AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಶಸ್ ಬಗ್ಗೆ ಕಾಮೆಂಟ್ ಮಾಡಲು ಟೈಮಿಲ್ಲ ಮಾರಾಯಾ, ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದೀನಿ ಅಂದರು ವಾಸಿಮ್ ಜಾಫರ್

ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವೆ ಆಶಸ್ ಸರಣಿಯ ಮೊದಲ ಟೆಸ್ಟ್ ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ಆರಂಭಗೊಂಡು ಮೂರು ದಿನ ಕಳೆದರೂ ಜಾಫರ್ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ.

ಆ್ಯಶಸ್ ಬಗ್ಗೆ ಕಾಮೆಂಟ್ ಮಾಡಲು ಟೈಮಿಲ್ಲ ಮಾರಾಯಾ, ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದೀನಿ ಅಂದರು ವಾಸಿಮ್ ಜಾಫರ್
ವಾಸಿಮ್​ ಜಾಫರ್
TV9 Web
| Edited By: |

Updated on:Jan 10, 2022 | 12:01 PM

Share

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವರಿಗೆ ಭಾರತದ ಮಾಜಿ ಆರಂಭ ಆಟಗಾರ ವಾಸಿಮ್ ಜಾಫರ್ ಅವರ ವಿನೋದಮಯ, ಕೀಟಲೆ ಮಾಡುವ ಮತ್ತು ಬೇರೆಯವರ ಕಾಲೆಳೆಯುವ ಟ್ವೀಟ್ ಮತ್ತು ಮೀಮ್ ಗಳ ಬಗ್ಗೆ ಗೊತ್ತಿರುತ್ತದೆ. ಕ್ರಿಕೆಟ್ ಪಂದ್ಯಗಳು ನಡೆಯುವಾಗ ಸರಣಿಗಳು ಜಾರಿಯಲ್ಲಿರುವಾಗ ಅವರು ಮನರಂಜನೆ ಒದಗಿಸುವ ಟ್ವೀಟ್​ಗಳನ್ನು ಮಾಡುತ್ತಿರುತ್ತಾರೆ. ಆದರೆ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವೆ ಆಶಸ್ ಸರಣಿಯ ಮೊದಲ ಟೆಸ್ಟ್ ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ಆರಂಭಗೊಂಡು ಮೂರು ದಿನ ಕಳೆದರೂ ಜಾಫರ್ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ. ಯಾಕೆ ಮಾರಾಯ್ರೇ ಹೀಗೆ ಅಂತ ಅವರ ಒಬ್ಬ ಅಭಿಮಾನಿ ಕೇಳಿಯೇ ಬಿಟ್ಟಿದ್ದಾರೆ. ಅದಕ್ಕೆ ಜಾಫರ್ ಎಂದಿನಂತೆ ಹಾಸ್ಯದ ಲಹರಿಯಲ್ಲದಿದ್ದರೂ ಬಹಳ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

‘ಈಗ ಜಾರಿಯಲ್ಲಿರುವ ವಿಜಯ್ ಹಜಾರೆ ಟ್ರೋಫಿ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ,’ ಅಂತ ಜಾಫರ್ ಹೇಳಿದ್ದಾರೆ. ಅದು ನಿಜ. ಜುಲೈನಲ್ಲಿ ಒಡಿಷಾದ ಕೋಚ್ ಆಗಿ ನೇಮಕಗೊಂಡಿರುವ ಜಾಫರ್ ಈ ಟೂರ್ನಮೆಂಟ್ ಮೇಲೆ ಸಹಜವಾಗೇ ಹೆಚ್ಚು ಗಮನ ಹರಿಸಬೇಕಿದೆ.

ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಒಡಿಷಾ ಒಂದು ದುರ್ಬಲ ತಂಡವಾದರೂ ಈಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಎಲೀಟ್ ಎ ಗುಂಪಿನಲ್ಲಿರುವ ಅದು ತಾನಾಡಿರುವ ಮೊದಲ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಗ್ರೂಪ್​ನಲ್ಲಿ ಅದು  ವಿದರ್ಭ ನಂತರ ಎರಡನೇ ಸ್ಥಾನದಲ್ಲಿದೆ.

ಬ್ರಿಸ್ಬೇನ್ ಟೆಸ್ಟ್ ಬಗ್ಗೆ ಮಾತಾಡುವುದಾದರೆ, ಶುಕ್ರವಾರ ಮೂರನೇ ದಿನದಾಟ ಕೊನೆಗೊಂಡಾಗ ಪಂದ್ಯ ಬಹಳ ಕುತೂಹಲಕಾರಿ ಘಟ್ಟ ತಲುಪಿದೆ. ಆಸ್ಟ್ರೇಲಿಯ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 425 ಮೊತ್ತಕ್ಕೆ ಆಲೌಟ್ ಆಗಿ 278 ರನ್​ಗಳ ಭಾರಿ ಲೀಡ್ ಸಂಪಾದಿಸಿತು. ಎರಡನೇ ದಿನದಾಟ ಕೊನೆಗೊಂಡಾಗ 112 ರನ್ಗಳೊಂದಿಗೆ ಅಡುತ್ತಿದ್ದ ಟ್ರಾವಿಸ್ ಹೆಡ್ ಅಂತಿಮವಾಗಿ 152 ರನ್ ಗಳಿಸಿ ಔಟಾದರು.

ಮೊದಲ ದಿನ ಕೇವಲ 147 ಮೊತ್ತಕ್ಕೆ ಔಟಾಗಿದ್ದ ಪ್ರವಾಸಿ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಹೋರಾಟ ನಡೆಸುತ್ತಿದೆ. 278 ರನ್​ಗಳ ಲೀಡ್ ಬಿಟ್ಟುಕೊಟ್ಡರೂ ದಿನದಾಟದ ಅಂತ್ಯದಲ್ಲಿ ಅದು 2 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿತ್ತು. ನಾಯಕ ಜೋ ರೂಟ್ 86 ಮತ್ತು ಎಡಗೈ ಆಟಗಾರ ದಾವೀದ ಮಲಾನ್ 80 ರನ್ ಗಳಿಸಿ ಕ್ರೀಸ್ ಮೇಲಿದ್ದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರ ನಡುವೆ 159 ರನ್ ಬಂದಿವೆ.

ಈ ವರ್ಷ ಅಪ್ರತಿಮ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿರುವ ರೂಟ್ ಶುಕ್ರವಾರದಂದು ಕ್ಯಾಲೆಂಡರ್ ವರ್ಷದಲ್ಲಿ 1500 ರನ್ ದಾಟಿದ ಹಿರಿಮೆಗೆ ಪಾತ್ರರಾದರು. ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಮೈಕೆಲ್ ವಾನ್ (1481, 2002) ದಾಖಲೆಯನ್ನು ಅವರು ಉತ್ತಮಪಡಿಸಿದರು. ಈ ವರ್ಷ ರೂಟ್ ಇದುವರೆಗೆ 1541 ರನ್ ಗಳಿಸಿದ್ದಾರೆ.

ಇದನ್ನೂ ಓದಿ:  India vs South Africa: ಟೀಮ್ ಇಂಡಿಯಾ ಉಳಿದುಕೊಳ್ಳಲು ಕ್ರಿಕೆಟ್ ಸೌತ್ ಆಫ್ರಿಕಾ ಮಾಡಿದ ಮಾಸ್ಟರ್ ಪ್ಲಾನ್ ಏನು ನೋಡಿ

Published On - 1:08 am, Sat, 11 December 21