AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಆಡಿದ ಮೊಹಮ್ಮದ್ ಶಮಿ ಮಗಳಿಗೆ ಇದೆಂಥಾ ‘ಧರ್ಮ’ ಸಂಕಟ..!

Holi Celebrations Spark Religious Debate: ಮೊಹಮ್ಮದ್ ಶಮಿ ಅವರ ಮಗಳು ಐರಾ ಹೋಳಿ ಹಬ್ಬವನ್ನು ಆಚರಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಸೀನ್ ಜಹಾನ್ ಅವರು ತಮ್ಮ ಮಗಳ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ಕೆಲವರು ಅವರನ್ನು ಟ್ರೋಲ್ ಮಾಡಿದ್ದಾರೆ. ಇದು ರಂಜಾನ್ ತಿಂಗಳು ಎಂದು ಹೇಳಿ ಅವರನ್ನು ಟೀಕಿಸಿದ್ದಾರೆ. ಆದರೆ ಅನೇಕರು ಐರಾಳಿಗೆ ಶುಭ ಹಾರೈಸಿದ್ದಾರೆ. ಈ ಘಟನೆಯು ಧರ್ಮೀಯ ವಿವಾದಕ್ಕೆ ಕಾರಣವಾಗಿದೆ.

ಹೋಳಿ ಆಡಿದ ಮೊಹಮ್ಮದ್ ಶಮಿ ಮಗಳಿಗೆ ಇದೆಂಥಾ ‘ಧರ್ಮ’ ಸಂಕಟ..!
Mohammed Shami Daughter
Follow us
ಪೃಥ್ವಿಶಂಕರ
|

Updated on: Mar 14, 2025 | 6:14 PM

ಇಡೀ ದೇಶವೇ ಬಣ್ಣದೊಕ್ಕುಳಿಯಲ್ಲಿ ಮುಳುಗೇಳುತ್ತಿದೆ. ಇದಕ್ಕೆ ಕಾರಣ ರಂಗು ರಂಗಿನ ಹೋಳಿ ಹಬ್ಬ (Holi Celebrations). ಭಾರತೀಯರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಈ ಹೋಳಿ ಹಬ್ಬವು ಒಂದು. ತಮ್ಮ ಆಪ್ತರು, ಸ್ನೇಹಿತರು, ಕುಟುಂಬದವರೆಲ್ಲ ಪರಸ್ಪರ ಒಬ್ಬರಿಗೊಬ್ಬರು ಬಣ್ಣವನ್ನು ಬಳಿಯುತ್ತ ಬಣ್ಣಗಳಲ್ಲಿ ಮಿಂದೇಳುತ್ತಾರೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಹೋಳಿ ಹಬ್ಬವನ್ನು ಆಚರಿಸಿರುವ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ (Mohammed Shami) ಅವರ ಮಗಳು ಐರಾಗೆ ಇದೀಗ ‘ಧರ್ಮ’ ಸಂಕಟ ಎದುರಾಗಿದೆ. ತನ್ನ ಮಗಳ ಹೋಳಿ ಆಚರಣೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಐರಾ ತಾಯಿ ಹಸಿನ್ ಜಹಾನ್ ಅವರನ್ನು ಕೆಲವು ಕಿಡಿಗೇಡಿಗಳು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಮುಸ್ಲಿಂ ಆಗಿದ್ದರೂ ರಂಜಾನ್ ತಿಂಗಳಲ್ಲಿ ಹೋಳಿ ಆಡುವುದು ಅಪರಾಧ ಎಂದು ಜರಿದಿದ್ದಾರೆ.

ಹೋಳಿ ಆಡಿದ್ದೇ ತಪ್ಪಾ?

ಹೋಳಿ ಹಬ್ಬವನ್ನು ಸಾಮಾನ್ಯವಾಗಿ ಹಿಂದೂ ಧರ್ಮದ ಜನರು ಆಚರಿಸುತ್ತಾರೆ. ಹಸೀನ್ ಜಹಾನ್ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದರೂ, ಅವರು ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಹೀಗಾಗಿ ಐರಾ ಕೂಡ ತನ್ನ ಸ್ನೇಹಿತರೊಂದಿಗೆ ಹೋಳಿ ಆಚರಿಸಿ ಸಂಭ್ರಮಿಸಿದ್ದಾರೆ. ಅದರ ಫೋಟೋಗಳನ್ನು ಹಸೀನ್ ಜಹಾನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಕೆಲವು ನೆಟ್ಟಿಗರು, ಐರಾ ಅವರನ್ನು ತರಹೆವಾರಿ ಕಾಮೆಂಟ್​ಗಳ ಮೂಲಕ ನಿಂಧಿಸಲಾರಂಭಿಸಿದ್ದಾರೆ.

ಇದನ್ನೂ ಓದಿ
Image
ಇಡೀ ತಂಡ ಸಂಭ್ರಮಿಸುತ್ತಿದ್ದರೆ ಏಕಾಂಗಿಯಾಗಿ ನಿಂತಿದ್ದ ಶಮಿ; ವಿಡಿಯೋ
Image
ಕ್ರಿಕೆಟ್ ಆಡಿ, ಆದರೆ ಇಸ್ಲಾಮಿಕ್ ಜವಾಬ್ದಾರಿಗಳನ್ನು ಮರೆಯಬೇಡಿ; ಮೌಲಾನಾ
Image
ಬಾಂಗ್ಲಾ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು
Image
ಚಾಂಪಿಯನ್ಸ್ ಟ್ರೋಫಿ ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಶಮಿ

ಅದರಲ್ಲಿ ಒಬ್ಬ ಬಳಕೆದಾರ, ಹಸೀನ್ ಜಹಾನ್ ಅವರನ್ನು ಅಜ್ಞಾನಿ ವ್ಯಕ್ತಿ ಎಂದು ಕರೆದಿದ್ದರೆ, ಮತ್ತೊಬ್ಬ, ‘ಇದು ರಂಜಾನ್ ತಿಂಗಳು, ನಿಮಗೆ ನಾಚಿಕೆಯಾಗಬೇಕು’ ಎಂದು ಬರೆದುಕೊಂಡಿದ್ದಾರೆ. ಆದಾಗ್ಯೂ, ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಐರಾ ಹಾಗೂ ಹಸೀನ್ ಜಹಾನ್ ಅವರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ನೃತ್ಯ ಮಾಡಿದ್ದಕ್ಕೂ ಟ್ರೋಲ್

ವಾಸ್ತವವಾಗಿ ಹೋಳಿ ಹಬ್ಬಕ್ಕೆ ಒಂದು ದಿನ ಮೊದಲು, ಹಸೀನ್ ಜಹಾನ್ ತಮ್ಮ ಮಗಳು ಐರಾಳ ವೀಡಿಯೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಐರಾ, ಹೋಳಿ ಹಾಡುಗಳಿಗೆ ನೃತ್ಯ ಮಾಡುವುದನ್ನು ಕಾಣಬಹುದಾಗಿದೆ. ಇದಕ್ಕೂ ಕಿಡಿಕಾರಿರುವ ಕೆಲವರು, ರಂಜಾನ್‌ನಲ್ಲಿ ಹೀಗೆ ಮಾಡುವುದು ಪಾಪ, ಹಸೀನ್ ಜಹಾನ್ ಐರಾಳನ್ನು ಹಾಳು ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಶಮಿ ಮತ್ತು ಹಸಿನ್ ಜಹಾನ್ ದೂರಾದೂರ

ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ ಅವರ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿ ವರ್ಷಗಳೇ ಕಳೆದಿವೆ. ಈ ಇಬ್ಬರು ಪ್ರಸ್ತುತ ಒಟ್ಟಿಗೆ ಬಾಳುತ್ತಿಲ್ಲ. ಆದಾಗಲೇ ಇಬ್ಬರ ನಡುವೆ ವಿಚ್ಛೇದನವಾಗಿದೆ. ಆದಾಗ್ಯೂ ಮೊಹಮ್ಮದ್ ಶಮಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ತೆಗಳುವ ಕೆಲಸವನ್ನು ಹಸಿನ್ ಜಹಾನ್ ಮಾಡುತ್ತಿರುತ್ತಾರೆ. ಆದರೆ ಶಮಿ ಮಾತ್ರ ಅವರ ಮಾಜಿ ಮಡದಿಯ ಬಗ್ಗೆ ಎಲ್ಲಿಯೂ ಪ್ರಾಸ್ತಾಪಿಸುವುದಿಲ್ಲ. ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಚಿಯರ್‌ಲೀಡರ್ ಆಗಿ ಕೆಲಸ ಮಾಡುತ್ತಿದ್ದ ಹಸಿನ್ ಜಹಾನ್ ಅವರನ್ನು ಮೊಹಮ್ಮದ್ ಶಮಿ 2012 ರ ಐಪಿಎಲ್ ಸಮಯದಲ್ಲಿ ಭೇಟಿಯಾದರು.

ಇದನ್ನೂ ಓದಿ: ಇಡೀ ತಂಡ ಟ್ರೋಫಿ ಹಿಡಿದು ಸಂಭ್ರಮಿಸುತ್ತಿದ್ದರೆ ಏಕಾಂಗಿಯಾಗಿ ನಿಂತಿದ್ದ ಶಮಿ..! ಕಾರಣವೇನು? ವಿಡಿಯೋ

ಆ ಸಮಯದಲ್ಲಿ ಶಮಿ ಕೆಕೆಆರ್ ತಂಡದ ಪರ ಆಡುತ್ತಿದ್ದರು. ನಂತರ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಅದು ಪ್ರೀತಿಯಾಗಿ ಬದಲಾಯಿತು. ಇಬ್ಬರ ನಡುವಿನ ಸಂಬಂಧ ನಂತರ ಮದುವೆಯವರೆಗೂ ತಲುಪಿ, 2014 ರಲ್ಲಿ ವಿವಾಹವಾದರು. ಇದಾದ ನಂತರ, ಹಸೀನ್ ಜಹಾನ್ ಚಿಯರ್‌ಲೀಡರ್ ಮತ್ತು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ತೊರೆದರು. ಒಂದು ವರ್ಷದ ನಂತರ 2015 ರಲ್ಲಿ, ಮಗಳು ಐರಾ ಜನಿಸಿದಳು. ಆದರೆ, 2018 ರ ವೇಳೆಗೆ ಶಮಿ ಮತ್ತು ಹಸೀನ್ ನಡುವಿನ ಸಂಬಂಧ ಹದಗೆಟ್ಟಿತು. ಇದಾದ ನಂತರ ಇಬ್ಬರೂ ಕಾನೂನಿನ ಪ್ರಕಾರ ಬೇರ್ಪಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?