IPL 2025: ಆರ್​ಸಿಬಿ- ಮುಂಬೈ ನಡುವೆ ಹೈವೋಲ್ಟೇಜ್ ಫೈಟ್; ಪಂದ್ಯ ಯಾವಾಗ ಎಲ್ಲಿ ಎಷ್ಟು ಗಂಟೆಗೆ ಆರಂಭ?

MI vs RCB IPL 2025: ಏಪ್ರಿಲ್ 7 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಭೇಟಿಯಾಗಲಿವೆ. ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಕಾರಣ ಈ ಪಂದ್ಯ ಎರಡು ತಂಡಗಳಿಗೆ ಮಹತ್ವದ್ದಾಗಿದೆ. ಇನ್ನು ಮುಖಾಮುಖಿ ದಾಖಲೆಯಲ್ಲಿ ಮುಂಬೈ ತಂಡ 19 ಬಾರಿ, ಆರ್ಸಿಬಿ 14 ಬಾರಿ ಗೆದ್ದಿವೆ.

IPL 2025: ಆರ್​ಸಿಬಿ- ಮುಂಬೈ ನಡುವೆ ಹೈವೋಲ್ಟೇಜ್ ಫೈಟ್; ಪಂದ್ಯ ಯಾವಾಗ ಎಲ್ಲಿ ಎಷ್ಟು ಗಂಟೆಗೆ ಆರಂಭ?
Mi Vs Rcb

Updated on: Apr 06, 2025 | 9:37 PM

2025 ರ ಐಪಿಎಲ್​ನ (IPL 2025) 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ತನ್ನ ತವರು ನೆಲವಾದ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು (MI vs RCB) ಎದುರಿಸಲಿದೆ. ತಮ್ಮ ತಮ್ಮ ಕೊನೆಯ ಪಂದ್ಯದಲ್ಲಿ ಎರಡು ತಂಡಗಳು ಸೋತಿರುವ ಕಾರಣ ಈ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದಾಗಿದೆ.
ಮುಂಬೈ ಇಂಡಿಯನ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ 12 ರನ್‌ಗಳ ಸೋಲನ್ನು ಅನುಭವಿಸಿದರೆ, ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಈ ಸೀಸನ್​ನ ಮೊದಲ ಸೋಲನ್ನು ಅನುಭವಿಸಿತು.

ಮುಖಾಮುಖಿ ದಾಖಲೆ

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇದುವರೆಗೆ ಒಟ್ಟು 33 ಪಂದ್ಯಗಳು ನಡೆದಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 19 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಆರ್‌ಸಿಬಿ 14 ಪಂದ್ಯಗಳಲ್ಲಿ ಜಯಗಳಿಸಿದೆ. ಎರಡೂ ತಂಡಗಳ ನಡುವಿನ ಕಳೆದ ಐದು ಪಂದ್ಯಗಳನ್ನು ನೋಡಿದರೆ, ಆರ್‌ಸಿಬಿ ಇಲ್ಲಿ 3-2 ರಿಂದ ಮುನ್ನಡೆಯಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯವು ಆಸಕ್ತಿದಾಯಕವಾಗಿರಲಿದೆ. ಎರಡೂ ತಂಡಗಳ ಬ್ಯಾಟಿಂಗ್ ಬಲವನ್ನು ಗಮನಿಸಿದರೆ, ಈ ಪಂದ್ಯವು ಹೆಚ್ಚಿನ ಸ್ಕೋರಿಂಗ್ ಆಗುವ ನಿರೀಕ್ಷೆಯಿದೆ.

ಮುಂಬೈ vs ಆರ್​ಸಿಬಿ ನಡುವಿನ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ?

ಮುಂಬೈ vs ಆರ್​ಸಿಬಿ ನಡುವಿನ ಪಂದ್ಯ ಏಪ್ರಿಲ್ 7 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮುಂಬೈ vs ಆರ್​ಸಿಬಿ ನಡುವಿನ ಪಂದ್ಯ ಯಾವ ಸಮಯಕ್ಕೆ ಆರಂಭವಾಗಲಿದೆ?

ಮುಂಬೈ ಮತ್ತು ಆರ್‌ಸಿಬಿ ನಡುವಿನ ಪಂದ್ಯವು ಸಂಜೆ 7:30 ರಿಂದ ನಡೆಯಲಿದೆ. ಟಾಸ್ 7 ಗಂಟೆಗೆ ನಡೆಯಲಿದೆ.

ಮುಂಬೈ vs ಆರ್​ಸಿಬಿ ನಡುವಿನ ಪಂದ್ಯವನ್ನು ನೀವು ಯಾವ ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು?

ಮುಂಬೈ vs ಆರ್​ಸಿಬಿ ನಡುವಿನ ಪಂದ್ಯವನ್ನು ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ನಲ್ಲಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

IPL 2025: ಮುಂದಿನ ಪಂದ್ಯಕ್ಕೆ ಬುಮ್ರಾ, ರೋಹಿತ್ ಲಭ್ಯ; ಆರ್​ಸಿಬಿಗೆ ಕಾದಿದ್ಯಾ ಗಂಡಾಂತರ?

ಎರಡೂ ತಂಡಗಳು

ಮುಂಬೈ ಇಂಡಿಯನ್ಸ್: ವಿಲ್ ಜಾಕ್ಸ್, ರಿಯಾನ್ ರಿಕೆಲ್ಟನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ರಾಜ್ ಬಾವಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಅಶ್ವನಿ ಕುಮಾರ್, ವಿಘ್ನೇಶ್ ಪುತ್ತೂರು, ಟ್ರೆಂಟ್ ಬೌಲ್ಟ್, ತಿಲಕ್ ವರ್ಮಾ, ಕಾರ್ಬಿನ್ ಬಾಷ್, ರಾಬಿನ್ ಮಿಂಜ್, ಸತ್ಯನಾರಾಯಣ ರಾಜು, ಕರ್ಣ್ ಶರ್ಮಾ, ರೋಹಿತ್ ಶರ್ಮಾ, ಮುಜೀಬ್ ಉರ್ ರೆಹಮಾನ್, ರೀಸ್ ಟೋಪ್ಲಿ, ಬೆವನ್ ಜೇಕಬ್ಸ್, ಕೃಷ್ಣನ್ ಶ್ರೀಜಿತ್, ಅರ್ಜುನ್ ತೆಂಡೂಲ್ಕರ್, ಜಸ್ಪ್ರೀತ್ ಬುಮ್ರಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ಸುಯಶ್ ಶರ್ಮಾ, ರಸಿಖ್ ದಾರ್ ಸಲಾಮ್, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಸ್ವಪ್ನಿಲ್ ಸಿಂಗ್, ಅಭಿನಂದನ್ ಸಿಂಗ್, ರೊಮಾರಿಯೋ ಶೆಫರ್ಡ್, ಲುಂಗಿ ಎನ್‌ಗಿಡಿ, ನುವಾನ್ ತುಷಾರ, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ