KL Rahul: ಶತಕ ಸಿಡಿಸಿ ಡ್ರೆಸ್ಸಿಂಗ್ ರೂಮ್ಗೆ ಬಂದ ಕೆ. ಎಲ್ ರಾಹುಲ್ಗೆ ಶಾಕ್: ಏನದು? ಇಲ್ಲಿದೆ ನೋಡಿ
India vs England: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆರನೇ ಶತಕ ಸಿಡಿಸಿದ ರಾಹುಲ್ ಹೊಸ ದಾಖಲೆ ಬರೆದರು. ಮೊದಲ ದಿನದಾಟ ಅಂತ್ಯವಾದ ಬಳಿಕ ಡ್ರೆಸ್ಸಿಂಗ್ ರೂಮ್ಗೆ ತೆರಳಿದ ರಾಹುಲ್ಗೆ ಹಿಂದೆಂದೂ ಕಾಣದ ಅದ್ಭುತ ಸ್ವಾಗತ ಸಿಕ್ಕಿತು
ಇತಿಹಾಸ ಪ್ರಸಿದ್ಧ ಲಾರ್ಡ್ಸ್ (Lords Test) ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಉತ್ತಮ ಸ್ಥಿತಿಯಲ್ಲಿದೆ. ಮೊದಲ ದಿನವೇ ಮೇಲುಗೈ ಸಾಧಿಸಿದ ಭಾರತ ದಿನದಾಟದ ಅಂತ್ಯಕ್ಕೆ ಕೆ. ಎಲ್ ರಾಹುಲ್ (KL Rahul) ಅವರ ಅಮೋಘ ಅಜೇಯ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದೆ. ಈ ಮೂಲಕ ಬೃಹತ್ ಮೊತ್ತದ ಸೂಚನೆ ನೀಡಿದೆ. ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದಾಖಲೆ ಬರೆದ ರಾಹುಲ್ಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಕ್ರಿಕೆಟ್ ಕಾಶಿ ಲಾರ್ಡ್ ಅಂಗಳದಲ್ಲಿ ಶತಕ ಸಿಡಿಸಿದ ವೀರರ ಪಟ್ಟಿಯಲ್ಲಿ ಕೆ. ಎಲ್ ರಾಹುಲ್ ಹೆಸರು ಕೂಡ ಸೇರ್ಪಡೆಯಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಮೊದಲ ವಿಕೆಟ್ಗೆನೇ ಅತ್ಯುತ್ತಮ ಜೊತೆಯಾಟ ಆಡಿತು. ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ 126 ರನ್ಗಳ ಕಾಣಿಕೆ ನೀಡಿದರು. ಈ ಮೂಲಕ 59 ವರ್ಷಗಳ ನಂತರ ಭಾರತದ ಆರಂಭಿಕ ಆಟಗಾರರು ಮೊದಲ ಇನ್ನಿಂಗ್ಸ್ನಲ್ಲಿ ಮೊದಲ ವಿಕೆಟ್ಗೆ 50ಕ್ಕೂ ಹೆಚ್ಚು ರನ್ ಸೇರಿಸಿದ ದಾಖಲೆ ಬರೆದರು. ರೋಹಿತ್ 83 ರನ್ಗೆ ಹಾಗೂ ಬಂದ ಬೆನ್ನಲ್ಲೇ ಚೇತೇಶ್ವರ್ ಪೂಜಾರ(9) ಔಟ್ ಆದ ಬಳಿಕ ನಾಯಕ ವಿರಾಟ್ ಕೊಹ್ಲಿ(42) ಜೊತೆಗೂಡಿ ರಾಹುಲ್ ಎಚ್ಚರಿಕೆಯ ಆಟವಾಡಿದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆರನೇ ಶತಕ ಸಿಡಿಸಿದ ರಾಹುಲ್ ಹೊಸ ದಾಖಲೆ ಬರೆದರು. ಮೊದಲ ದಿನದಾಟ ಅಂತ್ಯವಾದ ಬಳಿಕ ಡ್ರೆಸ್ಸಿಂಗ್ ರೂಮ್ಗೆ ತೆರಳಿದ ರಾಹುಲ್ಗೆ ಹಿಂದೆಂದೂ ಕಾಣದ ಅದ್ಭುತ ಸ್ವಾಗತ ಸಿಕ್ಕಿತು. ಇಡೀ ದಿನ ಕ್ರಿಸ್ನಲ್ಲಿ ನಿಂತು ಆಡಿದ ರಾಹುಲ್ ಅವರನ್ನು ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಆಟಗಾರರು ಎದ್ದುನಿಂತು ದೊಡ್ಡದಾಗಿ ಕ್ಲಾಪ್ ಹೊಡೆದರು. ಇದನ್ನ ಕಂಡ ರಾಹುಲ್ ಒಮ್ಮೆ ದಂಗಾದರು. ಬಿಸಿಸಿಐ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
? Scenes as @klrahul11 returns to the dressing room after his brilliant 1⃣2⃣7⃣* on Day 1 of the Lord’s Test. ? ?#TeamIndia #ENGvIND pic.twitter.com/vY8dN3lU0y
— BCCI (@BCCI) August 13, 2021
ಟೆಸ್ಟ್ ಕ್ರಿಕೆಟ್ನಲ್ಲಿ ಸ್ಥಾನ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದ ರಾಹುಲ್ ಇಂದು ತಾನು ಏನು ಎಂಬುದನ್ನು ಸಾಭೀತು ಪಡಿಸಿದ್ದಾರೆ. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ವಿದೇಶದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಓಪನರ್ ಎಂಬ ದಾಖಲೆಯನ್ನು ರಾಹುಲ್ ಮಾಡಿದ್ದಾರೆ. ಕನ್ನಡಿಗನಾಗಿಯೂ ವಿಶೇಷ ಸಾಧನೆ ಮಾಡಿರುವ ರಾಹುಲ್, ಲಾರ್ಡ್ಸ್ ಮೈದಾನದಲ್ಲಿ ಶತಕ ಸಾಧಿಸಿದ ಮೂರನೇ ಕನ್ನಡಿಗ ಕೆ. ಎಲ್ ಆಗಿದ್ದಾರೆ.
ಕಳೆದ ಐಪಿಎಲ್ನಿಂದಲೂ ಅತ್ಯುತ್ತಮ ಫಾರ್ಮ್ನಲ್ಲಿರುವ ರಾಹುಲ್ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 214 ಎಸೆತಗಳಲ್ಲಿ 84 ರನ್ ಗಳಿಸಿದ್ದರು. ಸದ್ಯ ಎರಡನೇ ಟೆಸ್ಟ್ನ ಮೊದಲ ದಿನವೇ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. 248 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ ಅಜೇಯ 127 ರನ್ ಗಳಿಸಿದ್ದಾರೆ. ಭಾರತ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 276 ರನ್ ಬಾರಿಸಿದೆ. ಕ್ರೀಸ್ನಲ್ಲಿ ರಾಹುಲ್ ಜೊತೆ ಉಪ ನಾಯಕ ಅಜಿಂಕ್ಯಾ ರಹಾನೆ(1*) ಇದ್ದಾರೆ.
India vs England: ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ನ 2ನೇ ದಿನಕ್ಕೆ ಇದೆಯೇ ವರುಣನ ಕಾಟ: ಇಲ್ಲಿದೆ ಹವಾಮಾನ ವರದಿ
ಮುಂಬೈನಲ್ಲಿ ಬರೋಬ್ಬರಿ 30 ಕೋಟಿಯ ಹೊಸ ಮನೆ ಖರೀದಿಸಿದ ಹಾರ್ದಿಕ್-ಕ್ರುನಾಲ್: ಹೇಗಿದೆ ಗೊತ್ತಾ?
(KL Rahul Teammates welcomed with hugs and claps to KL Rahul on return to dressing room)