LSG vs MI, IPL 2023: ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋಗೆ ರೋಚಕ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:May 17, 2023 | 12:04 AM

Lucknow Super Giants vs Mumbai Indians: ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು.

LSG vs MI, IPL 2023: ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋಗೆ ರೋಚಕ ಜಯ
LSG

LSG vs MI, IPL 2023: ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 5 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ LSG ತಂಡವು ಮಾರ್ಕಸ್ ಸ್ಟೋಯಿನಿಸ್ (89) ಬಾರಿಸಿದ ಅರ್ಧಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 177 ರನ್​ ಕಲೆಹಾಕಿತು. 178 ರನ್​ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅರ್ಧಶತಕ ಬಾರಿಸಿ ಮಿಂಚಿದ್ದರು. ಇನ್ನು ಕೊನೆಯ 2 ಓವರ್​ಗಳಲ್ಲಿ 30 ರನ್​ಗಳ ಟಾರ್ಗೆಟ್ ಪಡೆದ ಮುಂಬೈ ಪರ ಟಿಮ್ ಡೇವಿಡ್ ಅಬ್ಬರಿಸಿದರು. 19ನೇ ಓವರ್​ನಲ್ಲಿ 19 ರನ್​ ಬಾರಿಸುವ ಮೂಲಕ ಗೆಲುವಿನ ಆಸೆ ಮೂಡಿಸಿದರು. ಅದರಂತೆ ಅಂತಿಮ ಓವರ್​ನಲ್ಲಿ 11 ರನ್​ಗಳ ಟಾರ್ಗೆಟ್ ಪಡೆಯಿತು. ಆದರೆ ಕೊನೆಯ ಓವರ್​ ಎಸೆದ ಮೊಹ್ಸಿನ್ ಖಾನ್, ಟಿಮ್ ಡೇವಿಡ್ ಹಾಗೂ ಕ್ಯಾಮರೋನ್ ಗ್ರೀನ್​ರನ್ನು ಬಿಗ್ ಶಾಟ್​ಗಳಿಂದ ನಿಯಂತ್ರಿಸುವ ಮೂಲಕ ಕೇವಲ 5 ರನ್ ಮಾತ್ರ ನೀಡಿದರು. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 5 ರನ್​ಗಳ ರೋಚಕ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ 15 ಅಂಕಗಳಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಹಾಗೆಯೇ 14 ಪಾಯಿಂಟ್ಸ್ ಹೊಂದಿರುವ ಮುಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿದೆ. ಇನ್ನು ಉಭಯ ತಂಡಗಳಿಗೂ ಒಂದೊಂದು ಪಂದ್ಯವಿದ್ದು, ಈ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದು.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಾಲ್.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ(ನಾಯಕ), ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್

ಲಕ್ನೋ ಸೂಪರ್ ಜೈಂಟ್ಸ್ ತಂಡ: ಕ್ವಿಂಟನ್ ಡಿಕಾಕ್, ಕೃನಾಲ್ ಪಾಂಡ್ಯ (ನಾಯಕ) , ಕೈಲ್ ಮೇಯರ್ಸ್ , ಪ್ರೇರಕ್ ಮಂಕಡ್ , ಮಾರ್ಕಸ್ ಸ್ಟೊಯಿನಿಸ್ , ನಿಕೋಲಸ್ ಪೂರನ್ , ಅಮಿತ್ ಮಿಶ್ರಾ , ಯಶ್ ಠಾಕೂರ್ , ರವಿ ಬಿಷ್ಣೋಯ್ , ಯುಧ್ವಿರ್ ಸಿಂಗ್ ಚರಕ್ , ಅವೇಶ್ ಖಾನ್ , ಆಯುಷ್ ಬಡೋಲ್ , ಅವೇಶ್ ಖಾನ್, ಸ್ವಪ್ನಿಲ್ ಸಿಂಗ್, ಡೇನಿಯಲ್ ಸ್ಯಾಮ್ಸ್, ದೀಪಕ್ ಹೂಡಾ , ಅರ್ಪಿತ್ ಗುಲೇರಿಯಾ , ಕೃಷ್ಣಪ್ಪ ಗೌತಮ್ , ಮೊಹ್ಸಿನ್ ಖಾನ್ , ಕರುಣ್ ನಾಯರ್ , ಮನನ್ ವೋಹ್ರಾ , ಮಾರ್ಕ್ ವುಡ್, ನವೀನ್-ಉಲ್-ಹಕ್ , ರೊಮಾರಿಯೋ ಶೆಫರ್ಡ್ , ಕರಣ್ ಶರ್ಮಾ

ಮುಂಬೈ ಇಂಡಿಯನ್ಸ್ ತಂಡ: ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ) , ಸೂರ್ಯಕುಮಾರ್ ಯಾದವ್ , ನೆಹಾಲ್ ವಧೇರಾ , ಕ್ಯಾಮೆರೋನ್ ಗ್ರೀನ್ , ವಿಷ್ಣು ವಿನೋದ್ , ಟಿಮ್ ಡೇವಿಡ್ , ಕ್ರಿಸ್ ಜೋರ್ಡಾನ್ , ಪಿಯೂಷ್ ಚಾವ್ಲಾ , ಜೇಸನ್ ಬೆಹ್ರೆನ್ಡಾರ್ಫ್ , ಕುಮಾರ್ ಕಾರ್ತಿಕೇಯ , ಆಕಾಶ್ ಮಧ್ವಲ್ , ಡೆವಾಲ್ಡ್ ಬ್ರೆವಿಸ್ , ರಮಣ್​ದೀಪ್ ಸಿಂಗ್, ಸಂದೀಪ್ ವಾರಿಯರ್ , ಹೃತಿಕ್ ಶೋಕೀನ್ , ರಿಲೇ ಮೆರೆಡಿತ್ , ಶಮ್ಸ್ ಮುಲಾನಿ , ಅರ್ಜುನ್ ತೆಂಡೂಲ್ಕರ್ , ತಿಲಕ್ ವರ್ಮಾ ,ದುವಾನ್ ಜಾನ್ಸೆನ್ , ಅರ್ಷದ್ ಖಾನ್ , ಟ್ರಿಸ್ಟಾನ್ ಸ್ಟಬ್ಸ್ , ರಾಘವ್ ಗೋಯಲ್.

LIVE NEWS & UPDATES

The liveblog has ended.
  • 16 May 2023 11:34 PM (IST)

    LSG vs MI Live Score, IPL 2023: ರೋಚಕ ಜಯ

    LSG 177/3 (20)

    MI 172/5 (20)

    ಕೊನೆಯ ಓವರ್​ನಲ್ಲಿ 11 ರನ್​ಗಳನ್ನು ಅವಕಶ್ಯತೆಯಿದ್ದಾಗ ಅತ್ಯುತ್ತಮ ದಾಳಿ ಸಂಘಟಿಸಿದ ಮೊಹ್ಸಿನ್ ಖಾನ್. ಟಿಮ್ ಡೇವಿಡ್ ಹಾಗೂ ಕ್ಯಾಮರೋನ್ ಗ್ರೀನ್​ನ ಕಂಗೆಡಿಸಿ ಕೇವಲ 5 ರನ್​ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 5 ರನ್​ಗಳ ರೋಚಕ ಜಯ ತಂದುಕೊಟ್ಟ ಮೊಹ್ಸಿನ್ ಖಾನ್.

      

  • 16 May 2023 11:28 PM (IST)

    LSG vs MI Live Score, IPL 2023: ಭರ್ಜರಿ ಸಿಕ್ಸ್

    ನವೀನ್ ಉಲ್ ಹಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್

    LSG 177/3 (20)

    MI 167/5 (19)

      

    6 ಎಸೆತಗಳಲ್ಲಿ 11 ರನ್​ಗಳ ಅವಶ್ಯಕತೆ
    ಕ್ರೀಸ್​ನಲ್ಲಿ ಗ್ರೀನ್-ಟಿಮ್ ಡೇವಿಡ್ ಬ್ಯಾಟಿಂಗ್
  • 16 May 2023 11:22 PM (IST)

    LSG vs MI Live Score, IPL 2023: ಭರ್ಜರಿ ಸಿಕ್ಸ್

    ನವೀನ್ ಉಲ್ ಹಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್

    LSG 177/3 (20)

    MI 154/5 (18.2)

      

  • 16 May 2023 11:20 PM (IST)

    LSG vs MI Live Score, IPL 2023: 30 ರನ್​ಗಳ ಅವಶ್ಯಕತೆ

    2 ಓವರ್​ಗಳಲ್ಲಿ 30 ರನ್​ಗಳ ಅವಶ್ಯಕತೆ

    ಕ್ರೀಸ್​​ನಲ್ಲಿ ಕ್ಯಾಮರೋನ್ ಗ್ರೀನ್ – ಟಿಮ್ ಡೇವಿಡ್ ಬ್ಯಾಟಿಂಗ್

    LSG 177/3 (20)

    MI 148/5 (18)

      

  • 16 May 2023 11:17 PM (IST)

    LSG vs MI Live Score, IPL 2023: ಅತ್ಯುತ್ತಮ ಕ್ಯಾಚ್

    ಯಶ್ ಠಾಕೂರ್ ಎಸೆತದಲ್ಲಿ ವಿಷ್ಣು ವಿನೋದ್ ಭರ್ಜರಿ ಹೊಡೆತ…ಲೆಗ್ ಸೈಡ್​ ಬೌಂಡರಿ ಲೈನ್​ನಲ್ಲಿ ನಿಕೋಲಸ್ ಪೂರನ್ ಅತ್ಯುತ್ತಮ ಕ್ಯಾಚ್..ಔಟ್

    LSG 177/3 (20)

    MI 145/5 (17.4)

      

  • 16 May 2023 11:12 PM (IST)

    LSG vs MI Live Score, IPL 2023: ಭರ್ಜರಿ ಸಿಕ್ಸ್

    ಮೊಹ್ಸಿನ್ ಖಾನ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್

    LSG 177/3 (20)

    MI 139/4 (17)

      

    18 ಎಸೆತಗಳಲ್ಲಿ 39 ರನ್​ಗಳ ಅವಶ್ಯಕತೆ
  • 16 May 2023 11:08 PM (IST)

    LSG vs MI Live Score, IPL 2023: 4ನೇ ವಿಕೆಟ್ ಪತನ

    ಮೊಹ್ಸಿನ್ ಖಾನ್ ಎಸೆತದಲ್ಲಿ ಲೆಗ್ ಸೈಡ್ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ನೆಹಾಲ್ (16)

    LSG 177/3 (20)

    MI 131/4 (16.1)

      

  • 16 May 2023 11:06 PM (IST)

    LSG vs MI Live Score, IPL 2023: 47 ರನ್​ಗಳ ಅವಶ್ಯಕತೆ

    LSG 177/3 (20)

    MI 131/3 (16)

      4 ಓವರ್​ಗಳಲ್ಲಿ 47 ರನ್​ಗಳ ಟಾರ್ಗೆಟ್

    ಕ್ರೀಸ್​ನಲ್ಲಿ ಟಿಮ್ ಡೇವಿಡ್-ನೆಹಾಲ್ ಬ್ಯಾಟಿಂಗ್

  • 16 May 2023 10:58 PM (IST)

    LSG vs MI Live Score, IPL 2023: 15 ಓವರ್ ಮುಕ್ತಾಯ

    LSG 177/3 (20)

    MI 125/3 (15)

      

    ಕ್ರೀಸ್​ನಲ್ಲಿ ನೆಹಾಲ್-ಟಿಮ್ ಡೇವಿಡ್ ಬ್ಯಾಟಿಂಗ್

     

  • 16 May 2023 10:55 PM (IST)

    LSG vs MI Live Score, IPL 2023: ಸೂರ್ಯ ಔಟ್

    ಯಶ್ ಠಾಕೂರ್ ಎಸೆತದಲ್ಲಿ ಸ್ಕೂಪ್ ಮಾಡಲೋಗಿ ಬೌಲ್ಡ್​ ಆದ ಸೂರ್ಯಕುಮಾರ್ ಯಾದವ್ (7)

    MI 115/3 (14.1)

     

  • 16 May 2023 10:52 PM (IST)

    LSG vs MI Live Score, IPL 2023: 6 ಓವರ್​ಗಳು ಬಾಕಿ

    ಕೊನೆಯ 6 ಓವರ್​ಗಳಲ್ಲಿ 63 ರನ್​ಗಳ ಅವಶ್ಯಕತೆ

    MI 115/2 (14)

      ಕ್ರೀಸ್​ನಲ್ಲಿ ನೆಹಾಲ್-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

  • 16 May 2023 10:50 PM (IST)

    LSG vs MI Live Score, IPL 2023: ವೆಲ್ಕಂ ಬೌಂಡರಿ

    ರವಿ ಬಿಷ್ಣೋಯ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ನೆಹಾಲ್

    MI 111/2 (13.3)

      

  • 16 May 2023 10:46 PM (IST)

    LSG vs MI Live Score, IPL 2023: 13 ಓವರ್ ಮುಕ್ತಾಯ

    MI 107/2 (13)

      

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್-ನೆಹಾಲ್ ಬ್ಯಾಟಿಂಗ್

  • 16 May 2023 10:45 PM (IST)

    LSG vs MI Live Score, IPL 2023: ಇಶಾನ್ ಕಿಶನ್ ಔಟ್

    39 ಎಸೆತಗಳಲ್ಲಿ 59 ರನ್ ಬಾರಿಸಿ ರವಿ ಬಿಷ್ಣೊಯ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಇಶಾನ್ ಕಿಶನ್

    MI 103/2 (11.1)

      

  • 16 May 2023 10:37 PM (IST)

    LSG vs MI Live Score, IPL 2023: ಶತಕ ಪೂರೈಸಿದ ಮುಂಬೈ

    11 ಓವರ್​ಗಳಲ್ಲಿ ಶತಕ ಪೂರೈಸಿದ ಮುಂಬೈ ಇಂಡಿಯನ್ಸ್

    MI 103/1 (11)

      ಕ್ರೀಸ್​ನಲ್ಲಿ ಇಶಾನ್ ಕಿಶನ್ – ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

  • 16 May 2023 10:31 PM (IST)

    LSG vs MI Live Score, IPL 2023: ಮೊದಲ ವಿಕೆಟ್ ಪತನ

    ರವಿ ಬಿಷ್ಣೋಯ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ರೋಹಿತ್ ಶರ್ಮಾ (37)

    MI 90/1 (9.4)

      

  • 16 May 2023 10:30 PM (IST)

    LSG vs MI Live Score, IPL 2023: ಹಿಟ್​ಮ್ಯಾನ್ ಹಿಟ್

    ರವಿ ಬಿಷ್ಣೋಯ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ

    MI 89/0 (9.3)

      

  • 16 May 2023 10:29 PM (IST)

    LSG vs MI Live Score, IPL 2023: 9 ಓವರ್ ಮುಕ್ತಾಯ

    MI 82/0 (9)

    ಇಶಾನ್ ಕಿಶನ್ (48) – ರೋಹಿತ್ ಶರ್ಮಾ (33) ಭರ್ಜರಿ ಬ್ಯಾಟಿಂಗ್

  • 16 May 2023 10:12 PM (IST)

    LSG vs MI Live Score, IPL 2023: ಪವರ್​ಪ್ಲೇ ಮುಕ್ತಾಯ

    MI 58/0 (6)

      

    ಕ್ರೀಸ್​ನಲ್ಲಿ ಇಶಾನ್ ಕಿಶನ್ (29) – ರೋಹಿತ್ ಶರ್ಮಾ (26) ಬ್ಯಾಟಿಂಗ್

  • 16 May 2023 10:08 PM (IST)

    LSG vs MI Live Score, IPL 2023: ಅರ್ಧಶತಕ ಪೂರೈಸಿದ ಮುಂಬೈ

    6ನೇ ಓವರ್​ನಲ್ಲಿ ಅರ್ಧಶತಕ ಪೂರೈಸಿದ ಮುಂಬೈ ಇಂಡಿಯನ್ಸ್

    MI 50/0 (5.2)

      

  • 16 May 2023 10:03 PM (IST)

    LSG vs MI Live Score, IPL 2023: ವಾಟ್ ಎ ಶಾಟ್

    ನವೀನ್ ಉಲ್ ಹಕ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಫ್ಲಿಕ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

    MI 45/0 (4.3)

      

  • 16 May 2023 10:01 PM (IST)

    LSG vs MI Live Score, IPL 2023: ಮುಂಬೈ ಇಂಡಿಯನ್ಸ್ ಉತ್ತಮ ಆರಂಭ

    MI 38/0 (4)

    ಕ್ರೀಸ್​ನಲ್ಲಿ ಇಶಾನ್ ಕಿಶನ್-ರೋಹಿತ್ ಶರ್ಮಾ ಬ್ಯಾಟಿಂಗ್

      

  • 16 May 2023 09:55 PM (IST)

    LSG vs MI Live Score, IPL 2023: ಹಿಟ್​ಮ್ಯಾನ್ ಹಿಟ್

    ಯಶ್ ಠಾಕೂರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

    MI 33/0 (3.1)

      

  • 16 May 2023 09:54 PM (IST)

    LSG vs MI Live Score, IPL 2023: 3 ಓವರ್ ಮುಕ್ತಾಯ

    MI 27/0 (3)

      

    ಇಶಾನ್ ಕಿಶನ್-ರೋಹಿತ್ ಶರ್ಮಾ ಬ್ಯಾಟಿಂಗ್

  • 16 May 2023 09:53 PM (IST)

    LSG vs MI Live Score, IPL 2023: ರಾಕೆಟ್ ಶಾಟ್

    ನವೀನ್ ಉಲ್ ಹಕ್ ಎಸೆತದಲ್ಲಿ ಆಫ್ ಸೈಡ್​ನತ್ತ ರಾಕೆಟ್ ಶಾಟ್ ಬೌಂಡರಿ ಬಾರಿಸಿದ ಇಶಾನ್ ಕಿಶನ್

    MI 27/0 (2.4)

      

  • 16 May 2023 09:49 PM (IST)

    LSG vs MI Live Score, IPL 2023: 2 ಓವರ್ ಮುಕ್ತಾಯ

    MI 20/0 (2)

      

    ಕ್ರೀಸ್​ನಲ್ಲಿ ಇಶಾನ್ ಕಿಶನ್ (17) ಹಾಗೂ ರೋಹಿತ್ ಶರ್ಮಾ (2) ಬ್ಯಾಟಿಂಗ್

  • 16 May 2023 09:45 PM (IST)

    LSG vs MI Live Score, IPL 2023: ಇಶಾನ್-ಶಾನ್​ದಾರ್ ಶಾಟ್

    ಮೊಹ್ಸಿನ್ ಖಾನ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್

    MI 13/0 (1.2)

      

  • 16 May 2023 09:43 PM (IST)

    LSG vs MI Live Score, IPL 2023: ಮೊದಲ ಓವರ್ ಮುಕ್ತಾಯ

    MI 7/0 (1)

      

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ- ಇಶಾನ್ ಕಿಶನ್ ಬ್ಯಾಟಿಂಗ್

  • 16 May 2023 09:41 PM (IST)

    LSG vs MI Live Score, IPL 2023: ಮೊದಲ ಬೌಂಡರಿ

    ಕೃನಾಲ್ ಪಾಂಡ್ಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಇಶಾನ್ ಕಿಶನ್

    MI 4/0 (0.3)

      

  • 16 May 2023 09:40 PM (IST)

    LSG vs MI Live Score, IPL 2023: ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಶುರು

    ಆರಂಭಿಕರು: ಇಶಾನ್ ಕಿಶನ್, ರೋಹಿತ್ ಶರ್ಮಾ

    ಮೊದಲ ಓವರ್: ಕೃನಾಲ್ ಪಾಂಡ್ಯ

  • 16 May 2023 09:28 PM (IST)

    LSG vs MI Live Score, IPL 2023: ಟಾರ್ಗೆಟ್ 178

    ಮುಂಬೈ ಇಂಡಿಯನ್ಸ್​ಗೆ 178 ರನ್​ಗಳ ಗುರಿ ನೀಡಿ ಲಕ್ನೋ ಸೂಪರ್ ಜೈಂಟ್ಸ್

    ಬೌಲಿಂಗ್ ಪಿಚ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೋಯಿನಿಸ್ (89)

    LSG 177/3 (20)

      

  • 16 May 2023 09:25 PM (IST)

    LSG vs MI Live Score, IPL 2023: ಲಕ್ನೋ ಇನಿಂಗ್ಸ್ ಅಂತ್ಯ

    LSG 177/3 (20)

      ಕೇವಲ 47 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್​ನೊಂದಿಗೆ  87 ರನ್​ ಚಚ್ಚಿದ ಮಾರ್ಕಸ್ ಸ್ಟೋಯಿನಿಸ್

  • 16 May 2023 09:22 PM (IST)

    LSG vs MI Live Score, IPL 2023: ಪೂರನ್ ಪವರ್

    ಆಕಾಶ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಬೌಂಡರಿ ಬಾರಿಸಿದ ಪೂರನ್

    LSG 169/3 (19.4)

      

  • 16 May 2023 09:17 PM (IST)

    LSG vs MI Live Score, IPL 2023: ಕೊನೆಯ ಓವರ್ ಬಾಕಿ

    LSG 162/3 (19)

     ಕ್ರೀಸ್​ನಲ್ಲಿ ಮಾರ್ಕಸ್ ಸ್ಟೋಯಿನಿಸ್ ಹಾಗೂ ಪೂರನ್ ಬ್ಯಾಟಿಂಗ್

  • 16 May 2023 09:16 PM (IST)

    LSG vs MI Live Score, IPL 2023: ಮಾರ್ಕಸ್ ಪವರ್

    ಜೇಸನ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್  ಸಿಕ್ಸ್ ಸಿಡಿಸಿದ ಮಾರ್ಕಸ್ ಸ್ಟೋಯಿನಿಸ್

    LSG 162/3 (18.5)

      

      

  • 16 May 2023 09:12 PM (IST)

    LSG vs MI Live Score, IPL 2023: 24 ರನ್​

    ಕ್ರಿಸ್ ಜೋರ್ಡನ್ ಓವರ್​ನಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 3 ಪೋರ್​ನೊಂದಿಗೆ 24 ರನ್ ಚಚ್ಚಿದ ಮಾರ್ಕಸ್ ಸ್ಟೋಯಿನಿಸ್

    LSG 147/3 (18)

      

  • 16 May 2023 09:11 PM (IST)

    LSG vs MI Live Score, IPL 2023: ಸ್ಟೋಯಿನಿಸ್-ಸಿಕ್ಸ್

    ಕ್ರಿಸ್ ಜೋರ್ಡನ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಸ್ಟೋಯಿನಿಸ್

    LSG 143/3 (17.5)

      

  • 16 May 2023 09:10 PM (IST)

    LSG vs MI Live Score, IPL 2023: ಮತ್ತೊಂದು ಫೋರ್

    ಜೋರ್ಡನ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಸ್ಟೋಯಿನಿಸ್

    LSG 137/3 (17.4)

      

  • 16 May 2023 09:09 PM (IST)

    LSG vs MI Live Score, IPL 2023: ಬ್ಯೂಟಿಫುಲ್ ಶಾಟ್

    ಜೋರ್ಡನ್ ಎಸೆತದಲ್ಲಿ ಲೆಗ್ ಸೈಡ್​ನಲ್ಲಿ ಫೋರ್ ಬಾರಿಸಿದ ಸ್ಟೋಯಿನಿಸ್

    LSG 133/3 (17.3)

      

  • 16 May 2023 09:08 PM (IST)

    LSG vs MI Live Score, IPL 2023: ಸ್ಟೋಯಿನಿಸ್ ಅರ್ಧಶತಕ

    ಜೋರ್ಡನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸ್ಟೋಯಿನಿಸ್

    LSG 129/3 (17.1)

      

  • 16 May 2023 09:04 PM (IST)

    LSG vs MI Live Score, IPL 2023: ಹೊರನಡೆದ ಕೃನಾಲ್ ಪಾಂಡ್ಯ

    ಗಾಯದ ಕಾರಣ ಹೊರನಡೆದ ಕೃನಾಲ್ ಪಾಂಡ್ಯ (49)

    LSG 120/3 (16.3)

     ಕ್ರೀಸ್​ಗೆ ಆಗಮಿಸಿದ ನಿಕೋಲಸ್ ಪೂರನ್

  • 16 May 2023 08:57 PM (IST)

    LSG vs MI Live Score, IPL 2023: ಮಾರ್ಕಸ್ ಸಿಕ್ಸ್

    ಕ್ಯಾಮರೋನ್ ಗ್ರೀನ್ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸ್ಟೋಯಿನಿಸ್

    LSG 117/3 (15.5)

      

  • 16 May 2023 08:53 PM (IST)

    LSG vs MI Live Score, IPL 2023: 15 ಓವರ್ ಮುಕ್ತಾಯ

    LSG 108/3 (15)

    ಕ್ರೀಸ್​ನಲ್ಲಿ ಕೃನಾಲ್ ಪಾಂಡ್ಯ (48) – ಸ್ಟೋಯಿನಿಸ್ (34) ಬ್ಯಾಟಿಂಗ್

  • 16 May 2023 08:42 PM (IST)

    LSG vs MI Live Score, IPL 2023: ಶತಕ ಪೂರೈಸಿದ ಲಕ್ನೋ ಸೂಪರ್ ಜೈಂಟ್ಸ್

    14 ಓವರ್​ಗಳಲ್ಲಿ ಶತಕ ಪೂರೈಸಿದ ಲಕ್ನೋ ಸೂಪರ್ ಜೈಂಟ್ಸ್

    LSG 100/3 (14)

      

    ಕ್ರೀಸ್​ನಲ್ಲಿ ಕೃನಾಲ್ ಪಾಂಡ್ಯ (44) – ಸ್ಟೋಯಿನಿಸ್ (32) ಬ್ಯಾಟಿಂಗ್

  • 16 May 2023 08:37 PM (IST)

    LSG vs MI Live Score, IPL 2023: 13 ಓವರ್ ಮುಕ್ತಾಯ

    LSG 95/3 (13)

      

    ಕ್ರೀಸ್​ನಲ್ಲಿ ಕೃನಾಲ್ ಪಾಂಡ್ಯ (43) ಹಾಗೂ ಮಾರ್ಕಸ್ ಸ್ಟೋಯಿನಿಸ್ (28) ಬ್ಯಾಟಿಂಗ್

  • 16 May 2023 08:29 PM (IST)

    LSG vs MI Live Score, IPL 2023: ಆಕರ್ಷಕ ಫೋರ್

    ಕ್ಯಾಮರೋನ್ ಗ್ರೀನ್​ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಸ್ಟೋಯಿನಿಸ್

    LSG 84/3 (11.4)

      

  • 16 May 2023 08:27 PM (IST)

    LSG vs MI Live Score, IPL 2023: ಲಕ್ನೋ ಉತ್ತಮ ಬ್ಯಾಟಿಂಗ್

    11 ಓವರ್ ಮುಕ್ತಾಯ

    LSG 78/3 (11)

     ಕ್ರೀಸ್​ನಲ್ಲಿ ಸ್ಟೋಯಿನಿಸ್ ಹಾಗೂ ಕೃನಾಲ್ ಪಾಂಡ್ಯ ಬ್ಯಾಟಿಂಗ್

  • 16 May 2023 08:14 PM (IST)

    LSG vs MI Live Score, IPL 2023: 9 ಓವರ್ ಮುಕ್ತಾಯ

    LSG 63/3 (9)

      

    ಕ್ರೀಸ್​ನಲ್ಲಿ ಮಾರ್ಕಸ್ ಸ್ಟೋಯಿನಿಸ್ (17)-ಕೃನಾಲ್ ಪಾಂಡ್ಯ (23) ಬ್ಯಾಟಿಂಗ್

  • 16 May 2023 08:12 PM (IST)

    LSG vs MI Live Score, IPL 2023: ಸ್ಟೋಯಿನಿಸ್ ಅಬ್ಬರ

    ಪಿಯೂಷ್ ಚಾವ್ಲಾ ಎಸೆತದಲ್ಲಿ ಡೀಪ್ ಸ್ಕ್ವೇರ್​ನತ್ತ ಸಿಕ್ಸ್ ಸಿಡಿಸಿದ ಸ್ಟೋಯಿನಿಸ್

    LSG 61/3 (8.4)

      

  • 16 May 2023 08:07 PM (IST)

    LSG vs MI Live Score, IPL 2023: ಭರ್ಜರಿ ಸಿಕ್ಸ್

    ಶೋಕೀನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಾರ್ಕಸ್ ಸ್ಟೋಯಿನಿಸ್

    LSG 46/3 (7.3)

      

  • 16 May 2023 08:01 PM (IST)

    LSG vs MI Live Score, IPL 2023: ಲಕ್ನೋ ಸೂಪರ್ ಜೈಂಟ್ಸ್ 3ನೇ ವಿಕೆಟ್ ಪತನ

    ಪಿಯೂಷ್ ಚಾವ್ಲಾ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಕ್ವಿಂಟನ್ ಡಿಕಾಕ್ (16)

    LSG 35/3 (6.1)

      

  • 16 May 2023 07:53 PM (IST)

    LSG vs MI Live Score, IPL 2023: ಡಿಕಾಕ್ ಬ್ಯೂಟಿ

    ಕ್ರಿಸ್ ಜೋರ್ಡಾನ್ ಎಸೆತದಲ್ಲಿ ಲಾಂಗ್ ಆನ್​ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ಡಿಕಾಕ್

    LSG 30/2 (4.3)

      

  • 16 May 2023 07:48 PM (IST)

    LSG vs MI Live Score, IPL 2023: ಆಕರ್ಷಕ ಬೌಂಡರಿ

    ಹೃತಿಕ್ ಶೋಕಿನ್ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಆಕರ್ಷಕ ಫೋರ್ ಬಾರಿಸಿದ ಕೃನಾಲ್ ಪಾಂಡ್ಯ

    LSG 21/2 (3.1)

     

  • 16 May 2023 07:43 PM (IST)

    LSG vs MI Live Score, IPL 2023: ಲಕ್ನೋ ಸೂಪರ್ ಜೈಂಟ್ಸ್ 2ನೇ ವಿಕೆಟ್ ಪತನ

    ಜೇಸನ್ ಬೆಹ್ರೆನ್ಡಾರ್ಫ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಸುಲಭ ಕ್ಯಾಚ್ ನೀಡಿದ ಪ್ರೇರಕ್ ಮಂಕಡ್ (0)

    ಮುಂಬೈ ಇಂಡಿಯನ್ಸ್​ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್

    LSG 12/2 (2.2)

     

  • 16 May 2023 07:41 PM (IST)

    LSG vs MI Live Score, IPL 2023: ಲಕ್ನೋ ಸೂಪರ್ ಜೈಂಟ್ಸ್ ಮೊದಲ ವಿಕೆಟ್ ಪತನ

    ಜೇಸನ್ ಬೆಹ್ರೆನ್ಡಾರ್ಫ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ದೀಪಕ್ ಹೂಡಾ (5)

    LSG 12/1 (2.1)

     

  • 16 May 2023 07:40 PM (IST)

    LSG vs MI Live Score, IPL 2023: ಭರ್ಜರಿ ಸಿಕ್ಸ್

    ಜೋರ್ಡಾನ್ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್

    LSG 12/0 (2)

     

  • 16 May 2023 07:36 PM (IST)

    LSG vs MI Live Score, IPL 2023: ಮೊದಲ ಓವರ್ ಮುಕ್ತಾಯ

    LSG 3/0 (1)

    ಕ್ರೀಸ್​ನಲ್ಲಿ ದೀಪಕ್ ಹೂಡಾ-ಡಿಕಾಕ್ ಬ್ಯಾಟಿಂಗ್

     

  • 16 May 2023 07:32 PM (IST)

    LSG vs MI Live Score, IPL 2023: ಲಕ್ನೋ ಸೂಪರ್ ಜೈಂಟ್ಸ್ ಇನಿಂಗ್ಸ್ ಆರಂಭ

    ಆರಂಭಿಕರು- ದೀಪಕ್ ಹೂಡಾ, ಕ್ವಿಂಟನ್ ಡಿಕಾಕ್

    ಮೊದಲ ಓವರ್: ಜೇಸನ್ ಬೆಹ್ರೆನ್ಡಾರ್ಫ್

  • 16 May 2023 07:12 PM (IST)

    LSG vs MI Live Score, IPL 2023: ಟಾಸ್ ವಿಡಿಯೋ

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 16 May 2023 07:11 PM (IST)

    LSG vs MI Live Score, IPL 2023: ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI)

    ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ(ನಾಯಕ), ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್

  • 16 May 2023 07:09 PM (IST)

    LSG vs MI Live Score, IPL 2023: ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI)

    ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಾಲ್

  • 16 May 2023 07:02 PM (IST)

    LSG vs MI Live Score, IPL 2023: ಟಾಸ್ ಗೆದ್ದ ಮುಂಬೈ ಇಂಡಿಯನ್ಸ್​

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 16 May 2023 06:34 PM (IST)

    LSG vs MI Live Score, IPL 2023: ಉಭಯ ತಂಡಗಳಿಗೂ ನಿರ್ಣಾಯಕ ಪಂದ್ಯ

    ಟಾಸ್ ಪ್ರಕ್ರಿಯೆ: 7 ಗಂಟೆಗೆ

    ಪಂದ್ಯ ಶುರು: 7.30 ಕ್ಕೆ

    ಸ್ಥಳ: ಏಕಾನ ಸ್ಟೇಡಿಯಂ-ಲಕ್ನೋ

  • Published On - May 16,2023 6:32 PM

    Follow us
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
    ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
    ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
    ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
    ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು