VIDEO: ಇದೆಂತಹ ಅವಮಾನ: ರೋಹಿತ್ ಶರ್ಮಾ ಸಲಹೆಗೆ ಕ್ಯಾರೆ ಮಾಡದ ಹಾರ್ದಿಕ್ ಪಾಂಡ್ಯ
IPL 2025 LSG vs MI: ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಗಾಯದ ಕಾರಣ ರೋಹಿತ್ ಶರ್ಮಾ ಕಣಕ್ಕಿಳಿದಿರಲಿಲ್ಲ. ಇದಾಗ್ಯೂ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಕೆಲ ಸಲಹೆಗಳನ್ನು ನೀಡಲು ರೋಹಿತ್ ಶರ್ಮಾ ಮೈದಾನಕ್ಕೆ ಆಗಮಿಸಿದ್ದರು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ 16ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಜಯ ಸಾಧಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಸ್ಪೋಟಕ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ (60) ಹಾಗೂ ಐಡೆನ್ ಮಾರ್ಕ್ರಾಮ್ (53) ಪವರ್ಪ್ಲೇನಲ್ಲಿ 69 ರನ್ ಚಚ್ಚಿದ್ದರು. ಇತ್ತ ಮೊದಲ 6 ಓವರ್ಗಳಲ್ಲಿ ವಿಕೆಟ್ ಪಡೆಯಲು ಮುಂಬೈ ಇಂಡಿಯನ್ಸ್ ಬೌಲರ್ಗಳು ಹರಸಾಹಸಪಟ್ಟಿದ್ದರು.
ಇದರ ನಡುವೆ ಸ್ಟ್ರಾಟೆಜಿಕ್ ಟೈಮ್ ಔಟ್ ಸಂದರ್ಭದಲ್ಲಿ ಮೈದಾನಕ್ಕೆ ಆಗಮಿಸಿದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಆಟಗಾರರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೆ ನಾಯಕ ಹಾರ್ದಿಕ್ ಪಾಂಡ್ಯಗೆ ಬೌಲಿಂಗ್ ವಿಷಯದಲ್ಲಿ ಸಲಹೆ ನೀಡಲು ಮುಂದಾಗಿದ್ದಾರೆ.
ಆದರೆ ಅತ್ತ ರೋಹಿತ್ ಶರ್ಮಾ ಮಾತನಾಡುತ್ತಿದ್ದರೆ, ಇತ್ತ ಹಾರ್ದಿಕ್ ಪಾಂಡ್ಯ ಅವರ ಮಾತನ್ನು ನಿರ್ಲಕ್ಷಿಸಿ ಹೊರಟು ಹೋಗಿದ್ದಾರೆ. ಈ ಸನ್ನಿವೇಶವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಳೆದ ಸೀಸನ್ನಲ್ಲೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದರು. ಇದೀಗ ಮತ್ತೆ ಪಾಂಡ್ಯ ಕಡೆಯಿಂದ ಅಂತಹದ್ದೇ ನಡೆ ಕಂಡು ಬಂದಿದ್ದು, ಇದಕ್ಕೆ ರೋಹಿತ್ ಶರ್ಮಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ.
ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ ವಿಡಿಯೋ:
Rohit sharma ignored by hardik pandya#RohitSharma #IPL2025 pic.twitter.com/YtriOMiOhL
— Zsports (@_Zsports) April 5, 2025
ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 191 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು 12 ರನ್ಗಳ ರೋಚಕ ಜಯ ಸಾಧಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ಮಿಚೆಲ್ ಮಾರ್ಷ್ , ನಿಕೋಲಸ್ ಪೂರನ್ , ರಿಷಭ್ ಪಂತ್ (ನಾಯಕ) , ಆಯುಷ್ ಬದೋನಿ , ಡೇವಿಡ್ ಮಿಲ್ಲರ್ , ಅಬ್ದುಲ್ ಸಮದ್ , ಶಾರ್ದೂಲ್ ಠಾಕೂರ್ , ದಿಗ್ವೇಶ್ ಸಿಂಗ್ ರಾಠಿ , ಆಕಾಶ್ ದೀಪ್ , ಅವೇಶ್ ಖಾನ್.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ಗಾಯ: ಬಿಗ್ ಅಪ್ಡೇಟ್ ನೀಡಿದ RCB ಕೋಚ್
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ವಿಲ್ ಜ್ಯಾಕ್ಸ್ , ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ (ನಾಯಕ) , ನಮನ್ ಧೀರ್ , ರಾಜ್ ಬಾವಾ , ಮಿಚೆಲ್ ಸ್ಯಾಂಟ್ನರ್ , ದೀಪಕ್ ಚಹಾರ್ , ಅಶ್ವನಿ ಕುಮಾರ್ , ವಿಘ್ನೇಶ್ ಪುತ್ತೂರ್ , ಟ್ರೆಂಟ್ ಬೌಲ್ಟ್.