದಾರೆ. ಏಕೆಂದರೆ ಇನ್ನೂ ಒಂದು ವರ್ಷಗಳ ಕಾಲ ಗಾಯದ ಕಾರಣ ಮೈದಾನದಿಂದ ಹೊರಗುಳಿಯಬೇಕಾಗುತ್ತದೆ. ನಿವೃತ್ತಿ ನೀಡಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದಾರೆ. ಅಷ್ಟೇ ಅಲ್ಲದೆ ಇದಾಗ್ಯೂ ಐರ್ಲೆಂಡ್‌ ಪರ ಆಡಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಪೀಟರ್ ಚೇಸ್ ತಿಳಿಸಿದ್ದಾರೆ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:32 pm, Sun, 12 June 22