ACC U19 Asia Cup 2021: ಏಷ್ಯಾ ಕಪ್ಗೆ ಭಾರತದ ಬಲಿಷ್ಠ ಅಂಡರ್-19 ತಂಡ ಪ್ರಕಟ: ಹೊಸ ನಾಯಕ ಯಾರು ಗೊತ್ತೇ?
India squad for U19 Asia Cup: ಮುಂದಿನ ವರ್ಷ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ನಲ್ಲಿ ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಹೀಗಾಗಿ ಭಾರತ ಅಂಡರ್ 19 ತಂಡಕ್ಕೆ ಈ ಏಷ್ಯಾ ಕಪ್ ಟೂರ್ನಿ ಅಗ್ನಿಪರೀಕ್ಷೆಯಾಗಲಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ವಿಶ್ವಕಪ್ನಲ್ಲಿ ಸ್ಥಾನ ಪಡೆಯುವುದು ಖಚಿತ.

ಎಸಿಸಿ ಅಂಡರ್ 19 ಏಷ್ಯಾ ಕಪ್ 2021ಕ್ಕೆ (ACC U19 Asia Cup 2021) ಭಾರತೀಯ ಕ್ರಿಕೆಟ್ನ ಕಿರಿಯರ ಆಯ್ಕೆ ಸಮಿತಿ 20 ಸದಸ್ಯರ ಅಂಡರ್ 19 ತಂಡವನ್ನು ಪ್ರಕಟ ಮಾಡಿದೆ. ಈ ಟೂರ್ನಿ ಯುಎಇನಲ್ಲಿ ಆಯೋಜನೆ ಮಾಡಲಾಗಿದ್ದು ಡಿಸೆಂಬರ್ 23ಕ್ಕೆ ಚಾಲನೆ ಸಿಗಲಿದೆ. ಜನವರಿ 1ರ ವರೆಗೆ ನಡೆಯಲಿದೆ. ಭಾರತ ಅಂಡರ್ 19 (India Under 19 Team) ತಂಡಕ್ಕೆ ಯಶ್ ಧುಲ್ (Yash Dhull) ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ. 2021-22 ವಿನೂ ಮಂಕಡ್ ಟ್ರೋಫಿಯಲ್ಲಿ ಯಶ್ ಅವರು ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಇದು ಕಳೆದ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 18ರ ವರೆಗೆ ನಡೆದಿತ್ತು. ಡೆಲ್ಲಿ ಕ್ರಿಕೆಟ್ ಪರವೂ ಇವರು ಆಡಿ 302 ರನ್ ಬಾರಿಸಿದ್ದರು. ಐದು ಪಂದ್ಯಗಳಲ್ಲಿ 75.50 ಸರಸಾರಿ ಯಶ್ ಹೊಂದಿದ್ದು 103.42 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.
ಇದರ ಜೊತೆಗೆ ಬೆಂಗಳೂರಿನಲ್ಲಿ ಡಿ. 11 ರಿಂದ 19ರ ವರೆಗೆ ನಡೆಯಲಿರುವ ಪ್ರಿಪರೇಟರಿ ಕ್ಯಾಂಪ್ಗೂ 25 ಮಂದಿ ಸದಸ್ಯರ ತಂಡ ಪ್ರಕಟ ಮಾಡಲಾಗಿದೆ. ವಿನೂ ಮಂಕಡ್ ಟ್ರೋಫಿಯಲ್ಲಿ ನಾಗಾಲೆಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ ವಾಸು ಸತ್ಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಇವರು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದು ಆಡುವ ಬಗ್ಗೆ ಖಚಿತವಾಗಿಲ್ಲ.
ಮುಂದಿನ ವರ್ಷ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ನಲ್ಲಿ ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಹೀಗಾಗಿ ಭಾರತ ಅಂಡರ್ 19 ತಂಡಕ್ಕೆ ಈ ಏಷ್ಯಾ ಕಪ್ ಟೂರ್ನಿ ಅಗ್ನಿಪರೀಕ್ಷೆಯಾಗಲಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ವಿಶ್ವಕಪ್ನಲ್ಲಿ ಸ್ಥಾನ ಪಡೆಯುವುದು ಖಚಿತ. ಕಳೆದ ಸೀಸನ್ನಲ್ಲಿ ಪ್ರಿಯಾಂ ಗರ್ಗ್ ನಾಯಕತ್ವದ ಭಾರತ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿತ್ತು.
ಏಷ್ಯಾ ಕಪ್ಗೆ ಭಾರತ ಅಂಡರ್ 19 ತಂಡ:
ಹರ್ನೂರ್ ಸಿಂಗ್ ಪನ್ನು, ಅಂಗ್ಕ್ರಿಶ್ ರಘುವನ್ಶಿ, ಅನ್ಶ್ ಗೊಸಾಯ್, ಎಸ್ ಕೆ ರಶೀದ್, ಯಶ್ ಧುಲ್ (ನಾಯಕ), ಅನೇಶ್ವರ್ ಗೌತಮ್, ಸಿದ್ಧಾರ್ಥ್ ಯಾದವ್, ಕೌಶಲ್ ತಂಬೆ, ನಿಶಾಂತ್ ಸಿಧು, ದಿನೇಶ್ ಬನಾ (ವಿಕೆಟ್ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಜಂಗಡ್ ಬವಾ, ರಾಜವರ್ಧನ್ ಹಂಗರ್ಗೇಕರ್, ಗರ್ವ್ ಸಾಂಗ್ವಾನ್, ರವಿ ಕುಮಾರ್, ರಿತಿಶ್ ರೆಡ್ಡಿ, ಮನವ್ ಪರಕ್, ಅಮ್ರಿತ್ ರಾಜ್ ಉಪಧ್ಯಾಯ್, ವಿಕ್ಕಿ ಒಸ್ಟ್ವಾಲ್, ವಾಸು ವತ್ಸ್.
India vs South Africa: ಟೀಮ್ ಇಂಡಿಯಾ ಉಳಿದುಕೊಳ್ಳಲು ಕ್ರಿಕೆಟ್ ಸೌತ್ ಆಫ್ರಿಕಾ ಮಾಡಿದ ಮಾಸ್ಟರ್ ಪ್ಲಾನ್ ಏನು ನೋಡಿ
Virat Kohli: ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿಗೆ ಈಗ ಸಿಗುತ್ತಿರುವ ಸಂಬಳ ಎಷ್ಟು ಗೊತ್ತೇ?
(All-India Junior Selection Committee picked a 20-member squad for ACC U-19 Asia Cup Yash Dhull named as Captain)
