ಕೆಎಲ್ ರಾಹುಲ್ (KL Rahul) ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವು ಸ್ಟಾರ್ ಆಟಗಾರರನ್ನು ಒಳಗೊಂಡು ಈ ಬಾರಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಆದರೆ ಇದೀಗ ತಂಡದಲ್ಲಿರುವ ಇಬ್ಬರು ವಿದೇಶಿ ಸ್ಟಾರ್ ಆಟಗಾರರು ಐಪಿಎಲ್ನ (IPL 2022) ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಅದು ಪ್ಲೇಯಿಂಗ್ ಇಲೆವೆನ್ನ ಭಾಗವಾಗಬೇಕಿದ್ದ ಆಟಗಾರರು ಎಂಬುದು ವಿಶೇಷ. ಹೌದು, ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ಕೆಎಲ್ ರಾಹುಲ್ (KL Rahul), ರವಿ ಬಿಷ್ನೋಯ್ (Ravi Bishnoi) ಹಾಗೂ ಮಾರ್ಕಸ್ ಸ್ಟೋಯಿನಿಸ್ (Marcus Stoinis) ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಆದರೀಗ ಸ್ಟೋಯಿನಿಸ್ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಲಭ್ಯರಿರುವುದು ಅನುಮಾನ. ಏಕೆಂದರೆ ಆಸ್ಟ್ರೇಲಿಯಾ (Australia vs Pakistan) ತಂಡವು ಪಾಕಿಸ್ತಾನ್ ವಿರುದ್ದ ಸರಣಿ ಆಡುತ್ತಿದೆ. ಈ ಸರಣಿಗಾಗಿ ಮಾಡಲಾದ ಏಕದಿನ ಹಾಗೂ ಟಿ20 ತಂಡದಲ್ಲಿ ಮಾರ್ಕಸ್ ಸ್ಟೋಯಿನಿಸ್ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ-ಪಾಕಿಸ್ತಾನ್ ನಡುವಣ ಸರಣಿ ಮುಗಿಯುವುದು ಏಪ್ರಿಲ್ 5 ಕ್ಕೆ, ಅಂದರೆ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಆಲ್ರೌಂಡರ್ ಸ್ಟೋಯಿನಿಸ್ ಅಭ್ಯರಾಗುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಇನ್ನು ಏಪ್ರಿಲ್ 6 ಕ್ಕೆ ಐಪಿಎಲ್ಗೆ ಆಗಮಿಸಿದರೂ 3 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ಹೀಗಾಗಿ ಮಾರ್ಕಸ್ ಸ್ಟೋಯಿನಿಸ್ ಏಪ್ರಿಲ್ 10 ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೂಡಿಕೊಳ್ಳಬಹುದು.
ಇನ್ನೊಂದೆಡೆ ಸೌತ್ ಆಫ್ರಿಕಾ ತಂಡವು ಇದೇ ಅವಧಿಯಲ್ಲಿ ಬಾಂಗ್ಲಾದೇಶ ವಿರುದ್ದ ಸರಣಿ ಆಡಲಿದೆ. ಈ ಸರಣಿಗಾಗಿ ದಕ್ಷಿಣ ಆಫ್ರಿಕಾ ಏಕದಿನ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಕ್ವಿಂಟನ್ ಡಿಕಾಕ್ ಕೂಡ ಸ್ಥಾನ ಪಡೆದಿದ್ದಾರೆ. ಡಿಕಾಕ್ ಈ ಬಾರಿ ಲಕ್ನೋ ತಂಡದ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೀಗ ಐಪಿಎಲ್ ಆರಂಭದ ವೇಳೆಗೆ ಡಿಕಾಕ್ ಐಪಿಎಲ್ಗೆ ಆಗಮಿಸುವುದು ಅನುಮಾನ. ಏಕೆಂದರೆ ಸೌತ್ ಆಫ್ರಿಕಾ-ಬಾಂಗ್ಲಾದೇಶ ನಡುವಣ ಏಕದಿನ ಸರಣಿಯು ಮಾರ್ಚ 23 ರಂದು ಮುಕ್ತಾಯವಾಗಲಿದೆ. ಇತ್ತ ಐಪಿಎಲ್ ಮಾರ್ಚ್ 26 ರಿಂದ ಶುರುವಾಗಲಿದೆ. ಬಾಂಗ್ಲಾ ಸರಣಿ ಮುಗಿಸಿ ಡಿಕಾಕ್ ಐಪಿಎಲ್ಗೆ ಆಗಮಿಸಿದರೂ 3 ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ. ಹೀಗಾಗಿ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಇತ್ತ ತಂಡದ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದ ಮಾರ್ಕಸ್ ಸ್ಟೋಯಿನಿಸ್ ಹಾಗೂ ಕ್ವಿಂಟನ್ ಡಿಕಾಕ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುತ್ತಿರುವುದು ಇದೀಗ ಲಕ್ನೋ ಫ್ರಾಂಚೈಸಿಯ ಚಿಂತೆಯನ್ನು ಹೆಚ್ಚಿಸಿದೆ. ಅದರಲ್ಲೂ ಬಲಿಷ್ಠ ತಂಡ ಕಟ್ಟಿ ಹೊಸ ತಂಡವನ್ನು ಮುನ್ನಡೆಸುವ ಇರಾದೆಯಲ್ಲಿದ್ದ ನಾಯಕ ಕೆಎಲ್ ರಾಹುಲ್ಗೆ ಇದೀಗ ತಂಡದ ಸಮತೋಲನ ಹೊಸ ಸವಾಲಾಗುವ ಸಾಧ್ಯತೆಯಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀಗಿದೆ (Lucknow Super Giants Squad):
ಕೆಎಲ್ ರಾಹುಲ್ (ನಾಯಕ), ರವಿ ಬಿಷ್ಣೋಯ್, ಮಾರ್ಕಸ್ ಸ್ಟೋಯಿನಿಸ್, ದೀಪಕ್ ಹೂಡಾ, ಜೇಸನ್ ಹೋಲ್ಡರ್, ಮನೀಶ್ ಪಾಂಡೆ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಮಾರ್ಕ್ ವುಡ್, ಅವೇಶ್ ಖಾನ್, ಅಂಕಿತ್ ಸಿಂಗ್ ರಜಪೂತ್, ಕೃಷ್ಣಪ್ಪ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಖಾನ್, ಆಯುಷ್ ಬದೋನಿ, ಕೈಲ್ ಮೈಯರ್ಸ್, ಕರ್ಣ್ ಶರ್ಮಾ, ಎವಿನ್ ಲೂಯಿಸ್ ಮತ್ತು ಮಯಾಂಕ್ ಯಾದವ್.
ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?