Fastest century: 11 ಸಿಕ್ಸರ್, 7 ಭರ್ಜರಿ ಬೌಂಡರಿ: ಕೇವಲ 32 ಎಸೆತಗಳಲ್ಲಿ ಸ್ಪೋಟಕ ಶತಕ

Fastest Century Record: 32 ಎಸೆತಗಳ ಶತಕದ ಹೊರತಾಗಿಯೂ ಅಂಕಿತ್ ಗುಪ್ತಾ ಅವರಿಗೆ ಕ್ರಿಕೆಟ್ ಇತಿಹಾಸದ ವೇಗದ ಶತಕದ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

Fastest century: 11 ಸಿಕ್ಸರ್, 7 ಭರ್ಜರಿ ಬೌಂಡರಿ: ಕೇವಲ 32 ಎಸೆತಗಳಲ್ಲಿ ಸ್ಪೋಟಕ ಶತಕ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 09, 2021 | 9:03 PM

ಒಂದೆಡೆ ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಮತ್ತೊಂದೆಡೆ ಆಸ್ಟ್ರೇಲಿಯಾ-ಬಾಂಗ್ಲಾದೇಶ ಟಿ20 ಸರಣಿ ಆಡುತ್ತಿದೆ. ಇನ್ನೊಂದೆಡೆ ಇಂಗ್ಲೆಂಡ್​ನಲ್ಲಿ ಹೊಚ್ಚ ಹೊಸ ಕ್ರಿಕೆಟ್ ಲೀಗ್ ದಿ ಹಂಡ್ರೆಡ್ ನಡೆಯುತ್ತಿದೆ. ಇದರ ಎಡೆಯಲ್ಲಿ ಯುರೋಪಿಯನ್ ಕ್ರಿಕೆಟ್ ಸಿರೀಸ್ ಟಿ10 ಲೀಗ್ ಕೂಡ ಜರುಗುತ್ತಿದೆ. ಹೀಗೆ ಸದ್ದಿಲ್ಲದೆ ನಡೆಯುತ್ತಿದ್ದ ಟಿ10 ಲೀಗ್ ಇದೀಗ ಎಲ್ಲರ ಗಮನ ಸೆಳೆಯಲು ಕಾರಣ, ಅಂಕಿತ್ ಗುಪ್ತಾ ಅವರ ಸಿಡಿಬ್ಬರದ ಬ್ಯಾಟಿಂಗ್. 

ಹೌದು, ಹಂಗೇರಿಯಲ್ಲಿ ನಡೆಯುತ್ತಿರುವ ಯುರೋಪಿಯನ್ ಕ್ರಿಕೆಟ್​ ಲೀಗ್​ನಲ್ಲಿ ಸೋಮವಾರ ಮೆಲ್ಮೊಹ್ಸ್-ಲ್ಯಾಂಡ್‌ಸ್ಕ್ರೋನಾ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಮೆಲ್ಮೊಹ್ಸ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 10 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 171 ರನ್ ಕಲೆಹಾಕಿತು. ಅಂದರೆ ಕೇವಲ 60 ಎಸೆತಗಳಲ್ಲಿ ಈ ತಂಡವು ಬರೋಬ್ಬರಿ 171 ರನ್ ಚಚ್ಚಿದ್ದರು. ಹೀಗೆ ರನ್​ ಸುರಿಮಳೆಗೈಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅಂಕಿತ್ ಗುಪ್ತಾ.

ಕೇವಲ 32 ಎಸೆತಗಳನ್ನು ಎದುರಿಸಿದ ಗುಪ್ತಾ 11 ಭರ್ಜರಿ ಸಿಕ್ಸರ್ ಹಾಗೂ 7 ಫೋರ್​ಗಳನ್ನು ಸಿಡಿಸಿ ಬರೋಬ್ಬರಿ 104 ರನ್​ಗಳನ್ನು ಬಾರಿಸಿದ್ದರು. ಈ ಮೂಲಕ ಯುರೋಪಿಯನ್ ಟಿ10 ಲೀಗ್​ನಲ್ಲಿ ಅತೀ ವೇಗದ ಶತಕ ಬಾರಿಸಿದ ದಾಖಲೆ ಬರೆದರು. ಇನ್ನು ಈ ಪಂದ್ಯದಲ್ಲಿ ಮೆಲ್ಮೊಹ್ಸ್ ನೀಡಿದ 172 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಲ್ಯಾಂಡ್‌ಸ್ಕ್ರೋನಾ ತಂಡವು ಐದು ವಿಕೆಟ್‌ ಕಳೆದುಕೊಂಡು 122 ರನ್ ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಮೆಲ್ಮೊಹ್ಸ್ ತಂಡವು 49 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಕೇವಲ 32 ಎಸೆತಗಳಲ್ಲಿ ಬಿರುಸಿನ ಶತಕ ಸಿಡಿಸಿದ ಅಂಕಿತ್ ಗುಪ್ತಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

32 ಎಸೆತಗಳ ಶತಕದ ಹೊರತಾಗಿಯೂ ಅಂಕಿತ್ ಗುಪ್ತಾ ಅವರಿಗೆ ಕ್ರಿಕೆಟ್ ಇತಿಹಾಸದ ವೇಗದ ಶತಕದ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಕೇವಲ 31 ಎಸೆತಗಳಲ್ಲಿ ಶತಕ ಬಾರಿಸಿರುವುದು ಕ್ರಿಕೆಟ್ ಇತಿಹಾಸದ ಅತ್ಯಂತ ವೇಗದ ಸೆಂಚುರಿ ದಾಖಲೆಯನ್ನು ಉಳಿಸಿಕೊಂಡಿದೆ.

ಇದನ್ನೂ ಓದಿ: IPL 2021: ಐಪಿಎಲ್​ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?

ಇದನ್ನೂ ಓದಿ: India vs England: ಇಂಗ್ಲೆಂಡ್ ಡ್ರಾ ಸಾಧಿಸಿದ್ರು, ಗೆದ್ದಿದ್ದು ಭಾರತ..!

(malmohus vs landskrona T10: Ankith gupta century by just 32 balls)

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ