ಏಕದಿನ ವಿಶ್ವಕಪ್ನ 5ನೇ ಅಭ್ಯಾಸ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಮಿಂಚಿದ್ದಾರೆ. ತಿರುವನಂತಪುರದ ಗ್ರೀನ್ಫೀಲ್ಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಆದರೆ ಮಳೆಯ ಕಾರಣ ವಿಳಂಬವಾಗಿ ಶುರುವಾದ ಪಂದ್ಯವನ್ನು 23 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ 42 ಎಸೆತಗಳಲ್ಲಿ 55 ರನ್ ಬಾರಿಸಿದರೆ, ಕ್ಯಾಮರೋನ್ ಗ್ರೀನ್ 26 ಎಸೆತಗಳಲ್ಲಿ 34 ರನ್ ಚಚ್ಚಿದರು.
ಇನ್ನು ಮಿಚೆಲ್ ಸ್ಟಾರ್ಕ್ 22 ಎಸೆತಗಳಲ್ಲಿ ಅಜೇಯ 24 ರನ್ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ನಿಗದಿತ 23 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿದೆ.
167 ರನ್ಗಳ ಗುರಿ ಪಡೆದ ನೆದರ್ಲೆಂಡ್ಸ್ ತಂಡಕ್ಕೆ ಮೊದಲ ಓವರ್ನಲ್ಲೇ ಮಿಚೆಲ್ ಸ್ಟಾರ್ಕ್ ಶಾಕ್ ನೀಡಿದರು. ಪ್ರಥಮ ಓವರ್ನ 5ನೇ ಎಸೆತದಲ್ಲಿ ಮ್ಯಾಕ್ಸ್ (0) ರನ್ನು ಎಲ್ಬಿ ಬಲೆಗೆ ಬೀಳಿಸಿದ ಸ್ಟಾರ್ಕ್, 6ನೇ ಎಸೆತದಲ್ಲಿ ವೆಸ್ಲಿ ಬ್ಯಾರೆಸಿ (0) ರನ್ನು ಕ್ಲೀನ್ ಬೌಲ್ಡ್ ಮಾಡಿದರು.
Vintage Mitchel Starc hat-trick💥
Via – ICC#AUSvsNED #AUS pic.twitter.com/pfIqmfJmcb
— Mahad (@Mahad_Media) September 30, 2023
ಇನ್ನು 3ನೇ ಓವರ್ನ ಮೊದಲ ಎಸೆತದಲ್ಲೇ ಬಾಸ್ ಡಿ ಲೀಡೆ (0) ರನ್ನು ಕ್ಲೀನ್ ಬೌಲ್ಡ್ ಮಾಡಿ ಮಿಚೆಲ್ ಸ್ಟಾರ್ಕ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಏಕದಿನ ವಿಶ್ವಕಪ್ಗೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ ಆಸ್ಟ್ರೇಲಿಯಾ ತಂಡದ ಎಡಗೈ ವೇಗಿ.
ಮತ್ತೊಂದೆಡೆ ಮಿಚೆಲ್ ಮಾರ್ಷ್ ವಿಕ್ರಮಜಿತ್ (9) ವಿಕೆಟ್ ಪಡೆದರೆ, ಸೀಬ್ರಾಂಡ್ (9) ರನ್ನು ಶಾನ್ ಅಬಾಟ್ ಬೌಲ್ಡ್ ಮಾಡಿದರು. ಪರಿಣಾಮ 9 ಓವರ್ ಮುಕ್ತಾಯದ ವೇಳೆಗೆ ನೆದರ್ಲೆಂಡ್ಸ್ ತಂಡವು 46 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.