India vs South Africa: ಟೀಮ್ ಇಂಡಿಯಾ ಉಳಿದುಕೊಳ್ಳಲು ಕ್ರಿಕೆಟ್ ಸೌತ್ ಆಫ್ರಿಕಾ ಮಾಡಿದ ಮಾಸ್ಟರ್ ಪ್ಲಾನ್ ಏನು ನೋಡಿ
India Tour of South Africa: ಭಾರತ- ದಕ್ಷಿಣ ಆಫ್ರಿಕಾ ಸರಣಿ ಅನೇಕ ವಿಘ್ನಗಳ ನಡುವೆ ನಡೆಯುತ್ತಿದೆ. ಆಫ್ರಿಕಾನ್ನರ ನಾಡಿನಲ್ಲಿ ಒಮಿಕ್ರೋನ್ ವೈರಸ್ ತಾಂಡವವಾಡುತ್ತಿದೆ. ಹಾಗಂತ ಕ್ರಿಕೆಟ್ ಸೌತ್ ಆಫ್ರಿಕಾ ಸುಮ್ಮನೆ ಕೂತಿಲ್ಲ. ಪ್ರವಾಸಿ ಟೀಮ್ ಇಂಡಿಯಾ ಆಟಗಾರರಿಗೆ ಆಫ್ರಿಕಾ ಭರ್ಜರಿ ವ್ಯವಸ್ಥೆಯನ್ನೇ ಮಾಡಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಜಯಿಸಿ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ ಸದ್ಯದಲ್ಲೇ ದಕ್ಷಿಣ ಆಫ್ರಿಕಾ (India vs South Africa) ಪ್ರವಾಸ ಬೆಳೆಸಲಿದೆ. ಇಲ್ಲಿ ಮೂರು ಪಂದ್ಯಗಳ ಟೆಸ್ಟ್ ಮತ್ತು ಏಕದಿನ ಸರಣಿ ಆಡಲಿದ್ದು, ಡಿಸೆಂಬರ್ 26 ರಿಂದ ಸೆಂಚೂರಿಯನ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಈ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ (Team India) ಬಹುದೊಡ್ಡ ಬದಲಾವಣೆಯಾಗಿದೆ. ವಿರಾಟ್ ಕೊಹ್ಲಿ (Virat Kohli) ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ (Rohit Sharma) ಅವರಿಗೆ ಪಟ್ಟ ನೀಡಲಾಗಿದೆ. ಇತ್ತ ಟೆಸ್ಟ್ ಕ್ರಿಕೆಟ್ನಲ್ಲಿ ಅಜಿಂಕ್ಯಾ ರಹಾನೆ (Ajinkya Rahane) ಅವರನ್ನು ಉಪನಾಯಕ ಸ್ಥಾನದಿಂದ ಕೈಬಿಟ್ಟು ರೋಹಿತ್ಗೆ ಜವಾಬ್ದಾರಿ ನೀಡಲಾಗಿದೆ. ಹೀಗೆ ಹೊಸ ಹುರುಪಿನೊಂದಿಗೆ ಟೀಮ್ ಇಂಡಿಯಾ ಇದೇ ಡಿಸೆಂಬರ್ 17 ರಂದು ಆಫ್ರಿಕಾ ಫ್ಲೈಟ್ ಏರಲಿದೆಯಂತೆ. ಭಾರತೀಯ ಆಟಗಾರರಿಗೆ ಕ್ರಿಕೆಟ್ ಸೌತ್ ಆಫ್ರಿಕಾ (Cricket South Africa) ಅಲ್ಲಿ ವಿಶೇಷ ವ್ಯವಸ್ಥೆಯನ್ನು ಕೂಡ ಮಾಡಿದೆ.
ಹೌದು, ಭಾರತ- ದಕ್ಷಿಣ ಆಫ್ರಿಕಾ ಸರಣಿ ಅನೇಕ ವಿಘ್ನಗಳ ನಡುವೆ ನಡೆಯುತ್ತಿದೆ. ಆಫ್ರಿಕಾನ್ನರ ನಾಡಿನಲ್ಲಿ ಒಮಿಕ್ರೋನ್ ವೈರಸ್ ತಾಂಡವವಾಡುತ್ತಿದ್ದು, ಇದರ ನಡುವೆ ಭಾರತ ಹರಿಣಗಳ ನಾಡಿಗೆ ಪ್ರವಾಸ ಬೆಳೆಸುತ್ತಿದೆ. ಹಾಗಂತ ಕ್ರಿಕೆಟ್ ಸೌತ್ ಆಫ್ರಿಕಾ ಸುಮ್ಮನೆ ಕೂತಿಲ್ಲ. ಪ್ರವಾಸಿ ಟೀಮ್ ಇಂಡಿಯಾ ಆಟಗಾರರಿಗೆ ಆಫ್ರಿಕಾ ಭರ್ಜರಿ ವ್ಯವಸ್ಥೆಯನ್ನೇ ಮಾಡಿದೆ. ವಿರಾಟ್ ಕೊಹ್ಲಿ ಪಡೆಗಾಗಿ ಸೆಂಚೂರಿಯನ್ನಲ್ಲಿರುವ ಇಡೀ ಹೊಟೇಲ್ ಅನ್ನೇ ಕ್ರಿಕೆಟ್ ಸೌತ್ ಆಫ್ರಿಕಾ ಬುಕ್ ಮಾಡಿದೆ.
ಈ ಬಗ್ಗೆ ಆಫ್ರಿಕಾ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಸೆಂಚೂರಿಯನ್ನಲ್ಲಿರುವ ಇರೇನಾ ಕಂಟ್ರಿ ಲಾಡ್ಜ್ ಅನ್ನು ಭಾರತೀಯ ಆಟಗಾರರಿಗಾಗಿ ಉಳಿದುಕೊಳ್ಳು ತಯಾರಿ ಮಾಡಿದೆಯಂತೆ. ವಿಶೇಷ ಎಂದರೆ ಈ ಹೊಟೇಲ್ ಅದಾಗಲೇ ಬಯೋ ಬಬಲ್ನಿಂದ ಕೂಡಿದೆಯಂತೆ. ಯಾವುದೇ ಹೊರ ಅತಿಥಿಗಳಿಗೆ ಈ ಹೊಟೇಲ್ ಒಳಗಡೆ ಪ್ರವೇಶವಿಲ್ಲ. ಹೊಟೇಲ್ನಲ್ಲಿರುವ ಕೆಲಸಗಾರರು ಈಗಾಗಲೇ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮುನ್ನ ಇದೇ ಹೊಟೇಲ್ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡ ಕೂಡ ಸೆಲೆಸಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಈಗಾಗಲೇ ಭಾರತ ತಂಡ ಪ್ರಕಟವಾಗಿದೆ. ಆದರೆ, ಏಕದಿನ ತಂಡ ಇನ್ನಷ್ಟೆ ಆಯ್ಕೆಯಾಗಬೇಕಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಆಯೋಜನೆಯಾಗಿದ್ದ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಕೋವಿಡ್ ಕಾರಣದಿಂದ ಕೈಬಿಡಲಾಗಿದೆ. ಆದರೆ, ರದ್ದಾಗಿಲ್ಲ, ಬದಲಾಗಿ ಮುಂದೂಡಿಕೆ ಆಗಿದೆ. ಮುಂದಿನ ವರ್ಷ ಸೂಕ್ತ ಸಮಯ ನೋಡಿ ಟಿ20 ಸರಣಿಯನ್ನ ಆಡಿಸಲಾಗುವುದು ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಹೇಳಿದೆ. ಸೆಂಚೂರಿಯನ್, ಜೋಹಾನ್ಸ್ಬರ್ಗ್, ಕೇಪ್ಟೌನ್ ಮತ್ತು ಪಾರ್ಲ್ ನಗರಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳ ಪಂದ್ಯಗಳು ನಡೆಯಲಿವೆ.
ದ. ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ಸರಣಿ ವೇಳಾಪಟ್ಟಿ:
ಟೆಸ್ಟ್ ಸರಣಿ:
1) ಡಿ. 26-30: ಸೂಪರ್ ಸ್ಪೋರ್ಟ್ ಪಾರ್ಕ್, ಸೆಂಚೂರಿಯನ್
2) ಜ. 3-7: ವಾಂಡರರ್ಸ್, ಜೋಹಾನ್ಸ್ಬರ್ಗ್
3) ಜ. 11-15: ನ್ಯೂಲ್ಯಾಂಡ್ಸ್, ಕೇಪ್ ಟೌನ್
ಏಕದಿನ ಸರಣಿ:
1) ಜ. 19: ಬೋಲ್ಯಾಂಡ್ ಪಾರ್ಕ್, ಪಾರ್ಲ್
2) ಜ. 21: ಬೋಲ್ಯಾಂಡ್ ಪಾರ್ಕ್, ಪಾರ್ಲ್
3) ಜ. 23: ನ್ಯೂಲೆಂಡ್ಸ್, ಕೇಪ್ ಟೌನ್
ಟೆಸ್ಟ್ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಕೆ ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ವೃದ್ದಿಮಾನ್ ಸಾಹ(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
Virat Kohli: ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿಗೆ ಈಗ ಸಿಗುತ್ತಿರುವ ಸಂಬಳ ಎಷ್ಟು ಗೊತ್ತೇ?
Rohit Sharma: ನಾಯಕನಾದ ರೋಹಿತ್ ಶರ್ಮಾಗೆ ಬಿಸಿಸಿಐ ನೀಡುತ್ತಿರುವ ಸಂಬಳ ಎಷ್ಟು ಕೋಟಿ ಗೊತ್ತೇ?
(Virat Kohli team to stay at plush Irene Lodge CSA books complete hotel for the Indian cricket team)
Published On - 10:02 am, Fri, 10 December 21
