ಬ್ಯಾಟಿಂಗ್ ಮಾಡಿದ್ದು ಸಾಕು… ತಿಲಕ್ ವರ್ಮಾನ ಅರ್ಧದಲ್ಲೇ ಕಳುಹಿಸಿದ ಹಾರ್ದಿಕ್ ಪಾಂಡ್ಯ
Lucknow Super Giants vs Mumbai Indians: ಲಕ್ನೋದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 203 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 191 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ 12 ರನ್ಗಳಿಂದ ಸೋಲೊಪ್ಪಿಕೊಂಡಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಪಂದ್ಯವು ರಿಟೈರ್ಡ್ ಔಟ್ಗೆ ಸಾಕ್ಷಿಯಾಯಿತು. ಅದು ಸಹ ಗಾಯಗೊಳ್ಳದ ಆಟಗಾರನನ್ನು ಪೆವಿಲಿಯನ್ಗೆ ಕಳುಹಿಸಿ ಮತ್ತೋರ್ವ ಬ್ಯಾಟರ್ನನ್ನು ಕರೆತರುವ ಮೂಲಕ. ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ. ಗಾಯಗೊಂಡ ಆಟಗಾರರು ರಿಟೈರ್ಡ್ ಹರ್ಟ್ ಘೋಷಿಸಿ ಪೆವಿಲಿಯನ್ಗೆ ಮರಳುವುದು ಸಾಮಾನ್ಯ. ಆದರೆ ತಿಲಕ್ ವರ್ಮಾ ಅವರು ಗಾಯಗೊಳ್ಳದಿದ್ದರೂ ಪಾಂಡ್ಯ ಅವರಿಗೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್ಗೆ ಹೋಗುವಂತೆ ಸೂಚಿಸಿದರು.
ತಿಲಕ್ ವರ್ಮಾ ಪೆವಿಲಿಯನ್ಗೆ ತೆರಳುತ್ತಿದ್ದಂತೆ ಮಿಚೆಲ್ ಸ್ಯಾಂಟ್ನರ್ ಕಣಕ್ಕಿಳಿದರು. ಇದಾಗ್ಯೂ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಔಟಾಗದೇ ಪೆವಿಲಿಯನ್ಗೆ ಮರಳಿದ ತಿಲಕ್ ವರ್ಮಾ ವಿಡಿಯೋ:
Batting at 25 off 23 in the run chase, #TilakVarma retired himself out to make way for Mitchell Santner! 🤯
Only the 4th time a batter has retired out in the IPL!
Watch LIVE action ➡ https://t.co/nH2UGjQY0t #IPLonJioStar 👉 #LSGvMI, LIVE NOW on Star Sports 1, Star Sports 1… pic.twitter.com/NJ0C0F8MvL
— Star Sports (@StarSportsIndia) April 4, 2025
ತಿಲಕ್ ವರ್ಮಾ ಅವರನ್ನು ಪೆವಿಲಿಯನ್ಗೆ ಕಳಿಸಲು ಕಾರಣವೇನು?
ಈ ಪಂದ್ಯದಲ್ಲಿ ತಿಲಕ್ ವರ್ಮಾ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ 23 ಎಸೆತಗಳನ್ನು ಎದುರಿಸಿದ ಅವರು ಕಲೆಹಾಕಿದ್ದು ಕೇವಲ 25 ರನ್ಗಳು ಮಾತ್ರ. ಕೊನೆಯ 12 ಎಸೆತಗಳಲ್ಲಿ 29 ರನ್ ಬೇಕಿದ್ದಾಗಲೂ ತಿಲಕ್ ವರ್ಮಾ ದೊಡ್ಡ ಹೊಡೆತ ಬಾರಿಸಲು ಪರದಾಡುತ್ತಿದ್ದರು.
ಇದನ್ನು ಗಮನಿಸಿದ ಹಾರ್ದಿಕ್ ಪಾಂಡ್ಯ ರಿಟೈರ್ಡ್ ಹರ್ಟ್ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಅಲ್ಲದೆ ಕೊನೆಯ ಹಂತದಲ್ಲಿ ಮಿಚೆಲ್ ಸ್ಯಾಂಟ್ನರ್ ಅವರನ್ನು ಕಣಕ್ಕಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ನೀಡಿದ ಸ್ಪಷ್ಟನೆ ಏನು?
ತಿಲಕ್ ವರ್ಮಾ ಅವರನ್ನು ಅರ್ಧದಲ್ಲೇ ಪೆವಿಲಿಯನ್ಗೆ ಕಳುಹಿಸಿದ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಮಗೆ ಕೆಲವು ದೊಡ್ಡ ಹಿಟ್‌ಗಳು ಬೇಕಾಗಿದ್ದವು. ಕ್ರಿಕೆಟ್‌ನಲ್ಲಿ ಬಿಗ್ ಹಿಟ್‌ಗಳನ್ನು ಬಾರಿಸಲಾಗದ ದಿನಗಳಿರುತ್ತವೆ. ತಿಲಕ್ ವರ್ಮಾಗೆ ದೊಡ್ಡ ಹೊಡೆತಗಳನ್ನು ಬಾರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರನ್ನು ವಾಪಸ್ ಕಳುಹಿಸಲು ನಿರ್ಧರಿಸಿದೆ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ಗಾಯ: ಬಿಗ್ ಅಪ್ಡೇಟ್ ನೀಡಿದ RCB ಕೋಚ್
ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್:
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 16ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 203 ರನ್ಗಳನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 191 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 12 ರನ್ಗಳ ರೋಚಕ ಜಯ ಸಾಧಿಸಿದೆ.