Cheteshwar Pujara: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಬಳಿ ಕ್ಷಮೆಯಾಚಿಸಿದ ಇಂಗ್ಲೆಂಡ್​ನ ಕೌಂಟಿ ಕ್ರಿಕೆಟಿಗ

ನಾನು ಚೇತೇಶ್ವರ್ ಪೂಜಾರರನ್ನು ಸಂಪರ್ಕಿಸಿ ಅವರ ಕ್ಷಮೆ ಕೋರಿದ್ದೇನೆ. ಆ ಸಮಯದಲ್ಲಿ ಅದು ಜನಾಂಗೀಯವಾದಿ ನಡವಳಿಕೆ ಎನ್ನುವುದು ನನಗೆ ತಿಳಿದಿರಲಿಲ್ಲ. ಆದರೆ, ಅದು ಸ್ವೀಕಾರಾರ್ಹವಲ್ಲ ಎನ್ನುವುದು ಈಗ ನನಗೆ ಅರಿವಾಗಿದೆ'' ಎಂದು ಜ್ಯಾಕ್ ಬ್ರೂಕ್ಸ್‌ ಹೇಳಿದ್ದಾರೆ.

Cheteshwar Pujara: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಬಳಿ ಕ್ಷಮೆಯಾಚಿಸಿದ ಇಂಗ್ಲೆಂಡ್​ನ ಕೌಂಟಿ ಕ್ರಿಕೆಟಿಗ
Cheteshwar Pujara
Follow us
TV9 Web
| Updated By: Vinay Bhat

Updated on: Nov 19, 2021 | 9:45 AM

ಜನಾಂಗೀಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್‌ಸೆಟ್ (Somerset’s) ತಂಡದ ಬೌಲರ್ ಜ್ಯಾಕ್ ಬ್ರೂಕ್ಸ್‌ (Jack Brooks) ಗುರುವಾರ ಭಾರತದ ಟೆಸ್ಟ್ ತಂಡದ ಆಟಗಾರ ಚೇತೇಶ್ವರ್ ಪೂಜಾರ (Cheteshwar Pujara) ಅವರ ಬಳಿ ಕ್ಷಮೆ ಕೋರಿದ್ದಾರೆ. ಪೂಜಾರ ಇಂಗ್ಲೆಂಡ್‌ನ (England) ಯಾರ್ಕ್‌ಶೈರ್‌ನಲ್ಲಿ ಕೌಂಟಿ ಪಂದ್ಯಗಳನ್ನು ಆಡುತ್ತಿದ್ದಾಗ ಅವರಿಗೆ ‘ಸ್ಟೀವ್’ ಎಂಬ ಅಡ್ಡ ಹೆಸರನ್ನು ಇಟ್ಟಿರುವುದಕ್ಕಾಗಿ ಸಾಮರ್‌ಸೆಟ್ ಕೌಂಟಿ ತಂಡದ ವೇಗಿ ಜಾಕ್ ಬ್ರೂಕ್ಸ್ ಗುರುವಾರ ಕ್ಷಮೆ ಯಾಚಿಸಿದ್ದಾರೆ. ಚೇತೇಶ್ವರ್ ಪೂಜಾರ ಸೇರಿದಂತೆ ಹಲವು ವಿದೇಶಿ ಆಟಗಾರರನ್ನು ಹೆಸರನ್ನು ಉಚ್ಛರಿಸಲು ಸಾಧ್ಯವಾಗದೇ ‘ಸ್ಟೀವ್’ ಎಂಬ ಅಡ್ಡ ಹೆಸರಿನಲ್ಲಿ ಕರೆಯುವ ಮೂಲಕ ಸಾಂಸ್ಥಿಕ ವರ್ಣಭೇದ ನೀತಿ ಅನುಸರಿಸಲಾಗಿತ್ತು ಎಂದು ಯಾರ್ಕ್‌ಷೈರ್ ಕ್ಲಬ್‌ನ (Yorkshire Club) ಮಾಜಿ ನೌಕರ ಅಜೀಮ್ ರಫೀಕ್ ಆರೋಪಿಸಿದ್ದರು. ಘಟನೆ ನಡೆದು ಬರೋಬ್ಬರಿ ವರ್ಷದ ಬಳಿಕ ಸೋಮರ್‌ಸೆಟ್ ಆಟಗಾರ ಕ್ಷಮೆಯಾಚಿಸಿದ್ದಾರೆ. ಇದಕ್ಕೂ ಮೊದಲು ಚೇತೇಶ್ವರ ಪೂಜಾರ 2015 ಮತ್ತು 2018ರಲ್ಲಿ ಯಾರ್ಕ್‌ಷೈರ್ ಪರ ಆಡಿದ್ದರು.

‘ಕೆಲವರ ಹೆಸರುಗಳನ್ನು ಉಚ್ಚರಿಸಲು ಕಷ್ಟವಾಗುತ್ತಿದ್ದ ಕಾರಣಕ್ಕೆ ಸಾಮಾನ್ಯವಾಗಿ ಸ್ಟೀವ್ ಎಂದು ಕರೆಯುತ್ತಿದ್ದೆ. ಡ್ರೆಸ್ಸಿಂಗ್ ಕೋಣೆಯಲ್ಲಿ ಇದೆಲ್ಲವೂ ಸಹಜವಾಗಿ ನಡೆಯುವಂತದ್ದು. ಯಾವುದೇ ಧರ್ಮ, ಬಣ್ಣ ಮತ್ತು ಭಾಷೆಯ ತಾರತಮ್ಯವಿಲ್ಲದೇ ಈ ರೀತಿ ನಿಕ್‌ ನೇಮ್ ಮಾಡುವುದು ಸಹಜ’ ಎಂದು ಬ್ರೂಕ್ಸ್ ಹೇಳಿದ್ದಾರೆ.

2018ರಲ್ಲಿ ಸೋಮರ್‌ಸೆಟ್ ಸೇರ್ಪಡೆಗೊಂಡ ಬ್ರೂಕ್ಸ್, ಅಜೀಮ್ ರಫೀಕ್ ಗಮನಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಷಮೆಯಾಚಿಸುವೆ. ಈ ಕುರಿತು ನನಗೆ ಬೇಸರವಿದೆ ಎಂದು ಹೇಳಿದ್ದಾರೆ. 2012ರಲ್ಲಿ ನಾನು ಮಾಡಿದ್ದ ಕೆಲವೊಂದು ಟ್ವೀಟ್‌ಗಳ ಬಗ್ಗೆ ವಿಷಾಯ ವ್ಯಕ್ತಪಡಿಸುವೆ ಎಂದಿದ್ದಾರೆ. ಜಾಕ್ ಬ್ರೂಕ್ಸ್ 2012ರಲ್ಲಿ ಬೇರೆ ಕ್ಲಬ್‌ನಲ್ಲಿದ್ದರು, ಈ ವೇಳೆ ಅವರು ಮಾಡಿದ್ದ ಟ್ವೀಟ್‌ಗೂ ಕ್ಷಮೆಯಾಚಿಸಿದ್ದಾರೆ ಎಂದು ಸೋಮರ್‌ಸೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಅಜೀಮ್ ರಫೀಕ್ ಆರೋಪದ ಬೆನ್ನಲ್ಲೇ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಟಿನೊ ಬೆಸ್ಟ್ ಹಾಗೂ ಪಾಕಿಸ್ತಾನದ ರಾಣಾ ನವೀದ್ ಉಲ್ ಹಸನ್ ಕೂಡ ಧ್ವನಿ ಎತ್ತಿದ್ದರು. ಸ್ಥಳೀಯ ಟ್ಯಾಕ್ಸಿ ಚಾಲಕರು, ರೆಸ್ಟೋರೆಂಟ್‌ನ ನೌಕರರು, ಏಷ್ಯಾದ ಸಮೂಹಕ್ಕೆ ಇದೇ ಹೆಸರಿನಲ್ಲಿ ಕರೆಯುತ್ತಾರೆ. ಏಕೆಂದರೆ ಅವರಿಗೆ ಹೆಸರಿನ ಉಚ್ಛಾರಣೆ ಬರುವುದಿಲ್ಲ. ಇದಕ್ಕೆ ಪೂಜಾರ ಅವರು ಕೂಡ ಹೊರತಾಗಿರಲಿಲ್ಲ ಎಂದು ಏಷ್ಯಾ ಮೂಲದ ಮಾಜಿ ನೌಕಕರು ದೂರಿದ್ದರು.

”ಈ ಹಿನ್ನೆಲೆಯಲ್ಲಿ ಆ ಹೆಸರನ್ನು ನಾನು ಬಳಸಿರುವುದು ಹೌದು. ಅದು ಅಗೌರವಯುತ ಹಾಗೂ ತಪ್ಪು ಎನ್ನುವುದನ್ನು ನಾನು ಈಗ ಒಪ್ಪುತ್ತೇನೆ. ನಾನು ಚೇತೇಶ್ವರ್ ಪೂಜಾರರನ್ನು ಸಂಪರ್ಕಿಸಿ ಅವರ ಕ್ಷಮೆ ಕೋರಿದ್ದೇನೆ. ಆ ಸಮಯದಲ್ಲಿ ಅದು ಜನಾಂಗೀಯವಾದಿ ನಡವಳಿಕೆ ಎನ್ನುವುದು ನನಗೆ ತಿಳಿದಿರಲಿಲ್ಲ. ಆದರೆ, ಅದು ಸ್ವೀಕಾರಾರ್ಹವಲ್ಲ ಎನ್ನುವುದು ಈಗ ನನಗೆ ಅರಿವಾಗಿದೆ” ಎಂದು ಅವರು ಹೇಳಿದ್ದಾರೆ.

India Probable Playing XI: 2ನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಮೂರು ಬದಲಾವಣೆ: ಇಲ್ಲಿದೆ ಭಾರತದ ಪ್ಲೇಯಿಂಗ್ XI

India vs New Zealand T20: ಇಂದು ಭಾರತ-ನ್ಯೂಜಿಲೆಂಡ್ 2ನೇ ಟಿ20: ಗೆದ್ದು ಸರಣಿ ವಶಪಡಿಸಿಕೊಳ್ಳುತ್ತ ರೋಹಿತ್ ಪಡೆ?

(Jack Brooks has apologized to Team India Cheteshwar Pujara for racist behavior)