ಲಖನೌ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ (Lucknow Super Giants vs Gujarat Titans) ಐಪಿಎಲ್ 2022ರ ಎರಡು ಹೊಸ ಫ್ರಾಂಚೈಸಿ ಇಂದು ಅಗ್ನಿ ಪರೀಕ್ಷೆಗೆ ಇಳಿಯಲಿದೆ. ಕ್ರಿಕೆಟ್ ವಲಯದಲ್ಲಿ ಆಪ್ತ ಸ್ನೇಹತರೆಂದೇ ಗುರುತಿಸಿಕೊಳ್ಳುವ ಕೆ ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿಯುತ್ತಿರುವುದು ಕುತೂಹಲ ಕೆರಳಿಸಿದೆ. ಬ್ಯಾಟ್ಸ್ಮನ್ಗಳ ಸ್ವರ್ಗವಾಗಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಕಳೆದ ವರ್ಷ ಮುಂಬೈ ಪಾಳಯದಲ್ಲಿದ್ದ ಹಾರ್ದಿಕ್ ಪಾಂಡ್ಯ (Hardik Pandya) ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ. ಬೆನ್ನುನೋವಿನ ಕಾರಣಕ್ಕೆ ಬೌಲಿಂಗ್ ಕೂಡ ಮಾಡಿರಲಿಲ್ಲ. ಭಾರತ ತಂಡದಲ್ಲಿಯೂ ಅವರ ಆಟ ನಡೆಯದೆ ಕೆಲ ಪಂದ್ಯಕ್ಕೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಇವರಿಗೆ ಈ ಟೂರ್ನಿ ಮುಖ್ಯವಾಗಿದೆ. ಇತ್ತ ಕೆಎಲ್ ರಾಹುಲ್ (KL Rahul) ಪಂಜಾಬ್ ತಂಡದಿಂದ ಹೊರಬಂದು ಹೊಸ ಫ್ರಾಂಚೈಸಿಯ ನಾಯಕತ್ವ ವಹಿಸಿದ್ದು ನಿರೀಕ್ಷೆ ಹೆಚ್ಚಿಸಿದೆ. ಇದರ ನಡುವೆ ಇಂದಿನ ಪಂದ್ಯಕ್ಕೆ ಕೆಲ ವಿದೇಶಿ ಆಟಗಾರರ ಅನುಪಸ್ಥಿತಿಯಲ್ಲಿ ಉಭಯ ತಂಡಗಳು ಕಣಕ್ಕಿಳಿಯಲಿದೆ. ಹಾಗಾದ್ರೆ ಇಭಯ ತಂಡಗಳ ಪ್ಲೇಯಿಂಗ್ XI ಹೇಗಿರಬಹುದು ಎಂಬುದನ್ನು ನೋಡೋಣ.
ಕೆಕೆಆರ್ ತಂಡದಿಂದ ನೇರವಾಗಿ ಗುಜರಾತ್ ಸೇರಿರುವ ಶುಭ್ಮನ್ ಗಿಲ್ ಓಪನರ್ ಆಗಿ ಕಣಕ್ಕಿಳಿಯುವುದು ಖಚಿತ. ಇವರಿಗೆ ಜೊತೆಯಾಗಿ ವಿಕೆಟ್ ಕೀಪರ್ ಆಗಿರುವ ಮ್ಯಾಥ್ಯೂ ವೇಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅಫ್ಘಾನಿಸ್ತಾನ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಕೂಡ ಆಯ್ಕೆಯಲ್ಲಿ ಇರಲಿದ್ದಾರೆ. ವೃದದಿಮಾನ್ ಸಾಹ ಯಾವ ಸ್ಥಾನದಲ್ಲಿ ಆಡ್ತಾರೆ ಎಂಬುದು ನೋಡಬೇಕಿದೆ. ಡೇವಿಡ್ ಮಿಲ್ಲರ್ ಮತ್ತು ಹಾರ್ದಿಕ್ ಪಾಂಡ್ಯ ಬಹುಶಃ ಫಿನಿಶಿಂಗ್ ಜವಾಬ್ದಾರಿ ಹೊರಬಹುದು. ಗುಜರಾತ್ ಟೈಟಾನ್ಸ್ ಬೌಲಿಂಗ್ ವಿಭಾಗ ಗಮನಿಸುವುದಾದರೆ ರಶೀದ್ ಖಾನ್, ಮೊಹಮ್ಮದ್ ಶಮಿ ಮತ್ತು ಲಾಕಿ ಫರ್ಗುಸನ್ ಅವರಂತಹ ಬೌಲಿಂಗ್ ಲೈನ್‌ಅಪ್ ಭರ್ಜರಿ ಪ್ರದರ್ಶನ ನೀಡುವ ರೀತಿ ಕಾಣುತ್ತದೆ.
ಇತ್ತ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ನಾಯಕ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಮೂರನೇ ಕ್ರಮಾಂಕದಲ್ಲಿ ಮತ್ತೊಬ್ಬ ಕನ್ನಡಿಗ ಮನೀಶ್ ಪಾಂಡೆ ಆಡಲಿದ್ದು, ನಂತರದಲ್ಲಿ ಆಲ್ರೌಂಡರ್ ದೀಪಕ್ ಹೂಡ ಕಾಣಿಸಿಕೊಳ್ಳಲಿದ್ದಾರೆ. ಮನನ್ ವೋಹ್ರಾ ಕೂಡ ಆಡಬಹುದು. ಎವಿನ್ ಲೆವಿಸ್ ಮತ್ತೊಂದು ಆಯ್ಕೆಯಾಗಿದ್ದಾರೆ. ಕ್ರನಾಲ್ ಪಾಂಡ್ಯ ಕೂಡ ಇದ್ದಾರೆ. ಅವೇಶ್ ಖಾನ್, ಆಂಡ್ರ್ಯೂ ಟೈ, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್, ಕರ್ಣ್ ಶರ್ಮಾ ಹೆಸರಾಂತ ಬೌಲರ್ಗಳಾಗಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್, ಎವಿನ್ ಲೆವಿಸ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮನನ್ ವೋಹ್ರಾ, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಕೆ ಗೌತಮ್, ರವಿ ಬಿಷ್ಣೋಯ್, ಆಂಡ್ರ್ಯೂ ಟೈ, ಅವೇಶ್ ಖಾನ್.
ಗುಜರಾತ್ ಟೈಟನ್ಸ್ ಸಂಭಾವ್ಯ ಪ್ಲೇಯಿಂಗ್ XI:: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್ಮನ್ ಗಿಲ್, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ಗುರುಕೀರತ್ ಸಿಂಗ್, ರಾಹುಲ್ ತೇವಾಟಿಯ, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ವರುಣ್ ಆರುಣ್.
ಗುಜರಾತ್ ಟೈಟನ್ಸ್ ಸಂಪೂರ್ಣ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಗುರುಕೀರತ್ ಸಿಂಗ್, ಸಾಯಿ ಸುದರ್ಶನ್, ಶುಭಮನ್ ಗಿಲ್, ರಾಹುಲ್ ತೆವಾಟಿಯಾ, ವಿಜಯಶಂಕರ್, ಮ್ಯಾಥ್ಯೂ ವೇಡ್, ರೆಹಮಾನುಲ್ಲಾ ಗುರ್ಬಾಜ್, ವೃದ್ಧಿಮಾನ್ ಸಹಾ, ಅಲ್ಜರಿ ಜೋಸೆಫ್, ದರ್ಶನ್ ನಾಲ್ಕಂಡೆ, ಡಾಮ್ನಿಕ್ ಡ್ರೇಕ್ಸ್, ಜಯಂತ್ ಯಾದವ್, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಶಮಿ, ನೂರ್ ಅಹಮದ್, ಪ್ರದೀಪ್ ಸಂಗ್ವಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ, ವರುಣ್ ಆಯರನ್, ಯಶ್ ದಯಾಳ್.
ಲಖನೌ ಸೂಪರ್ ಜೈಂಟ್ಸ್ ಸಂಪೂರ್ಣ ತಂಡ: ಕೆ.ಎಲ್. ರಾಹುಲ್ (ನಾಯಕ), ಮನನ್ ವೊಹ್ರಾ, ಎವಿನ್ ಲೂಯಿಸ್, ಮನೀಷ್ ಪಾಂಡೆ, ಕ್ವಿಂಟನ್ ಡಿಕಾಕ್, ರವಿ ಬಿಷ್ಣೋಯಿ, ದುಷ್ಮಂತಾ ಚಾಮೀರಾ, ಶಾಬಾಜ್ ನದೀಮ್, ಮೊಹಸಿನ್ ಖಾನ್, ಮಯಂಕ್ ಯಾದವ್, ಅಂಕಿತ್ ರಜಪೂತ್, ಆವೇಶ್ ಖಾನ್, ಆಯಂಡ್ರ್ಯೂ ಟೈ, ಮಾರ್ಕಸ್ ಸ್ಟೊಯಿನಿಸ್, ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೃಷ್ಣಪ್ಪ ಗೌತಮ್, ಆಯುಷ್ ಬದೋನಿ, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್.
Faf Du Plessis: ಪಂದ್ಯದ ನಡುವೆ ಮಿ. 360 ಎಬಿಡಿ ಅವತಾರ ತಾಳಿದ ಫಾಫ್ ಡುಪ್ಲೆಸಿಸ್: ವೈರಲ್ ವಿಡಿಯೋ ನೋಡಿ
Faf du Plessis: ಈ ಸೋಲಿಗೆ ಯಾರು ಹೊಣೆ?: ಪಂದ್ಯ ಮುಗಿದ ಬಳಿಕ ಆರ್ಸಿಬಿ ನಾಯಕ ಡುಪ್ಲೆಸಿಸ್ ಹೇಳಿದ್ದೇನು ನೋಡಿ