AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಒಂದೇ ಓವರ್​ನಲ್ಲಿ ಸತತ 5 ಸಿಕ್ಸರ್: ಶ್ರೀಲಂಕಾದ ಈ ಹೊಸ ಸಿಕ್ಸರ್ ಕಿಂಗ್ ಮೇಲೆ ಕಣ್ಣಿಟ್ಟ ಆರ್​ಸಿಬಿ

LPL 2021: ಬಲಗೈ ಬ್ಯಾಟರ್ ಆವಿಶ್ಕಾ ಫೆರ್ನಾಂಡೊ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಜೆಫ್ನಾ ಕಿಂಗ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ನಿನ್ನೆ ನಡೆದ ಕ್ಯಾಂಡಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಫೆರ್ನಾಂಡೊ ಒಟ್ಟು ಏಳು ಸಿಕ್ಸ್ ಸಿಡಿಸಿ ಕೇವಲ 23 ಎಸೆತಗಳಲ್ಲಿ 53 ರನ್ ಚಚ್ಚಿದರು.

IPL 2022: ಒಂದೇ ಓವರ್​ನಲ್ಲಿ ಸತತ 5 ಸಿಕ್ಸರ್: ಶ್ರೀಲಂಕಾದ ಈ ಹೊಸ ಸಿಕ್ಸರ್ ಕಿಂಗ್ ಮೇಲೆ ಕಣ್ಣಿಟ್ಟ ಆರ್​ಸಿಬಿ
IPL 2022 Avishka Fernando in LPL 2021
TV9 Web
| Edited By: |

Updated on: Dec 10, 2021 | 11:56 AM

Share

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 15ನೇ ಆವೃತ್ತಿಯ ಬಹುದೊಡ್ಡ ಹರಾಜು ಪ್ರಕ್ರಿಯೇ ಹತ್ತಿರವಾಗುತ್ತಿದೆ. 2022ರ ಜನವರಿ ಮಧ್ಯಭಾಗದಲ್ಲಿ ಐಪಿಎಲ್ 2022 ಮೆಗಾ ಆಕ್ಷನ್ (IPL 2022 Mega Auction) ನಡೆಯಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳ ರಿಲೀಸ್- ರಿಟೇನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಹೊಸ ಆಟಗಾರನ ಹುಡುಕಾಟದಲ್ಲಿದೆ. ಹೀಗಿರುವಾಗ ಶ್ರೀಲಂಕಾದ ಒಬ್ಬ ಆಟಗಾರ ಐಪಿಎಲ್ ಫ್ರಾಂಚೈಸಿಗಳ ಕದ ತಟ್ಟಿದ್ದಾರೆ. ಇದಕ್ಕೆ ಕಾರಣ ಸದ್ಯ ಸಿಂಹಳೀಯರ ನಾಡಿನಲ್ಲಿ ಸಾಗುತ್ತಿರುವ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ (Lanka Premier League) ಈ ಆಟಗಾರ ಅಬ್ಬರಿಸುತ್ತಿರುವುದು. ಆ ಆಟಗಾರ ಮತ್ತಾರು ಆವಿಶ್ಕಾ ಫೆರ್ನಾಂಡೊ (Avishka Fernando). ಐಪಿಎಲ್​ನಂತೆ ಶ್ರೀಲಂಕಾದಲ್ಲಿ ಎಲ್​​ಪಿಎಲ್ (IPL)​ ಟೂರ್ನಿ ನಡೆಯುತ್ತಿದೆ. ಇದರಲ್ಲಿ ಫೆರ್ನಾಂಡೊ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅದರಲ್ಲೂ ಒಂದೇ ಓವರ್​ನಲ್ಲಿ ಸತತವಾಗಿ 5 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಐಪಿಎಲ್ ಮೆಗಾ ಆಕ್ಷನ್ ಮೇಲೆ ಕಣ್ಣಿಟ್ಟಿದ್ದು, ಫ್ರಾಂಚೈಸಿಗಳು ಇವರನ್ನು ಖರೀದಿಸಲು ಎದುರು ನೋಡುತ್ತಿದೆ.

ಬಲಗೈ ಬ್ಯಾಟರ್ ಆವಿಶ್ಕಾ ಫೆರ್ನಾಂಡೊ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಜೆಫ್ನಾ ಕಿಂಗ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ನಿನ್ನೆ ನಡೆದ ಕ್ಯಾಂಡಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಫೆರ್ನಾಂಡೊ ಒಟ್ಟು ಏಳು ಸಿಕ್ಸ್ ಸಿಡಿಸಿ ಕೇವಲ 23 ಎಸೆತಗಳಲ್ಲಿ 53 ರನ್ ಚಚ್ಚಿದರು. ಎಲ್​​ಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರರ ಸಾಲಿನಲ್ಲಿ ಇವರೀಗ ಇತರೆ ನಾಲ್ಕು ಆಟಗಾರರ ಜೊತೆ ಜಂಟೆ ಸ್ಥಾನ ಹಂಚಿಕೊಂಡಿದ್ದಾರೆ.

ಈ ಟೂರ್ನಿಯಲ್ಲಿ 100+ ಮೀಟರ್ ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಕೂಡ ಆವಿಶ್ಕಾ ಫೆರ್ನಾಂಡೊ ಆಗಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಆಡಿದ ಅನುಭವ ಇವರಿಗೆ ಸಾಕಷ್ಟಿದೆ. ಈವರೆಗೆ 74 ಟಿ20 ಪಂದ್ಯಗಳಲ್ಲಿ ಇವರು ಕಣಕ್ಕಿಳಿದಿದ್ದು, 1600ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. 12 ಅರ್ಧಶತಕ ಕೂಡ ಸಿಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಇವರು ಆರ್​ಸಿಬಿ ತಂಡಕ್ಕೆ ಅಗತ್ಯವಾಗಿದ್ದು, ಇವರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದರೆ ಅಚ್ಚರಿ ಪಡಬೇಕಿಲ್ಲ. ಅಲ್ಲದೆ ಹೊಸ ಫ್ರಾಂಚೈಸಿ ಲಖನೌ ಮತ್ತು ಅಹ್ಮದಾಬಾದ್ ಕೂಡ ಆವಿಶ್ಕಾ ಫೆರ್ನಾಂಡೊ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ.

ಅಂದಹಾಗೆ ಐಪಿಎಲ್ 2022 ಟೂರ್ನಿಯಲ್ಲಿ ಅಹ್ಮದಾಬಾದ್ ಮತ್ತು ಲಖನೌ ಫ್ರಾಂಚೈಸಿಗಳು ಹೊಸ ತಂಡಗಳಾಗಿ ಕಣಕ್ಕಿಳಿಯಲಿದ್ದು, ಈ ತಂಡಗಳಿಗೆ ಡಿಸೆಂಬರ್‌ 25ರವರೆಗೆ ಹರಾಜಿಗೆ ಬಿಡುಗಡೆ ಆಗಿರುವ ಆಟಗಾರರಲ್ಲಿ ಗರಿಷ್ಠ ಮೂವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶವಿದೆ. ಹೀಗಾಗಿ ಮುಂದಿನ ಜನವರಿ ಎರಡನೇ ವಾರದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ.  ಈ ಹಿಂದೆ ಜನವರಿ ಮೊದಲ ವಾರದಲ್ಲಿ ಮೆಗಾ ಆಕ್ಷನ್ ನಡೆಯಲಿದೆ ಎನ್ನಲಾಗಿತ್ತು. ಆದರೆ ಈಗ ಒಂದು ವಾರ ಮುಂದೂಡಿಕೆಯಾಗುವ ಸಾಧ‍್ಯತೆಯಿದೆ.

ACC U19 Asia Cup 2021: ಏಷ್ಯಾ ಕಪ್​ಗೆ ಭಾರತದ ಬಲಿಷ್ಠ ಅಂಡರ್-19 ತಂಡ ಪ್ರಕಟ: ಹೊಸ ನಾಯಕ ಯಾರು ಗೊತ್ತೇ?

India vs South Africa: ಟೀಮ್ ಇಂಡಿಯಾ ಉಳಿದುಕೊಳ್ಳಲು ಕ್ರಿಕೆಟ್ ಸೌತ್ ಆಫ್ರಿಕಾ ಮಾಡಿದ ಮಾಸ್ಟರ್ ಪ್ಲಾನ್ ಏನು ನೋಡಿ

(IPL 2022 Auction Avishka Fernando has slammed 5 sixes in 6 balls in LPL 2021 hot pick in the mega auction)

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ