Maharaja Trophy 2024: ಮೈಸೂರಿಗೆ ಸುಲಭ ಜಯ; ಸೇಮಿಸ್​ನಿಂದ ಹೊರಬಿದ್ದ ಶಿವಮೊಗ್ಗ

|

Updated on: Aug 28, 2024 | 7:23 PM

Maharaja Trophy 2024: ಮಹಾರಾಜ ಟ್ರೋಫಿಯ 27ನೇ ಪಂದ್ಯದಲ್ಲಿ ಮಂಗಳೂರು ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಮೈಸೂರು ವಾರಿಯರ್ಸ್​ ತಂಡ ಸೆಮಿಫೈನಲ್​ಗೆ ತನ್ನ ತಂಡವನ್ನು ಖಚಿತಪಡಿಸಿಕೊಂಡಿದೆ. ಇತ್ತ ಮೈಸೂರಿನ ಗೆಲುವಿನೊಂದಿಗೆ ಶಿವಮೊಗ್ಗ ಲಯನ್ಸ್ ತಂಡದ ಸೇಮಿಸ್ ಹಾದಿ ಅಧಿಕೃತವಾಗಿ ಮುಚ್ಚಿದೆ.

Maharaja Trophy 2024: ಮೈಸೂರಿಗೆ ಸುಲಭ ಜಯ; ಸೇಮಿಸ್​ನಿಂದ ಹೊರಬಿದ್ದ ಶಿವಮೊಗ್ಗ
ಮೈಸೂರು ವಾರಿಯರ್ಸ್​
Follow us on

ಮಹಾರಾಜ ಟ್ರೋಫಿಯ 27ನೇ ಪಂದ್ಯದಲ್ಲಿ ಮಂಗಳೂರು ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಮೈಸೂರು ವಾರಿಯರ್ಸ್​ ತಂಡ ಸೆಮಿಫೈನಲ್​ಗೆ ತನ್ನ ತಂಡವನ್ನು ಖಚಿತಪಡಿಸಿಕೊಂಡಿದೆ. ಇತ್ತ ಮೈಸೂರಿನ ಗೆಲುವಿನೊಂದಿಗೆ ಶಿವಮೊಗ್ಗ ಲಯನ್ಸ್ ತಂಡದ ಸೇಮಿಸ್ ಹಾದಿ ಅಧಿಕೃತವಾಗಿ ಮುಚ್ಚಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಡ್ರ್ಯಾಗನ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 178 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್​ ತಂಡ ಇನ್ನು 8 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

178 ರನ್​ ಟಾರ್ಗೆಟ್ ನೀಡಿದ ಮಂಗಳೂರು

ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ತಂಡಕ್ಕೆ ಮೊದಲ ವಿಕೆಟ್​ಗೆ 22 ರನ್​ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ರೋಹನ್ ಪಟೇಲ್ 12 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ ನಾಯಕ ನಿಖಿನ್ ಜೋಶ್ ಕೂಡ 14 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ ಆ ಬಳಿಕ ಜೊತೆಯಾದ ಆರಂಭಿಕ ತುಶಾರ್ ಹಾಗೂ ಸಿದ್ಧಾರ್ಥ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ತುಶಾರ್ 26 ಎಸೆತಗಳಲ್ಲಿ 43 ರನ್​ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರೆ, ಸಿದ್ಧಾರ್ಥ್ ಮಾತ್ರ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಕೆಳಕ್ರಮಾಂಕದಲ್ಲಿ ಲೋಚನ್ 15 ಎಸೆತಗಳಲ್ಲಿ 25 ರನ್ ಹಾಗೂ ದರ್ಶನ್ 8 ಎಸೆತಗಳಲ್ಲಿ 18 ರನ್ ಬಾರಿಸಿ ತಂಡವನ್ನು 178 ರನ್​ಗಳಿಗೆ ಕೊಂಡೊಯ್ದರು.​

ಕರುಣ್- ಕಾರ್ತಿಕ್ ಜೊತೆಯಾಟ

ಈ ಗುರಿ ಬೆನ್ನಟ್ಟಿದ ಮೈಸೂರು ತಂಡಕ್ಕೆ ಆರಂಭಿಕರು 42 ರನ್​ಗಳ ಜೊತೆಯಾಟ ನೀಡಿದರು. ಇದರಲ್ಲಿ ಕಾರ್ತಿಕ್ ಅವರದ್ಧೇ ಭಾಗಶಃ ಪಾಲಿತ್ತು. ಆದಾಗ್ಯೂ ಮತ್ತೊಬ್ಬ ಆರಂಭಿಕ ಕಾರ್ತಿಕ್ 14 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಂತರ ಬಂದ ನಾಯಕ ಕರುಣ್ ನಾಯರ್ ಎಂದಿನಂತೆ ತಮ್ಮ ಅಧ್ಭುತ ಫಾರ್ಮ್​ ಮುಂದುವರೆಸಿದರು. ಈ ಇಬ್ಬರು ಜೊತೆಯಾಗಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಈ ವೇಳೆ ಆರಂಭಿಕ ಕಾರ್ತಿಕ್ 52 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69 ರನ್ ಬಾರಿಸಿ ಔಟಾದರು.

ಆದಾಗ್ಯೂ ನಾಯಕನ ಇನ್ನಿಂಗ್ಸ್ ಮುಂದುವರೆಸಿದ ಕರುಣ್, ಮನೋಜ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ವೇಳೆ ಕರುಣ್ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 64 ರನ್ ಬಾರಿಸಿ ಔಟಾದರೆ, ಮನೋಜ್ ಭಾಂಡಿಗೆ 6 ಎಸೆತಗಳಲ್ಲಿ 10 ರನ್, ಸುಚಿತ್ 3 ಎಸೆತಗಳಲ್ಲಿ 9 ರನ್ ಬಾರಿಸಿ ಅಜೇಯರಾಗಿ ಉಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Wed, 28 August 24