ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ಮತ್ತೊಂದು ಐಸಿಸಿ ಪಂದ್ಯಾವಳಿ; ವೇಳಾಪಟ್ಟಿ ಪ್ರಕಟ
Pakistan Hosts ICC Women's Cricket World Cup Qualifier: ಪಾಕಿಸ್ತಾನದಲ್ಲಿ ಏಪ್ರಿಲ್ 9 ರಿಂದ 19 ರವರೆಗೆ ನಡೆಯಲಿರುವ ICC ಮಹಿಳಾ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಬಾಂಗ್ಲಾದೇಶ, ಐರ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಮತ್ತು ಥೈಲ್ಯಾಂಡ್ ತಂಡಗಳು ಭಾಗವಹಿಸಲಿವೆ. ಮೊದಲ ಎರಡು ಸ್ಥಾನಗಳನ್ನು ಗಳಿಸುವ ತಂಡಗಳು ಭಾರತದಲ್ಲಿ ನಡೆಯುವ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ. ಲಾಹೋರ್‌ನ ಎರಡು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.

ಕೆಲವೇ ದಿನಗಳ ಹಿಂದೆ ಮುಗಿದಿದ್ದ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯವಹಿಸಿದ್ದ ಪಾಕಿಸ್ತಾನದಲ್ಲೇ ಇದೀಗ ಮುಂದಿನ ತಿಂಗಳು ಮತ್ತೊಂದು ಐಸಿಸಿ ಪಂದ್ಯಾವಳಿ ನಡೆಯಲಿದೆ. ವಾಸ್ತವವಾಗಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಾವಳಿ ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯಲ್ಲಿದ್ದು, ಇದೀಗ ಅದರ ವೇಳಾಪಟ್ಟಿಯನ್ನು ಪ್ರಕಟಿಸಕಲಾಗಿದೆ. ಮಾರ್ಚ್ 14 ರಂದು ಬಿಡುಗಡೆಯಾದ ಈ ವೇಳಾಪಟ್ಟಿಯ ಪ್ರಕಾರ, ಈ ಪಂದ್ಯಾವಳಿಯು ಲಾಹೋರ್‌ನ ಎರಡು ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಏಪ್ರಿಲ್ 9 ರಿಂದ ಆರಂಭವಾಗಲಿರುವ ಈ ಪಂದ್ಯಾವಳಿಯ ಫೈನಲ್ ಪಂದ್ಯ ಏಪ್ರಿಲ್ 19 ರಂದು ನಡೆಯಲಿದೆ. ಈ ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸಲಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಮುಖ್ಯ ಪಂದ್ಯಾವಳಿಗೆ ಅರ್ಹತೆ ಪಡೆಯಲ್ಲಿವೆ.
ಅರ್ಹತಾ ಸುತ್ತಿನಲ್ಲಿ ಯಾವ ತಂಡಗಳು ಆಡುತ್ತವೆ?
ವಾಸ್ತವವಾಗಿ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ (2022-25) ಅಗ್ರ ಆರು ಸ್ಥಾನ ಪಡೆಯುವ ಮೂಲಕ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಆತಿಥೇಯ ಭಾರತ ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಇದೀಗ ಮಹಿಳಾ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ನಾಲ್ಕು ಪೂರ್ಣ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ಐರ್ಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮತ್ತು ಸಹವರ್ತಿ ರಾಷ್ಟ್ರಗಳಾದ ಸ್ಕಾಟ್ಲೆಂಡ್ ಮತ್ತು ಥೈಲ್ಯಾಂಡ್ ತಂಡಗಳು ಆಡಲಿವೆ. ಈ ಪಂದ್ಯಾವಳಿಯು 15 ಪಂದ್ಯಗಳನ್ನು ಒಳಗೊಂಡಿರುತ್ತದೆ.
ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಬಾಂಗ್ಲಾದೇಶ, ಐರ್ಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಏಳರಿಂದ ಹತ್ತನೇ ಸ್ಥಾನ ಪಡೆಯುವ ಮೂಲಕ ಅರ್ಹತಾ ಸುತ್ತಿಗೆ ಎಂಟ್ರಿಕೊಟ್ಟಿದ್ದರೆ, ಥೈಲ್ಯಾಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳು ಐಸಿಸಿ ಮಹಿಳಾ ಏಕದಿನ ಶ್ರೇಯಾಂಕದಲ್ಲಿ 11 ಮತ್ತು 12ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಪಂದ್ಯಾವಳಿಗೆ ಪ್ರವೇಶ ಪಡೆದಿವೆ.
ವಿಶ್ವಕಪ್ ಅರ್ಹತಾ ಪಂದ್ಯಗಳ ವೇಳಾಪಟ್ಟಿ
- ಏಪ್ರಿಲ್ 9: ಪಾಕಿಸ್ತಾನ vs ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್,
- ಏಪ್ರಿಲ್ 10: ಥೈಲ್ಯಾಂಡ್ vs ಬಾಂಗ್ಲಾದೇಶ
- ಏಪ್ರಿಲ್ 11: ಪಾಕಿಸ್ತಾನ vs ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ vs ವೆಸ್ಟ್ ಇಂಡೀಸ್
- ಏಪ್ರಿಲ್ 13: ಸ್ಕಾಟ್ಲೆಂಡ್ vs ಥೈಲ್ಯಾಂಡ್ ಮತ್ತು ಬಾಂಗ್ಲಾದೇಶ vs ಐರ್ಲೆಂಡ್
- ಏಪ್ರಿಲ್ 14: ಪಾಕಿಸ್ತಾನ vs ವೆಸ್ಟ್ ಇಂಡೀಸ್
- ಏಪ್ರಿಲ್ 15: ಥೈಲ್ಯಾಂಡ್ vs ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ vs ಬಾಂಗ್ಲಾದೇಶ
- ಏಪ್ರಿಲ್ 17: ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ vs ಥೈಲ್ಯಾಂಡ್
- ಏಪ್ರಿಲ್ 18: ಐರ್ಲೆಂಡ್ vs ಸ್ಕಾಟ್ಲೆಂಡ್
- ಏಪ್ರಿಲ್ 19: ಪಾಕಿಸ್ತಾನ vs ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ vs ಥೈಲ್ಯಾಂಡ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ