LSG vs CSK Highlights, IPL 2024: ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಜಯ
Lucknow Super Giants Vs Chennai Super Kings Highlights in Kannada: ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಅದ್ಭುತ ಅರ್ಧಶತಕ ಮತ್ತು ಮೊದಲ ವಿಕೆಟ್‌ಗೆ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವಿನ ಶತಕದ ಜೊತೆಯಾಟದ ಆಧಾರದ ಮೇಲೆ ಲಕ್ನೋ ಸೂಪರ್‌ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದೆ.

ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಅದ್ಭುತ ಅರ್ಧಶತಕ ಮತ್ತು ಮೊದಲ ವಿಕೆಟ್‌ಗೆ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವಿನ ಶತಕದ ಜೊತೆಯಾಟದ ಆಧಾರದ ಮೇಲೆ ಲಕ್ನೋ ಸೂಪರ್‌ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 176 ರನ್ ಗಳಿಸಿತು. ಸಿಎಸ್‌ಕೆ ಪರ ಜಡೇಜಾ 40 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 57 ರನ್ ಹಾಗೂ ಧೋನಿ ಒಂಬತ್ತು ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 28 ರನ್ ಗಳಿಸಿದರು. ಲಕ್ನೋ ಪರ ಕೃನಾಲ್ ಪಾಂಡ್ಯ ಎರಡು ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ ಆರಂಭಿಕರಿಬ್ಬರ ಶತಕದ ಜೊತೆಯಾಟ ಹಾಗೂ ತಲಾ ಅರ್ಧಶತಕದ ನೆರವಿನಿಂದ ಇನ್ನು 6 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.
LIVE NEWS & UPDATES
-
ಚೆನ್ನೈ ವಿರುದ್ಧ ಗೆದ್ದ ಲಕ್ನೋ
ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಅದ್ಭುತ ಅರ್ಧಶತಕ ಮತ್ತು ಮೊದಲ ವಿಕೆಟ್‌ಗೆ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವಿನ ಶತಕದ ಜೊತೆಯಾಟದ ಆಧಾರದ ಮೇಲೆ ಲಕ್ನೋ ಸೂಪರ್‌ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದೆ.
-
ಡಿಕಾಕ್ ಔಟ್
ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡುವ ಮೂಲಕ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಚೆನ್ನೈಗೆ ಮೊದಲ ಯಶಸ್ಸು ನೀಡಿದ್ದಾರೆ. ಡಿ ಕಾಕ್ 43 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿ ಔಟಾದರು. ನಾಯಕ ಕೆಎಲ್ ರಾಹುಲ್ ಜತೆಗೂಡಿ ಮೊದಲ ವಿಕೆಟ್‌ಗೆ 134 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಸುಸ್ಥಿತಿಗೆ ಕೊಂಡೊಯ್ದರು. ಸದ್ಯ ರಾಹುಲ್ ಕ್ರೀಸ್ ನಲ್ಲಿದ್ದು, ಡಿ ಕಾಕ್ ಔಟಾದ ಬಳಿಕ ರಾಹುಲ್ಗೆ ಬೆಂಬಲ ನೀಡಲು ನಿಕೋಲಸ್ ಪೂರನ್ ಕ್ರೀಸ್ಗೆ ಬಂದಿದ್ದಾರೆ.
-
-
ಡಿ ಕಾಕ್ ಅರ್ಧಶತಕ
ನಾಯಕ ಕೆಎಲ್ ರಾಹುಲ್ ನಂತರ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಕೂಡ ಅರ್ಧಶತಕ ಗಳಿಸಿದ್ದಾರೆ.
-
ರಾಹುಲ್ ಅರ್ಧಶತಕ
ಲಕ್ನೋ ನಾಯಕ ಕೆಎಲ್ ರಾಹುಲ್ ಸಿಎಸ್ ಕೆ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಕ್ವಿಂಟನ್ ಡಿ ಕಾಕ್ ಅವರೊಂದಿಗೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದ್ದಾರೆ. ಲಕ್ನೋ ಗೆಲುವಿಗೆ 54 ಎಸೆತಗಳಲ್ಲಿ 74 ರನ್ ಗಳಿಸಬೇಕಿದೆ. ಡಿ ಕಾಕ್ 33 ಎಸೆತಗಳಲ್ಲಿ 41 ರನ್ ಗಳಿಸಿ ರಾಹುಲ್ ಜೊತೆ ಕ್ರೀಸ್‌ನಲ್ಲಿದ್ದಾರೆ.
-
ಪವರ್ ಪ್ಲೇ ಅಂತ್ಯ
ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಲಕ್ನೋಗೆ ಉತ್ತಮ ಆರಂಭ ನೀಡಿದ್ದು, ಪವರ್‌ಪ್ಲೇ ಅಂತ್ಯಕ್ಕೆ ಲಕ್ನೋ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿದೆ. ಕೆಎಲ್ ರಾಹುಲ್ 20 ಎಸೆತಗಳಲ್ಲಿ 34 ರನ್ ಮತ್ತು ಡಿ ಕಾಕ್ 16 ಎಸೆತಗಳಲ್ಲಿ 18 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
-
ಉತ್ತಮ ಆರಂಭ
ಲಕ್ನೋ ಸೂಪರ್‌ಜೈಂಟ್ಸ್‌ಗೆ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಸ್ಥಿರ ಆರಂಭ ನೀಡಿದ್ದಾರೆ. ಚೆನ್ನೈ ನೀಡಿದ 177 ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ಮೂರು ಓವರ್‌ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ.
-
ಲಕ್ನೋ ಇನ್ನಿಂಗ್ಸ್ ಆರಂಭ
ಲಕ್ನೋ ಇನ್ನಿಂಗ್ಸ್ ಆರಂಭವಾಗಿದ್ದು, ನಾಯಕ ಕೆಎಲ್ ರಾಹುಲ್ ಜೊತೆಗೆ ಕ್ವಿಂಟನ್ ಡಿ ಕಾಕ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
-
ಲಕ್ನೋಗೆ 177 ರನ್‌ಗಳ ಗುರಿ
ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಅಜೇಯ ಅರ್ಧಶತಕ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಅದ್ಭುತ ಇನ್ನಿಂಗ್ಸ್‌ನ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಗೆಲ್ಲಲು 177 ರನ್‌ಗಳ ಗುರಿ ನೀಡಿದೆ. ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 176 ರನ್ ಗಳಿಸಿತು. ಸಿಎಸ್‌ಕೆ ಪರ ಜಡೇಜಾ 40 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 57 ರನ್ ಹಾಗೂ ಧೋನಿ ಒಂಬತ್ತು ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 28 ರನ್ ಗಳಿಸಿದರು. ಲಕ್ನೋ ಪರ ಕೃನಾಲ್ ಪಾಂಡ್ಯ ಎರಡು ವಿಕೆಟ್ ಪಡೆದರು.
-
ಅಲಿ ಔಟ್
ಸ್ಪಿನ್ನರ್ ರವಿ ಬಿಷ್ಣೋಯ್ ಮೊಯಿನ್ ಅಲಿ ಅವರ ವೇಗದ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು. ಮೊಯಿನ್ ಸತತ ಮೂರು ಎಸೆತಗಳಲ್ಲಿ ಬಿಷ್ಣೋಯ್ ಮೇಲೆ ಮೂರು ಸಿಕ್ಸರ್‌ಗಳನ್ನು ಬಾರಿಸಿದರು, ಆದರೆ ಇದರ ನಂತರ ಅವರು ಮತ್ತೊಮ್ಮೆ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿ ಕ್ಯಾಚಿತ್ತು ಔಟಾದರು. ಮೊಯಿನ್ ಅವರ ವೇಗದ ಇನ್ನಿಂಗ್ಸ್‌ನ ಆಧಾರದ ಮೇಲೆ ಸಿಎಸ್‌ಕೆ 18 ಓವರ್‌ಗಳ ಅಂತ್ಯಕ್ಕೆ ಆರು ವಿಕೆಟ್‌ಗೆ 142 ರನ್ ಗಳಿಸಿದೆ.
-
ಸಮೀರ್ ರಿಜ್ವಿ ಔಟ್
ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ಸಮೀರ್ ರಿಜ್ವಿ ಕೂಡ ವಿಕೆಟ್ ಕಳೆದುಕೊಂಡಿದ್ದಾರೆ. ಸಮೀರ್ ಅವರನ್ನು ಕೃನಾಲ್ ಪಾಂಡ್ಯ ಔಟ್ ಮಾಡಿದರು. ಐದು ಎಸೆತಗಳಲ್ಲಿ ಒಂದು ರನ್ ಗಳಿಸಿ ಸಮೀರ್ ಔಟಾದರು. ಇದು ಈ ಪಂದ್ಯದಲ್ಲಿ ಕೃನಾಲ್ ಅವರ ಎರಡನೇ ವಿಕೆಟ್ ಆಗಿದೆ.
-
ದುಬೆ ಔಟ್
ಚೆನ್ನೈಗೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಬ್ಯಾಟರ್ ಶಿವಂ ದುಬೆ ಔಟಾಗಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಮೀರ್ ರಿಜ್ವಿ ಕಣಕ್ಕಿಳಿದಿದ್ದಾರೆ. ಇವರೊಂದಿಗೆ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದಾರೆ.
-
10 ಓವರ್ ಪೂರ್ಣ
ಚೆನ್ನೈ ಸೂಪರ್ ಕಿಂಗ್ಸ್ 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ರವೀಂದ್ರ ಜಡೇಜಾ 29 ರನ್, ಶಿವಂ ದುಬೆ 1 ರನ್ ಗಳಿಸಿದ್ದಾರೆ.
-
ರಹಾನೆ ಔಟ್
ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 36 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ರವೀಂದ್ರ ಜಡೇಜಾ ಜೊತೆಗೆ ಶಿವಂ ದುಬೆ ಕ್ರೀಸ್‌ನಲ್ಲಿದ್ದಾರೆ. ತಂಡದ ಸ್ಕೋರ್ 3 ವಿಕೆಟ್ ನಷ್ಟದಲ್ಲಿ 68 ರನ್ ಆಗಿದೆ.
-
ಪವರ್‌ಪ್ಲೇ ಅಂತ್ಯ
ಪವರ್‌ಪ್ಲೇ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ. ಅಜಿಂಕ್ಯ ರಹಾನೆ 26 ರನ್, ರವೀಂದ್ರ ಜಡೇಜಾ 8 ರನ್ ಬಾರಿಸಿದ್ದಾರೆ.
-
ರುತುರಾಜ್ ಔಟ್
ಚೆನ್ನೈ ಎರಡನೇ ವಿಕೆಟ್ ಕಳೆದುಕೊಂಡಿದೆ. ನಾಯಕ ರುತುರಾಜ್ ಕೇವಲ 17 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
-
ರಚಿನ್ ಶೂನ್ಯಕ್ಕೆ ಔಟ್
ಆರಂಭಿಕ ಆಟಗಾರ ರಚಿನ್ ರವೀಂದ್ರ ಅವರನ್ನು ಔಟ್ ಮಾಡುವ ಮೂಲಕ ವೇಗದ ಬೌಲರ್ ಮೊಹ್ಸಿನ್ ಖಾನ್ ಸಿಎಸ್ಕೆಗೆ ಮೊದಲ ಆಘಾತ ನೀಡಿದ್ದಾರೆ. ಮೊಹ್ಸಿನ್ ಮೊದಲ ಎಸೆತದಲ್ಲಿಯೇ ರಚಿನ್ ಅವರನ್ನು ಬೌಲ್ಡ್ ಮಾಡಿದರು.
-
ಚೆನ್ನೈ ಇನ್ನಿಂಗ್ಸ್ ಆರಂಭ
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್ ಆರಂಭವಾಗಿದ್ದು, ಅಜಿಂಕ್ಯ ರಹಾನೆ ಅವರೊಂದಿಗೆ ರಚಿನ್ ರವೀಂದ್ರ ಇನ್ನಿಂಗ್ಸ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
-
ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವನ್ ದುಬೆ, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್, ಮತಿಶಾ ಪತಿರಾನ.
ಇಂಪ್ಯಾಕ್ಟ್ ಪ್ಲೇಯರ್: ಸಮೀರ್ ರಿಜ್ವಿ, ಶಾರ್ದೂಲ್ ಠಾಕೂರ್, ಶೇಖ್ ರಶೀದ್, ನಿಶಾಂತ್ ಸಿಂಧು, ಮಿಚೆಲ್ ಸ್ಯಾಂಟ್ನರ್.
-
ಲಕ್ನೋ ಸೂಪರ್‌ಜೈಂಟ್ಸ್
ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ವಿಕೆಟ್ ಕೀಪರ್, ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.
ಇಂಪ್ಯಾಕ್ಟ್ ಪ್ಲೇಯರ್: ಅರ್ಶಿನ್ ಕುಲಕರ್ಣಿ, ಕೃಷ್ಣಪ್ಪ ಗೌತಮ್, ಯದ್ವೀರ್ ಸಿಂಗ್, ಮಣಿರಾಮನ್ ಸಿದ್ಧಾರ್ಥ್, ಅರ್ಷದ್ ಖಾನ್.
-
ಟಾಸ್ ಗದ್ದ ಲಕ್ನೋ
ಟಾಸ್ ಗದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
-
ಮುಖಾಮುಖಿನ ವರದಿ
ಉಭಯ ತಂಡಗಳ ಅಂಕಿಅಂಶಗಳನ್ನು ಗಮನಿಸಿದರೆ ಇದುವರೆಗೆ ಚೆನ್ನೈ ಮತ್ತು ಲಕ್ನೋ ನಡುವೆ ಒಟ್ಟು ಮೂರು ಪಂದ್ಯಗಳು ನಡೆದಿವೆ. ಒಂದು ಪಂದ್ಯವನ್ನು ಚೆನ್ನೈ ಮತ್ತು ಒಂದು ಪಂದ್ಯವನ್ನು ಲಕ್ನೋ ಗೆದ್ದಿದೆ. ಉಳಿದಂತೆ 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
Published On - Apr 19,2024 6:37 PM
