Jay Shah: ಐಸಿಸಿ ಅಧ್ಯಕ್ಷರಾಗಲು ಜಯ್​ ಶಾಗೆ ಎಷ್ಟು ಮತಗಳು ಬೇಕು? ಈಗ ಯಾವ್ಯಾವ ಮಂಡಳಿಗಳ ಬೆಂಬಲ ಸಿಕ್ಕಿದೆ?

|

Updated on: Aug 24, 2024 | 8:33 PM

Jay Shah: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಜಯ್ ಶಾ ಸ್ಪರ್ಧಿಸಿದರೆ ಹಲವು ಕ್ರಿಕೆಟ್ ಮಂಡಳಿಗಳಿಂದ ಮುಕ್ತ ಬೆಂಬಲ ಸಿಗಬಹುದು. ಜಯ್ ಶಾ ಅವರಿಗೆ ಈಗಾಗಲೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಮುಕ್ತ ಬೆಂಬಲವಿದೆ ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ.

Jay Shah: ಐಸಿಸಿ ಅಧ್ಯಕ್ಷರಾಗಲು ಜಯ್​ ಶಾಗೆ ಎಷ್ಟು ಮತಗಳು ಬೇಕು? ಈಗ ಯಾವ್ಯಾವ ಮಂಡಳಿಗಳ ಬೆಂಬಲ ಸಿಕ್ಕಿದೆ?
ಜಯ್ ಶಾ
Follow us on

ಇದೇ ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಹುದ್ದೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಈ ತಿಂಗಳಿನಲ್ಲಿ ಐಸಿಸಿ ಅಧ್ಯಕ್ಷ ಹುದ್ದೆಗೆ ಜಯ್​ ಶಾ ನಾಮಪತ್ರ ಸಲ್ಲಿಸಬಹುದು ಎಂದು ವರದಿ ಇದೆ. ಜಯ್ ಶಾ ಅವರು ಈ ಹುದ್ದೆಗೆ ನಾಮನಿರ್ದೇಶನಗೊಂಡರೆ, ಅವರು ಐಸಿಸಿಯ ಹೊಸ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಜಯ್ ಶಾ ಅಧ್ಯಕ್ಷರಾಗಲು ಬೇಕಾದ ಮತಗಳು ಈಗಾಗಲೇ ಖಚಿತವಾಗಿವೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.

ಯಾವ್ಯಾವ ಮಂಡಳಿಗಳು ಬೆಂಬಲ ನೀಡಿವೆ?

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಜಯ್ ಶಾ ಸ್ಪರ್ಧಿಸಿದರೆ ಹಲವು ಕ್ರಿಕೆಟ್ ಮಂಡಳಿಗಳಿಂದ ಮುಕ್ತ ಬೆಂಬಲ ಸಿಗಬಹುದು. ಜಯ್ ಶಾ ಅವರಿಗೆ ಈಗಾಗಲೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಮುಕ್ತ ಬೆಂಬಲವಿದೆ ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಅನೇಕ ಕ್ರಿಕೆಟ್ ಮಂಡಳಿಗಳು ಐಸಿಸಿಯ ಹೊಸ ಅಧ್ಯಕ್ಷರಾಗಿ ಜಯ್ ಶಾ ಅವರನ್ನು ಆಯ್ಕೆ ಮಾಡಲು ಸಹ ಒಲವು ತೋರಿವೆ.

ಎಷ್ಟು ಮತಗಳ ಅಗತ್ಯವಿದೆ?

ಜಯ್ ಶಾ ಜನಪ್ರಿಯತೆ ಬಹುತೇಕ ಎಲ್ಲಾ ಕ್ರಿಕೆಟ್ ಮಂಡಳಿಗಳಲ್ಲಿದೆ. ಪ್ರಸ್ತುತ, ಬಿಸಿಸಿಐ ಕಾರ್ಯದರ್ಶಿ ಹುದ್ದೆಯ ಜೊತೆಗೆ, ಅವರು ಐಸಿಸಿಯ ಹಣಕಾಸು ವಿಷಯಗಳ ಉಪ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ. ವರದಿ ಪ್ರಕಾರ ಈಗಾಗಲೇ ಜಯ್​ ಶಾಗೆ 16 ಸದಸ್ಯರ ಬೆಂಬಲವಿದೆ ಎಂದು ಹೇಳಲಾಗುತ್ತಿದೆ. ನಿಯಮಗಳ ಪ್ರಕಾರ ಐಸಿಸಿ ಅಧ್ಯಕ್ಷರಾಗಲು ಕೇವಲ 51 ಪ್ರತಿಶತ ಅಂದರೆ ಒಟ್ಟು 9 ಮತಗಳು ಬೇಕಾಗುತ್ತವೆ. ಹೀಗಿರುವಾಗ ಜಯ್​ ಶಾಗೆ ಈಗಾಗಲೇ 16 ಸದಸ್ಯರ ಬೆಂಬಲವಿರುವುದರಿಂದ ಜಯ್​ ಶಾ ಅಧ್ಯಕ್ಷರಾಗುವುದು ಭಾಗಶಃ ಖಚಿತವಾಗಿದೆ.

5ನೇ ಭಾರತೀಯನಾಗಲಿದ್ದಾರೆ

ಜೈ ಶಾ ಈ ಹುದ್ದೆಗೆ ಆಯ್ಕೆಯಾದರೆ, ಈ ಹುದ್ದೆಗೆ ಆಯ್ಕೆಯಾದ 5ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಜಯ್ ಶಾ ಪಾತ್ರರಾಗಲಿದ್ದಾರೆ. ಜಯ್​ ಶಾ ಅವರಿಗಿಂತ ಮೊದಲು ಈ ಸ್ಥಾನಕ್ಕೆ ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಆಯ್ಕೆಯಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Sat, 24 August 24