IPL 2024: ಪಂದ್ಯಾವಳಿಯ ಅತ್ಯುತ್ತಮ ತಂಡ ಪ್ರಕಟಿಸಿದ ಮೂವರು ಮಾಜಿ ಕ್ರಿಕೆಟಿಗರು

IPL 2024 Team Of The Tournament: ಈ ಮೂವರು ಮಾಜಿ ಆಟಗಾರರು ಆಯ್ಕೆ ಮಾಡಿರುವ ತಂಡದಲ್ಲಿ ಕೇವಲ ನಾಲ್ಕು ಆಟಗಾರರು ಮಾತ್ರ ಮೂರೂ ತಂಡಗಳಲ್ಲೂ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಇಬ್ಬರು ಟೀಂ ಇಂಡಿಯಾ ಆಟಗಾರರಿದ್ದರೆ, ಇಬ್ಬರು ವಿದೇಶಿ ಆಟಗಾರನಿದ್ದಾರೆ. ಅವರೆಂದರೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಸುನಿಲ್ ನರೈನ್ ಹಾಗೂ ಹೆನ್ರಿಚ್ ಕ್ಲಾಸೆನ್.

IPL 2024: ಪಂದ್ಯಾವಳಿಯ ಅತ್ಯುತ್ತಮ ತಂಡ ಪ್ರಕಟಿಸಿದ ಮೂವರು ಮಾಜಿ ಕ್ರಿಕೆಟಿಗರು
ಐಪಿಎಲ್ 2024
Follow us
ಪೃಥ್ವಿಶಂಕರ
|

Updated on:May 26, 2024 | 8:03 PM

17ನೇ ಆವೃತ್ತಿಯ ಐಪಿಎಲ್ (IPL 2024) ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಐಪಿಎಲ್​ನ ಫೈನಲ್ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders Vs Sunrisers Hyderabad) ನಡುವೆ ನಡೆಯುತ್ತಿದೆ. ಈ ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಈ ನಡುವೆ ಲೀಗ್ ಅಂತ್ಯಕ್ಕೂ ಮೊದಲು, ಮಾಜಿ ಅನುಭವಿ ಆಟಗಾರಾದ ಅಂಬಟಿ ರಾಯುಡು, ಕೆವಿನ್ ಪೀಟರ್ಸನ್ ಮತ್ತು ಮ್ಯಾಥ್ಯೂ ಹೇಡನ್ (Matthew Hayden, Kevin Pietersen, Ambati Rayudu) ಈ ಆವೃತ್ತಿಯ ಅತ್ಯುತ್ತಮ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ.

ರಾಯುಡು ತಂಡದಲ್ಲಿ ಯಾರಿಗೆಲ್ಲ ಅವಕಾಶ?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಈ ಸೀಸನ್​ ಅತ್ಯುತ್ತಮ ಪ್ಲೇಯಿಂಗ್ 11 ಪ್ರಕಟಿಸಿದ್ದು, ರಾಯುಡು ತಂಡದಲ್ಲಿ ಓಪನಿಂಗ್ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿ ಮತ್ತು ಸುನಿಲ್ ನರೈನ್‌ಗೆ ವಹಿಸಿಲಾಗಿದೆ. 3ನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿದ್ದಾರೆ. ಉಳಿದಂತೆ ರಿಯಾನ್ ಪರಾಗ್ 4 ನೇ ಕ್ರಮಾಂಕ, ಫಿನಿಶರ್ ರಿಂಕು ಸಿಂಗ್​ಗೆ 5 ನೇ ಕ್ರಮಾಂಕ ನೀಡಿದ್ದಾರೆ. ರಾಯುಡು ತಮ್ಮ ತಂಡದಲ್ಲಿ ಇಬ್ಬರು ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಆಂಡ್ರೆ ರಸೆಲ್ ಅವರಿಗೆ ಅವಕಾಶ ನೀಡಿದ್ದಾರೆ. ಹೆನ್ರಿಚ್ ಕ್ಲಾಸೆನ್ ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಿದ್ದರೆ, ಬೌಲಿಂಗ್ ಜವಾಬ್ದಾರಿಯನ್ನು ಜಸ್ಪ್ರೀತ್ ಬುಮ್ರಾ, ಅವೇಶ್ ಖಾನ್ ಮತ್ತು ಟ್ರೆಂಟ್ ಬೌಲ್ಟ್ ಅವರಿಗೆ ನೀಡಲಾಗಿದೆ.

ಅಂಬಟಿ ರಾಯುಡು ಟೂರ್ನಿಯ ತಂಡ: ವಿರಾಟ್ ಕೊಹ್ಲಿ, ಸುನಿಲ್ ನರೈನ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಿಂಕು ಸಿಂಗ್, ಆಂಡ್ರೆ ರಸೆಲ್, ರವೀಂದ್ರ ಜಡೇಜಾ, ಹೆನ್ರಿಚ್ ಕ್ಲಾಸೆನ್, ಜಸ್ಪ್ರೀತ್ ಬುಮ್ರಾ, ಅವೇಶ್ ಖಾನ್, ಟ್ರೆಂಟ್ ಬೌಲ್ಟ್.

ಕೆವಿನ್ ಪೀಟರ್ಸನ್ ಪಂದ್ಯಾವಳಿಯ ತಂಡ: ಸುನಿಲ್ ನರೈನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶಿವಂ ದುಬೆ, ಹೆನ್ರಿಚ್ ಕ್ಲಾಸೆನ್, ಕ್ಯಾಮೆರಾನ್ ಗ್ರೀನ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಯುಜ್ವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಟಿ ನಟರಾಜನ್.

ಮ್ಯಾಥ್ಯೂ ಹೇಡನ್ ಪಂದ್ಯಾವಳಿಯ ತಂಡ: ಸುನಿಲ್ ನರೈನ್, ಟ್ರಾವಿಸ್ ಹೆಡ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ನಿಕೋಲಸ್ ಪೂರನ್, ರಯಾನ್ ಪರಾಗ್, ಹೆನ್ರಿಚ್ ಕ್ಲಾಸೆನ್, ಯುಜ್ವೇಂದ್ರ ಚಾಹಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅವೇಶ್ ಖಾನ್.

ಈ ಮೂವರು ಮಾಜಿ ಆಟಗಾರರು ಆಯ್ಕೆ ಮಾಡಿರುವ ತಂಡದಲ್ಲಿ ಕೇವಲ ನಾಲ್ಕು ಆಟಗಾರರು ಮಾತ್ರ ಮೂರೂ ತಂಡಗಳಲ್ಲೂ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಇಬ್ಬರು ಟೀಂ ಇಂಡಿಯಾ ಆಟಗಾರರಿದ್ದರೆ, ಇಬ್ಬರು ವಿದೇಶಿ ಆಟಗಾರನಿದ್ದಾರೆ. ಅವರೆಂದರೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಸುನಿಲ್ ನರೈನ್ ಹಾಗೂ ಹೆನ್ರಿಚ್ ಕ್ಲಾಸೆನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 pm, Sun, 26 May 24

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ