AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs New Zealand: ಕೊಹ್ಲಿ ಪಡೆಗೆ ಬಿಗ್ ಶಾಕ್: 2ನೇ ಟೆಸ್ಟ್​ನಿಂದ ಟೀಮ್ ಇಂಡಿಯಾದ 3 ಆಟಗಾರರು ಹೊರಕ್ಕೆ

Ishant Sharma, Ajinkya Rahane and Ravindra Jadeja: ಇಶಾಂತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಅಜಿಂಕ್ಯಾ ರಹಾನೆ ಇಂಜುರಿಗೆ ತುತ್ತಾದ ಪರಿಣಾಮ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗ ಬೇಕಿರುವ ಣಾರತ ನ್ಯೂಜಿಲೆಂಡ್ ಅಂತಿಮ ನಿರ್ಣಾಯಕ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ

India vs New Zealand: ಕೊಹ್ಲಿ ಪಡೆಗೆ ಬಿಗ್ ಶಾಕ್: 2ನೇ ಟೆಸ್ಟ್​ನಿಂದ ಟೀಮ್ ಇಂಡಿಯಾದ 3 ಆಟಗಾರರು ಹೊರಕ್ಕೆ
Ishant Sharma, Ajinkya Rahane and Ravindra Jadeja IND vs NZ
TV9 Web
| Edited By: |

Updated on:Dec 03, 2021 | 10:03 AM

Share

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​ನಿಂದ ಟೀಮ್ ಇಂಡಿಯಾದ (India vs New Zealand) ಮೂವರು ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ. ಇಶಾಂತ್ ಶರ್ಮಾ (Ishanth Sharma), ರವೀಂದ್ರ ಜಡೇಜಾ (Ravindra Jadeja) ಮತ್ತು ಉಪ ನಾಯಕ ಅಜಿಂಕ್ಯಾ ರಹಾನೆ (Ajinkya rahane) ಇಂಜುರಿಗೆ ತುತ್ತಾದ ಪರಿಣಾಮ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗ ಬೇಕಿರುವ ಅಂತಿಮ ನಿರ್ಣಾಯಕ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ. ಮೊದಲ ಟೆಸ್ಟ್​ನ ಅಂತಿಮ ದಿನ ವೇಗಿ ಇಶಾಂತ್ ಶರ್ಮಾ ಅವರ ಎಡಗೈಯ ಕಿರು ಬೆರಳಿಗೆ ಗಾಯವಾದ ಕಾರಣ ಅವರು ಅಲಭ್ಯರಾಗಿದ್ದಾರೆ. ರವೀಂದ್ರ ಜಡೇಜಾ ಬಲ ಮುಂಗೈ ಗಾಯದಿಂದ ಬಳಲುತ್ತಿದ್ದಾರೆ ಮತ್ತು ರಹಾನೆ ಮೊದಲ ಟೆಸ್ಟ್​ನ ಕೊನೇ ದಿನ ಫೀಲ್ಡಿಂಗ್ ಮಾಡುವಾಗ ಎಡ ಮಂಡಿರಜ್ಜು ನೋವಿಗೆ ತುತ್ತಾದರು ಎಂದು ಹೇಳಿದೆ. ಇವರೆಲ್ಲರನ್ನು ಬಿಸಿಸಿಐ ಮೆಡಿಕಲ್ ತಂಡ ಸೂಕ್ಷ್ಮವಾಗಿ ವಿಚಾರಿಸುತ್ತಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಎರಡನೇ ನಿರ್ಣಾಯಕ ಟೆಸ್ಟ್​ ಪಂದ್ಯ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಇನ್ನೇನು ಶುರುವಾಗುವುದರಲ್ಲಿದೆ. ಕಿವೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಗೆಲುವಿನ ಸನಿಹ ಬಂದರೂ, ಕಾನ್ಪುರ ಪಿಚ್ ಹೆಚ್ಚಿನ ನೆರವು ನೀಡದ ಕಾರಣ ಭಾರತ ತಂಡ ಡ್ರಾಕ್ಕೆ ತೃಪ್ತಿಪಟ್ಟಿತ್ತು. ಹೀಗಾಗಿ ಇಂದಿನಿಂದ ನಡೆಯಲಿರುವ ನಿರ್ಣಾಯಕ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಟೀಮ್ ಇಂಡಿಯಾಕ್ಕೆ ವಿರಾಟ್ ಕೊಹ್ಲಿ ಕಮ್​ಬ್ಯಾಕ್ ಮಾಡಿರುವ ಬಲವಿದ್ದರೆ, ಇತ್ತ ಇದುವರೆಗೆ ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ಕೇನ್ ಪಡೆ (Kane Williamson) ಐತಿಹಾಸಿಕ ಗೆಲುವನ್ನು ಎದುರು ನೋಡುತ್ತಿದೆ. ಇದರ ನಡುವೆ ಮೊದಲ ಬಾರಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಮಾರ್ಗದರ್ಶನದಲ್ಲಿ ವಿರಾಟ್ (Virat Kohli) ತಂಡವನ್ನು ಮುನ್ನಡೆಸುತ್ತಿದ್ದು, ಭಾರತದ ಪ್ರದರ್ಶನ ಯಾವರೀತಿ ಇರಲಿದೆ ಎಂಬುದು ನೋಡಬೇಕಿದೆ.

ಮುಂಬೈನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ವಾಂಖೆಡೆ ಮೈದಾನ ಸಂಪೂರ್ಣ ಒದ್ದೆಯಾಗಿದೆ. ಹೀಗಾಗಿ ಟಾಸ್ ಪ್ರಕ್ರಿಯೆಯನ್ನು ಮುಂಡೂಡಲಾಗಿದೆ. 10:30ಕ್ಕೆ ಪಿಚ್ ಪರಿಶೀಲನೆ ನಡೆಯಲಿದೆ. ಮೂವರು ಆಟಗಾರರು ಅಲಭ್ಯರಿರುವ ಕಾರಣ ಭಾರತದ ಪ್ಲೇಯಿಂಗ್ ಇಲೆವೆನ್ ಯಾವರೀತಿ ಇರಲಿದೆ ಎಂಬುದು ಇದೀಗ ಕುತೂಹಲ ಕೆರಳಿಸಿದೆ.

ವಿಲಿಯಮ್ಸನ್ ಅಲಭ್ಯ:

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಎರಡನೇ ಟೆಸ್ಟ್​ಗೆ ಅಲಭ್ಯರಾಗಿದ್ದಾರೆ. ಎಡ ಮೊಣಕೈ ಗಾಯಕ್ಕೆ ತುತ್ತಾಗಿರುವ ಕೇನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಕಿವೀಸ್ ಪಡೆಯನ್ನು ಟಾಮ್ ಲ್ಯಾಥಂ ಮುನ್ನಡೆಸುತ್ತಿದ್ದಾರೆ.

LIVE Score: ಮಳೆಯಿಂದ ಒದ್ದೆಯಾದ ಮೈದಾನ: ಟಾಸ್ ವಿಳಂಬ

(Ishant Sharma Ajinkya Rahane and Ravindra Jadeja ruled out of the India vs New Zealand 2nd Test)

Published On - 9:49 am, Fri, 3 December 21

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ