ICC World Cup 2022: ಎಂಥಾ ಅದ್ಭುತ ಕ್ಯಾಚ್: ಒಂದೇ ಕೈಯಲ್ಲಿ ಕ್ಯಾಚ್ ಹಿಡಿದು ಎಲ್ಲರನ್ನೂ ನಿಬ್ಬೆರಗಾಗಿಸಿದ ಡಾಟಿನ್
ICC Womens World Cup 2022: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 6 ವಿಕೆಟ್‌ಗೆ 225 ರನ್ ಗಳಿಸಿತು. ವಿಂಡೀಸ್ ಪರ ವಿಕೆಟ್‌ಕೀಪರ್ ಶೆಮನ್ ಕ್ಯಾಂಪ್‌ಬೆಲ್ ಅವರು 66 ರನ್‌ಗಳನ್ನು ಬಾರಿಸಿ ಮಿಂಚಿದರೆ, ಚಾಡೆನ್ ನೇಷನ್ 49 ರನ್ ಗಳಿಸಿ ಔಟಾದರು.
ಮಹಿಳಾ ವಿಶ್ವಕಪ್ 2022 (Womens World Cup 2022) ರಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ವೆಸ್ಟ್ ಇಂಡೀಸ್ ತಂಡ ಇತಿಹಾಸ ನಿರ್ಮಿಸಿದೆ. ಏಕೆಂದರೆ ಕೆರಿಬಿಯನ್ ಮಹಿಳಾ ತಂಡ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಅನ್ನು ಸೋಲಿಸಿದೆ. ವಿಂಡೀಸ್ ನೀಡಿದ 226 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 47.4 ಓವರ್ ಗಳಲ್ಲಿ 218 ರನ್ ಗಳಿಸಲಷ್ಟೇ ಶಕ್ತವಾಯಿತು. ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಕೊನೆಯ 18 ಎಸೆತಗಳಲ್ಲಿ 9 ರನ್ ಗಳಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ. ಮತ್ತೊಂದೆಡೆ ಸತತ ಎರಡು ಗೆಲುವು ದಾಖಲಿಸುವ ಮೂಲಕ ವೆಸ್ಟ್ ಇಂಡೀಸ್ ವನಿತೆಯರು ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಇನ್ನು ಈ ಗೆಲುವಿನಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ವಿಂಡೀಸ್ ಆಟಗಾರ್ತಿ ಡಿಯಾಂಡ್ರಾ ಡಾಟಿನ್ ಹಿಡಿದ ಅದ್ಭುತ ಕ್ಯಾಚ್.
ಇಂಗ್ಲೆಂಡ್ ಇನಿಂಗ್ಸ್‌ನ 9ನೇ ಓವರ್ನಲ್ಲಿ ಶ್ಯಾಮಿಲಿಯಾ ಅವರ ಮೊದಲ ಎಸೆತವನ್ನು ವಿನ್‌ಫೀಲ್ಡ್ ಹಿಲ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಕಟ್ ಮಾಡಿದರು. ವಿಂಡೀಸ್ ಪರ ಡಿಯಾಂಡ್ರಾ ಡಾಟಿನ್ ಅದೇ ಭಾಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ತಕ್ಷಣವೇ ಜಿಗಿಯುವ ಮೂಲಕ ಗಾಳಿಯಲ್ಲಿ ಕ್ಯಾಚ್ ಹಿಡಿದು ಎಲ್ಲರನ್ನೂ ಚಕಿತಗೊಳಿಸಿದರು. ಡಿಯಾಂಡ್ರಾ ಡಾಟಿನ್ ಅವರ ಈ ಅತ್ಯಾದ್ಭುತ ಕ್ಯಾಚ್ ವೀಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಅಷ್ಟೇ ಅಲ್ಲದೆ ಡಾಟಿನ್ ಅವರ ಈ ಅದ್ಭುತ ಕ್ಯಾಚ್ಗೆ ಕ್ರಿಕೆಟ್ ಪ್ರೇಮಿಗಳು ಬಹುಪರಾಕ್ ಅನ್ನುತ್ತಿದ್ದಾರೆ.
View this post on Instagram
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 6 ವಿಕೆಟ್‌ಗೆ 225 ರನ್ ಗಳಿಸಿತು. ವಿಂಡೀಸ್ ಪರ ವಿಕೆಟ್‌ಕೀಪರ್ ಶೆಮನ್ ಕ್ಯಾಂಪ್‌ಬೆಲ್ ಅವರು 66 ರನ್‌ಗಳನ್ನು ಬಾರಿಸಿ ಮಿಂಚಿದರೆ, ಚಾಡೆನ್ ನೇಷನ್ 49 ರನ್ ಗಳಿಸಿ ಔಟಾದರು. ಆರಂಭಿಕ ಆಟಗಾರ್ತಿ ಹೀಲಿ ಮ್ಯಾಥ್ಯೂಸ್ 45 ರನ್ ಗಳಿಸಿದರೆ, ಡಾಟಿನ್ 31 ರನ್ ಗಳಿಸಿದ್ದರು. ಇಂಗ್ಲೆಂಡ್ ಪರ ಎಕ್ಲೆಸ್ಟೋನ್ 3 ವಿಕೆಟ್ ಪಡೆದಿದ್ದರು.
226 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 218 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಟಮ್ಮಿ ಬ್ಯೂಮಾಂಟ್ 76 ಎಸೆತಗಳಲ್ಲಿ 46 ರನ್ ಗಳಿಸಿದರೆ, ಸೋಫಿಯಾ ಡಂಕ್ಲಿ 35 ಎಸೆತಗಳಲ್ಲಿ 38 ರನ್ ಗಳಿಸಿದರು. ಡೇನಿಯಲ್ ವೇಟ್ 33 ರನ್ಗಳ ಕೊಡುಗೆ ನೀಡಿದರು. ಸೋಫಿ ಎಕ್ಲೆಸ್ಟೋನ್ 33 ರನ್ ಗಳಿಸಿ ಅಜೇಯರಾಗಿ ಮರಳಿದರು. ವಿಂಡೀಸ್ ಪರ ಶ್ಯಾಮಿಲಿಯಾ ಕಾನೆಲ್ ಮೂರು ವಿಕೆಟ್ ಪಡೆದರೆ, ಮ್ಯಾಥ್ಯೂಸ್ ಮತ್ತು ಅನಿಸಾ ಮೊಹಮ್ಮದ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Womens World Cup: West Indies Deandra Dottin takes gravity-defying catch)