IPL 2022: ಕ್ಷೌರಿಕನ ಮಗ ಈಗ ಐಪಿಎಲ್ ಸ್ಟಾರ್..!

Kuldeep Sen: ಕುಲ್ದೀಪ್ ಸೇನ್ ಗಂಟೆಗೆ 135-140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಇನ್ ಸ್ವಿಂಗ್ ಮತ್ತು ಔಟ್ ಸ್ವಿಂಗ್ ಎರಡನ್ನೂ ಕರಾರುವಾಕ್ ಎಸೆಯಬಲ್ಲರು.

IPL 2022: ಕ್ಷೌರಿಕನ ಮಗ ಈಗ ಐಪಿಎಲ್ ಸ್ಟಾರ್..!
Kuldeep Sen
Follow us
TV9 Web
| Updated By: ಝಾಹಿರ್ ಯೂಸುಫ್

Updated on:Feb 15, 2022 | 7:12 PM

ಐಪಿಎಲ್ ಮೂಲಕ ಹಲವು ಆಟಗಾರರು ತಮ್ಮ ಜೀವನವನ್ನೇ ಬದಲಿಸಿಕೊಂಡಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಕುಲ್ದೀಪ್ ಸೇನ್. ಆದರೆ ಕುಲ್ದೀಪ್​ಗೆ ಕೋಟಿಗಟ್ಟಲೆ ಏನು ಹಣ ಸಿಗಲಿಲ್ಲ. ಇದಾಗ್ಯೂ ಚೊಚ್ಚಲ ಬಾರಿ ಐಪಿಎಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸಿಕ್ಕ ಅವಕಾಶವನ್ನು ಬಳಸಿಕೊಂಡರೆ ಕುಲ್ದೀಪ್ ಜೀವನ ಕೂಡ ಬದಲಾಗಲಿದೆ. ಏಕೆಂದರೆ ಮಧ್ಯಪ್ರದೇಶದ ಯುವ ಕುಲದೀಪ್ ಸೇನ್ ಕೂಡ ಕಡು ಬಡತನದಿಂದಲೇ ಮೇಲೆ ಬಂದಂತಹ ಆಟಗಾರ. ಅವರ ತಂದೆ ಈಗಲೂ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತ ಮಗನ ಕನಸು ನನಸು ಮಾಡಲು ತಂದೆ ಹಾಗೂ ಕುಟುಂಬಸ್ಥರು ತಮ್ಮ ಆಸೆಗಳನ್ನು ತ್ಯಾಗ ಮಾಡಿದ್ದಾರೆ. ಇದಾಗ್ಯೂ ಕಳೆದ ಸೀಸನ್​ನಲ್ಲಿ ಯುವ ವೇಗಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಕುಲ್ದೀಪ್ ಮಾತ್ರ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದರು.

ಅದರ ಫಲವಾಗಿ ಇದೀಗ ಕುಲ್ದೀಪ್ ಸೇನ್ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಆರ್​ಆರ್​ ಫ್ರಾಂಚೈಸಿ ಯುವ ವೇಗಿಯನ್ನು 20 ಲಕ್ಷ ರೂ. ನೀಡಿ ಖರೀದಿಸಿದೆ. ಅದರಲ್ಲೂ ಒಂದು ಅವಕಾಶವನ್ನು ಎದುರು ನೋಡುತ್ತಿದ್ದ ಆಟಗಾರನಿಗೆ ರಾಜಸ್ಥಾನ್ ಬಾಗಿಲು ತೆರೆದಿದೆ. ಇದೀಗ ಕುಲ್ದೀಪ್ ಕೂಡ ಅದೃಷ್ಟ ಖುಲಾಯಿಸಿದ ಖುಷಿಯಲ್ಲಿದ್ದಾರೆ. ಅದರಲ್ಲೂ ಖ್ಯಾತನಾಮ ಬೌಲರುಗಳ ಜೊತೆ ಮತ್ತಷ್ಟು ಬೌಲಿಂಗ್ ಕೌಲಶ್ಯಗಳನ್ನು ಕಲಿಯುವ ವಿಶ್ವಾಸದಲ್ಲಿದೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ ಮತ್ತು ನವದೀಪ್ ಸೈನಿ ಅವರಂತಹ ಬೌಲರ್‌ಗಳಿದ್ದಾರೆ. ಇವರೊಂದಿಗೆ ನೆಟ್​ನಲ್ಲೇ ಅಭ್ಯಾಸ ನಡೆಸಿದರೂ ಬೌಲಿಂಗ್ ಉತ್ತಮಗೊಳಿಸಬಹುದು ಎಂಬ ವಿಶ್ವಾಸ ಹೊಂದಿದ್ದಾರೆ ಕುಲ್ದೀಪ್.

ಕುಲದೀಪ್ ಸೇನ್ 2018-19ರಲ್ಲಿ ಮಧ್ಯಪ್ರದೇಶಕ್ಕಾಗಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದರು. 2018 ರಲ್ಲಿ ಪಂಜಾಬ್ ವಿರುದ್ಧ ಮೊದಲ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದರು. ಅಷ್ಟೇ ಅಲ್ಲದೆ ಮೊದಲ ರಣಜಿ ಸೀಸನ್​ನಲ್ಲಿ ಎಂಟು ಪಂದ್ಯಗಳಲ್ಲಿ 25 ವಿಕೆಟ್​ಗಳನ್ನು ಉರುಳಿಸಿದ್ದರು. ಇದಾಗ್ಯೂ ಕುಲ್ದೀಪ್​ಗೆ ಐಪಿಎಲ್ ಬಾಗಿಲು ತೆರೆಯಲು ಮೂರು ವರ್ಷ ಕಾಯಬೇಕಾಯಿತು. ಇದೀಗ ಐಪಿಎಲ್ ಅಂಗಳಕ್ಕೆ ಕುಲ್ದೀಪ್ ಸೇನ್ ಎಂಬ ಯುವ ಪ್ರತಿಭೆ ಕೂಡ ಎಂಟ್ರಿ ಕೊಟ್ಟಿದೆ.

ಅಕಾಡೆಮಿ ಶುಲ್ಕ ಮನ್ನಾ: ಐವರು ಸಹೋದರರಲ್ಲಿ ಕುಲದೀಪ್ ಸೇನ್ ಮೂರನೆಯವರು. 10 ವರ್ಷಗಳ ಹಿಂದೆ ವಿಂಧ್ಯಾ ಕ್ರಿಕೆಟ್ ಅಕಾಡೆಮಿಗಾಗಿ ಆಡಲು ಪ್ರಾರಂಭಿಸಿದರು. ಅವರ ಕೋಚ್ ಏರಿಯಲ್ ಆಂಥೋನಿ, ‘ಕ್ಲಬ್‌ನಲ್ಲಿರುವ ಉಳಿದ ಕ್ರಿಕೆಟಿಗರಂತೆ, ಕುಲದೀಪ್ ಕೂಡ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಆದರೆ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ತುಡಿತ ಕೋಚ್ ಗಮನ ಸೆಳೆಯಿತು. ಆದರೆ ಆರ್ಥಿಕ ಪರಿಸ್ಥಿತಿಯೇ ಬೇರೆಯಿತ್ತು. ಹೀಗಾಗಿ ಕುಲ್ದೀಪ್ ಸೇನ್ ಅವರ ಅಕಾಡೆಮಿ ಶುಲ್ಕವನ್ನು ಮನ್ನಾ ಮಾಡಿ, ಪ್ರತಿನಿತ್ಯ ಅಭ್ಯಾಸಕ್ಕೆ ಬರುವಂತೆ ತಿಳಿಸಲಾಗಿತ್ತು. ಅದರಂತೆ ಇದೀಗ ಕುಲ್ದೀಪ್ ಸೇನ್ ಐಪಿಎಲ್​ ತನಕ ಬಂದು ನಿಂತಿದ್ದಾರೆ.

ಕುಲ್ದೀಪ್ ಬೌಲಿಂಗ್ ಹೇಗಿದೆ? ಕುಲ್ದೀಪ್ ಸೇನ್ ಗಂಟೆಗೆ 135-140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಇನ್ ಸ್ವಿಂಗ್ ಮತ್ತು ಔಟ್ ಸ್ವಿಂಗ್ ಎರಡನ್ನೂ ಕರಾರುವಾಕ್ ಎಸೆಯಬಲ್ಲರು. ಹೀಗಾಗಿ ಕುಲ್ದೀಪ್​ಗೆ ರಾಜಸ್ಥಾನ್ ರಾಯಲ್ಸ್ ಕ್ಯಾಂಪ್​ನಲ್ಲಿ ಅತ್ಯುತ್ತಮ ಕೋಚಿಂಗ್ ಲಭಿಸಿದರೆ ಮಿಂಚುವುದರಲ್ಲಿ ಅನುಮಾನವೇ ಇಲ್ಲ.

ಭಾವುಕರಾದ ತಂದೆ: ಮಗನಿಗೆ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿರುವುದನ್ನು ಕಂಡು ತಂದೆ ಭಾವುಕರಾದರು. ಈ ಕುರಿತು ಮಾತನಾಡಿದ ಅವರು, ‘ಇದು ಕನಸು ನನಸಾಗುವಂತಿದೆ. ಅವನ ಶಾಲಾ ದಿನಗಳಲ್ಲಿ ಕ್ರಿಕೆಟ್‌ ಆಡುತ್ತಿರುವುದಕ್ಕೆ ನಾನು ತುಂಬಾ ಬೈಯುತ್ತಿದ್ದೆ ಮತ್ತು ಹೊಡೆಯುತ್ತಿದ್ದೆ. ಆದರೆ ಈ ಕ್ರಿಕೆಟ್ ನನ್ನ ಕುಟುಂಬಕ್ಕೆ ಹೆಸರು ತಂದುಕೊಟ್ಟಿದೆ. ಸಣ್ಣ ಸಲೂನ್ ಮಾಲೀಕನ ಮಗ ಕ್ರಿಕೆಟ್ ಮೂಲಕ ಹೆಸರು ಗಳಿಸುತ್ತಾನೆ. ನಮ್ಮ ಕುಟುಂಬದ ಅದೃಷ್ಟ ಬದಲಾಗುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ ಎಂದು ಕುಲ್ದೀಪ್ ಸೇನ್ ಅವರ ತಂದೆ ಹೇಳಿದ್ದಾರೆ.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(Kuldeep Sen IPL 2022 Auction Rewa bowler who will play for Rajasthan Royals)

Published On - 7:11 pm, Tue, 15 February 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ