KKR vs RR Highlights IPL 2023: ಅಜೇಯ 98 ರನ್ ಸಿಡಿಸಿದ ಜೈಸ್ವಾಲ್; ರಾಜಸ್ಥಾನ್ಗೆ ಸುಲಭ ಜಯ
Kolkata Knight Riders vs Rajasthan Royals IPL 2023 Highlights in Kannada: ಈಡನ್ ಗಾರ್ಡನ್‌ನಲ್ಲಿ ನಡೆದ ಐಪಿಎಲ್ನ 56 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿದ ರಾಜಸ್ಥಾನ್ ರಾಯಲ್ಸ್ ತನ್ನ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.
ಈಡನ್ ಗಾರ್ಡನ್‌ನಲ್ಲಿ ನಡೆದ ಐಪಿಎಲ್ನ 56 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿದ ರಾಜಸ್ಥಾನ್ ರಾಯಲ್ಸ್ ತನ್ನ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂದಿನ ಮಹತ್ವದ ಪಂದ್ಯದಲ್ಲಿ ಕೋಲ್ಕತ್ತಾ ಆಟಗಾರರು ತವರು ನೆಲದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ 20 ಓವರ್‌ಗಳ ಅಂತ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ಜೈಸ್ವಾಲ್ ಅವರ ಅಬ್ಬರದ ಬ್ಯಾಟಿಂಗ್ನ ನೆರವಿನಿಂದಾಗಿ 14ನೇ ಓವರ್‌ನಲ್ಲಿಯೇ 150 ರನ್‌ಗಳ ಗುರಿ ಬೆನ್ನಟಿತು. ತಂಡದ ಪರ ಜೈಸ್ವಾಲ್ ಅಜೇಯ 98 ರನ್ ಸಿಡಿಸಿದರು.
LIVE NEWS & UPDATES
-
9 ವಿಕೆಟ್ ಜಯ
14ನೇ ಓವರ್ನ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಜೈಸ್ವಾಲ್ ತಂಡವನ್ನು ಗೆಲುವಿನ ದಡ ಸೇರಿಸಿದರು
ಅಲ್ಲದೆ ಅಜೇಯ 98 ರನ್ ಸಿಡಿಸಿ 2 ರನ್ಗಳಿಂದ ಶತಕ ವಂಚಿತರಾದರು.
ಅಂತಿಮವಾಗಿ 1 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 151 ರನ್ ಕಲೆಹಾಕಿತು.
-
ಶತಕದ ಜೊತೆಯಾಟ
ವರುಣ್ ಬೌಲ್ ಮಾಡಿದ 12ನೇ ಓವರ್ನ ಮೊದಲ ಎಸೆತದಲ್ಲಿ ಜೈಸ್ವಾಲ್ ಬೌಂಡರಿ ಬಾರಿಸುವುದರೊಂದಿಗೆ ಇಬ್ಬರ ನಡುವಿನ ಜೊತೆಯಾಟವನ್ನು ಶತಕದ ಗಡಿ ದಾಟಿಸಿದರು.
ಅಲ್ಲದೆ ಈ ಓವರ್ನಲ್ಲಿ ಸಂಜು ಡೀಪ್ ಮಿಡ್ ವಿಕೆಟ್ನಲ್ಲಿ ಸಿಕ್ಸರ್ ಸಹ ಬಾರಿಸಿದರು
-
ಸಂಜು 3 ಸಿಕ್ಸರ್
11ನೇ ಓವರ್ನಲ್ಲಿ ಸಂಜು ಬರೋಬ್ಬರಿ 3 ಸಿಕ್ಸರ್ ಬಾರಿಸಿದರು
ಈ ಓವರ್ನಲ್ಲಿ 20 ರನ್ ಬಂದವು
10 ಓವರ್ ಅಂತ್ಯ
ಶುಯೆಶ್ ಬೌಲ್ ಮಾಡಿದ 10ನೇ ಓವರ್ನ 4ನೇ ಎಸೆತದಲ್ಲಿ ಸಂಜು ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿ ಹೊಡೆದರು.
ಶತಕ ಪೂರ್ಣ
9ನೇ ಓವರ್ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ರಾಜಸ್ತಾನ್ ಶತಕ ಪೂರೈಸಿದೆ
ಇಲ್ಲಿಂದ ರಾಜಸ್ಥಾನ್ ಗೆಲುವು ಸುಲಭ ಎಂದು ತೋರುತ್ತಿದೆ.
66 ಎಸೆತಗಳಲ್ಲಿ 49 ರನ್ ಬೇಕು
ಅರ್ಧಶತಕದ ಜೊತೆಯಾಟ
7ನೇ ಓವರ್ನಲ್ಲೂ 10 ರನ್ ಬಂತು
ಓವರ್ನ 3ನೇ ಎಸೆತದಲ್ಲಿ ಜೈಸ್ವಾಲ್ ಎಕ್ಸ್ಟ್ರಾ ಕವರ್ನಲ್ಲಿ ಸಿಕ್ಸರ್ ಬಾರಿಸಿದರು
ಈ ಓವರ್ನಲ್ಲೇ ಇಬ್ಬರ ಅರ್ಧಶತಕದ ಜೊತೆಯಾಟ ಪೂರ್ಣಗೊಂಡಿದೆ
ಪವರ್ ಪ್ಲೇ ಅಂತ್ಯ
ಪವರ್ ಪ್ಲೇಯ ಕೊನೆಯ ಓವರ್ನಲ್ಲಿ 10 ರನ್ ಬಂದವು
ಈ ಓವರ್ನಲ್ಲಿ ಸಂಜು 1 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆದರು
6 ಓವರ್ ಅಂತ್ಯಕ್ಕೆ ರಾಜಸ್ಥಾನ್ 78/1
ಜೈಸ್ವಾಲ್ ಫೋರ್
5ನೇ ಓವರ್ನ 4 ಮತ್ತು 5ನೇ ಎಸೆತದಲ್ಲಿ ಜೈಸ್ವಾಲ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದರು.
5 ಓವರ್ ಅಂತ್ಯಕ್ಕೆ ರಾಜಸ್ಥಾನ್ 68/1
ಜೈಸ್ವಾಲ್ ಹ್ಯಾಟ್ರಿಕ್ ಬೌಂಡರಿ
ಶಾರ್ದೂಲ್ ಬೌಲ್ ಮಾಡಿದ 3ನೇ ಓವರ್ನಲ್ಲಿ ಜೈಸ್ವಾಲ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು
ಇದರೊಂದಿಗೆ ರಾಜಸ್ಥಾನ್ ತಂಡದ ಅರ್ಧಶತಕ ಕೂಡ ಪೂರ್ಣಗೊಂಡಿತು.
ಇದೇ ಓವರ್ನಲ್ಲಿ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ 50 ರನ್ ಪೂರೈಸಿದರು.
ಶೂನ್ಯಕ್ಕೆ ಬಟ್ಲರ್ ಔಟ್
2ನೇ ಓವರ್ನಲ್ಲೇ ಬಟ್ಲರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು
ಹರ್ಷಿತ್ ಓವರ್ನಲ್ಲಿ ಬಟ್ಲರ್ ರನೌಟ್ಗೆ ಬಲಿಯಾಗಬೇಕಾಯಿತು.
ಜೈಸ್ವಾಲ್ ಅಬ್ಬರ
ಮೊದಲ ಓವರ್ನಲ್ಲೇ ಜೈಸ್ವಾಲ್ 26 ರನ್ ಚಚ್ಚಿದರು
ರಾಣಾ ಬೌಲ್ ಮಾಡಿದ ಈ ಓವರ್ನಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಬಂತು.
150 ರನ್ ಟಾರ್ಗೆಟ್
ಸಂದೀಪ್ ಬೌಲ್ ಮಾಡಿದ 20ನೇ ಓವರ್ನಲ್ಲಿ ನರೈನ್ ಡೀಪ್ ಪಾಯಿಂಟ್ನಲ್ಲಿ ಬೌಂಡರಿ ಬಾರಿಸಿದರು.
ಕೊನೆಯ ಎಸೆತದಲ್ಲಿ ವಿಕೆಟ್ ಕೂಡ ಬಂತು
20 ಓವರ್ ಅಂತ್ಯಕ್ಕೆ ಕೆಕೆಆರ್ 8 ವಿಕೆಟ್ ಕಳೆದುಕೊಂಡು 149 ರನ್ ಬಾರಿಸಿದೆ
ರಿಂಕು ಔಟ್
19ನೇ ಓವರ್ನ 4ನೇ ಎಸೆತದಲ್ಲಿ ರಿಂಕು ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು
ಚಹಲ್ಗೆ 4ನೇ ವಿಕೆಟ್
ಕೆಕೆಆರ್ 142/7
ರಿಂಕು ಸಿಕ್ಸ್
18ನೇ ಓವರ್ನ 5ನೇ ಎಸೆತದಲ್ಲಿ ರಿಂಕು ಲಾಂಗ್ ಆನ್ ಸಿಕ್ಸರ್ ಬಾರಿಸಿದರು
ಈ ಓವರ್ನ ಮೊದಲ 4 ಎಸೆತದಲ್ಲಿ ಸಂದೀಪ್ ಯಾವುದೇ ರನ್ ನೀಡಲಿಲ್ಲ.
18 ಓವರ್ ಅಂತ್ಯಕ್ಕೆ ಕೆಕೆಆರ್ 139/6
6ನೇ ವಿಕೆಟ್ ಪತನ
ಅಯ್ಯರ್ ವಿಕೆಟ್ ಬಳಿಕ ಬಂದ ಶಾರ್ದೂಲ್ ಕೇವಲ 1 ರನ್ ಬಾರಿಸಿ ಎಲ್ಬಿ ಬಲೆಗೆ ಬಿದ್ದರು.
ಇದರೊಂದಿಗೆ ಕೆಕೆಆರ್ನ 6ನೇ ವಿಕೆಟ್ ಉರುಳಿದೆ
ಚಹಲ್ಗೆ ಇದು 3ನೇ ವಿಕೆಟ್
ಅಯ್ಯರ್ ಔಟ್
ಕೆಕೆಆರ್ 5ನೇ ವಿಕೆಟ್ ಪತನ
ಅರ್ಧಶತಕ ಬಾರಿಸಿದ್ದ ಅಯ್ಯರ್ ಚಹಲ್ ಎಸೆದ 17ನೇ ಓವರ್ನ ಮೊದಲ ಎಸೆತದಲ್ಲೇ ಕ್ಯಾಚಿತ್ತು ಔಟಾದರು.
ಅಯ್ಯರ್ ಅರ್ಧಶತಕ
16ನೇ ಓವರ್ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಅಯ್ಯರ್ ಅರ್ಧಶತಕ ಪೂರೈಸಿದರು
39 ಎಸೆತಗಳಲ್ಲಿ ಈ ಅರ್ಧಶತಕ ಬಂತು.
16 ಓವರ್ ಅಂತ್ಯಕ್ಕೆ ಕೆಕೆಆರ್ 127/4
ರಸೆಲ್ ಔಟ್
13ನೇ ಓವರ್ನ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಸೆಲ್ ಆ ನಂತರದ ಎಸೆತದಲ್ಲಿ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಕ್ಯಾಚಿತ್ತು ಔಟಾದರು.
14 ಓವರ್ ಅಂತ್ಯಕ್ಕೆ ಕೆಕೆಆರ್ 110/4
ವೆಂಕಿ ಅಬ್ಬರ
ಚಹಲ್ ಬೌಲ್ ಮಾಡಿದ 12ನೇ ಓವರ್ನ ಮೊದಲ 3 ಎಸೆತಗಳಲ್ಲಿ ಅಯ್ಯರ್ ಬೌಂಡರಿ ಸಿಕ್ಸರ್ ಮಳೆಗರೆದರು.
ರಾಣಾ ಔಟ್
ಚಹಲ್ ಬೌಲ್ ಮಾಡಿದ 11ನೇ ಓವರ್ನಲ್ಲಿ ರಾಣಾ ಔಟಾದರು.
22 ರನ್ ಬಾರಿಸಿದ್ದ ರಾಣಾ 2ನೇ ಎಸೆತವನ್ನು ಬಿಗ್ ಶಾಟ್ ಮಾಡುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.
ಕೆಕೆಆರ್ 77/3
ಅಯ್ಯರ್ ಸಿಕ್ಸರ್
ಅಶ್ವಿನ್ ಬೌಲ್ ಮಾಡಿದ 10ನೇ ಓವರ್ನ 3 ಮತ್ತು 4ನೇ ಎಸೆತದಲ್ಲಿ ಅಯ್ಯರ್ ಸಿಕ್ಸರ್ ಬಾರಿಸಿದರು.
10 ಓವರ್ ಅಂತ್ಯಕ್ಕೆ 76/2
ರಾಣಾ ಬೌಂಡರಿ
ರೂಟ್ ಬೌಲ್ ಮಾಡಿದ 9ನೇ ಓವರ್ನ 2ನೇ ಎಸೆತದಲ್ಲಿ ರಾಣಾ ಫೈನ್ ಲೆಗ್ ಮೇಲೆ ಬೌಂಡರಿ ಬಾರಿಸಿದರು.
8 ಓವರ್‌ಗಳ ಬಳಿಕ
2 ವಿಕೆಟ್ ಉರುಳಿದ ಬಳಿಕ ಕೆಕೆಆರ್ ಇನ್ನಿಂಗ್ಸ್ ನಿಧಾನವಾಗಿದೆ
4 ಓವರ್ಗಳಿಂದ ಯಾವುದೇ ಬೌಂಡರಿ ಬಂದಿಲ್ಲ.
ಕೆಕೆಆರ್ 50/2
ಪವರ್ ಪ್ಲೇ ಅಂತ್ಯ
ಕೆಕೆಆರ್ ಇನ್ನಂಗ್ಸ್ನ ಪವರ್ ಪ್ಲೇ ಮುಗಿದಿದೆ
ಈ 6 ಓವರ್ಗಳಲ್ಲಿ ತಂಡ 2 ವಿಕೆಟ್ ಕಳೆದುಕೊಂಡು 37 ರನ್ ಬಾರಿಸಿದೆ.
ಅಯ್ಯರ್ ಹಾಗೂ ರಾಣಾ ಕ್ರೀಸ್ನಲ್ಲಿದ್ದಾರೆ.
ಗುರ್ಬಾಜ್ ಔಟ್
ಕೆಕೆಆರ್ 2ನೇ ವಿಕೆಟ್ ಪತನ
18 ರನ್ಗಳಿಗೆ ಗುರ್ಬಾಜ್ ಔಟ್
ಬೌಲ್ಟ್ ಬೌಲ್ ಮಾಡಿದ 4ನೇ ಓವರ್ನ ಮೊದಲ ಎಸೆತದಲ್ಲಿ ಗುರ್ಬಾಜ್ ಮಿಡ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
ಕೆಕೆಆರ್ 35/2
ಮೊದಲ ವಿಕೆಟ್ ಪತನ
ಕೆಕೆಆರ್ ಮೊದಲ ವಿಕೆಟ್ ಪತನವಾಗಿದೆ
ಆರಂಭಿಕ ರಾಯ್ 3ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಕ್ಯಾಚಿತ್ತು ಔಟಾದರು.
ಕೆಕೆಆರ್ 14/1
ಗುರ್ಬಾಜ್ ಬೌಂಡರಿ
ಸಂದೀಪ್ ಬೌಲ್ ಮಾಡಿದ 2ನೇ ಓವರ್ನಲ್ಲಿ ಗುರ್ಬಾಜ್ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಬಾರಿಸಿದರು
ಕೆಕೆಆರ್ 10/0
ಕೆಕೆಆರ್ ಬ್ಯಾಟಿಂಗ್ ಆರಂಭ
ರಾಯ್ ಹಾಗೂ ರಹಮಾನುಲ್ಲಾ ಗುರ್ಬಾಜ್ ಇನ್ನಿಂಗ್ಸ್ ಆರಂಭಿಸಿದ್ದಾರೆ
ಬೌಲ್ಟ್ ಮಾಡಿದ ಮೊದಲ ಓವರ್ನಲ್ಲಿ ರಾಯ್ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿ ಬಾರಿಸಿದರು.
ಕೆಕೆಆರ್
ರಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಅಂಕುಲ್ ರಾಯ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ರಾಜಸ್ಥಾನ ರಾಯಲ್ಸ್
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್
ಟಾಸ್ ಗೆದ್ದ ರಾಜಸ್ಥಾನ್
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - May 11,2023 7:01 PM