Karun Nair: ಮೊದಲ ಪಂದ್ಯದಲ್ಲಿ 89 ರನ್, ಮುಂದಿನ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 65 ರನ್: ಇದು ಕರುಣ್ ನಾಯರ್ ಕಥೆ

SRH vs DC, IPL 2025: ಮೊದಲ ಪಂದ್ಯದಲ್ಲಿ 89 ರನ್ ಗಳಿಸಿದ ನಂತರ, ಕರುಣ್ ನಾಯರ್ಗೆ ನಂತರ ಸತತ ಅವಕಾಶ ನೀಡಿದರೂ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಿಲ್ಲ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ, ಅವರು ಖಾತೆ ತೆರೆಯದೆಯೇ ರನೌಟ್ ಆದರು. ಸೋಮವಾರ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಕರುಣ್ ಬ್ಯಾಟ್ ಸದ್ದು ಮಾಡಲೇ ಇಲ್ಲ.

Karun Nair: ಮೊದಲ ಪಂದ್ಯದಲ್ಲಿ 89 ರನ್, ಮುಂದಿನ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 65 ರನ್: ಇದು ಕರುಣ್ ನಾಯರ್ ಕಥೆ
Karun Nair

Updated on: May 06, 2025 | 9:21 AM

ಬೆಂಗಳೂರು (ಮೇ. 06): ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ ನಂತರ, ಕರುಣ್ ನಾಯರ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ (Indian Premier League) ಆಡುವ ಅವಕಾಶ ಸಿಕ್ಕಿತು. ಆರಂಭಿಕ ಕೆಲ ಪಂದ್ಯಗಳಲ್ಲಿ ಬೆಂಚ್‌ ಕುಳಿತ ನಂತರ, ನಾಯರ್‌ಗೆ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಅವಕಾಶ ಸಿಕ್ಕಿತು. ಐಪಿಎಲ್ 2025ರ ತನ್ನ ಮೊದಲ ಪಂದ್ಯದಲ್ಲೇ ಕರುಣ್ ಎಲ್ಲರ ಹುಬ್ಬೇರುವಂತೆ ಮಾಡಿದರು. ಟ್ರೆಂಟ್ ಬೌಲ್ಟ್ ನಿಂದ ಹಿಡಿದು ಜಸ್ಪ್ರೀತ್ ಬುಮ್ರಾ ವರೆಗೆ ಎಲ್ಲರ ಬೌಲಿಂಗ್ ಅನ್ನು ದಿಟ್ಟವಾಗಿ ಎದುರಿಸಿ ಫೋರ್-ಸಿಕ್ಸರ್​ಗಳ ಮಳೆ ಸುರಿಸಿದರು. ನಾಯರ್ ಕೇವಲ 40 ಎಸೆತಗಳಲ್ಲಿ 89 ರನ್ ಚಚ್ಚಿದರು.

ಮುಂಬೈ ಈ ಪಂದ್ಯ ಗೆದ್ದರೂ ಕರುಣ್ ನಾಯರ್ ಪ್ರದರ್ಶನಕ್ಕೆ ಎಲ್ಲರೂ ಮನಸೋತರು. ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂಬ ಮಾತು ಕೂಡ ಕೇಳಿಬಂತು. ಆದಾಗ್ಯೂ, ಇದಾದ ನಂತರ ನಾಯರ್ ಅವರ ಬ್ಯಾಟ್ ಮೌನವಾಗಿದೆ.

ಮೊದಲ ಎಸೆತದಲ್ಲೇ ಕರುಣ್ ನಾಯರ್ ಔಟ್:

ಐಪಿಎಲ್ 2025 ರಲ್ಲಿ ಸೋಮವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕರುಣ್ ನಾಯರ್ ಅವರ ಬ್ಯಾಟ್ ಸದ್ದು ಮಾಡಲೇ ಇಲ್ಲ. ಈ ಪಂದ್ಯದಲ್ಲಿ ಅವರು ಗೋಲ್ಡನ್ ಡಕ್ ಆದರು. ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಆಡದ ಕಾರಣ, ಸ್ವತಃ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲ ಓವರ್ ಬೌಲ್ ಮಾಡಿದರು. ಅವರು ಮೊದಲ ಎಸೆತದಲ್ಲೇ ಕರುಣ್ ನಾಯರ್ ಅವರನ್ನು ಔಟ್ ಮಾಡಿದರು. ಕಮ್ಮಿನ್ಸ್ ಎಸೆತವು ನಾಯರ್ ಬ್ಯಾಟ್ ನ ಅಂಚನ್ನು ತಗುಲಿ ವಿಕೆಟ್ ಕೀಪರ್ ಇಶಾನ್ ಕಿಶನ್ ಕೈಗೆ ಸೇರಿತು. ಕಮ್ಮಿನ್ಸ್ ಟೆಸ್ಟ್ ಪಂದ್ಯದ ಲೈನ್ ಅನ್ನು ಬೌಲ್ ಮಾಡಿದ್ದರು. ಇದಕ್ಕೆ ನಾಯರ್ ಬಳಿ ಉತ್ತರವಿರಲಿಲ್ಲ.

ಇದನ್ನೂ ಓದಿ
ಅಧಿಕೃತವಾಗಿ 2025 ರ ಐಪಿಎಲ್​ನಿಂದ ಹೊರಬಿದ್ದ ಎಸ್​ಆರ್​ಹೆಚ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಶಮಿಯನ್ನು ಪ್ಲೇಯಿಂಗ್ 11 ನಿಂದ ಹೊರಗಿಟ್ಟ ಎಸ್​ಆರ್​ಹೆಚ್
ಅಮಾನತು ಶಿಕ್ಷೆ ಪೂರ್ಣಗೊಳಿಸಿದ ಆಫ್ರಿಕಾ ವೇಗಿ ರಬಾಡ

IPL 2025: ಮಳೆಯಿಂದ ಡೆಲ್ಲಿ ವಿರುದ್ಧದ ಪಂದ್ಯ ರದ್ದು; ಲೀಗ್ ಹಂತದಲ್ಲೇ ಹೈದರಾಬಾದ್‌ ಪ್ರಯಾಣ ಅಂತ್ಯ

ಐಪಿಎಲ್ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಎಸ್‌ಆರ್‌ಎಚ್ ಬೌಲರ್‌ಗಳು:

  • ಜಗದೀಶ ಸುಚಿತ್- ವಿರಾಟ್ ಕೊಹ್ಲಿ, ಆರ್‌ಸಿಬಿ (2022)
  • ಭುವನೇಶ್ವರ್ ಕುಮಾರ್- ಪ್ರಭ್ಸಿಮ್ರಾನ್ ಸಿಂಗ್, ಪಿಬಿಕೆಎಸ್ (2023)
  • ಮೊಹಮ್ಮದ್ ಶಮಿ- ಶೇಖ್ ರಶೀದ್, ಸಿಎಸ್‌ಕೆ (2025)
  • ಪ್ಯಾಟ್ ಕಮ್ಮಿನ್ಸ್- ಕರುಣ್ ನಾಯರ್, ಡಿಸಿ (2025)

ಕರುಣ್ ನಾಯರ್ ನಿರಂತರ ವೈಫಲ್ಯ:

ಮೊದಲ ಪಂದ್ಯದಲ್ಲಿ 89 ರನ್ ಗಳಿಸಿದ ನಂತರ, ಕರುಣ್ ನಾಯರ್​ಗೆ ನಂತರ ಸತತ ಅವಕಾಶ ನೀಡಿದರೂ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಿಲ್ಲ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ, ಅವರು ಖಾತೆ ತೆರೆಯದೆಯೇ ರನೌಟ್ ಆದರು. ನಂತರ ಗುಜರಾತ್ ಟೈಟಾನ್ಸ್ ವಿರುದ್ಧ 31 ರನ್ ಗಳಿಸಿದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 15 ರನ್‌ಗಳಿಗೆ ಮತ್ತು ಆರ್‌ಸಿಬಿ ವಿರುದ್ಧ ಕೇವಲ ನಾಲ್ಕು ರನ್‌ಗಳಿಗೆ ಔಟಾಗಿದ್ದರು. ಕೆಕೆಆರ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರು 15 ರನ್ ಗಳಿಸಿದ್ದರು. ಈಗ ಅವರು ಹೈದರಾಬಾದ್ ವಿರುದ್ಧ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಈ ರೀತಿಯಾಗಿ, ಕಳೆದ 6 ಇನ್ನಿಂಗ್ಸ್‌ಗಳಲ್ಲಿ ನಾಯರ್ ಬ್ಯಾಟ್‌ನಿಂದ ಕೇವಲ 65 ರನ್‌ಗಳು ಬಂದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ