IND vs AFG 3rd T20I: ಫೀಲ್ಡರ್ ಆಫ್ ದಿ ಸೀರೀಸ್ ಪದಕ ಗೆದ್ದ ಕೊಹ್ಲಿ: ವಿರಾಟ್ ಬಗ್ಗೆ ಮನಮುಟ್ಟುವ ಕಥೆ ಹೇಳಿದ ಫೀಲ್ಡಿಂಗ್ ಕೋಚ್

|

Updated on: Jan 19, 2024 | 7:28 AM

Virat Kohli Fielder Of The Series Medal: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಸ್ಮರಣೀಯ ಗೆಲುವಿಗೆ ವಿರಾಟ್ ಕೊಹ್ಲಿ ಕೊಡುಗೆ ಫೀಲ್ಡಿಂಗ್ ಮೂಲಕ ಇದೆ ಎಂದರೆ ತಪ್ಪಾಗದು. ಇದಕ್ಕಾಗಿ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಕೊಹ್ಲಿಗೆ 'ಫೀಲ್ಡರ್ ಆಫ್ ದಿ ಸೀರೀಸ್' ಪದಕವನ್ನು ನೀಡಿದರು.

IND vs AFG 3rd T20I: ಫೀಲ್ಡರ್ ಆಫ್ ದಿ ಸೀರೀಸ್ ಪದಕ ಗೆದ್ದ ಕೊಹ್ಲಿ: ವಿರಾಟ್ ಬಗ್ಗೆ ಮನಮುಟ್ಟುವ ಕಥೆ ಹೇಳಿದ ಫೀಲ್ಡಿಂಗ್ ಕೋಚ್
Virat Kohli Fielder of the Series
Follow us on

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಟಿ20 ಸರಣಿ ಮುಕ್ತಾಯಗೊಂಡಿದೆ. ವಿಶೇಷ ಎಂದರೆ ಇದು ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಂತ್ಯವಾಯಿತು. ಮೊದಲ ಮತ್ತು ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ, ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. 40 ಓವರ್‌ಗಳು ಮತ್ತು 2 ಸೂಪರ್ ಓವರ್‌ಗಳ ನಂತರ ರೋಹಿತ್ ಪಡೆ ಗೆಲ್ಲಲು ಸಾಧ್ಯವಾಯಿತು. ಈ ಪಂದ್ಯವನ್ನು ವಿರಾಟ್ ಕೊಹ್ಲಿ ಅವರ ಬ್ಯಾಟ್‌ನಿಂದ ಏನೂ ಕೊಡುಗೆ ಬರಲಿಲ್ಲ. ಆದರೆ, ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ, ಭಾರತೀಯ ಕೋಚ್ ಯುವ ಆಟಗಾರರಿಗೆ ಅವರಿಂದ ಕಲಿಯುವಂತೆ ಸಲಹೆ ನೀಡಿದರು.

ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವಿಗೆ ವಿರಾಟ್ ಕೊಹ್ಲಿಯ ದೊಡ್ಡ ಕೊಡುಗೆ ಇದೆ. ಯಾವುದೇ ರನ್ ಗಳಿಸದಿದ್ದರೂ ಅತ್ಯುತ್ತಮ ಫೀಲ್ಡಿಂಗ್ ಮೂಲಕ ರನ್ ಉಳಿಸಿದರು. ಮೊದಲು ಲಾಂಗ್ ಆನ್ ಬೌಂಡರಿಯಲ್ಲಿ ಪ್ರಚಂಡ ಜಿಗಿತದೊಂದಿಗೆ ಸಿಕ್ಸರ್ ನಿಲ್ಲಿಸಿ ಎದುರಾಳಿ ಕೇವಲ 1 ರನ್ ಗಳಿಸುವಂತೆ ಮಾಡಿದರು. ಇದಾದ ಬಳಿಕ 38 ಮೀಟರ್ ಓಡಿ ಅತ್ಯುತ್ತಮ ಕ್ಯಾಚ್ ಪಡೆದರು. ಈ ಎರಡೂ ಟಾಸ್ಕ್‌ಗಳಲ್ಲಿ ಕೊಹ್ಲಿ ವಿಫಲರಾಗಿದ್ದರೆ, ಪಂದ್ಯ ಟೈ ಆಗುವ ಮೊದಲೇ ಕೊನೆಗೊಳ್ಳುತ್ತಿತ್ತು. ಅಲ್ಲದೆ ಮೊದಲ ಸೂಪರ್ ಓವರ್‌ನಲ್ಲಿ ಕೊಹ್ಲಿ ಬೇಗನೆ ಚೆಂಡನ್ನು ಹಿಡಿದು ಗುಲ್ಬದಿನ್ ನೈಬ್ ಅವರನ್ನು ರನೌಟ್ ಮಾಡಿದರು.

ಇದನ್ನೂ ಓದಿ
ಮೊದಲ ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ
ಸಾವಿರ ಬೌಂಡರಿಗಳ ಸರದಾರ ರೋಹಿತ್ ಶರ್ಮಾ..!
ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ರೋಹಿತ್
ಯುವರಾಜ್ ತಂಡಕ್ಕೆ 4 ವಿಕೆಟ್​ಗಳ ಸೋಲುಣಿಸಿದ ಸಚಿನ್ ಪಡೆ

Super Over Rules: ಸೂಪರ್ ಓವರ್​ನಲ್ಲಿರುವ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?

 

ಹೀಗಿರುವಾಗ ತಂಡದ ಈ ಸ್ಮರಣೀಯ ಗೆಲುವಿಗೆ ಕೊಹ್ಲಿ ಕೊಡುಗೆ ಫೀಲ್ಡಿಂಗ್ ಮೂಲಕ ಇದೆ ಎಂದರೆ ತಪ್ಪಾಗದು. ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲೂ ಅವರ ಕೊಡುಗೆಯನ್ನು ಶ್ಲಾಘಿಸಲಾಯಿತು. 2023ರ ವಿಶ್ವಕಪ್‌ನಿಂದ ಪರಿಚಯಿಸಲಾದ ‘ಫೀಲ್ಡರ್ ಆಫ್ ದಿ ಮ್ಯಾಚ್’ ನಿಯಮವನ್ನು ಟೀಮ್ ಇಂಡಿಯಾ ಈ ಸರಣಿಯಲ್ಲಿಯೂ ಮುಂದುವರೆಸಿದೆ. ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಕೊಹ್ಲಿಗೆ ‘ಫೀಲ್ಡರ್ ಆಫ್ ದಿ ಸೀರೀಸ್’ ಪದಕವನ್ನು ನೀಡಿದರು.

 

35ರ ಹರೆಯದಲ್ಲೂ ಕೊಹ್ಲಿ ಮೈದಾನದಲ್ಲಿ ಎಷ್ಟು ಫಿಟ್ ಆಗಿದ್ದಾರೆ ಎಂದು ಪದಕ ನೀಡುವ ಮುನ್ನ ದಿಲೀಪ್ ತಂಡದ ಯುವಕರಿಗೆ ಸಲಹೆ ನೀಡಿದರು. ಇದೇವೇಳೆ ವಿಶ್ವಕಪ್‌ಗೆ ಮುನ್ನ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಭಾಗವಾಗಿದ್ದಾಗ ಕೊಹ್ಲಿ ಆಡಿದ ಮಾತನ್ನು ದಿಲೀಪ್ ವಿವರಿಸಿದರು. ಕೊಹ್ಲಿ ತನ್ನ ಬಳಿಗೆ ಬಂದು, ನಾನು ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡಲು ಬಯಸುವುದಿಲ್ಲ, ಬದಲಿಗೆ ಶಾರ್ಟ್ ಲೆಗ್ ಮತ್ತು ಸಿಲ್ಲಿ ಪಾಯಿಂಟ್‌ನಂತಹ ಕಷ್ಟದ ಜಾಗದಲ್ಲಿ ನಿಯೋಜಿಸಬೇಕು ಎಂದರು. ಇದು ಕೊಹ್ಲಿ ಎಂದು ದಿಲೀಪ್ ಹೇಳಿದರು. ಇದು ಯುವಕರಿಗೆ ಸ್ಫೂರ್ತಿ ಎಂದು ಕರೆದಿರುವ ಫೀಲ್ಡಿಂಗ್ ಕೋಚ್, ಅವರು ಫೀಲ್ಡಿಂಗ್​ನಲ್ಲಿ ಕೊಹ್ಲಿಯಂತೆ ಅರ್ಧದಷ್ಟು ಕೆಲಸವನ್ನು ಮಾಡಿದರೆ, ತಂಡದ ಫೀಲ್ಡಿಂಗ್ ಅದ್ಭುತವಾಗಿರುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ