Ashes 2021: ರೋಚಕ ಘಟ್ಟದತ್ತ ಆ್ಯಶಸ್ ಮೊದಲ ಟೆಸ್ಟ್: ಅಲ್ಪ ಮುನ್ನಡೆ ಸಾಧಿಸಿದ ಇಂಗ್ಲೆಂಡ್
Australia vs England: ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಹಸೀಬ್ ಹಮ್ಮದ್ (27) ಹಾಗೂ ರಾರಿ ಬರ್ನ್ಸ್ (13) ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ಜೊತೆಯಾದ ಡೇವಿಡ್ ಮಲನ್ ಹಾಗೂ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾಗಿ ನಿಂತರು.

ಬ್ರಿಸ್ಬೇನ್ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಆಸ್ಟ್ರೇಲಿಯಾ- ಇಂಗ್ಲೆಂಡ್ ಡನುವಣ 2021-22ನೇ ಸಾಲಿನ ಆ್ಯಶಸ್ ಸರಣಿಯ (Ashes Series) ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಉತ್ತಮ ಕಮ್ಬ್ಯಾಕ್ ಮಾಡಿದ್ದು, ಅಲ್ಪ ಮುನ್ನಡೆ ಪಡೆದುಕೊಂಡಿದೆ. ಆದರೆ, ಕೈನಲ್ಲಿ ವಿಕೆಟ್ಗಳು ಇಲ್ಲದ ಕಾರಣ ಗೆಲುವು ಸಾಧಿಸುವುದು ಕಷ್ಟ. ಇಂಗ್ಲೆಂಡ್ ತಂಡವನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 147 ರನ್ಗೆ ಆಲೌಟ್ ಮಾಡಿ ಬ್ಯಾಟಿಂಗ್ ಶುರು ಮಾಡಿದ ಆಸ್ಟ್ರೇಲಿಯಾ ಉತ್ತಮ ಮೊತ್ತವನ್ನೇ ಕಲೆಹಾಕಿತು. ಟ್ರಾವಿಸ್ ಹೆಡ್ (Travis Head) ಅವರ ಅಮೋಘ ಶತಕ ಹಾಗೂ ಡೇವಿಡ್ ವಾರ್ನರ್ (David Warner) ಮತ್ತು ಮಾರ್ನಸ್ ಲ್ಯಾಬುಶೇನ್ ಅವರ ಅರ್ಧಶತಕದ ನೆರವಿನಿಂದ 425 ರನ್ ಗಳಿಸಿ ಅತ್ಯುತ್ತಮ ಮುನ್ನಡೆ ಪಡೆದುಕೊಂಡಿತು.
ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಹಸೀಬ್ ಹಮ್ಮದ್ (27) ಹಾಗೂ ರಾರಿ ಬರ್ನ್ಸ್ (13) ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ಮೂರನೇ ವಿಕೆಟ್ಗೆ ಜೊತೆಯಾದ ಡೇವಿಡ್ ಮಲನ್ ಹಾಗೂ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾಗಿ ನಿಂತರು. ಇಬ್ಬರೂ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಮಲ್ 195 ಎಸೆತಗಳಲ್ಲಿ 82 ರನ್ಗೆ ಔಟ್ ಆದರೆ, ರೂಟ್ 165 ಎಸೆತಗಳಲ್ಲಿ 89 ರನ್ಗೆ ನಿರ್ಗಮಿಸಿದರು. ಇವರಿಬ್ಬರ ನಿರ್ಗಮನದ ಬಳಿಕ ಇಂಗ್ಲೆಂಡ್ ಮತ್ತೆ ಕುಸಿತ ಕಂಡಿತು. ಬೆನ್ ಸ್ಟೋಕ್ಸ್ 14, ಓಲಿ ಪೊಪ್ 4 ಮತ್ತು ಜೋಸ್ ಬಟ್ಲರ್ ಕೇವಲ 23 ರನ್ ಕಲೆಹಾಕಿದರು.
ಈ ಪಂದ್ಯದಲ್ಲಿ ಮೊದಲ ದಿನ ಇಂಗ್ಲೆಂಡ್ ತಂಡ ಪ್ಯಾಟ್ ಕಮಿನ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ 147 ರನ್ಗೆ ಸರ್ವಪತನ ಕಂಡಿತು. ಗುರುವಾರ ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಲ್ಲೇ ಒಂದು ವಿಕೆಟ್ ಕಳೆದುಕೊಂಡಿತಾದರು ಎರಡನೇ ವಿಕೆಟ್ಗೆ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬುಶೇನ್ ಭರ್ಜರಿ ಜೊತೆಯಾಟ ಆಡಿದರು. ಈ ಜೋಡಿ 156 ರನ್ ಪೇರಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ವಾರ್ನರ್ ಕೇವಲ 6 ರನ್ನಿನಿಂದ ಸೆಂಚುರಿ ತಪ್ಪಿಸಿಕೊಂಡರು. 176 ಎಸೆತಗಳ ಈ ಜವಾಬ್ದಾರಿಯುತ ಆಟದ ವೇಳೆ 11 ಬೌಂಡರಿ, 2 ಸಿಕ್ಸರ್ ಸಿಡಿದಿತ್ತು. ಲ್ಯಾಬುಶೇನ್ ಗಳಿಕೆ 117 ಎಸೆತಗಳಿಂದ 74 ರನ್ (6 ಬೌಂಡರಿ, 2 ಸಿಕ್ಸರ್).
ಆದರೆ ಸ್ಟೀವನ್ ಸ್ಮಿತ್ (12), ಕ್ಯಾಮರಾನ್ ಗ್ರೀನ್ (0). ಅಲೆಕ್ಸ್ ಕ್ಯಾರಿ (12), ನಾಯಕ ಪ್ಯಾಟ್ ಕಮಿನ್ಸ್ (12) ಬೇಗನೇ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಟ್ರಾವಿಸ್ ಹೆಡ್ ಇಂಗ್ಲೆಂಡಿಗೆ ತಲೆನೋವಾಗಿ ಪರಿಣಮಿಸಿದರು. ಬರೋಬ್ಬರಿ 2 ವರ್ಷಗಳ ಬಳಿಕ ಮೊದಲ ಶತಕ ಸಿಡಿಸಿದ ಇವರು ತಂಡಕ್ಕೆ ಆಸರೆಯಾಗಿ ನಿಂತರು. 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಹೆಡ್ 85 ಎಸೆತಗಳಲ್ಲಿ ಶತಕ ಪೂರೈಸಿದರು.
ಆದರೆ, ಮತ್ತೊಂತೆಡೆ ಇವರಿಗೆ ಮಿಚೆಲ್ ಸ್ಟಾರ್ಕ್ (64 ಎಸೆತ, 35 ರನ್) ಕೊಂಚ ಹೊತ್ತು ಸಾಥ್ ನೀಡುದ್ದು ಬಿಟ್ಟರೆ ಮತ್ಯಾವ ಬ್ಯಾಟರ್ಗಳು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಪರಿಣಾಮ ಕೊನೇಯದಾಗಿ ಹೆಡ್ 148 ಎಸೆತಗಳಲ್ಲಿ 14 ಬೌಂಡರಿ, 4 ಸಿಕ್ಸರ್ನೊಂದಿಗೆ 152 ರನ್ ಸಿಡಿಸಿ ಔಟ್ ಆಗುವ ಮೂಲಕ ಆಸ್ಟ್ರೇಲಿಯಾ 425 ರನ್ಗೆ ಆಲೌಟ್ ಆಯಿತು. 260 ರನ್ಗಳ ಮುನ್ನಡೆ ಪಡೆದುಕೊಂಡಿತು. ಇಂಗ್ಲೆಂಡ್ ಪರ ರಾಬಿನ್ಸನ್ ಮತ್ತು ಮಾರ್ಕ್ ವುಡ್ ತಲಾ 3 ವಿಕೆಟ್ ಕಿತ್ತರೆ, ಕ್ರಿಸ್ ವೋಕ್ಸ್ 2 ವಿಕೆಟ್ ಪಡೆದರು.
Virat kohli: ಜೊತೆಗಿದ್ದರೂ ಒಂದು ಮಾತು ಕೂಡ ತಿಳಿಸಲಿಲ್ಲ! ಕೊಹ್ಲಿಗೆ ದ್ರೋಹ ಬಗೆಯಿತಾ ಆಯ್ಕೆ ಮಂಡಳಿ?
(Ashes 2021 Australia vs England 1st Test Australia Regain Control At Gabba With Quick Wickets)
