AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಪುರ ಕ್ರೀಡಾಂಗಣದಲ್ಲಿದ್ದ 25 ಪಾಕ್ ಕ್ರಿಕೆಟಿಗರ ಫೋಟೋಗಳನ್ನು ಕಿತ್ತೆಸದ ಆರ್‌ಸಿಎ

Jaipur stadium: ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದ "ವಾಲ್ ಆಫ್ ಗ್ಲೋರಿ"ಯಿಂದ 25 ಪಾಕಿಸ್ತಾನಿ ಕ್ರಿಕೆಟಿಗರ ಫೋಟೋಗಳನ್ನು ತೆಗೆದುಹಾಕಲಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಉದ್ವಿಗ್ನತೆಯ ನಂತರ ನಡೆದಿದೆ. ಈ ನಿರ್ಧಾರವು 2019 ರ ಪುಲ್ವಾಮಾ ದಾಳಿಯ ನಂತರದಂತೆಯೇ ಇದೆ. ಪಾಕಿಸ್ತಾನ ಪರ ಆಡಿದ ಕೊನೆಯ ಹಿಂದೂ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರ ಫೋಟೋ ಕೂಡ ಇದರಲ್ಲಿ ಸೇರಿದೆ.

ಜೈಪುರ ಕ್ರೀಡಾಂಗಣದಲ್ಲಿದ್ದ 25 ಪಾಕ್ ಕ್ರಿಕೆಟಿಗರ ಫೋಟೋಗಳನ್ನು ಕಿತ್ತೆಸದ ಆರ್‌ಸಿಎ
Pak
ಪೃಥ್ವಿಶಂಕರ
|

Updated on:May 19, 2025 | 10:05 PM

Share

ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವೇ ಸೃಷ್ಟಿಯಾಗಿತ್ತು. ವಾಸ್ತವವಾಗಿ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ (pahalgam terror attack) ನಂತರ, ಭಾರತವು ಆಪರೇಷನ್ ಸಿಂಧೂರ್ (operation sindoor) ಹೆಸರಿನಲ್ಲಿ ಅನೇಕ ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಇದಾದ ಬಳಿಕ ಪಾಕಿಸ್ತಾನ ಕೂಡ ಭಾರತದ ಮೇಲೆ ಹಲವಾರು ದಾಳಿಗಳನ್ನು ಮಾಡಿತು, ಆದರೆ ಭಾರತೀಯ ವಾಯು ರಕ್ಷಣಾ ಪಡೆಗಳು ಅವುಗಳನ್ನು ವಿಫಲಗೊಳಿಸಿದವು. ಈ ಸಮಯದಲ್ಲಿ ಅನೇಕ ಪಾಕಿಸ್ತಾನಿ ಆಟಗಾರರು ಭಾರತದ ವಿರುದ್ಧ ವಿಷ ಕಾರಿದ್ದರು. ಇದೀಗ ಅದಕ್ಕೆ ಪ್ರತಿಕಾರವಾಗಿ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ (Jaipur stadium) ಇರಿಸಲಾಗಿದ್ದ ಪಾಕ್ ಆಟಗಾರರ ಫೋಟೋಗಳನ್ನು ತೆಗೆದು ಹಾಕಲಾಗಿದೆ.

ಪಾಕ್ ಆಟಗಾರರ ಫೋಟೋ ಕಿತ್ತೆಸದ ಆರ್‌ಸಿಎ

ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿರುವ ‘ವಾಲ್ ಆಫ್ ಗ್ಲೋರಿ’ಯಿಂದ ಎಲ್ಲಾ ಪಾಕಿಸ್ತಾನಿ ಕ್ರಿಕೆಟಿಗರ ಫೋಟೋಗಳನ್ನು ತೆಗೆದುಹಾಕಲಾಗಿದೆ. ಈ ಮೈದಾನದಲ್ಲಿ ಆಡಿದ ಎಲ್ಲಾ ಅಂತರರಾಷ್ಟ್ರೀಯ ಕ್ರಿಕೆಟಿಗರ ಫೋಟೋಗಳನ್ನು ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಇರಿಸಲಾಗಿದೆ. ಪಾಕಿಸ್ತಾನ ಇಲ್ಲಿ ಒಂದು ಟೆಸ್ಟ್ ಮತ್ತು ನಾಲ್ಕು ಏಕದಿನ ಪಂದ್ಯಗಳನ್ನು ಆಡಿದೆ, ಈ ಕಾರಣದಿಂದಾಗಿ ಒಟ್ಟು 25 ಪಾಕಿಸ್ತಾನಿ ಕ್ರಿಕೆಟಿಗರ ಫೋಟೋಗಳು ‘ವಾಲ್ ಆಫ್ ಗ್ಲೋರಿ’ಯ ಭಾಗವಾಗಿದ್ದವು. ಆದರೆ ರಾಜಸ್ಥಾನ ಕ್ರಿಕೆಟ್ ಸಂಸ್ಥೆ (ಆರ್‌ಸಿಎ) ಎಲ್ಲಾ ಪಾಕಿಸ್ತಾನಿ ಆಟಗಾರರ ಫೋಟೋಗಳನ್ನು ತೆಗೆದುಹಾಕಿದೆ.

ಇಂತಹ ಹೆಜ್ಜೆ ಇಡುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರವೂ, ಪಾಕಿಸ್ತಾನಿ ಕ್ರಿಕೆಟಿಗರ ಫೋಟೋಗಳನ್ನು ಕ್ರೀಡಾಂಗಣದಿಂದ ತೆಗೆದುಹಾಕಲಾಯಿತು. ಇದೀಗ ಈ 25 ಆಟಗಾರರಲ್ಲಿ ಪಾಕಿಸ್ತಾನ ಪರ ಆಡಿದ ಕೊನೆಯ ಹಿಂದೂ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಕೂಡ ಸೇರಿದ್ದಾರೆ. ವಾಸ್ತವವಾಗಿ, ಈ ದಾಳಿಯ ನಂತರ, ಕನೇರಿಯಾ ಪಾಕಿಸ್ತಾನ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು. ಇದರೊಂದಿಗೆ ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಅವರು ಆರೋಪಿಸಿದ್ದರು.

ಬಿಸಿಸಿಐನ ಒಂದು ನಿರ್ಧಾರದಿಂದ ಪಾಕ್ ಕ್ರಿಕೆಟ್​ಗೆ 220 ಕೋಟಿ ರೂ. ನಷ್ಟ..!

ಡ್ಯಾನಿಶ್ ಕನೇರಿಯಾ ವೃತ್ತಿಜೀವನ

ಡ್ಯಾನಿಶ್ ಕನೇರಿಯಾ ಪಾಕಿಸ್ತಾನ ಪರ ಒಟ್ಟು 79 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕನೇರಿಯಾ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿದ್ದರು. ಈ ಅವಧಿಯಲ್ಲಿ, ಅವರು ಟೆಸ್ಟ್ ಪಂದ್ಯಗಳಲ್ಲಿ 34.79 ಸರಾಸರಿಯಲ್ಲಿ 261 ವಿಕೆಟ್‌, ಮತ್ತು ಏಕದಿನ ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಉರುಳಿಸಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಹಿಂದೂ ಎಂಬ ಕಾರಣಕ್ಕಾಗಿ ತಾರತಮ್ಯಕ್ಕೊಳಗಾಗಿದ್ದ ಬಗ್ಗೆಯೂ ಕನೇರಿಯಾ ಬಹಿರಂಗವಾಗಿ ಮಾತನಾಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:03 pm, Mon, 19 May 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ