KL Rahul: 16 ವರ್ಷಗಳ ಬಳಿಕ ವಿಚಿತ್ರ ರನೌಟ್: ಸಿಟ್ಟು ನೆತ್ತಿಗೇರಿಸಿಕೊಂಡ ಕೆಎಲ್ ರಾಹುಲ್
IND VS WI: ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ರೋಹಿತ್ ಶರ್ಮಾ 5, ಹೊಸ ಆರಂಭಿಕ ರಿಷಬ್ ಪಂತ್ 18 ಮತ್ತು ವಿರಾಟ್ ಕೊಹ್ಲಿ 18 ರನ್ ಗಳಿಸಿ ಔಟಾದರು.
ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ (India vs West Indies, 2nd ODI) ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಾಹುಲ್ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ್ದರು. ಅದರಲ್ಲೂ ಸೂರ್ಯಕುಮಾರ್ ಯಾದವ್ ಜೊತೆಗೂಡಿ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದರು. ಆದರೆ ವೈಯುಕ್ತಿಕ ಸ್ಕೋರ್ 49 ರನ್ಗಳಿಸಿದ್ದ ರಾಹುಲ್ ರನೌಟ್ ಆಗುವ ಮೂಲಕ ಇನಿಂಗ್ಸ್ ಕೊನೆಗೊಳಿಸಿದ್ದರು. ಪಂದ್ಯದ 30ನೇ ಓವರ್‌ನಲ್ಲಿ ಕೆಎಲ್ ರಾಹುಲ್ ಆಫ್ಸೈಡ್ನತ್ತ ಚೆಂಡನ್ನು ಬಾರಿಸಿದ್ದರು. ಮೊದಲ ರನ್ ಪೂರ್ಣಗೊಳಿಸಿದ ರಾಹುಲ್ಗೆ 2ನೇ ರನ್ ಓಡುವಂತೆ ಸೂರ್ಯಕುಮಾರ್ ಯಾದವ್ ಕರೆ ನೀಡಿದ್ದಾರೆ. ಇತ್ತ 2ನೇ ರನ್ಗೆ ಓಡಿದ ರಾಹುಲ್ ಮಧ್ಯ ಭಾಗಕ್ಕೆ ತಲುಪುತ್ತಿದ್ದಂತೆ ರನೌಟ್ ಆಗುವ ಸೂಚನೆ ಸಿಕ್ಕಿತ್ತು. ಅದರಂತೆ ಫೀಲ್ಡರ್ ನೇರವಾಗಿ ಚೆಂಡನ್ನು ವಿಕೆಟ್ ಕೀಪರ್ಗೆ ಕೈಗೆ ಎಸೆದರು. ಕೆಎಲ್ ರಾಹುಲ್ ರನೌಟ್ ಆದರು.
ರನೌಟ್ ಆಗಿ ಹೊರ ನಡೆಯುವ ವೇಳೆ ಸೂರ್ಯಕುಮಾರ್ ಅವರತ್ತ ತಿರುಗಿ ನೋಡಿದ ರಾಹುಲ್, 2ನೇ ರನ್ ಕರೆಗಾಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕೋಪದಿಂದಲೇ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ವಿಚಿತ್ರ ಎಂದರೆ ಇಂತಹದೊಂದು ರನೌಟ್ ಮೂಡಿಬಂದಿರುವುದು 16 ವರ್ಷಗಳ ಬಳಿಕ ಎಂಬುದು ವಿಶೇಷ. ಏಕೆಂದರೆ ಕಳೆದ 16 ವರ್ಷಗಳಲ್ಲಿ ಟೀಮ್ ಇಂಡಿಯಾದ ಯಾವೊಬ್ಬ ಆಟಗಾರ ಕೂಡ 49 ರನ್ಗಳಿಸಿ ರನೌಟ್ ಆಗಿರಲಿಲ್ಲ. ಕೊನೆಯ ಬಾರಿ 49 ರನ್ಗಳಿಸಿ ರನೌಟ್ ಆಗಿದ್ದು ರಾಹುಲ್ ದ್ರಾವಿಡ್.
2006 ರಲ್ಲಿ ರಾಹುಲ್ ದ್ರಾವಿಡ್ 49 ರನ್ ಗಳಿಸಿ ರನೌಟ್ ಆಗಿದ್ದರು. ಅಚ್ಚರಿ ಎಂದರೆ ರಾಹುಲ್ ದ್ರಾವಿಡ್ ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್ ನಲ್ಲಿಯೇ ರನೌಟ್ ಆಗಿದ್ದರು. ಇದೀಗ ಕೆಎಲ್ ರಾಹುಲ್ ಕೂಡ ಅಹಮದಾಬಾದ್ನಲ್ಲೇ ರನೌಟ್ ಆಗಿದ್ದಾರೆ. ಅದು ಕೂಡ ವೆಸ್ಟ್ ಇಂಡೀಸ್ ವಿರುದ್ದ ಎಂಬುದು ವಿಶೇಷ.
KL Rahul Run Out ?#INDvWI #KLRahul #ViratKholi pic.twitter.com/qcwkQohdko
— Saqlain Khan (@Saqlainejaz56) February 9, 2022
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ರೋಹಿತ್ ಶರ್ಮಾ 5, ಹೊಸ ಆರಂಭಿಕ ರಿಷಬ್ ಪಂತ್ 18 ಮತ್ತು ವಿರಾಟ್ ಕೊಹ್ಲಿ 18 ರನ್ ಗಳಿಸಿ ಔಟಾದರು. ಟೀಮ್ ಇಂಡಿಯಾ 12 ಓವರ್‌ಗಳಲ್ಲಿ 43 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಗೂಡಿದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ 90 ರನ್ಗಳ ಜೊತೆಯಾಟವಾಡಿದ್ದರು. ಇತ್ತ ಕೆಎಲ್ ರಾಹುಲ್ 4 ಬೌಂಡರಿ ಹಾಗೂ 2 ಸಿಕ್ಸ್ನೊಂದಿಗೆ 48 ಎಸೆತಗಳಲ್ಲಿ 49 ರನ್ ಬಾರಿಸಿ ಔಟಾದರೆ, ಸೂರ್ಯಕುಮಾರ್ ಯಾದವ್ 83 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 64 ರನ್ ಬಾರಿಸಿದರು. ಅದರಂತೆ ಟೀಮ್ ಇಂಡಿಯಾ ಅಂತಿಮವಾಗಿ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 237 ರನ್ ಪೇರಿಸಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: Yuzvendra Chahal: ವಿಕೆಟ್ಗಳ ಶತಕ ಪೂರೈಸಿದ ಚಹಾಲ್
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!
(IND VS WI: After 16 years, an Indian batsman got out like KL Rahul)