AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs KKR Highlights IPL 2023: ವೆಂಕಟೇಶ್ ಶತಕ ವ್ಯರ್ಥ; ಮುಂಬೈಗೆ 2ನೇ ಜಯ

Mumbai Indians vs Kolkata Knight Riders IPL 2023 Highlights in Kannada: ಸೂಪರ್ ಸಂಡೆ ಡಬಲ್ ಹೆಡರ್ ದಿನದಂದು ನಡೆದ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿತು.

MI vs KKR Highlights IPL 2023: ವೆಂಕಟೇಶ್ ಶತಕ ವ್ಯರ್ಥ; ಮುಂಬೈಗೆ 2ನೇ ಜಯ
ಮುಂಬೈ- ಕೋಲ್ಕತ್ತಾ ಮುಖಾಮುಖಿ
ಪೃಥ್ವಿಶಂಕರ
|

Updated on:Apr 16, 2023 | 7:29 PM

Share

ಸೂಪರ್ ಸಂಡೆ ಡಬಲ್ ಹೆಡರ್ ದಿನದಂದು ನಡೆದ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ವೆಂಕಟೇಶ್ ಅಯ್ಯರ್ ಅವರ ಬಿರುಸಿನ ಶತಕದ ಹಿನ್ನಲೆಯಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್​ಗೆ 186 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಮುಂಬೈ ಕಿಶನ್ ಅವರ ಅರ್ಧಶತಕದ ನೆರವಿನಿಂದ 17.4 ಓವರ್​ಗಳಲ್ಲಿ ಗುರಿ ಸಾಧಿಸಿತು.

LIVE NEWS & UPDATES

The liveblog has ended.
  • 16 Apr 2023 07:26 PM (IST)

    ಮುಂಬೈಗೆ 5 ವಿಕೆಟ್‌ಗಳ ಜಯ

    18ನೇ ಓವರ್​ನಲ್ಲಿ 5ನೇ ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ 186 ರನ್​ಗಳ ಗುರಿಯನ್ನು 17.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಸಾಧಿಸಿತು.

  • 16 Apr 2023 07:17 PM (IST)

    43 ರನ್​ಗಳಿಸಿ ಸೂರ್ಯ ಔಟ್

    ನಾಯಕ ಸೂರ್ಯಕುಮಾರ್ 43 ರನ್ ಗಳಿಸಿ ಔಟಾದರು. ಮುಂಬೈ ಸ್ಕೋರ್ 16.3 ಓವರ್‌ಗಳಲ್ಲಿ 176/4

  • 16 Apr 2023 07:08 PM (IST)

    ಐವತ್ತರ ಸಮೀಪದಲ್ಲಿ ಸೂರ್ಯ

    15ನೇ ಓವರ್‌ನಲ್ಲಿ ಸೂರ್ಯ ಫೋರ್ ಬಾರಿಸಿದರು. ಇದರೊಂದಿಗೆ ನಾಯಕ ಸೂರ್ಯಕುಮಾರ್ ಯಾದವ್ ಐವತ್ತರ ಸಮೀಪದಲ್ಲಿದ್ದಾರೆ. 15 ಓವರ್‌ಗಳ ನಂತರ ಮುಂಬೈ ಸ್ಕೋರ್ 171/3

  • 16 Apr 2023 07:01 PM (IST)

    ಗೆಲುವಿನ ಸನಿಹದಲ್ಲಿ ಮುಂಬೈ

    ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಸನಿಹದಲ್ಲಿದೆ. ಈ ಓವರ್‌ನ ಕೊನೆಯ ಎಸೆತದಲ್ಲಿ ಟಿಮ್ ಡೇವಿಡ್ ಅದ್ಭುತ ಸಿಕ್ಸರ್ ಬಾರಿಸಿದರು. ಗೆಲುವಿಗೆ 30 ಎಸೆತಗಳಲ್ಲಿ 23 ರನ್‌ಗಳ ಅಗತ್ಯವಿದೆ

  • 16 Apr 2023 06:55 PM (IST)

    ತಿಲಕ್ ಔಟ್

    ಕೋಲ್ಕತ್ತಾದ ಯುವ ಬೌಲರ್ ಸುಯೆಶ್ ಅವರ ಓವರ್‌ನಲ್ಲಿ ತಿಲಕ್ 30 ರನ್ ಗಳಿಸಿ ಔಟಾದರು. ಮುಂಬೈ ತಂಡದ ಗೆಲುವಿಗೆ 37 ಎಸೆತಗಳಲ್ಲಿ 39 ರನ್‌ಗಳ ಅಗತ್ಯವಿದೆ. 14 ಓವರ್‌ಗಳಲ್ಲಿ ಮುಂಬೈ ಸ್ಕೋರ್ 148/3

  • 16 Apr 2023 06:49 PM (IST)

    50 ರನ್ ಜೊತೆಯಾಟ

    13ನೇ ಓವರ್‌ನಲ್ಲೂ 1 ಸಿಕ್ಸರ್ ಮತ್ತು 2 ಬೌಂಡರಿ ಬಂದವು. ಈ ಮೂಲಕ ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ನಡುವೆ 50 ರನ್ ಜೊತೆಯಾಟವಿದೆ

  • 16 Apr 2023 06:43 PM (IST)

    ಸೂರ್ಯ ಸಿಕ್ಸರ್

    ಸೂರ್ಯಕುಮಾರ್ ಯಾದವ್ 11ನೇ ಓವರ್‌ನ ಕೊನೆಯ 2 ಎಸೆತಗಳಲ್ಲಿ ಸತತ 2 ಸಿಕ್ಸರ್ ಬಾರಿಸಿದರು. 11 ಓವರ್‌ಗಳ ನಂತರ ಮುಂಬೈ ಸ್ಕೋರ್ 123/2. ಗೆಲುವಿಗೆ 54 ಎಸೆತಗಳಲ್ಲಿ 62 ರನ್‌ಗಳ ಅಗತ್ಯವಿದೆ

  • 16 Apr 2023 06:36 PM (IST)

    ತಿಲಕ್ ಸಿಕ್ಸರ್

    ಈ ಓವರ್‌ನಲ್ಲಿ ತಿಲಕ್ ಶರ್ಮಾ ಅವರ ಬ್ಯಾಟ್‌ನಿಂದ ಅಮೋಘ ಸಿಕ್ಸರ್ ಕಾಣಿಸಿಕೊಂಡಿತು. 10 ಓವರ್‌ಗಳ ನಂತರ ಮುಂಬೈ ಸ್ಕೋರ್ 110/2.

  • 16 Apr 2023 06:35 PM (IST)

    2 ಬೌಂಡರಿ

    ಯುವ ಬೌಲರ್ ಸುಯಾಸ್ ಶರ್ಮಾ ಅವರ ಓವರ್‌ನಲ್ಲಿ 2 ಬೌಂಡರಿ ಬಂದವು. ತಿಲಕ್ ಮತ್ತು ಸೂರ್ಯಕುಮಾರ್ ಮುಂಬೈನ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. 9 ಓವರ್‌ಗಳ ನಂತರ ಮುಂಬೈ ಸ್ಕೋರ್ 99/2.

  • 16 Apr 2023 06:27 PM (IST)

    ಕಿಶನ್ ಅರ್ಧಶತಕ ಸಿಡಿಸಿ ಔಟ್

    7ನೇ ಓವರ್​5ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಕಿಶನ್ ತಮ್ಮ ಅರ್ಧಶತಕ ಪೂರೈಸಿದರು. ಆ ಬಳಿಕ 8ನೇ ಓವರ್​ನ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಕಿಶನ್ ನಂತರದ ಎಸೆತದಲ್ಲಿ ಔಟಾದರು.

  • 16 Apr 2023 06:23 PM (IST)

    ಸೂರ್ಯ ಬೌಂಡರಿ

    ವರುಣ್ ಎಸೆದ 7ನೇ ಓವರ್​ನಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸಿದರು. 7 ಓವರ್‌ಗಳ ನಂತರ ಮುಂಬೈ ಸ್ಕೋರ್ 72/1, ಮುಂಬೈ ಗೆಲುವಿಗೆ 84 ಎಸೆತಗಳಲ್ಲಿ 114 ರನ್ ಅಗತ್ಯವಿದೆ.

  • 16 Apr 2023 06:14 PM (IST)

    ರೋಹಿತ್ ಶರ್ಮಾ ವಿಕೆಟ್ ಪತನ

    ಯುವ ಬೌಲರ್ ಸುಯೆಶ್ ಎಸೆತದಲ್ಲಿ ರೋಹಿತ್ ಶರ್ಮಾ 20 ರನ್ ಗಳಿಸಿ ಔಟಾದರು. ಉಮೇಶ್ ಯಾದವ್ ಅದ್ಭುತ ಕ್ಯಾಚ್ ಪಡೆದು ಕೋಲ್ಕತ್ತಾಗೆ ಮೊದಲ ಯಶಸ್ಸು ತಂದುಕೊಟ್ಟರು. 5 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 65/1

  • 16 Apr 2023 06:02 PM (IST)

    ಕಿಶನ್ ಅಬ್ಬರ

    ಮೂರನೇ ಓವರ್​ನಲ್ಲೂ ಕಿಶನ್ ಒಂದು ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿದರು. 3 ಓವರ್‌ಗಳ ನಂತರ ಮುಂಬೈ ಸ್ಕೋರ್ 35/0. ಇಶಾನ್ ಕಿಶನ್ 26 ರನ್ ಹಾಗೂ ರೋಹಿತ್ ಶರ್ಮಾ 9 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 186 ರನ್‌ಗಳ ಗುರಿ ಅವರ ಮುಂದಿದೆ.

  • 16 Apr 2023 06:01 PM (IST)

    ಕಿಶನ್ ಸಿಕ್ಸರ್

    ಈ ಓವರ್‌ನಲ್ಲಿ ಇಶಾನ್ ಕಿಶ್ ಅವರ ಬ್ಯಾಟ್ನಿಂದ 1 ಸಿಕ್ಸರ್ ಮತ್ತು 1 ಬೌಂಡರಿ ಬಂತು. ರೋಹಿತ್ ಶರ್ಮಾ 2 ಹಾಗೂ ಇಶಾನ್ 16 ರನ್ ಗಳಿಸಿ ಆಡುತ್ತಿದ್ದಾರೆ. 2 ಓವರ್‌ಗಳ ನಂತರ ಮುಂಬೈ ಸ್ಕೋರ್ 18/0

  • 16 Apr 2023 06:00 PM (IST)

    ಮುಂಬೈ ಬ್ಯಾಟಿಂಗ್ ಆರಂಭ

    ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆರಂಭಿಸಿದೆ. ಮುಂಬೈ ಪರ ರೋಹಿತ್ ಮತ್ತು ಇಶಾನ್ ಓಪನಿಂಗ್ ಮಾಡಲು ಮೈದಾನಕ್ಕೆ ಇಳಿದಿದ್ದಾರೆ. 1 ಓವರ್ ನಂತರ ಮುಂಬೈ ಸ್ಕೋರ್ 2/0

  • 16 Apr 2023 05:27 PM (IST)

    186 ರನ್ ಟಾರ್ಗೆಟ್

    ಕೊನೆಯ ಓವರ್​ನಲ್ಲಿ ರಸೆಲ್ 2 ಬೌಂಡರಿ ಬಾರಿಸಿದರು. ಅಂತಿಮವಾಗಿ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್ ಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು.

  • 16 Apr 2023 05:21 PM (IST)

    ರಸೆಲ್ ಸಿಕ್ಸರ್, ರಿಂಕು ಔಟ್

    19ನೇ ಓವರ್​ನ ಮೊದಲ ಎಸೆತವನ್ನು ರಸೆಲ್ ಸಿಕ್ಸರ್​ಗಟ್ಟಿದರೆ, 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇನ್ನು 5ನೇ ಎಸೆತದಲ್ಲಿ ರಿಂಕು ಸಿಂಗ್ ಲಾಂಗ್ ಆಫ್​ನಲ್ಲಿ ಕ್ಯಾಚಿತ್ತು ಔಟಾದರು.

  • 16 Apr 2023 05:08 PM (IST)

    ಅಯ್ಯರ್ ಔಟ್

    ಶತಕ ಸಿಡಿಸಿದ ಬಳಿಕ ಮೆರಿಡಿತ್ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಅಯ್ಯರ್, ನಂತರದ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 16 Apr 2023 05:07 PM (IST)

    ಅಬ್ಬರದ ಶತಕ ಸಿಡಿಸಿದ ವೆಂಕಟೇಶ್

    17ನೇ ಓವರ್​ನಲ್ಲಿ ಸಿಂಗಲ್ ಕದ್ದ ವೆಂಕಟೇಶ್ ಅಯ್ಯರ್ ಈ ಆವೃತ್ತಿಯ ತಮ್ಮ ಚೊಚ್ಚಲ ಶತಕ ಸಿಡಿಸಿದ್ದಾರೆ. 49 ಎಸೆತಗಳಲ್ಲಿ ಅಯ್ಯರ್ ಶತಕ ಪೂರ್ಣಗೊಳಿಸಿದ್ದು, ಇದೇ ಓವರ್​ನಲ್ಲಿ ಕೆಕೆಆರ್​ನ 150ರನ್ ಕೂಡ ಪೂರ್ಣಗೊಂಡಿದೆ.

  • 16 Apr 2023 04:56 PM (IST)

    ಶತಕದಂಚಿನಲ್ಲಿ ಅಯ್ಯರ್

    14ನೇ ಓವರ್​ನಲ್ಲಿ ಡೀಪ್ ಸ್ಕ್ವೇರ್​ ಲೆಗ್​ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ ಅಯ್ಯರ್ ಶತಕದಂಚಿಗೆ ತಲುಪಿದ್ದಾರೆ.

  • 16 Apr 2023 04:46 PM (IST)

    ಶಾರ್ದೂಲ್ ಔಟ್

    13ನೇ ಓವರ್​ನ ಕೊನೆಯ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಕ್ಯಾಚಿತ್ತು ಔಟಾದರು. ಹೃತಿಕ್ ಅದ್ಭುತ ಕ್ಯಾಚ್ ತೆಗೆದುಕೊಂಡರು.

  • 16 Apr 2023 04:45 PM (IST)

    ಡೀಪ್ ಸ್ಕ್ವೇರ್​ ಲೆಗ್​ನಲ್ಲಿ ಸಿಕ್ಸರ್​

    12ನೇ ಓವರ್​ನ 2ನೇ ಎಸೆತವನ್ನು ಡೀಪ್ ಸ್ಕ್ವೇರ್​ ಲೆಗ್​ನಲ್ಲಿ ಸಿಕ್ಸರ್​ಗಟ್ಟಿದ ವೆಂಕಟೇಶ್ 4ನೇ ಎಸೆತವನ್ನು ಫೈನ್​ ಲೆಗ್​ನಲ್ಲಿ ಬೌಂಡರಿ ಬಾರಿಸಿದರು.

  • 16 Apr 2023 04:36 PM (IST)

    ಬ್ಯಾಕ್ ಟು ಬ್ಯಾಕ್ ಸಿಕ್ಸರ್

    ಮೆರಿಡಿತ್ ಎಸೆದ 11ನೇ ಓವರ್​ನ ಮೂರು ಮತ್ತು 4ನೇ ಎಸೆತವನ್ನು ಸಿಕ್ಸರ್​ಗಟ್ಟಿದ ವೆಂಕಟೇಶ್ ಕೆಕೆಆರ್ ಸ್ಕೋರ್ ಅನ್ನು 100ರ ಗಡಿ ದಾಟಿಸಿದ್ದಾರೆ.

  • 16 Apr 2023 04:27 PM (IST)

    ಅಯ್ಯರ್ ಅರ್ಧಶತಕ

    9ನೇ ಓವರ್​ನ 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಅಯ್ಯರ್ ಇದರೊಂದಿಗೆ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು. ಆ ನಂತರ 6ನೇ ಎಸೆತವನ್ನು ಸಿಕ್ಸರ್​ಗಟ್ಟಿದರು.

  • 16 Apr 2023 04:24 PM (IST)

    ನಾಯಕ ರಾಣಾ ಔಟ್

    8ನೇ ಓವರ್​ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಹೀಗಾಗಿ 9ನೇ ಓವರ್​ನ ಮೊದಲ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ನಾಯಕ ರಾಣಾ ಕ್ಯಾಚಿತ್ತು ಔಟಾದರು.

  • 16 Apr 2023 04:22 PM (IST)

    7ನೇ ಓವರ್​ನಲ್ಲಿ 2 ಬೌಂಡರಿ

    7ನೇ ಓವರ್​ನ ಮೊದಲ ಎಸೆತವನ್ನು ಫೈನ್​ ಲೆಗ್​ ಮೇಲೆ ಬೌಂಡರಿ ಬಾರಿಸಿದ ಅಯ್ಯರ್, ಕೊನೆಯ ಎಸೆತವನ್ನು ಡೀಪ್ ಸ್ಕ್ವೈರ್​ ಲೆಗ್​ನಲ್ಲಿ ಬೌಂಡರಿಗಟ್ಟಿದರು.

  • 16 Apr 2023 04:08 PM (IST)

    2ನೇ ವಿಕೆಟ್ ಪತನ

    ಪವರ್ ಪ್ಲೇನ ಕೊನೆಯ ಓವರ್ ಎಸೆಯಲು ಬಂದ ಪಿಯೂಷ್ ಚಾವ್ಲಾ, ಆರಂಭಿಕ ಗುರ್ಭಜ್ ವಿಕೆಟ್ ಉರುಳಿಸಿದರು. ಶಾರ್ಟ್​ ಥರ್ಡ್​ಮ್ಯಾನ್​ನಲ್ಲಿ ಯಾನ್ಸೆನ್ ಅದ್ಭುತ ಕ್ಯಾಚ್ ತೆಗೆದುಕೊಂಡರು.

  • 16 Apr 2023 04:04 PM (IST)

    ಯಾನ್ಸೆನ್​ಗೆ ಸಿಕ್ಸರ್

    5ನೇ ಓವರ್ ಎಸೆದ ಯಾನ್ಸೆನ್ ಕೊಂಚ ದುಬಾರಿಯಾದರು. ಈ ಓವರ್​ನಲ್ಲಿ ಅಯ್ಯರ್ ಲಾಂಗ್​ ಆನ್​ನಲ್ಲಿ ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತವನ್ನು ಲಾಂಗ್​ ಆಫ್​ನಲ್ಲಿ ಸಿಕ್ಸರ್​ಗಟ್ಟಿದರು.

  • 16 Apr 2023 03:54 PM (IST)

    ಅಯ್ಯರ್ ಸಿಕ್ಸರ್

    ಗ್ರೀನ್ ಎಸೆದ 4ನೇ ಓವರ್​ನ 2ನೇ ಎಸೆತದಲ್ಲಿ ಅಯ್ಯರ್ ಥರ್ಡ್​ಮ್ಯಾನ್​ನಲ್ಲಿ ಸಿಕ್ಸರ್ ಬಾರಿಸಿದರು.

  • 16 Apr 2023 03:48 PM (IST)

    ಅರ್ಜುನ್​ಗೆ ಸಿಕ್ಸರ್

    3ನೇ ಓವರ್ ಎಸೆದ ಅರ್ಜುನ್ ತೆಂಡೂಲ್ಕರ್​ಗೆ 5ನೇ ಎಸೆತದಲ್ಲಿ ಅಯ್ಯರ್ ಬೌಂಡರಿ ಬಾರಿಸಿದರು. ಆ ನಂತರ 6ನೇ ಎಸೆತವನ್ನು ಸಿಕ್ಸರ್​ಗಟ್ಟಿದರು.

  • 16 Apr 2023 03:42 PM (IST)

    ಶೂನ್ಯಕ್ಕೆ ಜಗದೀಸನ್ ಔಟ್

    2ನೇ ಓವರ್​ನಲ್ಲಿ ಗ್ರೀನ್ ವೈಡ್ ಮೂಲಕ ಬೌಂಡರಿ ನೀಡಿದರು. ಆ ಬಳಿಕ ಓವರ್​ನ 5ನೇ ಎಸೆತದಲ್ಲಿ ಜಗದೀಸನ್​ ವಿಕೆಟ್ ಉರುಳಿಸಿದರು.

  • 16 Apr 2023 03:35 PM (IST)

    ಅರ್ಜುನ್ ಬೌಲಿಂಗ್

    ಕೆಕೆಆರ್ ಬ್ಯಾಟಿಂಗ್ ಆರಂಭಿಸಿದೆ. ಮುಂಬೈ ಪರ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಆರಂಭಿಸಿದ್ದಾರೆ. ಅರ್ಜುನ್​ಗೆ ಇದು ಮೊದಲ ಐಪಿಎಲ್ ಪಂದ್ಯವಾಗಿದೆ.

  • 16 Apr 2023 03:32 PM (IST)

    ಮುಂಬೈ ಇಂಡಿಯನ್ಸ್

    ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕಿನ್, ಪಿಯೂಷ್ ಚಾವ್ಲಾ, ರಿಲೆ ಮೆರೆಡಿತ್, ಡ್ವೇನ್ ಜಾನ್ಸನ್

  • 16 Apr 2023 03:32 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್

    ರಹಮಾನುಲ್ಲಾ ಗುರ್ಬಾಜ್, ನಾರಾಯಣ ಜಗದೀಸನ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್.

  • 16 Apr 2023 03:04 PM (IST)

    ಟಾಸ್ ಗೆದ್ದ ಮುಂಬೈ

    ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - Apr 16,2023 3:02 PM

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ