ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2025 ರ ಐಪಿಎಲ್ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಎರಡು ತಂಡಗಳು ಈ ಪಂದ್ಯಕ್ಕೆ ಸೋತು ಬಂದಿದ್ದರಿಂದ ಎರಡೂ ತಂಡಗಳಿಗೂ ಗೆಲುವು ಅವಶ್ಯಕವಾಗಿತ್ತು. ಅಂತಿಮವಾಗಿ ತನ್ನ ತವರಿನಲ್ಲಿ ಮೊದಲ ಪಂದ್ಯವನ್ನು ಆಡಿದ ಮುಂಬೈ ಏಕಪಕ್ಷೀಯವಾಗಿ ಕೆಕೆಆರ್ ತಂಡವನ್ನು ಮಣಿಸಿತು.ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ 20 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು ಕೇವಲ 116 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಮುಂಬೈ ತಂಡ ಕೇವಲ 12.5 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಿ ಎಂಟು ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.
ಈ ಋತುವಿನಲ್ಲಿ ಮುಂಬೈ ತನ್ನ ಮೊದಲ ಗೆಲುವು ಸಾಧಿಸಿದ್ದು, ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 117 ರನ್ ಕಲೆಹಾಕಿತು. ಈ ಗುರಿಯನ್ನು ಮುಂಬೈ 43 ಎಸೆತಗಳು ಬಾಕಿ ಇರುವಾಗಲೇ ಬೆನ್ನಟ್ಟಿತು.
ಮುಂಬೈ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ವಿಲ್ ಜ್ಯಾಕ್ಸ್ ವಿಕೆಟ್ ಅನ್ನು ಆಂಡ್ರೆ ರಸೆಲ್ ಪಡೆದಿದ್ದಾರೆ. ಜಾಕ್ವೆಸ್ 17 ಎಸೆತಗಳಲ್ಲಿ 16 ರನ್ ಗಳಿಸಿದರು.
ವಾಂಖೆಡೆಯಲ್ಲಿ ರಯಾನ್ ರಿಕಲ್ಟನ್ ಅರ್ಧಶತಕ ಗಳಿಸಿದ್ದಾರೆ. ಇದಕ್ಕಾಗಿ ಅವರು ಎದುರಿಸಿದ್ದು ಕೇವಲ 33 ಎಸೆತಗಳು.
ವಾಂಖೆಡೆಯಲ್ಲಿ ಮುಂಬೈ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸಿದ್ದು, 9 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದ್ದಾರೆ. ವಿಲ್ ಜ್ಯಾಕ್ಸ್ ಮತ್ತು ರಯಾನ್ ರಿಕಲ್ಟನ್ ಕ್ರೀಸ್‌ನಲ್ಲಿದ್ದಾರೆ.
7 ಓವರ್‌ಗಳ ಆಟ ಮುಗಿದಿದೆ. ಮುಂಬೈ ಇಂಡಿಯನ್ಸ್ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ. ವಿಲ್ ಜ್ಯಾಕ್ಸ್ 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ರಯಾನ್ ರಿಕಲ್ಸನ್ 36 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆಂಡ್ರೆ ರಸೆಲ್ ರೋಹಿತ್ ಶರ್ಮಾ ಅವರನ್ನು ಬೇಟೆಯಾಡಿದ್ಧಾರೆ. ಅವರು 12 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು .
ಮುಂಬೈ ತಂಡವು ವೇಗದ ಆರಂಭವನ್ನೇ ಪಡೆದುಕೊಂಡಿದೆ. ಮೊದಲ 3 ಓವರ್‌ಗಳಲ್ಲಿ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ರೋಹಿತ್ ಶರ್ಮಾ 12 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ರಯಾನ್ ರಿಕಲ್ಟನ್ 14 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
2 ಓವರ್‌ಗಳು ಮುಗಿದಿವೆ. ಮುಂಬೈ ಇಂಡಿಯನ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ. ರೋಹಿತ್ ಶರ್ಮಾ 7 ಎಸೆತಗಳಲ್ಲಿ 12 ರನ್ ಗಳಿಸಿದರೆ, ರಯಾನ್ ರಿಕಲ್ಟನ್ 6 ಎಸೆತಗಳಲ್ಲಿ 1 ರನ್ ಗಳಿಸಿದರು.
ಕೋಲ್ಕತ್ತಾ ತಂಡ ಕೇವಲ 116 ರನ್‌ಗಳಿಗೆ ಆಲೌಟ್ ಆಯಿತು. ಮೊದಲು ಬ್ಯಾಟಿಂಗ್ ಮಾಡಿದ ಇಡೀ ತಂಡ ಕೇವಲ 98 ಎಸೆತಗಳನ್ನು ಮಾತ್ರ ಆಡಿತು. ಮುಂಬೈ ತಂಡ ಗೆಲ್ಲಲು 117 ರನ್ ಗಳಿಸಬೇಕಾಗಿದೆ.
13 ಓವರ್‌ಗಳ ಆಟ ಮುಗಿದಿದೆ. ಕೋಲ್ಕತ್ತಾ ತಂಡ 8 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ. ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ಕ್ರೀಸ್‌ನಲ್ಲಿದ್ದಾರೆ.
ಐಪಿಎಲ್‌ಗೆ ಪಾದಾರ್ಪಣೆ ಮಾಡುತ್ತಿರುವ ಅಶ್ವಿನಿ ಕುಮಾರ್, ವಾಂಖೆಡೆಯಲ್ಲಿ ಮಾರಕ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮನೀಶ್ ಪಾಂಡೆಯನ್ನು ಬೇಟೆಯಾಡಿದ್ದಾರೆ. ಇದರೊಂದಿಗೆ, ಅವರು ಈ ಪಂದ್ಯದಲ್ಲಿ ಈಗ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ಕೋಲ್ಕತ್ತಾ ತನ್ನ 7ನೇ ವಿಕೆಟ್ ಕಳೆದುಕೊಂಡಿದೆ.
ರಿಂಕು ಸಿಂಗ್ ವಾಂಖೆಡೆಯಲ್ಲೂ ವಿಫಲರಾಗಿದ್ದಾರೆ. 14 ಎಸೆತಗಳಲ್ಲಿ 17 ರನ್ ಗಳಿಸಿದ ನಂತರ ಅವರು ಅಶ್ವಿನಿ ಕುಮಾರ್‌ಗೆ ಬಲಿಯಾದರು. ಕೋಲ್ಕತ್ತಾ ತಂಡವು ಆರನೇ ವಿಕೆಟ್ ಕಳೆದುಕೊಂಡಿದೆ.
10 ಓವರ್‌ಗಳ ಆಟ ಮುಗಿದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 5 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ. ಮನೀಶ್ ಪಾಂಡೆ 11 ಎಸೆತಗಳಲ್ಲಿ 14 ರನ್ ಮತ್ತು ರಿಂಕು ಸಿಂಗ್ 12 ಎಸೆತಗಳಲ್ಲಿ 13 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
16 ಎಸೆತಗಳಲ್ಲಿ 26 ರನ್ ಗಳಿಸಿ ಅಂಗ್ಕ್ರಿಶ್ ರಘುವಂಶಿ ಕೂಡ ಹಾರ್ದಿಕ್ ಪಾಂಡ್ಯಗೆ ಬಲಿಯಾದರು. ಕೋಲ್ಕತ್ತಾ ತಂಡದ ಅರ್ಧದಷ್ಟು ಜನರು ಈಗ ಪೆವಿಲಿಯನ್‌ಗೆ ಮರಳಿದ್ದಾರೆ. 7 ಓವರ್‌ಗಳು ಮುಗಿಯುವ ವೇಳೆಗೆ ಕೋಲ್ಕತ್ತಾ ತಂಡದ ಸ್ಕೋರ್ 5 ವಿಕೆಟ್‌ಗಳ ನಷ್ಟಕ್ಕೆ 45 ರನ್‌ಗಳಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವಾಂಖೆಡೆಯಲ್ಲಿ ಎಡವಿದೆ. ಉಪನಾಯಕ ವೆಂಕಟೇಶ್ ಅಯ್ಯರ್ ಕೂಡ ಔಟಾಗಿದ್ದಾರೆ. ಮೊದಲ 6 ಓವರ್‌ಗಳಲ್ಲಿ ಕೋಲ್ಕತ್ತಾ 4 ವಿಕೆಟ್‌ಗಳನ್ನು ಕಳೆದುಕೊಂಡಿದೆ.
5 ಓವರ್‌ಗಳ ಆಟ ಮುಗಿದಿದೆ. ಕೋಲ್ಕತ್ತಾ 3 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ. 11 ಎಸೆತಗಳಲ್ಲಿ 20 ರನ್ ಗಳಿಸಿದ ಅಂಗ್‌ಕ್ರಿಶ್ ರಘುವಂಶಿ ಮತ್ತು 7 ಎಸೆತಗಳಲ್ಲಿ 3 ರನ್ ಗಳಿಸಿದ ವೆಂಕಟೇಶ್ ಅಯ್ಯರ್ ಕ್ರೀಸ್‌ನಲ್ಲಿದ್ದಾರೆ.
ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ ಕೂಡ 7 ಎಸೆತಗಳಲ್ಲಿ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಶ್ವಿನಿ ಕುಮಾರ್ ಅವರನ್ನು ಬೇಟೆಯಾಡಿದರು.
ಸುನಿಲ್ ನರೈನ್ ನಂತರ, ಕ್ವಿಂಟನ್ ಡಿ ಕಾಕ್ ಕೂಡ ಔಟಾಗಿದ್ದಾರೆ. ದೀಪಕ್ ಚಹಾರ್ ಅವರ ವಿಕೆಟ್ ಪಡೆದರು. ಇದರೊಂದಿಗೆ, ಕೋಲ್ಕತ್ತಾದ ಇಬ್ಬರೂ ಆರಂಭಿಕರು ಇನ್ನಿಂಗ್ಸ್‌ನ ಮೊದಲ 7 ಎಸೆತಗಳಲ್ಲಿ ಪೆವಿಲಿಯನ್‌ಗೆ ಮರಳಿದರು.
ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಸುನಿಲ್ ನರೈನ್ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಕೋಲ್ಕತ್ತಾ ಮೊದಲ ಓವರ್‌ನಲ್ಲಿಯೇ ಹಿನ್ನಡೆ ಅನುಭವಿಸಿದೆ.
ಕೋಲ್ಕತ್ತಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿದೆ. ಸುನಿಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
ರಯಾನ್ ರಿಕಲ್ಟನ್, ವಿಲ್ ಜ್ಯಾಕ್ಸ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್, ಅಶ್ವಿನಿ ಕುಮಾರ್, ವಿಘ್ನೇಶ್ ಪುತ್ತೂರ್.
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಅಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಮುಂಬೈ ಇಂಡಿಯನ್ಸ್ ತಂಡವು ಪ್ಲೇಯಿಂಗ್-11 ರಲ್ಲಿ 2 ಬದಲಾವಣೆಗಳನ್ನು ಮಾಡಿದೆ. ಇಂದು ವಿಲ್ ಜ್ಯಾಕ್ಸ್‌ಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇದಲ್ಲದೆ, 23 ವರ್ಷದ ಅಶ್ವಿನಿ ಕುಮಾರ್ ಐಪಿಎಲ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಕೆಕೆಆರ್ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 7:03 pm, Mon, 31 March 25