
ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ವಜಾಗೊಳಿಸಿದ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಉಂಟಾಗಿದೆ. ಕೆಲವು ಮಾಜಿ ಕ್ರಿಕೆಟಿಗರು ಇದನ್ನು ಸರಿಯಾದ ನಿರ್ಧಾರ ಎಂದು ಕರೆಯುತ್ತಿದ್ದರೆ, ಕೆಲವರು ವಿರಾಟ್ ಕೊಹ್ಲಿಯನ್ನು ತೆಗೆದುಹಾಕುವುದು ಸರಿಯಾದ ನಿರ್ಧಾರವಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 1983 ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಮಾಜಿ ವೇಗದ ಬೌಲರ್ ಮದನ್ ಲಾಲ್ ಕೂಡ ವಿರಾಟ್ ಕೊಹ್ಲಿಯಿಂದ ಏಕದಿನ ನಾಯಕತ್ವವನ್ನು ಕಿತ್ತುಕೊಳ್ಳುವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಎತ್ತಿದ್ದಾರೆ. ತಂಡವನ್ನು ರಚಿಸುವುದು ತುಂಬಾ ಕಷ್ಟ ಆದರೆ ತಂಡವನ್ನು ಮುರಿಯುವುದು ತುಂಬಾ ಸುಲಭ ಎಂದು ಹೇಳುವ ಮೂಲಕ ಬಿಸಿಸಿಐಗೆ ಮಾತಿನ ಚಡಿ ಏಟು ನೀಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ವಿಶೇಷ ಸಂವಾದದಲ್ಲಿ ಮದನ್ ಲಾಲ್, ಆಯ್ಕೆಗಾರರ ಆಲೋಚನೆ ಏನು ಎಂದು ನನಗೆ ತಿಳಿದಿಲ್ಲ. ವಿರಾಟ್ ಕೊಹ್ಲಿ ಫಲಿತಾಂಶಗಳನ್ನು ನೀಡುತ್ತಿದ್ದಾರೆ, ಅವರನ್ನು ಏಕೆ ತೆಗೆದುಹಾಕಲಾಯಿತು? ಎಂದು ಪ್ರಶ್ನಿಸಿದ್ದಾರೆ. ಅವರು ಟಿ20 ಕ್ರಿಕೆಟ್‌ನಿಂದ ನಾಯಕತ್ವವನ್ನು ಏಕೆ ತೊರೆದರು ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಹೆಚ್ಚು ಕ್ರಿಕೆಟ್ ಆಡುತ್ತಿದ್ದರಿಂದ ವಿರಾಟ್ ODI ಮತ್ತು ಟೆಸ್ಟ್‌ಗಳ ಮೇಲೆ ಕೇಂದ್ರೀಕರಿಸಲು ಬಯಸಿದ್ದರು. ಆದರೆ ನೀವು ಯಶಸ್ವಿಯಾದಾಗಲೂ ನಿಮ್ಮನ್ನು ನಾಯಕತ್ವದಿಂದ ತೆಗೆದುಹಾಕುವುದು ನನ್ನ ಗ್ರಹಿಕೆಗೆ ಮೀರಿದೆ ಎಂದಿದ್ದಾರೆ.
2023ರ ವಿಶ್ವಕಪ್‌ವರೆಗೆ ವಿರಾಟ್‌ಗೆ ಅವಕಾಶ ಸಿಗಬೇಕಿತ್ತು
ವಿರಾಟ್ ಕೊಹ್ಲಿ 2023ರ ವಿಶ್ವಕಪ್ ವರೆಗೆ ನಾಯಕತ್ವಕ್ಕೆ ಅರ್ಹರು ಎಂದು ಮದನ್ ಲಾಲ್ ಹೇಳಿದ್ದಾರೆ. ಮದನ್ ಲಾಲ್, ‘2023ರ ವಿಶ್ವಕಪ್‌ವರೆಗೆ ವಿರಾಟ್ ಕೊಹ್ಲಿ ನಾಯಕರಾಗುತ್ತಾರೆ ಎಂದು ನಾನು ಭಾವಿಸಿದ್ದೆ. ತಂಡವನ್ನು ಕಟ್ಟುವುದು ತುಂಬಾ ಕಷ್ಟ ಆದರೆ ಅದನ್ನು ಮುರಿಯುವುದು ಸುಲಭ. ಧೋನಿ ಟೆಸ್ಟ್ ನಾಯಕತ್ವ ತೊರೆದಾಗ ಏಕದಿನ ಮತ್ತು ಟಿ20 ತಂಡದ ನಾಯಕತ್ವ ವಹಿಸಿದ್ದರು, ಹಾಗಾದರೆ ಸಮಸ್ಯೆ ಏನಾಗುತ್ತಿತ್ತು ಎಂದು ಮದನ್ ಲಾಲ್ ಹೇಳಿದ್ದಾರೆ. ಮದನ್‌ಲಾಲ್, ‘ಯಾವ ಗೊಂದಲ ಸೃಷ್ಟಿಯಾಗುತ್ತದೋ ಅರ್ಥವಾಗುತ್ತಿಲ್ಲ. ಪ್ರತಿಯೊಬ್ಬ ನಾಯಕನ ನಾಯಕತ್ವದ ವಿಭಿನ್ನ ವಿಧಾನವಿದೆ. ಟೆಸ್ಟ್ ಮತ್ತು ಸೀಮಿತ ಸ್ವರೂಪಗಳಲ್ಲಿ ವಿಭಿನ್ನ ನಾಯಕತ್ವವಿದೆ. ವಿರಾಟ್-ರೋಹಿತ್ ತಮ್ಮದೇ ಆದ ಶೈಲಿಯನ್ನು ಹೊಂದಿದ್ದಾರೆ. ಧೋನಿ ವಿಭಿನ್ನ ಶೈಲಿಯನ್ನು ಹೊಂದಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ವೃತ್ತಿಪರ ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಬೇಕೇ ಹೊರತು ಬೇರೇನೂ ಅಲ್ಲ ಎಂದಿದ್ದಾರೆ.