MI vs RR Highlights, IPL 2024: ಮುಂಬೈಗೆ ಹ್ಯಾಟ್ರಿಕ್ ಸೋಲು
Mumbai Indians Vs Rajasthan Royals Highlights in Kannada: ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಅತ್ಯುತ್ತಮ ಪ್ರದರ್ಶನ ಮುಂದುವರಿದಿದೆ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ, ಈ ತಂಡವು ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಂತರ ಈಗ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ.

ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಅತ್ಯುತ್ತಮ ಪ್ರದರ್ಶನ ಮುಂದುವರಿದಿದೆ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ, ಈ ತಂಡವು ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಂತರ ಈಗ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಇದರೊಂದಿಗೆ ಲೀಗ್ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ ರಾಜಸ್ಥಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಒಂದೆಡೆ ರಾಜಸ್ಥಾನ ಅದ್ಭುತ ಪ್ರದರ್ಶನ ನೀಡಿದರೆ, ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಕಳಪೆ ಆಟ ಮೂರನೇ ಪಂದ್ಯದಲ್ಲೂ ಮುಂದುವರೆದಿದೆ. ಲೀಗ್ನಲ್ಲಿ ಸತತ ಮೂರನೇ ಪಂದ್ಯವನ್ನು ಸೋತಿರುವ ಮುಂಬೈ ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆಯದ ಏಕೈಕ ತಂಡವಾಗಿದೆ. ವಾಂಖೆಡೆಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 125 ರನ್ ಗಳಿಸಿತ್ತು. ಉತ್ತರವಾಗಿ ರಾಜಸ್ಥಾನ ರಿಯಾನ್ ಪರಾಗ್ ಅವರ ಬಿರುಸಿನ ಅರ್ಧಶತಕದ ಆಧಾರದ ಮೇಲೆ 15.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
LIVE NEWS & UPDATES
-
ರಾಜಸ್ಥಾನ್ಗೆ 6 ವಿಕೆಟ್ ಜಯ
ಈ ಪಂದ್ಯವನ್ನು ರಾಜಸ್ಥಾನ 6 ವಿಕೆಟ್‌ಗಳಿಂದ ಗೆದ್ದಿದೆ. ರಾಜಸ್ಥಾನ ಪರ ರಿಯಾನ್ ಪರಾಗ್ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
-
14 ಓವರ್ ಅಂತ್ಯ
14 ಓವರ್‌ಗಳ ಆಟ ಮುಗಿದಿದ್ದು, ರಾಜಸ್ಥಾನ ನಾಲ್ಕು ವಿಕೆಟ್ ಕಳೆದುಕೊಂಡು 101 ರನ್ ಗಳಿಸಿದೆ. ಸದ್ಯ ರಿಯಾನ್ ಪರಾಗ್ 30 ರನ್ ಹಾಗೂ ಶುಭಂ ದುಬೆ 7 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ತಂಡದ ಗೆಲುವಿಗೆ 35 ಎಸೆತಗಳಲ್ಲಿ 24 ರನ್‌ಗಳ ಅಗತ್ಯವಿದೆ.
-
-
ಅಶ್ವಿನ್ ಔಟ್
16 ರನ್ ಗಳಿಸಿ ರವಿಚಂದ್ರನ್ ಅಶ್ವಿನ್ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಅಶ್ವಿನ್ ನಾಲ್ಕನೇ ವಿಕೆಟ್‌ಗೆ ರಿಯಾನ್ ಪರಾಗ್ ಅವರೊಂದಿಗೆ 40 ರನ್ ಜೊತೆಯಾಟ ನಡೆಸಿದರು.
13 ಓವರ್‌ಗಳ ನಂತರ ತಂಡದ ಸ್ಕೋರ್ 94/4.
-
ಜೋಸ್ ಬಟ್ಲರ್ ಔಟ್
ಜೋಸ್ ಬಟ್ಲರ್ ರೂಪದಲ್ಲಿ ರಾಜಸ್ಥಾನಕ್ಕೆ ಮೂರನೇ ಹೊಡೆತ ಬಿದ್ದಿದೆ. ಬಟ್ಲರ್ 13 ರನ್ ಗಳಿಸಿ ಆಕಾಶ್ ಮಧ್ವಲ್ಗೆ ಬಲಿಯಾದರು. ರವಿಚಂದ್ರನ್ ಅಶ್ವಿನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅದೇ ವೇಳೆ ರಿಯಾನ್ ಪರಾಗ್ ನಾಲ್ಕು ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ಏಳು ಓವರ್‌ಗಳ ನಂತರ ತಂಡದ ಸ್ಕೋರ್ 50/3.
-
12 ರನ್ ಗಳಿಸಿ ಸ್ಯಾಮ್ಸನ್ ಔಟ್
ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ 12 ರನ್ ಗಳಿಸಿ ಔಟಾದರು. ಸದ್ಯ ಜೋಸ್ ಬಾಟ್ಲರ್ ಮತ್ತು ರಯಾನ್ ಪರಾಗ್ ಕ್ರೀಸ್‌ನಲ್ಲಿದ್ದಾರೆ. ತಂಡದ ಗೆಲುವಿಗೆ 94 ಎಸೆತಗಳಲ್ಲಿ 4 ರನ್‌ಗಳ ಅಗತ್ಯವಿದೆ.
-
-
ಜೈಸ್ವಾಲ್ ಔಟ್
ರಾಜಸ್ಥಾನದ ಮೊದಲ ವಿಕೆಟ್ ಪತನವಾಗಿದೆ. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಕ್ವೈನ್ ಮಫಾಕ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು. ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
-
ರಾಜಸ್ಥಾನದ ಇನ್ನಿಂಗ್ಸ್ ಆರಂಭ
ರಾಜಸ್ಥಾನದ ಇನ್ನಿಂಗ್ಸ್ ಆರಂಭವಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಆರಂಭಿಕ ಬ್ಯಾಟಿಂಗ್‌ಗೆ ಬಂದಿದ್ದಾರೆ. ಕ್ವೀನ್ ಮಫಕಾ ಇನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.
-
126 ರನ್ ಟಾರ್ಗೆಟ್
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ಅಂತ್ಯಗೊಂಡಿದೆ. ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 125 ರನ್ ಗಳಿಸಿತು. ಈ ಪಂದ್ಯವನ್ನು ಗೆಲ್ಲಲು ರಾಜಸ್ಥಾನ್ ರಾಯಲ್ಸ್ 120 ಎಸೆತಗಳಲ್ಲಿ 126 ರನ್ ಗಳಿಸಬೇಕಾಗಿದೆ.
-
8ನೇ ವಿಕೆಟ್ ಪತನ
ಜೆರಾಲ್ಡ್ ಕೊಯೆಟ್ಜಿ ರೂಪದಲ್ಲಿ ಮುಂಬೈ ಎಂಟನೇ ವಿಕೆಟ್ ಕಳೆದುಕೊಂಡಿದೆ. ಸದ್ಯ ಟಿಮ್ ಡೇವಿಡ್ ಮತ್ತು ಜಸ್ಪ್ರೀತ್ ಬುಮ್ರಾ ಕ್ರೀಸ್‌ನಲ್ಲಿದ್ದಾರೆ. 17 ಓವರ್‌ಗಳ ನಂತರ ತಂಡದ ಸ್ಕೋರ್ 112/8.
-
ತಿಲಕ್ ವರ್ಮಾ ವಿಕೆಟ್
ಈ ಪಂದ್ಯದಲ್ಲಿ ಮುಂಬೈಗೆ ಬೆನ್ನೆಲುಬಾಗಿ ನಿಂತಿದ್ದ ತಿಲಕ್ ವರ್ಮಾ ಕೂಡ ಔಟಾಗಿದ್ದಾರೆ.ತಿಲಕ್ 29 ಎಸೆತಗಳಲ್ಲಿ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸದ್ಯ ಟಿಮ್ ಡೇವಿಡ್ ಮತ್ತು ಜೆರಾಲ್ಡ್ ಕೊಯೆಟ್ಜಿ ಕ್ರೀಸ್‌ನಲ್ಲಿದ್ದಾರೆ. 14 ಓವರ್‌ಗಳ ನಂತರ ತಂಡದ ಸ್ಕೋರ್ 97/7.
-
ಚಾವ್ಲಾ ಪೆವಿಲಿಯನ್ಗೆ
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಪಿಯೂಷ್ ಚಾವ್ಲಾ ಕೂಡ ಕೇವಲ ಮೂರು ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು.
12 ಓವರ್‌ಗಳ ನಂತರ ತಂಡದ ಸ್ಕೋರ್ 89/6.
-
ಹಾರ್ದಿಕ್ ಪಾಂಡ್ಯ ಔಟ್
ಹಾರ್ದಿಕ್ ಪಾಂಡ್ಯ ರೂಪದಲ್ಲಿ ಮುಂಬೈನ ಐದನೇ ವಿಕೆಟ್ ಉರುಳಿದೆ. ತಿಲಕ್ ವರ್ಮಾ ಅವರೊಂದಿಗೆ ಐದನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನಡೆಸಿದ ಪಾಂಡ್ಯ, 21 ಎಸೆತಗಳಲ್ಲಿ 34 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.10 ಓವರ್‌ಗಳ ನಂತರ ತಂಡದ ಸ್ಕೋರ್ 77/5. ಪಿಯೂಷ್ ಚಾವ್ಲಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
-
ಹಾರ್ದಿಕ್- ತಿಲಕ್ ಜೊತೆಯಾಟ
ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ನಡುವೆ ಉತ್ತಮ ಜೊತೆಯಾಟ ಕಂಡು ಬರುತ್ತಿದೆ. ಇವರಿಬ್ಬರ ನಡುವೆ 55 ರನ್*ಗಳ ಜೊತೆಯಾಟವಿದೆ. ಹಾರ್ದಿಕ್ 19 ಎಸೆತಗಳಲ್ಲಿ 34 ರನ್ ಹಾಗೂ ತಿಲಕ್ 18 ಎಸೆತಗಳಲ್ಲಿ 23 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ಒಂಬತ್ತು ಓವರ್‌ಗಳ ನಂತರ ತಂಡದ ಸ್ಕೋರ್ 75/4.
-
ಪವರ್‌ಪ್ಲೇ ಅಂತ್ಯ
ಮುಂಬೈ ಇಂಡಿಯನ್ಸ್ ಪವರ್‌ಪ್ಲೇಯಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 59 ರನ ಕಲೆಹಾಕಿದೆ. ಟ್ರೆಂಟ್ ಬೌಲ್ಟ್ ಮೊದಲ ಓವರ್‌ನಲ್ಲಿ ರೋಹಿತ್ ಶರ್ಮಾ ಮತ್ತು ನಮನ್ ಧೀರ್ ಅವರನ್ನು ಔಟ್ ಮಾಡಿದರು. ಇಬ್ಬರೂ ಗೋಲ್ಡನ್ ಡಕ್‌ಗಳಲ್ಲಿ ಔಟಾದರು. ಇದರ ನಂತರ, ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಬ್ರೆವಿಸ್ ಕೂಡ ಶೂನ್ಯಕ್ಕೆ ಔಟ್ ಆದರು. ಇಶಾನ್ ಕಿಶನ್ ಕೂಡ ನಾಂದ್ರೆ ಬರ್ಗರ್ಗೆ ಬಲಿಯಾದರು. ಸದ್ಯ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಕ್ರೀಸ್‌ನಲ್ಲಿದ್ದಾರೆ.
-
ಕಿಶನ್ ಕೂಡ ಔಟ್
ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಬೌಲರ್‌ಗಳು ವಿಧ್ವಂಸಕ ಪ್ರದರ್ಶನ ತೋರುತ್ತಿದ್ದಾರೆ.
ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಇಶಾನ್ ಕಿಶನ್ರನ್ನು ನಾಂದ್ರೆ ಬರ್ಗರ್ ಔಟ್ ಮಾಡಿದರು.
ಹಾರ್ದಿಕ್ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
-
ಡೆವೊಲ್ಡ್ ಬ್ರೆವಿಸ್ ಕೂಡ ಔಟ್
14 ರನ್ ಗಳಿಸಿದ್ದ ಮುಂಬೈ ಇಂಡಿಯನ್ಸ್‌ಗೆ ಟ್ರೆಂಟ್ ಬೌಲ್ಟ್ ಮೂರನೇ ಹೊಡೆತ ನೀಡಿದರು. ಅವರು ತಮ್ಮ ಕೋಟಾದ ಎರಡನೇ ಓವರ್‌ನಲ್ಲಿ ಡೆವೋಲ್ಡ್ ಬ್ರೆವಿಸ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ತಿಲಕ್ ವರ್ಮಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಮೂರು ಓವರ್‌ಗಳ ನಂತರ ತಂಡದ ಸ್ಕೋರ್ 16/3.
-
ಸತತ ಎರಡು ಎಸೆತಗಳಲ್ಲಿ 2 ವಿಕೆಟ್
ಮುಂಬೈ ಇಂಡಿಯನ್ಸ್‌ಗೆ ಆಘಾತ ಎದುರಾಗಿದೆ. ರೋಹಿತ್ ಶರ್ಮಾ ಮತ್ತು ನಮನ್ ಧೀರ್, ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.ಸದ್ಯ ಇಶಾನ್ ಕಿಶನ್ ಮತ್ತು ಡೆವಾಲ್ಡ್ ಬ್ರೆವಿಸ್ ಕ್ರೀಸ್‌ನಲ್ಲಿದ್ದಾರೆ.
-
ಮುಂಬೈ ಇನ್ನಿಂಗ್ಸ್ ಆರಂಭ
ಮುಂಬೈ ಇನ್ನಿಂಗ್ಸ್ ಆರಂಭವಾಗಿದೆ. ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಕಣಕ್ಕಿಳಿದಿದ್ದಾರೆ. ಟ್ರೆಂಟ್ ಬೌಲ್ಟ್ ಇನ್ನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ. ಇಬ್ಬರಿಂದಲೂ ಉತ್ತಮ ಜೊತೆಯಾಟ ನಿರೀಕ್ಷಿಸಲಾಗಿದೆ.
-
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಾಹಲ್.
ಇಂಪ್ಯಾಕ್ಟ್ ಪ್ಲೇಯರ್: ರೋವ್ಮನ್ ಪೊವೆಲ್, ತನುಷ್ ಕೋಟ್ಯಾನ್, ಕುಲದೀಪ್ ಸೇನ್, ಶುಭಂ ದುಬೆ, ಅಬಿದ್ ಮುಷ್ತಾಕ್.
-
ಮುಂಬೈ ಇಂಡಿಯನ್ಸ್
ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಜಸ್ಪ್ರೀತ್ ಬುಮ್ರಾ, ಕ್ವೈನ್ ಮಫಕಾ.
ಇಂಪ್ಯಾಕ್ಟ್ ಪ್ಲೇಯರ್: ಡೆವಾಲ್ಡ್ ಬ್ರೂವಿಸ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ನೆಹಾಲ್ ವಧೇರಾ, ಶಮ್ಸ್ ಮುಲಾನಿ.
-
ಟಾಸ್ ಗೆದ್ದ ರಾಜಸ್ಥಾನ್
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Apr 01,2024 7:01 PM
