AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tim Paine: ನಾಯಕತ್ವದಿಂದ ಕೆಳಗಿಳಿದ ಆಸ್ಟ್ರೇಲಿಯಾದ ಟಿಮ್ ಪೈನ್: ಆ್ಯಶಸ್ ಸರಣಿಗೂ ಮುನ್ನ ಆಸೀಸ್​ಗೆ ದೊಡ್ಡ ಆಘಾತ

ಸಹೋದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟಿಮ್ ಪೈನ್ ವಿರುದ್ಧ ತನಿಖೆಯನ್ನು ನಡೆಸುತ್ತಿದೆ. ಈ ಪ್ರಕರಣದ ಕಾರಣದಿಂದಾಗಿ ಟಿಮ್ ಪೈನ್ ಆಸ್ಟ್ರೇಲಿಯಾ ಕ್ರಿಕೆಟ್ ತಮಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

Tim Paine: ನಾಯಕತ್ವದಿಂದ ಕೆಳಗಿಳಿದ ಆಸ್ಟ್ರೇಲಿಯಾದ ಟಿಮ್ ಪೈನ್: ಆ್ಯಶಸ್ ಸರಣಿಗೂ ಮುನ್ನ ಆಸೀಸ್​ಗೆ ದೊಡ್ಡ ಆಘಾತ
Tim Paine
TV9 Web
| Edited By: |

Updated on: Nov 19, 2021 | 11:18 AM

Share

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್​ (Australia Cricket Team) ತಂಡದ ನಾಯಕತ್ವ ಸ್ಥಾನದಿಂದ ಟಿಮ್ ಪೈನ್ (Tim Paine) ಕೆಳಗಿಳಿದಿದ್ದಾರೆ. 2017-18ರ ಆ್ಯಶಸ್​ ಸರಣಿ ಆರಂಭಕ್ಕೂ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾದ ಮಾಜಿ ಸಹದ್ಯೋಗಿಗೆ ಅಶ್ಲೀಲ ಚಿತ್ರಗಳ ಮತ್ತು ಸಂದೇಶ ರವಾನೆ ಆರೋಪ ಕೇಳಿ ಬಂದಿರುವ ಕಾರಣ ಈ ಪ್ರಕರಣದ ಬಗ್ಗೆ ತನಿಖೆಗೆ ನಡೆಯುತ್ತಿದ್ದು, ಈ ಬೆನ್ನಲ್ಲೇ ಟೆಸ್ಟ್​ ನಾಯಕತ್ವಕ್ಕೆ ಟೀಮ್ ಪೈನ್ ರಾಜೀನಾಮೆ ಘೋಷಿಸಿದ್ದಾರೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೆಲಿಯಾ (Cricket Australia) ತನಿಖೆ ನಡೆಸಲು ಮುಂದಾಗಿದೆ. ಬಹುನಿರೀಕ್ಷಿತ ಆ್ಯಶಸ್ ಟೆಸ್ಟ್ ಸರಣಿಗೆ (Ashes Test Series) ಮೂರು ವಾರಗಳಿಗೂ ಕಡಿಮೆ ದಿನಗಳಿರುವಾಗ ಈ ಬೆಳವಣಿಗೆ ನಡೆದಿರುವುದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಈ ಹಿಂದೆ ಸ್ಟೀವ್ ಸ್ಮಿತ್ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೊಳಗಾದಾಗ ಟಿಮ್ ಆಸ್ಟ್ರೇಲಿಯಾ ತಂಡದ ನಾಯಕರಾಗಿ ನೇಮಕವಾಗಿದ್ದರು. ಸದ್ಯ ಸಹೋದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟಿಮ್ ಪೈನ್ ವಿರುದ್ಧ ತನಿಖೆಯನ್ನು ನಡೆಸುತ್ತಿದೆ. ಈ ಪ್ರಕರಣದ ಕಾರಣದಿಂದಾಗಿ ಟಿಮ್ ಪೈನ್ ಆಸ್ಟ್ರೇಲಿಯಾ ಕ್ರಿಕೆಟ್ ತಮಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಟಿಮ್ ಪೈನ್, ‘ಇದು ನಂಬಲಾಗದ ನಿರ್ಧಾರ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ನನ್ನ ಕುಟುಂಬದ ಪಾಲಿಗೆ ಇದು ಸರಿಯಾದ ನಿರ್ಧಾರವಾಗಿದೆ. ಆಗ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದೆ. ಈ ಘಟನೆ ಸಾರ್ವಜನಿಕವಾಗಿ ದೊಡ್ಡ ಚರ್ಚೆಯಾಗಿದೆ. ಈ ಪ್ರಕರಣ ಸಬಂಧ ನನ್ನ ಹೆಂಡತಿ, ಕುಟುಂಬಸ್ಥರು ಹಾಗೂ ಕ್ರಿಕೆಟ್​ ಆಸ್ಟ್ರೇಲಿಯಾಗೆ ನಾನು ಕ್ಷಮೆಯಾಚಿಸುತ್ತೇನೆ. ನಾಯಕತ್ವದಿಂದ ಕೆಳಗಿಳಿಯುವ ತಕ್ಷಣದ ನಿರ್ಧಾರ ಸರಿಯಾಗಿದೆ ಎಂದು ನಾನು ನಂಬುತ್ತೇನೆ. ಆಸೀಸ್ ಸರಣಿಗೂ ಮುನ್ನ ದೊಡ್ಡ ವಿವಾದ ಸೃಷ್ಟಿಸಲು ನಾನು ಬಯಸುವುದಿಲ್ಲ. ಹೀಗಾಗಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ’ ಎಂದು ಟಿಮ್ ತಿಳಿಸಿದ್ದಾರೆ.

ಮುಂದಿನ ಆ್ಯಶಸ್ ಸರಣಿಯಲ್ಲಿ ಸದ್ಯ ಉಪನಾಯಕನಾಗಿರುವ ಪ್ಯಾಟ್ ಕಮಿನ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಹೀಗಾದಲ್ಲಿ 65 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡವನ್ನು ವೇಗದ ಬೌಲರ್ ಒಬ್ಬರು ಮುನ್ನಡೆಸಿದಂತಾಗುತ್ತದೆ. ಆಸಿಸ್ ನಾಯಕತ್ವ ಪ್ಯಾಟ್ ಕಮ್ಮಿನ್ಸ್ ಹೆಗಲೇರಿದರೆ ತಂಡವನ್ನು ನಾಯಕನಾಗಿ ಮುನ್ನಡೆಸುವ 47ನೇ ಆಟಗಾರ ಎನಿಸಲಿದ್ದಾರೆ.

India vs New Zealand T20: ರಾಂಚಿ ಪಿಚ್ ಹೇಗಿದೆ?: ಟಾಸ್ ಗೆದ್ದ ತಂಡ ಏನು ಆಯ್ಕೆ ಮಾಡಿಕೊಳ್ಳಬೇಕು?

India Probable Playing XI: 2ನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಮೂರು ಬದಲಾವಣೆ: ಇಲ್ಲಿದೆ ಭಾರತದ ಪ್ಲೇಯಿಂಗ್ XI

(Tim Paine has stepped down as Australia Test captain Following Sexting Scandal)

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ