AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಅಮಾನತು ಶಿಕ್ಷೆ ಪೂರ್ಣಗೊಳಿಸಿ ಐಪಿಎಲ್​ಗೆ ಎಂಟ್ರಿಕೊಟ್ಟ ಕಗಿಸೋ ರಬಾಡ

Kagiso Rabada's Ban Shortened: ಮಾದಕ ದ್ರವ್ಯ ಸೇವನೆಯ ಆರೋಪದ ಮೇಲೆ ಮೂರು ತಿಂಗಳ ಕಾಲ ಅಮಾನತುಗೊಂಡಿದ್ದ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರ ಶಿಕ್ಷೆಯನ್ನು ಒಂದು ತಿಂಗಳಿಗೆ ಇಳಿಸಲಾಗಿದೆ. SAIDS ನೀಡಿರುವ ಮಾಹಿತಿಯ ಪ್ರಕಾರ, ರಬಾಡ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ. ಅವರು ಶೀಘ್ರದಲ್ಲೇ ಕ್ರಿಕೆಟ್‌ಗೆ ಮರಳಲಿದ್ದು, ಗುಜರಾತ್ ಟೈಟಾನ್ಸ್ ಪರ ಮಂಗಳವಾರದ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

IPL 2025: ಅಮಾನತು ಶಿಕ್ಷೆ ಪೂರ್ಣಗೊಳಿಸಿ ಐಪಿಎಲ್​ಗೆ ಎಂಟ್ರಿಕೊಟ್ಟ ಕಗಿಸೋ ರಬಾಡ
Kagiso Rabada
ಪೃಥ್ವಿಶಂಕರ
|

Updated on: May 05, 2025 | 7:46 PM

Share

ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಕಗಿಸೊ ರಬಾಡಗೆ (Kagiso Rabada) ಸಿಹಿ ಸುದ್ದಿ ಸಿಕ್ಕಿದೆ. ಮಾದಕ ದ್ರವ್ಯ ಸೇವನೆ ಆರೋಪದಡಿಯಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ 3 ತಿಂಗಳ ಕಾಲ ಅಮಾನುತುಗೊಂಡಿದ್ದ ಕಗಿಸೊ ರಬಾಡ ಇದೀಗ ಇಷ್ಟರಲ್ಲೇ ಮತ್ತೆ ಕ್ರಿಕೆಟ್ ಅಖಾಡಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ 2025 ರ ಐಪಿಎಲ್​ನಲ್ಲಿ (IPL 2025) ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದ ರಬಾಡ ಕೇವಲ 2 ಪಂದ್ಯಗಳನ್ನು ಆಡಿದ ಬಳಿಕ ಇದ್ದಕ್ಕಿದ್ದಂತೆ ಲೀಗ್ ತೊರೆದು ತಮ್ಮ ದೇಶವಾದ ದಕ್ಷಿಣ ಆಫ್ರಿಕಾಕ್ಕೆ ವಾಪಸ್ಸಾಗಿದ್ದರು. ಆದರೆ ಆ ಸಮಯದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ರಬಾಡ ಲೀಗ್ ತೊರೆದಿದ್ದಾರೆ ಎಂದು ಗುಜರಾತ್ ಫ್ರಾಂಚೈಸಿ ಹೇಳಿಕೊಂಡಿತ್ತು.

ಎಲ್ಲರ ಕ್ಷಮೆ ಕೇಳಿದ್ದ ರಬಾಡ

ಆದರೆ ಕೆಲವು ದಿನಗಳ ಹಿಂದೆ ರಬಾಡ ಲೀಗ್ ತೊರೆಯಲು ಕಾರಣವೇನು ಎಂಬುದು ಹೊರಬಿದ್ದಿತ್ತು. ಮೇ 3 ರ ಶನಿವಾರದಂದು ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಸಂಘವನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದ ರಬಾಡ, ‘ತಮ್ಮ ಮಾದಕ ದ್ರವ್ಯ ಪರೀಕ್ಷೆಯ ವರದಿ ಪಾಸಿಟಿವ್ ಬಂದ ಕಾರಣ ಐಪಿಎಲ್‌ನಿಂದ ಇದ್ದಕ್ಕಿದ್ದಂತೆ ಹಿಂತಿರುಗಬೇಕಾಯಿತು. ನಿಷೇಧಿತ ಔಷಧಿಗಳನ್ನು ಸೇವಿಸಿದ್ದರಿಂದ ನನ್ನನ್ನು ತಾತ್ಕಾಲಿಕವಾಗಿ ಎಲ್ಲಾ ರೀತಿಯ ಕ್ರಿಕೆಟ್​ನಿಂದ ಅಮಾನತುಗೊಳಿಸಲಾಗಿದೆ. ನಾನು ನಿರಾಶೆಗೊಳಿಸಿದ ಎಲ್ಲರಿಗೂ ನಾನು ಕ್ಷಮೆಯಾಚಿಸುತ್ತೇನೆ. ಕ್ರಿಕೆಟ್ ಆಡುವುದು ನನಗೆ ಸಿಕ್ಕ ದೊಡ್ಡ ಗೌರವ ಮತ್ತು ನಾನು ಅದನ್ನು ಎಂದಿಗೂ ಹಗುರವಾಗಿ ಪರಿಗಣಿಸುವುದಿಲ್ಲ. ಇದು ನನ್ನ ವೈಯಕ್ತಿಕ ಕನಸುಗಳಿಗಿಂತ ದೊಡ್ಡದಾಗಿದೆ. ಇದೀಗ ನಾನು ಅಮಾನತು ಶಿಕ್ಷೆಗೆ ಒಳಗಾಗಿದ್ದರು ಶೀಘ್ರದಲ್ಲೇ ಮರಳಿ ಬಂದು ನಾನು ಹೆಚ್ಚು ಇಷ್ಟಪಡುವ ಕ್ರೀಡೆಯನ್ನು ಆಡಲು ಹಿಂತಿರುಗಲು ಬಯಸುತ್ತೇನೆ ಎಂಬ ಮಾಹಿತಿ ನೀಡಿದ್ದರು.

ಶಿಕ್ಷೆ ಪೂರ್ಣಗೊಳಿಸಿರುವ ರಬಾಡ

ಇದೀಗ ರಬಾಡ ಅಮಾನತು ಶಿಕ್ಷೆಯ ಕುರಿತಾಗಿ ಹೊಸ ಅಪ್​ಡೇಟ್ ಹೊರಬಿದ್ದಿದ್ದು, ಮಾದಕ ದ್ರವ್ಯ ಸೇವನೆಗಾಗಿ 3 ತಿಂಗಳ ಕಾಲ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದ ರಬಾಡ ಅವರ ಶಿಕ್ಷೆಯ ಅವಧಿಯನ್ನು 3 ತಿಂಗಳಿನಿಂದ 1 ತಿಂಗಳಿಗೆ ಇಳಿಸಲಾಗಿದೆ. SAIDS ಪ್ರಕಾರ, ರಬಾಡ ಅವರು ಮತ್ತಷ್ಟು ಮಾದಕ ದ್ರವ್ಯ ಸೇವನೆಯನ್ನು ತಡೆಗಟ್ಟುವ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಅವರು ತಕ್ಷಣವೇ ಕ್ರಿಕೆಟ್​ಗೆ ಮರಳಬಹುದು ಎಂಬ ಮಾಹಿತಿ ನೀಡಿದೆ. ಇದರರ್ಥ ರಬಾಡ ಮತ್ತೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಮಂಗಳವಾರ ನಡೆಯುಲ್ಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಪರ ಕಣಕ್ಕಿಳಿಯುವ ಸಾಧ್ಯತೆಗಳಿವೆ.

Kagiso Rabada: ಎಲ್ಲಾ ರೀತಿಯ ಕ್ರಿಕೆಟ್‌ನಿಂದ ಆಫ್ರಿಕಾ ವೇಗಿ ಕಗಿಸೊ ರಬಾಡ ಅಮಾನತು

ಡ್ರಗ್ಸ್ ಸೇವಿಸಿದ್ದು ನಿಜ

ದಕ್ಷಿಣ ಆಫ್ರಿಕಾದ ಡ್ರಗ್ ಫ್ರೀ ಸ್ಪೋರ್ಟ್ಸ್ ಸಂಸ್ಥೆ ಹೊರಡಿಸಿದ ಹೇಳಿಕೆಯಲ್ಲಿ, ಎಂಐ ಕೇಪ್ ಟೌನ್ ಮತ್ತು ಡರ್ಬನ್ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ಸಮಯದಲ್ಲಿ ರಬಾಡ ಡ್ರಗ್ಸ್ ಸೇವಿಸಿದ್ದರು. ನಂತರ ಜನವರಿ 21 ರಂದು ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಅವರು ವಿಫಲರಾಗಿದ್ದರು. ಏಪ್ರಿಲ್ 1 ರಂದು ಡೋಪಿಂಗ್ ಪರೀಕ್ಷಾ ವರದಿ ಬಂದ ಬಳಿಕ ವರದಿಯ ಸಾರಾಂಶವನ್ನು ರಬಾಡಗೆ ತಿಳಿಸಲಾಗಿತ್ತು. ಆ ನಂತರವೇ ರಬಾಡ ಐಪಿಎಲ್ ತೊರೆದು ದಕ್ಷಿಣ ಆಫ್ರಿಕಾಕ್ಕೆ ಹೋಗಲು ನಿರ್ಧರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ