ತಾಹ ತೂಫಾನ್ಗೆ ತತ್ತರಿಸಿದ ಬೆಂಗಳೂರು ಬ್ಲಾಸ್ಟರ್ಸ್
Hubli Tigers vs Bengaluru Blasters: 38 ಎಸೆತಗಳನ್ನು ಎದುರಿಸಿದ ಮಯಾಂಕ್ ಅಗರ್ವಾಲ್ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 68 ರನ್ ಸಿಡಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಶ್ಚಲ್ 42 ಎಸೆತಗಳಲ್ಲಿ 54 ರನ್ ಬಾರಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 19ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಬೆಂಗಳೂರು ತಂಡಕ್ಕೆ ಮಯಾಂಕ್ ಉತ್ತಮ ಆರಂಭ ಒದಗಿಸಿದ್ದರು.
38 ಎಸೆತಗಳನ್ನು ಎದುರಿಸಿದ ಮಯಾಂಕ್ ಅಗರ್ವಾಲ್ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 68 ರನ್ ಸಿಡಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಶ್ಚಲ್ 42 ಎಸೆತಗಳಲ್ಲಿ 54 ರನ್ ಬಾರಿಸಿದರು.
ಹಾಗೆಯೇ ಶುಭಾಂಗ್ ಹೆಗ್ಡೆ 18 ಎಸೆತಗಳಲ್ಲಿ 29 ರನ್ ಬಾರಿಸುವ ಮೂಲಕ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ಕ್ಕೆ ತಂದು ನಿಲ್ಲಿಸಿದರು.
189 ರನ್ಗಳ ಕಠಿಣ ಗುರಿ ಪಡೆದ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಲವ್ನೀತ್ ಸಿಸೋಡಿಯಾ 20 ರನ್ ಬಾರಿಸಿ ಔಟಾದರೆ, ಮತ್ತೊಂದೆಡೆ ಮೊಹಮ್ಮದ್ ತಾಹ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ತಾಹ 35 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 66 ರನ್ ಚಚ್ಚಿದರು. ಆ ಬಳಿಕ ಬಂದ ಶ್ರೀಜಿತ್ 45 ರನ್ಗಳ ಕಾಣಿಕೆ ನೀಡಿದರು.
ಇನ್ನು ನಾಯಕ ಮನೀಶ್ ಪಾಂಡೆ 22 ಎಸೆತಗಳಲ್ಲಿ 3 ಫೋರ್ಗಳೊಂದಿಗೆ ಅಜೇಯ 35 ರನ್ ಬಾರಿಸುವ ಮೂಲಕ 18.3 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಹುಬ್ಬಳ್ಳಿ ಟೈಗರ್ಸ್ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
Tiger’s fury! 🔥
Here are the highlights from the Hubli Tigers’ chase! 📹
#IlliGeddavareRaja #MaharajaTrophy #KSCA #Karnataka pic.twitter.com/WMx5jhxBo4
— Maharaja Trophy T20 (@maharaja_t20) August 22, 2023
ಬೆಂಗಳೂರು ಬ್ಲಾಸ್ಟರ್ಸ್ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ಭುವನ್ ರಾಜು , ಡಿ. ನಿಶ್ಚಲ್ , ಲೋಚನ್ ಅಪ್ಪಣ್ಣ , ಸೂರಜ್ ಅಹುಜಾ (ವಿಕೆಟ್ ಕೀಪರ್ ) , ಶುಭಾಂಗ್ ಹೆಗ್ಡೆ , ರಿಷಿ ಬೋಪಣ್ಣ , ಸರ್ಫರಾಜ್ ಅಶ್ರಫ್ , ಗೌರವ್ , ಎಲ್ಆರ್ ಕುಮಾರ್ , ಅಮನ್ ಖಾನ್.
ಇದನ್ನೂ ಓದಿ: ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಸೂರ್ಯಕುಮಾರ್ ಯಾದವ್
ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಮೊಹಮ್ಮದ್ ತಾಹ , ಕೃಷ್ಣನ್ ಶ್ರೀಜಿತ್ , ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್ ) , ಮನೀಶ್ ಪಾಂಡೆ (ನಾಯಕ) , ಮನ್ವಂತ್ ಕುಮಾರ್ ಎಲ್ , ಪ್ರವೀಣ್ ದುಬೆ , ಎಂಬಿ ದರ್ಶನ್ , ಲವಿಶ್ ಕೌಶಲ್ , ಕೆಸಿ ಕಾರ್ಯಪ್ಪ, ವಿಧ್ವತ್ ಕಾವೇರಪ್ಪ , ನಾಥನ್ ಡಿಮೆಲ್ಲೊ.