
ಬೆಂಗಳೂರು (ಮೇ. 27): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಕೊನೆಯ ಲೀಗ್ ಪಂದ್ಯವು ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Lucknow Super Giants vs Royal Challengers Bengaluru) ನಡುವೆ ನಡೆಯಲಿದೆ. ಈ ಪಂದ್ಯವನ್ನು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಆರ್‌ಸಿಬಿ ಈಗಾಗಲೇ ಅಗ್ರ -4 ರಲ್ಲಿ ಸ್ಥಾನ ಪಡೆದಿದೆ, ಆದರೆ ಈ ಪಂದ್ಯವನ್ನು ಗೆಲ್ಲುವುದು ರಜತ್ ಪಡೆಗೆ ಬಹಳ ಮುಖ್ಯ. ಈ ಪಂದ್ಯವನ್ನು ಆರ್‌ಸಿಬಿ ಗೆದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ-2 ಸ್ಥಾನ ತಲುಪುವ ಅವಕಾಶವನ್ನು ಹೊಂದುತ್ತದೆ. ಮತ್ತೊಂದೆಡೆ ಈ ಪಂದ್ಯದಲ್ಲಿ ಲಕ್ನೋ ತನ್ನ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಆಡಲಿದೆ. ಏತನ್ಮಧ್ಯೆ, LSG vs RCB ಪಂದ್ಯದ ಸಮಯದಲ್ಲಿ ಏಕಾನಾ ಪಿಚ್‌ನ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡೋಣ.
ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬಗ್ಗೆ ನೋಡುವುದಾದರೆ, ಇದು ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಬ್ಬರಿಗೂ ಸಹಾಯ ಮಾಡುತ್ತದೆ. ಇಲ್ಲಿನ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿದೆ. ಇನ್ನಿಂಗ್ಸ್ ಆರಂಭದಲ್ಲಿ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಗಳನ್ನು ಆಡುವುದು ಸುಲಭವಲ್ಲ. ಆರಂಭದ ಕೆಲ ಓವರ್ಗಳಲ್ಲಿ ಬ್ಯಾಟರ್ಗಳು ರನ್ ಗಳಿಸಲು ಪರದಾಡುವುದು ಖಚಿತ, ಆದಾಗ್ಯೂ, ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದರೆ ಸ್ಫೋಟಕ ಆಟ ಆಡಲು ಸುಲಭವಾಗುತ್ತದೆ. ಈ ದಿನಗಳಲ್ಲಿ, ಲಕ್ನೋದಲ್ಲಿ ರಾತ್ರಿ ಇಬ್ಬನಿ ಬೀಳುವ ಸಾಧ್ಯತೆಯಿದೆ, ಆದ್ದರಿಂದ ಟಾಸ್ ಪಾತ್ರವು ಮುಖ್ಯವಾಗುತ್ತದೆ. ಇಲ್ಲಿ ಟಾಸ್ ಗೆದ್ದ ಯಾವುದೇ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸುತ್ತಾರೆ.
ಐಪಿಎಲ್‌ನಲ್ಲಿ ಈ ಮೈದಾನದ ಸರಾಸರಿ ಸ್ಕೋರ್ 168-170 ರ ನಡುವೆ ಇದೆ. ಏಕಾನಾ ಕ್ರೀಡಾಂಗಣದ ಅಂಕಿಅಂಶಗಳ ಬಗ್ಗೆ ನೋಡುವುದಾದರೆ, ಇಲ್ಲಿ ಈವರೆಗೆ ಒಟ್ಟು 21 ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 9 ಪಂದ್ಯಗಳನ್ನು ಗೆದ್ದರೆ, ನಂತರ ಬ್ಯಾಟ್ ಮಾಡಿದ ತಂಡ 11 ಪಂದ್ಯಗಳನ್ನು ಗೆದ್ದಿದೆ. ಟಾಸ್ ಗೆದ್ದ ತಂಡ ಇದುವರೆಗೆ 13 ಪಂದ್ಯಗಳನ್ನು ಗೆದ್ದಿದ್ದರೆ, ಸೋತ ತಂಡ 7 ಬಾರಿ ಪಂದ್ಯವನ್ನು ಗೆದ್ದಿದೆ. ಈ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದೆ. 2024 ರಲ್ಲಿ ಅವರು LSG ವಿರುದ್ಧ 235/6 ಗಳಿಸಿದೆ. ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಈ ಮೈದಾನದಲ್ಲಿ ಒಂದೇ ಒಂದು ಶತಕವೂ ದಾಖಲಾಗಿಲ್ಲ ಎಂಬುದು ವಿಶೇಷ.
Arshdeep Singh: ಕೊನೆಯ ಓವರ್‌ನಲ್ಲಿ ಕೇವಲ 3 ರನ್ ಮತ್ತು 2 ವಿಕೆಟ್: ಮಂಬೈ ಸೋಲಿಗೆ ಕಾರಣವಾದ ಈ ಬೌಲರ್
ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಲಕ್ನೋ ತಂಡವನ್ನು ಸೋಲಿಸಿದರೆ, ಗುಜರಾತ್ ಟೈಟಾನ್ಸ್ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಸ್ಥಾನದಲ್ಲಿ ಕೊನೆಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ, ಕ್ವಾಲಿಫೈಯರ್-1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮುಖಾಮುಖಿ ನಡೆಯಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಸೋತರೆ ಫೈನಲ್ ತಲುಪಲು ಸ್ವಲ್ಪ ಕಷ್ಟವಿದೆ. ಆರ್‌ಸಿಬಿ ಎಲಿಮಿನೇಟ್ ಪಂದ್ಯ ಆಡುತ್ತದೆ.
ಕ್ವಾಲಿಫೈಯರ್-1: ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
ಎಲಿಮಿನೇಟರ್: ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್
ಕ್ವಾಲಿಫೈಯರ್-1: ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್
ಎಲಿಮಿನೇಟರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ