ಮುಟ್ಟಿನ ಸಮಯದಲ್ಲಿ ಕ್ರಿಕೆಟ್ ಆಡುವುದು ಸುಲಭವಲ್ಲ! ಬಟ್ಟೆ ಮೇಲೆ ಕಲೆ ಬೀಳುವ ಭಯ; ಭಾರತದ ಮಹಿಳಾ ಕ್ರಿಕೆಟರ್ ಅಳಲು

Jemima Rodrigues: ಪಿರಿಯಡ್ಸ್ ನೋವಿನ ಹೊರತಾಗಿ ಬಟ್ಟೆಗಳ ಮೇಲೆ ಕಲೆ ಬೀಳುವ ಭಯ ಸದಾ ಇರುತ್ತದೆ.ಆದರೆ ಇದು ಪುರುಷ ಕ್ರಿಕೆಟಿಗರು ಎದುರಿಸದ ಸವಾಲಾಗಿದೆ ಎಂದಿದ್ದಾರೆ.

ಮುಟ್ಟಿನ ಸಮಯದಲ್ಲಿ ಕ್ರಿಕೆಟ್ ಆಡುವುದು ಸುಲಭವಲ್ಲ! ಬಟ್ಟೆ ಮೇಲೆ ಕಲೆ ಬೀಳುವ ಭಯ; ಭಾರತದ ಮಹಿಳಾ ಕ್ರಿಕೆಟರ್ ಅಳಲು
ಜೆಮಿಮಾ ರೋಡ್ರಿಗಸ್
Follow us
TV9 Web
| Updated By: ಪೃಥ್ವಿಶಂಕರ

Updated on: Feb 23, 2022 | 4:14 PM

ಮುಟ್ಟಿನ ದಿನಗಳಲ್ಲಿ ಮಹಿಳೆಯರು ಪಡಬಾರದ ಕಷ್ಟ ಪಡುತ್ತಾರೆ. ಅದು ಸಾಲದೆಂಬಂತೆ ಆ ಸಮಯದಲ್ಲಿ ಮಹಿಳೆಯರು ಕೆಲವು ದೈಹಿಕ ಕೆಲಸವನ್ನು ಮಾಡಬೇಕಾದಾಗ ಈ ತೊಂದರೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಇದಕ್ಕೆ ಪೂರಕವೆಂಬಂತೆ ಭಾರತದ ಮಹಿಳಾ ಕ್ರಿಕೆಟರ್ ಜೆಮಿಮಾ ರಾಡ್ರಿಗಸ್ (Jemimah Rodrigues) ಇತ್ತೀಚೆಗೆ ಯೂಟ್ಯೂಬರ್ ರಣವೀರ್ ಸಿಂಗ್ ಅವರ ಸಂದರ್ಶನದಲ್ಲಿ ಆಟಗಾರರು ಪಂದ್ಯದ ಸಮಯದಲ್ಲಿ ಎಷ್ಟು ತೊಂದರೆಗಳನ್ನು ಎದುರಿಸುತ್ತಾರೆ ಎಂಬುದನ್ನು ಹೇಳಿಕೊಂಡಿದ್ದಾರೆ. ಪಿರಿಯಡ್ಸ್ (periods) ನೋವಿನ ಹೊರತಾಗಿ ಬಟ್ಟೆಗಳ ಮೇಲೆ ಕಲೆ ಬೀಳುವ ಭಯ ಸದಾ ಇರುತ್ತದೆ.ಆದರೆ ಇದು ಪುರುಷ ಕ್ರಿಕೆಟಿಗರು ಎದುರಿಸದ ಸವಾಲಾಗಿದೆ ಎಂದು ಜಮೀಮಾ ತಮ್ಮ ಅಳಲು ತೊಡಿಕೊಂಡಿದ್ದಾರೆ. ಜೆಮಿಮಾ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ್ದ ಟೀಮ್ ಇಂಡಿಯಾದ ಭಾಗವಾಗಿಲ್ಲ, ಅವರು ಈ ದಿನಗಳಲ್ಲಿ ಮುಂಬೈನಲ್ಲಿದ್ದಾರೆ. ಯೂಟ್ಯೂಬರ್ ರಣವೀರ್ ಸಿಂಗ್ ಅವರ ಚಾನೆಲ್ ಬೀರ್ ಬೈಸೆಪ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಪ್ರಯಾಣದ ಬಗ್ಗೆ ಮತ್ತು ಮಹಿಳಾ ಆಟಗಾರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು. ಜೊತೆಗೆ ಐಸಿಸಿ ಮಹಿಳಾ ವಿಶ್ವಕಪ್‌ (ICC Women’s World Cup)ನಿಂದ ಕೈಬಿಟ್ಟ ಬಗ್ಗೆ ಜೆಮಿಮಾ ಮಾತನಾಡಿದ್ದಾರೆ.

ಪಿರಿಯಡ್ಸ್ ಸಮಯದಲ್ಲಿ ಆಡುವುದೇ ಸವಾಲು

ಅನೇಕ ಮಹಿಳಾ ಕ್ರಿಕೆಟಿಗರಿಗೆ ಪಿರಿಯಡ್ಸ್‌ನ ಸಮಯವು ತುಂಬಾ ನೋವಿನಿಂದ ಕೂಡಿದೆ ಎಂದು ಜೆಮಿಮಾ ಹೇಳಿದ್ದಾರೆ. ತಮ್ಮ ಸಹ ಆಟಗಾರರ ಬಗ್ಗೆ ಮಾತನಾಡಿದ ಸ್ಟಾರ್ ಕ್ರಿಕೆಟರ್, ಕೆಲವೊಮ್ಮೆ ಅವರ ಸ್ಥಿತಿಯು ನಡೆಯಲು ಕಷ್ಟವಾಗಿರುತ್ತದೆ. ಅವರು ಮೈದಾನದಲ್ಲಿ ನೋವು ನಿವಾರಕವನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಅವರಿಗೆ ಆಟದಿಂದ ಹಿಂದೆ ಸರಿಯುವ ಆಯ್ಕೆ ಇರುವುದಿಲ್ಲ.ಇದಲ್ಲದೇ ಆಟವಾಡುವಾಗಲೂ ಬಟ್ಟೆಗೆ ಕಲೆಯಾಗಬಹುದು ಎಂಬ ಭಯ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ಇದರಿಂದಅವರು ಪದೆಪದೆ ವಾಶ್‌ರೂಮ್‌ಗೆ ಹೋಗಬೇಕಾಗುತ್ತದೆ. ಮಹಿಳಾ ಕ್ರಿಕೆಟಿಗರ ಈ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಜೆಮಿಮಾ ಹೇಳಿದ್ದಾರೆ.

ವಿಶ್ವಕಪ್‌ನಿಂದ ಹೊರಬಿದ್ದ ಬಳಿಕ ಪೋಷಕರಿಗೆ ನಿರಾಸೆಯಾಯ್ತು

ಜೆಮಿಮಾ ವಿಶ್ವಕಪ್‌ಗೆ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಈ ಬಗ್ಗೆ ಮಾತನಾಡಿದರ ಅವರು, ಆ ಸಮಯ ತುಂಬಾ ಕಷ್ಟಕರವಾಗಿತ್ತು. ಆದಾಗ್ಯೂ, ಆ ಸಮಯದಲ್ಲಿ ನಾನು ಕುಗ್ಗದೆ ನನ್ನ ಕೋಪ ಮತ್ತು ದುಃಖವನ್ನು ನಿಗ್ರಹಿಸಿಕೊಂಡಿದ್ದೆ. ನನ್ನ ತನ್ನ ತಾಯಿ ಮತ್ತು ತಂದೆಯೊಂದಿಗೆ ಮಾತನಾಡಿ ಅವರಿಗೂ ಸಮಾದಾನ ಮಾಡಿದೆ. ನನ್ನ ತಂದೆಗೆ ಮಾನಸಿಕವಾಗಿ ಹುಷಾರಿಲ್ಲ. ನಾನು ತಂಡದಲ್ಲಿ ಆಯ್ಕೆಯಾಗಿಲ್ಲ ಎಂಬುದು ಗೊತ್ತಾಗುತ್ತಲೆ ಪೋಷಕರು ಬೇಸರ ವ್ಯಕ್ತಪಡಿಸಿದರು. ಆದರೆ ನಾನು ಅವರಿಗೆ ವಾಸ್ತವದ ಅರಿವು ಮೂಡಿಸಿದೆ ಎಂದಿದ್ದಾರೆ. ಇದರ ನಂತರ ಜೆಮಿಮಾ ತನ್ನನ್ನು ತಾನು ಸಂತೋಷವಾಗಿರಿಸಿಕೊಳ್ಳಲು ಹಾಕಿ ಆಡಲು ಪ್ರಾರಂಭಿಸಿದರು. ಈಗ ಅವರು ಕ್ರಿಕೆಟ್‌ನಲ್ಲಿ ಮುಂದುವರಿಯಲು ತನ್ನಲ್ಲಿ ಏನು ಬದಲಾಯಿಸಬೇಕೆಂಬುದರತ್ತ ಗಮನ ಹರಿಸುತ್ತಿದ್ದಾರೆ.

ಇದನ್ನೂ ಓದಿ:NZ vs IND: ನಾಲ್ಕು ಬ್ಯಾಟರ್​ಗಳ ಶೂನ್ಯ ಸಾಧನೆ! 4ನೇ ಪಂದ್ಯದಲ್ಲೂ ಸೋತ ಭಾರತ ವನಿತಾ ತಂಡ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ