Karnataka Squad: ಕರ್ನಾಟಕ ಟಿ20 ತಂಡ ಪ್ರಕಟ: ದೇವದತ್ ಪಡಿಕ್ಕಲ್ ಔಟ್

| Updated By: ಝಾಹಿರ್ ಯೂಸುಫ್

Updated on: Oct 29, 2022 | 10:09 PM

Karnataka Squad: ಕರ್ನಾಟಕ ತಂಡವು ಮಂಗಳವಾರ ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕ್ವಾರ್ಟರ್​ ಫೈನಲ್ ಪಂದ್ಯವಾಡಲಿದೆ. ಇದಕ್ಕಾಗಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ.

Karnataka Squad: ಕರ್ನಾಟಕ ಟಿ20 ತಂಡ ಪ್ರಕಟ: ದೇವದತ್ ಪಡಿಕ್ಕಲ್ ಔಟ್
Karnataka Squad
Follow us on

Syed Mushtaq Ali Trophy 2022: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಭಾನುವಾರದಿಂದ ಶುರುವಾಗಲಿದೆ. ಮೊದಲ ಸುತ್ತಿನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಆ ಬಳಿಕ ಕ್ವಾರ್ಟರ್​ ಫೈನಲ್​ ಪಂದ್ಯಗಳು ಶುರುವಾಗಲಿದೆ. ವಿಶೇಷ ಎಂದರೆ ಕರ್ನಾಟಕ (Karnataka Squad ), ಮುಂಬೈ, ದೆಹಲಿ, ಬೆಂಗಾಳ್ ಮತ್ತು ಹಿಮಾಚಲ ಪ್ರದೇಶ ತಂಡಗಳು ನೇರವಾಗಿ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.

ಇನ್ನು ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಪಂಜಾಬ್, ಹರ್ಯಾಣ, ವಿದರ್ಭ, ಚತ್ತೀಸ್​ಗಢ್, ಕೇರಳ ಹಾಗೂ ಸೌರಾಷ್ಟ್ರ ತಂಡಗಳು ಸೆಣಸಲಿವೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ಅಕ್ಟೋಬರ್ 30 ರಂದು ನಡೆಯಲಿದ್ದು, ಕ್ವಾರ್ಟರ್​ ಫೈನಲ್ ಪಂದ್ಯಗಳು ನವೆಂಬರ್ 1 ರಿಂದ ಶುರುವಾಗಲಿದೆ.

ಕರ್ನಾಟಕ ತಂಡವು ಮಂಗಳವಾರ ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕ್ವಾರ್ಟರ್​ ಫೈನಲ್ ಪಂದ್ಯವಾಡಲಿದೆ. ಇದಕ್ಕಾಗಿ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದ್ದು, ತಂಡದಿಂದ ದೇವದತ್ ಪಡಿಕ್ಕಲ್ ಅವರನ್ನು ಕೈ ಬಿಡಲಾಗಿದೆ.
ಜ್ವರದಿಂದ ಬಳಲುತ್ತಿರುವ ದೇವದತ್ ಪಡಿಕ್ಕಲ್ ಸ್ಥಾನದಲ್ಲಿ ರೋಹನ್ ಪಾಟೀಲ್ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಲೀಗ್​ನಲ್ಲಿ ತಂಡದಲ್ಲಿ ಕಾಣಿಸಿಕೊಂಡ ಆಟಗಾರರೇ ಅವಕಾಶ ಪಡೆದಿದ್ದಾರೆ. ಅದರಂತೆ ಕರ್ನಾಟಕ ತಂಡ ಹೀಗಿದೆ.

ಇದನ್ನೂ ಓದಿ
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
IND vs PAK: ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ
India vs Pakistan: ಹೊಸ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ಕರ್ನಾಟಕ ತಂಡ:

ಮಾಯಾಂಕ್‌ ಅಗರ್ವಾಲ್‌ (ನಾಯಕ), ರೋಹನ್‌ ಪಾಟೀಲ್‌, ಮನೀಷ್‌ ಪಾಂಡೆ, ಎಲ್‌.ಆರ್‌. ಚೇತನ್‌, ಅಭಿನವ್‌ ಮನೋಹರ್, ಮನೋಜ್‌ ಭಾಂಡಗೆ, ಕೃಷ್ಣಪ್ಪ ಗೌತಮ್‌, ಶ್ರೇಯಸ್‌ ಗೋಪಾಲ್‌, ಜಗದೀಶ್ ಸುಚಿತ್‌, ಲವ್​ನೀತ್ ಸಿಸೋಡಿಯ, ಬಿ.ಆರ್‌. ಶರತ್‌, ವಿ. ಕೌಶಿಕ್‌, ವಿಜಯಕುಮಾರ್ ವೈಶಾಖ್‌, ಎಂ. ವೆಂಕಟೇಶ್‌, ವಿದ್ವತ್ ಕಾವೇರಪ್ಪ.