Arshdeep Singh: ಕೊನೆಯ ಓವರ್‌ನಲ್ಲಿ ಕೇವಲ 3 ರನ್ ಮತ್ತು 2 ವಿಕೆಟ್: ಮಂಬೈ ಸೋಲಿಗೆ ಕಾರಣವಾದ ಈ ಬೌಲರ್
MI vs PBKS, IPL 2025: ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಅರ್ಶ್ದೀಪ್ ಸಿಂಗ್ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು. ಅವರು ನಮನ್ ಧೀರ್ ವಿಕೆಟ್ ಪಡೆಯುವ ಮೂಲಕ ಓವರ್ ಆರಂಭಿಸಿದರು ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆಯುವ ಮೂಲಕ ಓವರ್ ಮುಗಿಸಿದರು. ಅವರು ಇಡೀ ಓವರ್‌ನಲ್ಲಿ ಕೇವಲ 3 ರನ್‌ಗಳನ್ನು ಮಾತ್ರ ನೀಡಿದರು.

ಬೆಂಗಳೂರು (ಮೇ. 27): ಐಪಿಎಲ್ 2025 ರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ (Punjab Kings vs Mumbai Indians) ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ, ಪಂಜಾಬ್ ಕಿಂಗ್ಸ್ 19 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ತಲುಪಿದೆ. ಪಂಜಾಬ್ ಕಿಂಗ್ಸ್ ಗೆಲುವಿಗೆ 185 ರನ್‌ಗಳ ಗುರಿ ನೀಡಲಾಗಿತ್ತು. ಶ್ರೇಯಸ್ ಅಯ್ಯರ್ ಪಡೆ 18.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಏಳು ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ, ಭಾರತದ ಸ್ಟಾರ್ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ತಮ್ಮ ಬೌಲಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಅರ್ಶ್ದೀಪ್ ಸಿಂಗ್ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು. ಅವರು ನಮನ್ ಧೀರ್ ವಿಕೆಟ್ ಪಡೆಯುವ ಮೂಲಕ ಓವರ್ ಆರಂಭಿಸಿದರು ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆಯುವ ಮೂಲಕ ಓವರ್ ಮುಗಿಸಿದರು. ಅವರು ಇಡೀ ಓವರ್‌ನಲ್ಲಿ ಕೇವಲ 3 ರನ್‌ಗಳನ್ನು ಮಾತ್ರ ನೀಡಿದರು. ಒಟ್ಟಾರೆಯಾಗಿ ಅರ್ಷ್‌ದೀಪ್ 4 ಓವರ್‌ಗಳಲ್ಲಿ ಕೇವಲ 28 ರನ್‌ಗಳನ್ನು ನೀಡಿದರು.
ಅರ್ಷ್ದೀಪ್ ಬಗ್ಗೆ ಇರ್ಫಾನ್ ಪಠಾಣ್ ಹೇಳಿದ್ದೇನು?
ಇರ್ಫಾನ್ ಪಠಾಣ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಅದ್ಭುತ ಪ್ರದರ್ಶನದ ನಂತರ ಪಠಾಣ್ ಅರ್ಶ್ದೀಪ್ ಸಿಂಗ್ ಅವರನ್ನು ಹೊಗಳಿ ಟ್ವೀಟ್ ಕೂಡ ಮಾಡಿದ್ದಾರೆ. ‘ಅರ್ಷದೀಪ್ ಸಿಂಗ್ ಅವರ ಕೊನೆಯ ಓವರ್‌ನಲ್ಲಿ ಕೇವಲ 3 ರನ್ ಮತ್ತು 2 ವಿಕೆಟ್‌ಗಳು. ಯಾರ್ಕರ್ ಅನ್ನು ಅದ್ಭುತವಾಗಿ ಎಸೆದಿದ್ದಾರೆ’ ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.
Just 3 runs 2 wickets in the last over from Arshdeep singh. Brilliant execution of Yorkers.
— Irfan Pathan (@IrfanPathan) May 26, 2025
ಪಂಜಾಬ್ ಗೆಲುವಿನಲ್ಲಿ ಜೋಶ್ ಇಂಗ್ಲಿಸ್ ಮತ್ತು ಪ್ರಿಯಾಂಶ್ ಆರ್ಯ ಪಾತ್ರ
ಪಂಜಾಬ್ ಗೆಲುವಿನಲ್ಲಿ ಜೋಶ್ ಇಂಗ್ಲಿಸ್ ಮತ್ತು ಪ್ರಿಯಾಂಶ್ ಆರ್ಯ ಪ್ರಮುಖ ಪಾತ್ರ ವಹಿಸಿದರು. ಇಂಗ್ಲಿಸ್ 42 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳ ಸಹಾಯದಿಂದ 73 ರನ್ ಗಳಿಸುವ ಮೂಲಕ ಪಂಜಾಬ್ ಅನ್ನು ಗೆಲುವಿನತ್ತ ಮುನ್ನಡೆಸಿದರು. ಇನ್ನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 62 ರನ್ ಗಳಿಸಿದರು. ಪ್ರಿಯಾಂಶ್ ಮತ್ತು ಇಂಗ್ಲಿಸ್ ನಡುವೆ ಎರಡನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟ ಇತ್ತು. ನಾಯಕ ಶ್ರೇಯಸ್ ಅಯ್ಯರ್ ಸಿಕ್ಸರ್ (16 ಎಸೆತ, 26 ರನ್) ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
IPL 2025: ಇಬ್ಬರು ತಂಡದಿಂದ ಔಟ್, ಇನ್ನಿಬ್ಬರಿಗೆ ಇಂಜುರಿ; ಹೇಗಿರಲಿದೆ ಆರ್ಸಿಬಿ ಪ್ಲೇಯಿಂಗ್ 11?
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಅವರ 57 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತು. ಪಂಜಾಬ್ ಪರ ಅರ್ಶ್ದೀಪ್ ಸಿಂಗ್, ಮಾರ್ಕೊ ಜಾನ್ಸೆನ್ ಮತ್ತು ವಿ. ವಿಜಯ್ ಕುಮಾರ್ ತಲಾ ಎರಡು ವಿಕೆಟ್ ಪಡೆದರೆ, ಹರ್‌ಪ್ರೀತ್ ಬ್ರಾರ್ ಒಂದು ವಿಕೆಟ್ ಕಿತ್ತರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




