ಐಪಿಎಲ್‌ನ 15ನೇ ಸೀಸನ್ (IPL 2022) ಮುಕ್ತಾಯವಾಗಿದೆ. ಇದೀಗ ಭಾರತ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗಾಗಿ ಶ್ರಮಿಸುತ್ತಿದೆ. ಭಾರತ ತಂಡ ಮೊದಲು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಜೂನ್ 9 ರಂದು ಟಿ20 ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಿದೆ. ಮತ್ತೊಂದೆಡೆ, ಜೂನ್ 5 ರಂದು ಕೆಎಲ್ ರಾಹುಲ್ (KL Rahul) ನೇತೃತ್ವದಲ್ಲಿ ಭಾರತ ತಂಡವು ದೆಹಲಿಗೆ ಪ್ರಯಾಣ ನಡೆಯಲಿದೆ. ನಂತರ ದಕ್ಷಿಣ ಆಫ್ರಿಕಾ ವಿರುದ್ಧ (IND vs SA ) ಮೊದಲ T20 ಪಂದ್ಯವು ಜೂನ್ 9 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಹಲವು ಹಿರಿಯ ಆಟಗಾರರಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಟೀಂ ಇಂಡಿಯಾ (Team India)ಗೆ ಸರಣಿ ಗೆಲ್ಲುವ ಹೊಣೆ ಕೆಎಲ್ ರಾಹುಲ್ ಅವರ ಮೇಲಿದೆ. ಈ ಎರಡು ತಂಡಗಳು ಮುಖಾಮುಖಿಯಾದಾಗಲೆಲ್ಲಾ ರನ್ ಮಳೆಯೇ ಹರಿದಿದೆ. ಈ ಸರಣಿಯಲ್ಲೂ ಹಲವು ದಾಖಲೆಗಳು ಸೃಷ್ಟಿಯಾಗುವ ನಿರೀಕ್ಷೆಗಳಿವೆ.
ತಂಡದಲ್ಲಿ ಹಲವು ಸ್ಟಾರ್ ಆಟಗಾರರು
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳನ್ನು ಆಯ್ಕೆ ಮಾಡಿದೆ. ಉತ್ತಮ ಆಟಗಾರರ ಹೊರತಾಗಿಯೂ ಭಾರತ ತಂಡವು ಹಲವಾರು ಮ್ಯಾಚ್ ವಿನ್ನರ್‌ಗಳನ್ನು ಹೊಂದಿದೆ. ಅವರಲ್ಲಿ ಸಾಕಷ್ಟು ಐಪಿಎಲ್ ಸ್ಟಾರ್ಗಳಿದ್ದು, ಅವರೇ ತಂಡವನ್ನು ಗೆಲುವಿನತ್ತ ಕೊಂಡೊಯ್ಯಬಲ್ಲರು. ಐಪಿಎಲ್ 2022 ಪ್ರಶಸ್ತಿ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಆಡಲಿದ್ದಾರೆ. ಇಂತಹ ಸಂದರ್ಭದಲ್ಲಿ ರಾಹುಲ್ಗೆ ಮಹತ್ವದ ಸಲಹೆಗಳನ್ನು ನೀಡಲಿದ್ದಾರೆ. ಇದಲ್ಲದೇ ರಿಷಬ್ ಪಂತ್ ಅವರಿಗೆ ಉಪನಾಯಕ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ:ದೀಪಕ್ ಚಹಾರ್ ಆರತಕ್ಷತೆಯಲ್ಲಿ ಕುಟುಂಬಸ್ಥರೊಂದಿಗೆ ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗರು; ಫೋಟೋ ನೋಡಿ
ಎರಡೂ ತಂಡಗಳು ಎಷ್ಟು ಟಿ20 ಪಂದ್ಯಗಳನ್ನು ಆಡಿವೆ?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ಒಟ್ಟು 15 ಟಿ20 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ ಒಂಬತ್ತು ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ ಆರರಲ್ಲಿ ಗೆದ್ದಿದೆ. ಭಾರತದಲ್ಲಿ ಉಭಯ ತಂಡಗಳ ನಡುವೆ 4 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ ಕೇವಲ ಒಂದರಲ್ಲಿ ಮತ್ತು ದಕ್ಷಿಣ ಆಫ್ರಿಕಾ ಮೂರರಲ್ಲಿ ಗೆದ್ದಿದೆ.
ಯಾರು ಹೆಚ್ಚು ರನ್ ಗಳಿಸಿದ್ದಾರೆ?
ಪ್ರೋಟಿಯಾಸ್ (SA) ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ಪಂದ್ಯದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2012ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಗರಿಷ್ಠ ಸ್ಕೋರ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 203 ಆಗಿದೆ.
2015ರಲ್ಲಿ ಧರ್ಮಶಾಲಾದಲ್ಲಿ ಮೂರು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದ್ದು ದಕ್ಷಿಣ ಆಫ್ರಿಕಾದ ಗರಿಷ್ಠ ಸ್ಕೋರ್. ತವರಿನಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್‌ಗೆ 199 ರನ್ ಗಳಿಸಿದ್ದು ತವರಿನಲ್ಲಿ ಭಾರತದ ಗರಿಷ್ಠ ಸ್ಕೋರ್ ಆಗಿದೆ. 2015ರಲ್ಲಿ ಧರ್ಮಶಾಲಾದಲ್ಲಿ ಟೀಂ ಇಂಡಿಯಾ ಈ ಸ್ಕೋರ್ ಗಳಿಸಿತ್ತು.
ರೋಹಿತ್ ಶರ್ಮಾ ಗರಿಷ್ಠ ಸ್ಕೋರ್
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸ್ಕೋರ್ ಮಾಡಿದ ಅಗ್ರ 3 ಬ್ಯಾಟ್ಸ್‌ಮನ್‌ಗಳಲ್ಲಿ ಇಬ್ಬರು ಬಾರತೀಯರೆ ಇದ್ದಾರೆ. ಆದರೆ, ಸರಣಿಯಲ್ಲಿ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಯಾರೂ ಆಡುತ್ತಿಲ್ಲ. ಇವರಿಬ್ಬರ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 13 ಪಂದ್ಯಗಳಲ್ಲಿ 362 ರನ್ ಗಳಿಸಿದ್ದಾರೆ. ಸುರೇಶ್ ರೈನಾ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 12 ಪಂದ್ಯಗಳಲ್ಲಿ 339 ರನ್ ಗಳಿಸಿದ್ದಾರೆ. ಜೆಪಿ ಡುಮಿನಿ ಮೂರನೇ ಸ್ಥಾನದಲ್ಲಿದ್ದಾರೆ.
Published On - 5:57 pm, Sat, 4 June 22