LSG vs MI, IPL 2025: ಸೂರ್ಯಕುಮಾರ್ ಯಾದವ್ ಸಿಕ್ಸ್ ಸಿಡಿಸಿದಾಗ ಕೂದಲೆಳೆಯಿಂದ ಪಾರಾದ ಹುಡುಗಿ: ಭಯಾನಕ ವಿಡಿಯೋ ನೋಡಿ

SuryaKumar Yadav Six Video: ಲಕ್ನೋ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಸಿಕ್ಸರ್ ಬಾರಿಸಿದರು. ದುರದೃಷ್ಟವಶಾತ್ ಚೆಂಡು ಯುವತಿಯ ಎದೆಗೆ ತಗುಲಿತು. ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಸೂರ್ಯಕುಮಾರ್ ಯಾದವ್ ಕೇವಲ ಎರಡು ರನ್ ಗಳಿಸಿ ಆಡುತ್ತಿದ್ದರು.

LSG vs MI, IPL 2025: ಸೂರ್ಯಕುಮಾರ್ ಯಾದವ್ ಸಿಕ್ಸ್ ಸಿಡಿಸಿದಾಗ ಕೂದಲೆಳೆಯಿಂದ ಪಾರಾದ ಹುಡುಗಿ: ಭಯಾನಕ ವಿಡಿಯೋ ನೋಡಿ
Suryakumar Yadav Six

Updated on: Apr 05, 2025 | 8:27 AM

ಬೆಂಗಳೂರು (ಏ. 05): ಐಪಿಎಲ್ 2025 ರ ರಣ ರೋಮಾಂಚಕ ಪಂದ್ಯವು ಶುಕ್ರವಾರ ರಾತ್ರಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ (Lucknow Super Giants vs Mumbai Indians) ನಡುವೆ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ತಂಡ 12 ರನ್‌ಗಳಿಂದ ಸೋತಿತ್ತು. ಆದರೆ, ಮುಂಬೈ ಪರ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಪಂದ್ಯದಲ್ಲಿ ಸೂರ್ಯ 43 ಎಸೆತಗಳಲ್ಲಿ 67 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಇವರ ಬ್ಯಾಟ್​ನಿಂದ 9 ಫೋರ್ ಮತ್ತು 1 ಸಿಕ್ಸರ್ ಮೂಡಿಬಂತು. ಈ ಇನ್ನಿಂಗ್ಸ್‌ನಲ್ಲಿ ಅವರು ಹೊಡೆದ ಒಂದೇ ಒಂದು ಸಿಕ್ಸ್ ದೊಡ್ಡ ಅನಾಹುತ ಆಗುವುದರಲ್ಲಿತ್ತು.

ಯುವತಿಯ ಎದೆಗೆ ಬಡಿದ ಸೂರ್ಯನ ಸಿಕ್ಸ್:

ಲಕ್ನೋ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಸಿಕ್ಸರ್ ಬಾರಿಸಿದರು. ದುರದೃಷ್ಟವಶಾತ್ ಚೆಂಡು ಯುವತಿಯ ಎದೆಗೆ ತಗುಲಿತು. ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಸೂರ್ಯಕುಮಾರ್ ಯಾದವ್ ಕೇವಲ ಎರಡು ರನ್ ಗಳಿಸಿ ಆಡುತ್ತಿದ್ದರು. ಆ ಸಮಯದಲ್ಲಿ ಆವೇಶ್ ಖಾನ್ ಬೌಲಿಂಗ್ ಮಾಡುತ್ತಿದ್ದರು. ಆ ಓವರ್‌ನ ಕೊನೆಯ ಎಸೆತದಲ್ಲಿ, ಆವೇಶ್ ಆಫ್ ಸ್ಟಂಪ್‌ನ ಹೊರಗೆ ಚೆಂಡು ಎಸೆತವನ್ನು ಎಸೆದರು. ಸೂರ್ಯಕುಮಾರ್ ಕ್ರೀಸ್‌ ಬಿಟ್ಟು ನಿಂತು ಚೆಂಡನ್ನು ಡೀಪ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್‌ಗೆ ಹೊಡೆದರು. ಚೆಂಡು ನೇರವಾಗಿ ಬೌಂಡರಿಯ ಬಳಿ ನಿಂತಿದ್ದ ಯುವತಿಯ ಕಡೆ ಬಂತು. ಅವರು ಚೆಂಡನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ, ಚೆಂಡು ಕೈಯಿಗೆ ಸರಿಯಾಗಿ ಸಿಗದೆ ನೇರವಾಗಿ ಆಕೆಯ ಎದೆಯ ಮೇಲೆ ಬಿದ್ದಿದೆ.

ಇದನ್ನೂ ಓದಿ
ತವರಿನಲ್ಲಿ ಗೆಲುವಿನ ಸಿಹಿ ಸವಿದ ಲಕ್ನೋ ಸೂಪರ್​ಜೈಂಟ್ಸ್
ಧೋನಿಗೆ ಮತ್ತೊಮ್ಮೆ ನಾಯಕತ್ವ; ಫ್ಯಾನ್ಸ್​ಗೆ ಹಬ್ಬದೂಟ
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಪ್ಲೇಯಿಂಗ್ 11 ಜೊತೆಗೆ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲೂ ರೋಹಿತ್ ಹೆಸರಿಲ್ಲ

 

ಬಲವಾದ ಹೊಡೆತವನ್ನು ಯುವತಿ ಆರಂಭದಲ್ಲಿ ತೋರಿಸಿಕೊಳ್ಳಲಿಲ್ಲ. ಚೆಂಡನ್ನು ಲಕ್ನೋ ಫೀಲ್ಡರ್‌ಗೆ ಹಿಂತಿರುಗಿಸಿದರು. ಆದರೆ, ನಂತರ ನೋವಿನಿಂದ ನರಳುತ್ತಿರುವುದು ಕಂಡುಬಂತು. ಸೂರ್ಯ ಕುಮಾರ್ ಯಾದವ್ ಅವರ ಸಿಕ್ಸರ್ ಬಾಲ್ ಗರ್ಲ್ ಗೆ ನೋವುಂಟು ಮಾಡಿದ ಘಟನೆ ದುರದೃಷ್ಟಕರ. ಆದರೆ ಸಮಾಧನಕರ ವಿಷಯವೆಂದರೆ ಆಕೆಗೆ ಹೆಚ್ಚಿನ ಗಾಯವಾಗಲಿಲ್ಲ. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

IPL 2025: ರೋಚಕ ಪಂದ್ಯದಲ್ಲಿ ಮುಂಬೈ ಮಣಿಸಿದ ಲಕ್ನೋ; ಟೂರ್ನಿಯಲ್ಲಿ 2ನೇ ಜಯ

ಲಕ್ನೋ 203 ರನ್ ಗಳಿಸಿತು:

ಈ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡದ ವಿರುದ್ಧ ಲಕ್ನೋ ತಂಡ 20 ಓವರ್‌ಗಳಲ್ಲಿ 203 ರನ್ ಗಳಿಸಿತು. ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 60 ರನ್ ಗಳಿಸಿದರು. ಇದಾದ ನಂತರ, ಐಡೆನ್ ಮಾರ್ಕ್ರಾಮ್ 53 ರನ್‌ಗಳ ಇನ್ನಿಂಗ್ಸ್ ಆಡಿದರು.

ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ ಆರಂಭಿಕರಾದ ವಿಲ್ ಜಾಕ್ಸ್ ಮತ್ತು ರಯಾನ್ ರಿಕಲ್ಟನ್ ಅವರನ್ನು ಬೇಗನೆ ಕಳೆದುಕೊಂಡಿತು. ಇದಾದ ನಂತರ, ಯುವ ಬ್ಯಾಟ್ಸ್‌ಮನ್ ನಮನ್ ಧೀರ್ 24 ಎಸೆತಗಳಲ್ಲಿ 46 ರನ್ ನಂತರ, ಸೂರ್ಯಕುಮಾರ್ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ಶೈಲಿಯಲ್ಲಿ ವೇಗವಾಗಿ ರನ್ ಗಳಿಸಿದರು. ಆದರೆ ಕೊನೆಯಲ್ಲಿ ಮುಂಬೈ ಇಂಡಿಯನ್ಸ್ ಕೇವಲ 191 ರನ್ ಗಳಿಸಲು ಸಾಧ್ಯವಾಯಿತು ಮತ್ತು ಪಂದ್ಯವನ್ನು 12 ರನ್‌ಗಳಿಂದ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ