AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮಳೆಯಿಂದ ಡೆಲ್ಲಿ ವಿರುದ್ಧದ ಪಂದ್ಯ ರದ್ದು; ಲೀಗ್ ಹಂತದಲ್ಲೇ ಹೈದರಾಬಾದ್‌ ಪ್ರಯಾಣ ಅಂತ್ಯ

Sunrisers Hyderabad IPL 2025 Campaign Ends: ಐಪಿಎಲ್ 2025ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ಪಂದ್ಯ ರದ್ದಾಯಿತು. ಹೈದರಾಬಾದ್, ಡೆಲ್ಲಿಯನ್ನು 133 ರನ್‌ಗಳಿಗೆ ಸೀಮಿತಗೊಳಿಸಿತ್ತು. ಆದರೆ, ಪಂದ್ಯದ ಮಧ್ಯೆ ಆರಂಭವಾದ ಭಾರೀ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಎರಡೂ ತಂಡಗಳಿಗೆ ಒಂದು ಅಂಕ ದೊರೆತಿತು. ಈ ಫಲಿತಾಂಶದೊಂದಿಗೆ, ಹೈದರಾಬಾದ್ ತಂಡದ ಐಪಿಎಲ್ 2025 ಪ್ರಯಾಣ ಅಂತ್ಯಗೊಂಡಿದೆ.

IPL 2025: ಮಳೆಯಿಂದ ಡೆಲ್ಲಿ ವಿರುದ್ಧದ ಪಂದ್ಯ ರದ್ದು; ಲೀಗ್ ಹಂತದಲ್ಲೇ ಹೈದರಾಬಾದ್‌ ಪ್ರಯಾಣ ಅಂತ್ಯ
ಸನ್​ರೈಸರ್ಸ್​ ಹೈದರಾಬಾದ್
Follow us
ಪೃಥ್ವಿಶಂಕರ
|

Updated on: May 05, 2025 | 11:34 PM

ಐಪಿಎಲ್ 2025  (IPL 2025)ರ ಪಂದ್ಯವೊಂದರಲ್ಲಿ 300 ರನ್ ಬಾರಿಸುವ ಗುರಿಯೊಂದಿಗೆ ಅಖಾಡಕ್ಕಿಳಿದಿದ್ದ ಕಳೆದ ಬಾರಿಯ ರನ್ನರ್​ ಅಪ್ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ 300 ರನ್ ಬಾರಿಸುವುದಿರಲಿ, ಕಡೆಯ ಪಕ್ಷ ಪ್ಲೇಆಫ್‌ಗೂ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಹೈದರಾಬಾದ್​ಗೆ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಅದರಂತೆ ಹೈದರಾಬಾದ್‌ ಕೂಡ ಡೆಲ್ಲಿ ತಂಡವನ್ನು 133 ರನ್​ಗಳಿಗೆ ಕಟ್ಟಿಹಾಕಿ ಗೆಲ್ಲುವ ವಿಶ್ವಾಸ ಮೂಡಿಸಿತ್ತು. ಆದರೆ ಹೈದರಾಬಾದ್​ನ ಈ ಗೆಲುವಿನ ಕನಸಿಗೆ ಅಡ್ಡಿಯಾದ ಮಳೆ ಪಂದ್ಯವನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಸೀಸನ್‌ನಲ್ಲಿ ಲೀಗ್ ಹಂತದಲ್ಲೇ ತನ್ನ ಪ್ರಯಾಣವನ್ನು ಅಧಿಕೃತವಾಗಿ ಅಂತ್ಯಗೊಳಿಸಿದೆ.

ಪ್ಲೇಆಫ್​ನಿಂದ ಹೈದರಾಬಾದ್ ಔಟ್

ವಾಸ್ತವವಾಗಿ ಹೈದರಾಬಾದ್​ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದಾದ ನಂತರ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಈಗ ಡೆಲ್ಲಿ ತನ್ನ ಖಾತೆಯಲ್ಲಿ 13 ಅಂಕಗಳನ್ನು ಹೊಂದಿದ್ದು ಐದನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ ಏಳು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ಆದರೆ, ಮಳೆಯಿಂದಾಗಿ ಹೈದರಾಬಾದ್ ತಂಡದ ಇನಿಂಗ್ಸ್ ಆರಂಭವಾಗಲಿಲ್ಲ. ಇದರೊಂದಿಗೆ, ಪ್ಯಾಟ್ ಕಮ್ಮಿನ್ಸ್ ತಂಡವು ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದ್ದು, ಅಕ್ಷರ್ ಪಟೇಲ್ ತಂಡದ ಭರವಸೆ ಇನ್ನೂ ಜೀವಂತವಾಗಿದೆ.

IPL 2025: ಪವರ್ ಪ್ಲೇನಲ್ಲಿ ಪವರ್ ತೋರಿಸಿ ಇತಿಹಾಸ ಸೃಷ್ಟಿಸಿದ ಪ್ಯಾಟ್ ಕಮ್ಮಿನ್ಸ್; ವಿಡಿಯೋ

133 ರನ್​ ಕಲೆಹಾಕಿದ ಡೆಲ್ಲಿ

ಈ ಪಂದ್ಯದಲ್ಲಿ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ದೆಹಲಿ ಪರ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಶುತೋಷ್ ಶರ್ಮಾ ತಲಾ 41 ರನ್​ಗಳ ಇನ್ನಿಂಗ್ಸ್ ಆಡಿದರೆ, ವಿಪ್ರಾಜ್ ನಿಗಂ 18 ರನ್​ಗಳ ಕಾಣಿಕೆ ನೀಡಿದರು. ಉಳಿದಂತೆ ತಂಡದ ಯಾವೊಬ್ಬ ಬ್ಯಾಟರ್​ಗೂ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಡೆಲ್ಲಿ ತಂಡವನ್ನು ಅಲ್ಪ ರನ್​​ಗಳಿಗೆ ಕಟ್ಟಿಹಾಕಿದ್ದ ಹೈದರಾಬಾದ್ ಅರ್ಧಪಂದ್ಯವನ್ನು ಗೆದ್ದ ಖುಷಿಯಲ್ಲಿತ್ತು. ಆದರೆ ಮೊದಲ ಇನ್ನಿಂಗ್ಸ್ ಮುಗಿದ ತಕ್ಷಣ, ಹೈದರಾಬಾದ್‌ನಲ್ಲಿ ಮಳೆ ಸುರಿಯಲು ಪ್ರಾರಂಭಿಸಿತು. ಈ ಮಳೆ ಬಹಳ ಸಮಯದ ನಂತರ ನಿಂತಿತು. ಆಗಾಗಿ ಪಂದ್ಯವನ್ನು ಆರಂಭಿಸಲು ಮೈದಾನದ ಸಿಬ್ಬಂದಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಅಂಪೈರ್​ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ