Kaviya Maran: ಪಂದ್ಯದ ಮಧ್ಯೆ ಕ್ಯಾಮೆರಾಮ್ಯಾನ್ನ ಮೈಚಳಿ ಬಿಡಿಸಿದ ಕಾವ್ಯ ಮಾರನ್: ಅಷ್ಟಕ್ಕು ಆಗಿದ್ದೇನು ನೋಡಿ
SRH vs PBKS, IPL 2023: ಹೈದರಾಬಾದ್ನ ಪ್ರತಿ ಪಂದ್ಯಕ್ಕೆ ಚಿಯರ್ ಮಾಡಲು ಮಾಲಕಿ ಕಾವ್ಯ ಮಾರನ್ (Kaviya Maran) ಮೈದಾನದಲ್ಲಿ ಹಾಜರಿರುತ್ತಾರೆ. ಹೀಗಿರುವಾಗ ಕಾವ್ಯ ಕ್ಯಾಮೆರಾಮ್ಯಾನ್ ಮೇಲೆಯೇ ಕೋಪಗೊಂಡ ಘಟನೆ ನಡೆದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ (IPL 2023) ಭಾನುವಾರ ನಡೆದ 14ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (SRH vs PBKS) ತಂಡ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಎಸ್ಆರ್ಹೆಚ್ ಗೆಲುವು ಖಾತೆ ತೆರೆದಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸನ್‌ರೈಸರ್ಸ್ 8 ವಿಕೆಟ್‌ಗಳ ಗೆಲುವು ಕಂಡಿತು. ಹೈದರಾಬಾದ್ನ ಪ್ರತಿ ಪಂದ್ಯಕ್ಕೆ ಚಿಯರ್ ಮಾಡಲು ಮಾಲಕಿ ಕಾವ್ಯ ಮಾರನ್ (Kaviya Maran) ಮೈದಾನದಲ್ಲಿ ಹಾಜರಿರುತ್ತಾರೆ. ಜೊತೆಗೆ ಪ್ರತಿ ಪಂದ್ಯ ನಡೆದಾಗ ಇವರ ಫೋಟೋ, ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಕಾವ್ಯ ಕ್ಯಾಮೆರಾಮ್ಯಾನ್ ಮೇಲೆಯೇ ಕೋಪಗೊಂಡ ಘಟನೆ ನಡೆದಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಎಸ್ಆರ್ಹೆಚ್ ಬೌಲರ್ಗಳು ಇನ್ನಿಂಗ್ಸ್ನ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡಿದರು. ಭುವನೇಶ್ವರ್ ಮೊದಲ ಓವರ್ನ ಮೊದಲ ಎಸೆತದಲ್ಲೇ ಪಂಜಾಬ್ ಬ್ಯಾಟರ್ ಪ್ರಭ್ಸಿಮ್ರಾನ್ ವಿಕೆಟ್ ಕಿತ್ತರು. 88 ರನ್ಗೆ ಪಂಜಾಬ್ 9 ವಿಕೆಟ್ ಕಳೆದುಕೊಂಡು 100 ಕ್ಕೂ ಮೊದಲು ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ, ಅಂತಿಮ ಹಂತದಲ್ಲಿ ಶಿಖರ್ ಧವನ್ರನ್ನು ಕಟ್ಟಿ ಹಾಕುವಲ್ಲಿ ವಿಫಲವಾದ ಎಸ್ಆರ್ಹೆಚ್ ಬೌಲರ್ಗಳು ಹೆಚ್ಚು ರನ್ ಬಿಟ್ಟುಕೊಟ್ಟರು. ಪಂಜಾಬ್ 143 ರನ್ ಕಲೆಹಾಕಿತು.
Rinku Singh: ಒಂದೇ ಓವರ್ನಲ್ಲಿ 5 ಸಿಕ್ಸರ್: ರಿಂಕು ಸಿಂಗ್ ಸಿಡಿಸಿದ ಒಂದೊಂದು ಸಿಕ್ಸ್ ಹೇಗಿತ್ತು ನೋಡಿ
15ನೇ ಓವರ್ ಆಗುವಾಗ 9 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ನ 1 ವಿಕೆಟ್ ಪಡೆಯಲು ಹೈದರಾಬಾದ್ಗೆ ಇನ್ನಿಂಗ್ಸ್ ಮುಕ್ತಾಯದ ವರೆಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಎಸ್ಆರ್ಹೆಚ್ ಮಾಲಕಿ ಕಾವ್ಯ ಮಾರನ್ ಕೋಪಗೊಂಡಿದ್ದರು. ಈ ನಡುವೆ 19ನೇ ಓವರ್ ನಡೆಯುತ್ತಿರುವಾಗ ಕ್ಯಾಮೆರಾಮ್ಯಾನ್ ಕಾವ್ಯ ಅವರನ್ನು ಸೆರೆಯಿಡಿದಿದ್ದಾರೆ. ಕೆಲ ಹೊತ್ತು ಕಾದರೂ ಕಾವ್ಯ ಅವರನ್ನು ಸ್ಕ್ರೀನ್ನಿಂದ ಬದಲಾಯಿಸದ ಕಾರಣ ಕೋಪಗೊಂಡು ಕ್ಯಾಮೆರಾಮ್ಯಾನ್ಗೆ ನನ್ನನ್ನು ತೋರಿಸಬೇಡಿ ಎಂಬರ್ಥದಲ್ಲಿ ಜೋರಾಗಿ ಗುಡುಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
Kavya Maran angry on Cameraman? pic.twitter.com/Lb4oDtcfjp
— Nani fan of Dhoni (@nani71224) April 9, 2023
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಅವರ ಏಕಾಂಗಿ ಹೋರಾಟದ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್‌ಗಳಿಸಿತು. ಧವನ್ 66 ಬಾಲಲ್ಗಳಲ್ಲಿ 12 ಬೌಂಡರಿ, 5 ಸಿಕ್ಸ್ ಮೂಲಕ ಅಜೇಯ 99 ರನ್ ಸಿಡಿಸಿದರು. ಮಯಂಕ್ ಮಾರ್ಕಂಡೆ 4 ವಿಕೆಟ್ ಕಿತ್ತರು. ಟಾರ್ಗೆಟ್ ಬೆನ್ನತ್ತಿದ ಸನ್‌ರೈಸರ್ಸ್ 17.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್‌ಗಳಿಸುವ ಮೂಲಕ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಹೈದ್ರಾಬಾದ್ ಪರ ರಾಹುಲ್ ತ್ರಿಪಾತಿ 48 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸ್ ಮೂಲಕ ಅಜೇಯ 74 ರನ್ ಕಲೆಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಮಾರ್ಕ್ರಂ 37 ರನ್ ಗಳಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:50 am, Mon, 10 April 23




