ಇಂಗ್ಲೆಂಡ್ ವಿರುದ್ಧ ಬಾಕಿ ಇರುವ ಭಾರತ (England vs India) ಜೊತೆಗಿನ ಐದನೇ ಟೆಸ್ಟ್ ಜುಲೈ 1 ರಿಂದ ಆರಂಭವಾಗಲಿದೆ. ಆದರೆ, ಇದಕ್ಕೂ ಮುನ್ನವೇ ನಾಯಕ ರೋಹಿತ್ ಶರ್ಮಾ (Rohit Sharma) ತಂಡದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ. ಲೀಸೆಸ್ಟರ್ ವಿರುದ್ಧದ ಅಭ್ಯಾಸ ಪಂದ್ಯದ ಮೂರನೇ ದಿನದಾಟ ಮುಗಿದ ಬಳಿಕ ನಡೆದ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವರಿಗೆ ಕೋವಿಡ್ -19 (Covid-19) ಸೋಂಕು ಇರುವುದು ದೃಢಪಟ್ಟಿದೆ. ಪ್ರಸ್ತುತ ಹಿಟ್ಮ್ಯಾನ್ ತಂಡದ ಹೋಟೆಲ್ನಲ್ಲಿ ಪ್ರತ್ಯೇಕವಾಗಿದ್ದಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಜುಲೈ 1 ರ ವೇಳೆಗೆ ಇವರು ಗುಣಮುಖರಾಗುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಮತ್ತೊಬ್ಬ ಸ್ಟಾರ್ ಓಪನರ್ ಅನ್ನು ಬಿಸಿಸಿಐ ಆಂಗ್ಲರ ನಾಡಿಗೆ ಕಳುಹಿಸಿದೆ. ರೋಹಿತ್ ಬದಲು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಹೌದು, ರೋಹಿತ್ ಶರ್ಮಾ ಜಾಗಕ್ಕೆ ಬದಲಿ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಅವರನ್ನು ಬಿಸಿಸಿಐ ಇಂಗ್ಲೆಂಡ್ಗೆ ಕಳಿಹಿಸಿದೆ. ಮಯಾಂಕ್ ಕೂಡ ಇಂದು ಮುಂಜಾನೆ ಆಂಗ್ಲರ ನಾಡಿಗೆ ತಲುಪಿದ್ದಾರೆ. ಆದರೆ, ಬಿಸಿಸಿಐ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ರೋಹಿತ್ ಅಲಭ್ಯರಾದರೆ ನೂತನ ನಾಯಕ ಯಾರು ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಪಂದ್ಯದ ಹೊತ್ತಿಗೆ ರೋಹಿತ್ ಚೇತರಿಸದೇ ಇದ್ದರೆ, ವೇಗಿ ಜಸ್‌ಪ್ರೀತ್ ಬುಮ್ರಾಗೆ ಕ್ಯಾಪ್ಟನ್ ಪಟ್ಟ ಸಿಗುವುದು ಖಾತ್ರಿಯಾಗಿದೆ.
Hardik Pandya: ಉಮ್ರಾನ್ ಮಲಿಕ್ಗೆ ನೀಡಿದ್ದು ಕೇವಲ 1 ಓವರ್: ಇದಕ್ಕೆ ಹಾರ್ದಿಕ್ ಕೊಟ್ಟ ಕಾರಣವೇನು ಗೊತ್ತೇ?
ಭಾರತ ಟೆಸ್ಟ್ ತಂಡದ ಉಪನಾಯಕ ಕೆ. ಎಲ್ ರಾಹುಲ್ ಕೂಡ ಗಾಯದ ಸಮಸ್ಯೆ ಕಾರಣ ಇಂಗ್ಲೆಂಡ್ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಟೆಸ್ಟ್ ತಂಡದ ಉಪನಾಯಕನಾಗಿದ್ದ ಬುಮ್ರಾಗೆ ಕ್ಯಾಪ್ಟನ್ ಜವಾಬ್ದಾರಿ ಸಿಗಲಿದೆ ಎಂದು ವರದಿಗಳು ಹೇಳಿವೆ. ಆದರೆ, ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ಮಯಾಂಕ್ ಅಗರ್ವಾಲ್ ಇಂಗ್ಲೆಂಡ್ಗೆ ತಲುಪಿದ್ದಾರೆಯಾದರೂ ಕಣಕ್ಕಿಳಿಯುವುದು ಅನುಮಾನವಿದೆ. ಯಾಕೆಂದರೆ ತಂಡದಲ್ಲಿ ಈಗಾಗಲೇ ಶುಭ್ಮನ್ ಗಿಲ್ ಜೊತೆ ಕಣಕ್ಕಿಳಿಯಲು ಓಪನರ್ ಆಗಿ ಕೆಎಸ್ ಭರತ್, ಹನುಮಾ ವಿಹಾರಿ ಹಾಗೂ ಚೇತೇಶ್ವರ್ ಪೂಜಾರ ಇದ್ದಾರೆ. ಅಲ್ಲದೆ ಭರತ್ ಅಭ್ಯಾಸ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರನ್ನು ಆಡಿಸಿದರೂ ಅಚ್ಚರಿ ಪಡಬೇಕಿಲ್ಲ.
ಬೆನ್ ಫೋಕ್ಸ್ಗೆ ಕೊರೊನಾ:
ಭಾರತ ತಂಡದಲ್ಲಿ ಕೊರೊನಾ ಪ್ರಕರಣ ಕಂಡುಬಂದ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ತಂಡದಲ್ಲೂ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಫೋಕ್ಸ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತ ಫಾಕ್ಸ್ ಹೆಡಿಂಗ್ಲಿ ಟೆಸ್ಟ್‌ನಿಂದ ತನ್ನ ಹೆಸರನ್ನು ಹಿಂಪಡೆದಿದ್ದಾರೆ. ಅವರ ಸ್ಥಾನಕ್ಕೆ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಇಂಗ್ಲೆಂಡ್ ತಂಡ ಸೇರಿಸಿಕೊಂಡಿದೆ. ಹಿಂದಿನ ಶನಿವಾರ, ಫಾಕ್ಸ್ ಬೆನ್ನುನೋವಿನಿಂದ ನರುಳುತ್ತಿದ್ದರಿಂದ ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಹಾಗಾಗಿ ಜಾನಿ ಬೈರ್‌ಸ್ಟೋ ಅವರ ಸ್ಥಾನವನ್ನು ಭರ್ತಿ ಮಾಡಿದ್ದರು. ಶನಿವಾರ ಸಂಜೆ ಫಾಕ್ಸ್ ಅವರ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದ್ದು, ಫಲಿತಾಂಶವು ಪಾಸಿಟಿವ್ ಎಂದು ತಿಳಿದುಬಂದಿದೆ.
Hardik Pandya: ಐರ್ಲೆಂಡ್ ವಿರುದ್ಧ ಕೇವಲ ಒಂದು ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಹಾರ್ದಿಕ್ ಪಾಂಡ್ಯ