India vs England: ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ನ 2ನೇ ದಿನಕ್ಕೆ ಇದೆಯೇ ವರುಣನ ಕಾಟ: ಇಲ್ಲಿದೆ ಹವಾಮಾನ ವರದಿ
India vs England 2nd Test Lords weather report: ಮೊದಲ ನಾಲ್ಕು ದಿನಗಳ ವರೆಗೆ ಶೇ. 20ಕ್ಕಿಂತ ಅಧಿಕ ತಾಪಮಾನ ಇರಲಿದೆಯಂತೆ. ಇಂಗ್ಲೆಂಡ್ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. 11 ಗಂಟೆಯಿಂದ 2 ಗಂಟೆ ವರೆಗೆ ಮೋಡ ಕವಿದ ವಾತಾವರಣ ಇರಲಿದೆ.
ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ವಿರಾಟ್ ಕೊಹ್ಲಿ (Virat Kohli) ಪಡೆ 3 ವಿಕೆಟ್ ನಷ್ಟಕ್ಕೆ 276 ರನ್ ಕಲೆಹಾಕಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಮಳೆ ಎಷ್ಟು ಪರಿಣಾಮಕಾರಿ ಆಯಿತು ಎಂಬುದು ಗೊತ್ತೇ ಇದೆ. ಭಾರತದ ಗೆಲುವನ್ನೇ ವರುಣ ಕಸಿದುಬಿಟ್ಟಿತ್ತು. ಎರಡನೇ ಟೆಸ್ಟ್ನ ಆರಂಭಕ್ಕೂ ಮಳೆ ತೊಂದರೆ ಕೊಟ್ಟಿತು. ಹೀಗಾಗಿ ಟಾಸ್ ಪ್ರಕ್ರಿಯೆ ಕೂಡ ಕೊಂಚ ತಡವಾಗಿ ನಡೆಸಲಾಯಿತು. ಸದ್ಯ ಇಂದು ಎರಡನೇ ದಿನ ಮಳೆಯ ಕಾಟ ಇದೆಯೇ?, ಹವಾಮಾನ ವರದಿ ಏನು ಹೇಳುತ್ತೆ?, ಇಲ್ಲಿದೆ ನೋಡಿ…
ಮೊದಲ ದಿನದ ಆರಂಭದಲ್ಲಿ ಮಳೆ ಅಡ್ಡಿ ಪಡಿಸಿದ್ದು ಬಿಟ್ಟರೆ ಮತ್ತೆ ಸರಾಗವಾಗಿ ಪಂದ್ಯ ನಡೆಯಿತು. ಎರಡನೇ ದಿನಕೂಡ ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಅಕ್ವಾವೇದರ್ ಪ್ರಕಾರ, ಲಂಡನ್ನಲ್ಲಿ ಎರಡನೇ ದಿನ ಮಳೆ ಆಗುವ ಸಾಧ್ಯತೆ ಇಲ್ಲ. ಅಲ್ಲದೆ ಮೂರನೇ ದಿನ ಕೂಡ ಸಂಪೂರ್ಣ 90 ಓವರ್ಗಳ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ.
ಮೊದಲ ನಾಲ್ಕು ದಿನಗಳ ವರೆಗೆ ಶೇ. 20ಕ್ಕಿಂತ ಅಧಿಕ ತಾಪಮಾನ ಇರಲಿದೆಯಂತೆ. ಇಂಗ್ಲೆಂಡ್ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. 11 ಗಂಟೆಯಿಂದ 2 ಗಂಟೆ ವರೆಗೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಮಳೆ ಸಾಧ್ಯತೆ ಕಡಿಮೆ. 3 ಗಂಟೆಯಿಂದ ಬಿಸಿಲು ಬರಲಿದೆ ಎಂದು ಹವಾಮಾನ ವರದಿಯಲ್ಲಿ ಹೇಳಲಾಗಿದೆ.
ಹೀಗಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆರಾಯನ ಕಾಟ ಇಲ್ಲ ಎಂದು ಹೇಳಬಹುದು. ಮೊದಲ ಟೆಸ್ಟ್ನ ಅಂತಿಮ ದಿನ ಭಾರತದ ಗೆಲುವಿಗೆ 157 ರನ್ಗಳ ಅವಶ್ಯಕತೆಯಿತ್ತು. ಸುಲಭವಾಗಿ ಗೆಲ್ಲಬಹುದಾಗಿದ್ದ ಭಾರತಕ್ಕೆ ಕೊನೆಯ ದಿನ ಮಳೆ ಬ್ಯಾಟಿಂಗ್ ಮಾಡಲು ಅವಕಾಶವನ್ನೇ ಕೊಡಲಿಲ್ಲ. ಹೀಗಾಗಿ ಡ್ರಾ ಮಾಡಬೇಕಾಗಿ ಬಂತು.
ಸದ್ಯ ಸಾಗುತ್ತಿರುವ ಎರಡನೇ ಟೆಸ್ಟ್ನಲ್ಲಿ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ 126 ರನ್ಗಳ ಜೊತೆಯಾಟ ಆಡಿದರು. ಇದರೊಂದಿಗೆ, 2011 ರ ನಂತರ ಮೊದಲ ಬಾರಿಗೆ, ಭಾರತದ ಆರಂಭಿಕ ಜೋಡಿ ಏಷ್ಯಾದ ಹೊರಗೆ ಶತಕದ ಪಾಲುದಾರಿಕೆಯನ್ನು ಮಾಡಿತು. ರೋಹಿತ್ 145 ಎಸೆತಗಳಲ್ಲಿ 83 ರನ್ಗೆ ಔಟ್ ಆದರೆ, ಚೇತೇಶ್ವರ್ ಪೂಜಾರ ಬಂದ ಬೆನ್ನಲ್ಲೆ 9 ರನ್ಗೆ ನಿರ್ಗಮಿಸಿದರು
ನಾಯಕ ವಿರಾಟ್ ಕೊಹ್ಲಿ 103 ಎಸೆತಗಳಲ್ಲಿ 42 ರನ್ಗೆ ಔಟ್ ಆಗುವ ಮೂಲಕ ಅರ್ಧಶತಕ ವಂಚಿತರಾದರು. ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ 90 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತು. ರಾಹುಲ್ 127 ಹಾಗೂ ಅಜಿಂಕ್ಯಾ ರಹಾನೆ 1 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
KL Rahul: ಕೆ. ಎಲ್ ರಾಹುಲ್ ಶತಕಕ್ಕೆ ದಾಖಲೆಗಳು ಪುಡಿಪುಡಿ: ಕನ್ನಡಿಗನಿಂದ ವಿಶೇಷ ಸಾಧನೆ
ಮುಂಬೈನಲ್ಲಿ ಬರೋಬ್ಬರಿ 30 ಕೋಟಿಯ ಹೊಸ ಮನೆ ಖರೀದಿಸಿದ ಹಾರ್ದಿಕ್-ಕ್ರುನಾಲ್: ಹೇಗಿದೆ ಗೊತ್ತಾ?
(India vs England 2nd Test Lords weather report on Day 2 Will rain hamper 2nd day of Lords Test match)